ಲವ್ ಮೇಸ್ಟ್ರು ರವಿಚಂದ್ರನ್ ಪ್ರೇಮಪಾಠ ಕೇಳಿ ಶಾಕ್ ಆದ ನಟಿ ರಚಿತಾ ರಾಮ್!

Published : Mar 13, 2025, 08:59 PM ISTUpdated : Mar 14, 2025, 02:49 PM IST
ಲವ್ ಮೇಸ್ಟ್ರು ರವಿಚಂದ್ರನ್ ಪ್ರೇಮಪಾಠ ಕೇಳಿ ಶಾಕ್ ಆದ ನಟಿ ರಚಿತಾ ರಾಮ್!

ಸಾರಾಂಶ

ನಟ ರವಿಚಂದ್ರನ್ ಅವರು ಪ್ರೀತಿಯಲ್ಲಿನ ವ್ಯತ್ಯಾಸಗಳ ಬಗ್ಗೆ ಮಾತನಾಡಿದ್ದಾರೆ. ಹಳೆಯ ಮತ್ತು ಹೊಸ ಪ್ರೀತಿಯ ನಡುವಿನ ವ್ಯತ್ಯಾಸವನ್ನು ಅವರು ವಿವರಿಸಿದ್ದಾರೆ, ತಂತ್ರಜ್ಞಾನದ ಪ್ರಭಾವದ ಬಗ್ಗೆ ಹೇಳಿದ್ದಾರೆ.

ಪ್ರೀತಿ ಅಂದ್ರೇನೆ ಹಾಗೆ.., ಯಾರ ಮೇಲೆ, ಯಾವಾಗ, ಏಕೆ ಲವ್ ಆಗುತ್ತದೆ ಎಂಬುದು ಈಗಲೂ ಯಾರಿಗೂ ಗೊತ್ತಿಲ್ಲ. ಅದರಲ್ಲಿಯೂ ಯಾವುದಾದರೂ ಒಂದು ಹುಡುಗಿ ನಮಗೆ ಕಾರಣವಿಲ್ಲದೇ ಇಷ್ಟವಾಗುವುದು ಏಕೆ? ಎಂಬ ರಹಸ್ಯವನ್ನು ಕನ್ನಡ ಚಿತ್ರರಂಗದ ಲವ್ ಮೇಸ್ಟ್ರು ಎಂದೇ ಖ್ಯಾತಿಯಾಗಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಬಿಚ್ಚಿಟ್ಟಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಬ್ಯಾಚುಲರ್ಸ್ ಸೀಸನ್-2ರ ಸ್ಪರ್ಧಿಯಾಗಿರುವ ನಟಿ ಸುಕೃತಾ ಅವರು ಹಿರಿಯ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಹಿಂದಿನ ಲವ್‌ಗೂ, ಈಗಿನ ಲವ್‌ಗೂ ಏನು ವ್ಯತ್ಯಾಸ ಎಂದು ಕೇಳುತ್ತಾರೆ. 

ಇದಕ್ಕೆ ಉತ್ತರಿಸಿದ ನಟ ರವಿಂದ್ರನ್ ಅವರು, ಲವ್‌ನಲ್ಲಿ ಏನೂ ವ್ಯತ್ಯಾಸ ಇಲ್ಲ. ಪ್ರೀತಿಯಲ್ಲಿ ಡಿಫ್ರೆನ್ಸ್ ಬರುವುದಕ್ಕೆ ಸಾಧ್ಯವೇ ಇಲ್ಲ. ಟೆಕ್ನಾಲಜಿ ಪ್ರಕಾರ ಎಲ್ಲರೂ ಬೆಳದುಬಿಡ್ತಾರೆ, ಹೊರತು ಪ್ರೀತಿಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಎಲ್ಲ ಕಾಲದ ಲವ್ ಒಂದೇ ಆಗಿದೆ. ಯಾರು ಏನಕ್ಕೆ ಇಷ್ಟ ಆಗ್ತಾರೆ ಎನ್ನುವುದು ಯಾರಿಗೂ ಗೊತ್ತಾಗೋದಿಲ್ಲ. ಒಂದು ಹುಡುಗಿಯರ ಗುಣ, ನಡತೆ ನೋಡಿ ಇಷ್ಟಪಡುತ್ತಾರೆ. ಕೆಲವೊಮ್ಮೆ ಯಾವುದೋ ಒಂದು ಹುಡುಗಿಯನ್ನು ಯಾವುದೇ ಕಾರಣವಿಲ್ಲದೆ ಇಷ್ಟಪಟ್ಟುಬಿಡ್ತೀವಿ. ಅದಕ್ಕೆ ಕಾರಣ ಏನೆಂಬುದೇ ಗೊತ್ತಿರುವುದಿಲ್ಲ. ಏಕೆಂದರೆ ಮನಸ್ಸು ಒಂದು ಕ್ಷಣದಲ್ಲಿ ಟಪ್ ಅಂತಾ ಅವರೆಡೆಗೆ ಎಳೆದುಕೊಂಡುಬಿಡುತ್ತದೆ ಎಂದರು.

ಇದನ್ನೂ ಓದಿ: ಮದುವೆ ನಂತರ ಬದಲಾಯ್ತಾ ಮೇಘನಾ ಶಂಕರಪ್ಪ ಜೀವನ; ಸೀತಾರಾಮ ಧಾರಾವಾಹಿಗೆ ಬರೊಲ್ವಾ?

ನನ್ನ ಲವ್ ಸ್ಟೋರಿ ಕೂಡ ಕಾಲೇಜಿನಲ್ಲಿ ಇದೇ ರೀತಿ ಆರಂಭವಾಗಿದ್ದು. ನಾನು ಕಾಲೇಜಿನ ಒಳಗೆ ಬೈಕ್ ತೆಗೆದುಕೊಂಡು ಹೋಗುವಾಗ ಒಂದು ಹುಡುಗಿ ಆಕಡೆ ನೋಡುತ್ತಿದ್ದವಳು ನನ್ನ ಕಡೆಗೆ ತಿರುಗಿದಳು. ಆಗ ಸಡನ್ ಆಗಿ ನನಗೆ ಲವ್ ಆಗೋಯ್ತು. ಆದರೆ, ನಾನು ಆ ಹುಡುಗಿಗೆ ಪ್ರೀತಿ ಹೇಳಿಕೊಳ್ಳುವುದಕ್ಕೆ ಒಂದು ವರ್ಷ ತೆಗೆದುಕೊಂಡೆ.  ಈಗಿನವರು ಪ್ರೀತಿ ಆಗಿದ್ದ ಮರುಕ್ಷಣವೇ ಹೇಳಿಕೊಂಡುಬಿಡುತ್ತಾರೆ. ಏಕೆಂದರೆ ಟೆಕ್ನಾಲಜಿ ಅಷ್ಟೊಂದು ಬೆಳೆದುಬಿಟ್ಟಿದೆ.

ಹುಡುಗಿ ನೋಡಿ ಇಷ್ಟವಾದ ತಕ್ಷಣ ಒಂದು ಮೆಸೇಜ್ ಹೋಗುತ್ತದೆ. ಅಲ್ಲಿಂದ ಮತ್ತೆ ಒಂದು ಮೆಸೇಜ್ ರಿಪ್ಲೈ ಬರುತ್ತದೆ. ಮೊದಲು ಒಂದು ಗುಡ್ ಮಾರ್ನಿಂಗ್ ಕಳಿಸ್ತೀರಾ.., 2ನೇ ದಿನ ಗುಡ್ ಮಾರ್ನಿಂಗ್ ಡಿಯರ್ ಕಳಿಸ್ತೀರಾ.. ನಂತರ ಅಲ್ಲಿಂದ ಒಂದು ಹಾರ್ಟ್ ಬರುತ್ತದೆ. ಆಮೇಲೆ ಓಕೆ ಸಿಂಬಲ್ ಬರುತ್ತದೆ. ಆಮೇಲೆ ತಬ್ಬಿಕೊಳ್ಳುವ ಚಿತ್ರ ಬರುತ್ತದೆ. ಅಲ್ಲಿಗೆ ಪ್ರೀತಿನೇ ಮುಗಿದು ಹೋಗಿರುತ್ತದೆ.

ಇದನ್ನೂ ಓದಿ: ಯಶ್, ಸುದೀಪ್, ಶಿವಣ್ಣ, ದರ್ಶನ್, ಉಪೇಂದ್ರ ಮನೆಗೆ ಅಲೆದಾಡಿದ ತರ್ಕ ಚಿತ್ರತಂಡಕ್ಕೆ ಸಿಕ್ಕಿದ್ದೇನು? ವಿಡಿಯೋ ವೈರಲ್..!

ಈಗಿನವರ ಅರ್ಧ ಲವ್ ಸ್ಟೋರಿ ಮೊಬೈಲ್‌ನಲ್ಲಿ ಶುರುವಾಗ್ತಿದೆ. ವಾಟಸ್ಆಪ್ ಮೆಸೇಜ್ ಅಥವಾ ಇನ್‌ಸ್ಟಾಗ್ರಾಮ್‌ನಲ್ಲಿ ಮುಗಿದು ಹೋಗ್ತಿದೆ. ಆದರೆ, ಆಗಿನ ಕಾಲದ ಪ್ರೀತಿಯೇ ಬೇರೆ. ಕಣ್ಣಲ್ಲಿ ಕಣ್ಣಿಟ್ಟು ನೋಡೋ ಪ್ರೀತಿ, ಅದರ ಲೋಕ, ಅದರ ಬೆಲೆನೇ ಬೇರೆ ಅದು.., ಅದಕ್ಕಾಗಿಯೇ ರಣಧೀ, ಪ್ರೇಮ ಲೋಕ, ಯಾರೆ ನೀನು ಚೆಲುವೆ, ಪ್ರೀತ್ಸೋದ್ ತಪ್ಪಾ ಎಲ್ಲ ಸಿನಿಮಾಗಳು ಇವತ್ತಿಗೂ ಚೆನ್ನಾಗಿವೆ ಎಂದೆನಿಸಿದರೆ ಅದು ಕಣ್ಣಲ್ಲಿ ಕಣ್ಣಿಟ್ಟು ನೋಡಿದ ಪ್ರೀತಿ ಸಿನಿಮಾ ಅಂತಾನೆ ಅಷ್ಟೇ ಎಂದು ಹೇಳುತ್ತಾರೆ. ಆಗ ಕಾರ್ಯಕ್ರಮದಲ್ಲಿ ಹಾಜರಾಗಿದ್ದ ಎಲ್ಲರೂ ಚಪ್ಪಾಳೆ ಹೊಡೆಯುತ್ತಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೈ-ಬಿಪಿಯಿಂದ ಮದುವೆ ಮರುದಿನವೇ ಪ್ರಖ್ಯಾತ ಹಾಸ್ಯನಟನ ಎರಡೂ ಕಿಡ್ನಿ ಫೇಲ್‌, ತನ್ನ ಕಿಡ್ನಿ ನೀಡಿ ಜೀವ ಉಳಿಸಿದ್ದಳು ಪತ್ನಿ!
ಬಿಗ್ ಬಾಸ್ ಮನೆಗೆ ಪವರ್ ಕಟ್, ಕಗ್ಗಲತ್ತಲ್ಲಿ ಕಂಟೆಸ್ಟೆಂಟ್‌ಗಳು; BESCOM ಕಿತಾಪತಿ ಇರಬಹುದೇ?