ಶ್ರೀರಸ್ತು ಶುಭಮಸ್ತು ಶೂಟಿಂಗ್​ ವೇಳೆ ಸುಧಾರಾಣಿ ಬಳಿ ತುಳಸಿ ಪಾಪು ಹೇಗಿರತ್ತೆ ನೋಡಿ!

Published : Apr 21, 2025, 12:24 PM ISTUpdated : Apr 21, 2025, 01:15 PM IST
ಶ್ರೀರಸ್ತು ಶುಭಮಸ್ತು ಶೂಟಿಂಗ್​ ವೇಳೆ ಸುಧಾರಾಣಿ ಬಳಿ ತುಳಸಿ ಪಾಪು ಹೇಗಿರತ್ತೆ ನೋಡಿ!

ಸಾರಾಂಶ

ತುಳಸಿ ಮತ್ತು ಶಾರ್ವರಿ ನಡುವಿನ ಕಲಹ ಮುಂದುವರೆದಿದೆ. ಶಾರ್ವರಿಯ ಕುತಂತ್ರ ಬಯಲಾಗಿದ್ದು, ಅವಿ-ಅಭಿ ಆಸ್ತಿಗಾಗಿ ಕಿತ್ತಾಡುವ ನಾಟಕವಾಡುತ್ತಿದ್ದಾರೆ. ತುಳಸಿಯ ಮಗುವಿನ ದೃಶ್ಯಗಳು ವೈರಲ್ ಆಗಿದ್ದು, ಶೂಟಿಂಗ್ ಸೆಟ್‌ನಲ್ಲೂ ಮಗು ಎಲ್ಲರ ಮೆಚ್ಚುಗೆ ಗಳಿಸಿದೆ. ಮಗುವಿನ ನಿಜವಾದ ತಾಯಿಯ ಬಗ್ಗೆ ಕುತೂಹಲ ಮೂಡಿದೆ.

 ಶ್ರೀರಸ್ತು ಶುಭಮಸ್ತು ಸೀರಿಯಲ್‌ ಈಗ ಕುತೂಹಲದ ಘಟ್ಟ ತಲುಪಿದೆ. ಮನೆಯ ಒಳಿತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ತುಳಸಿ ಹಾಗೂ ಎಲ್ಲರನ್ನೂ ಸರ್ವನಾಶ ಮಾಡಲು ಏನು ಬೇಕಾದರೂ ಮಾಡಲು ಪಣ ತೊಟ್ಟಿರುವ ಶಾರ್ವರಿ... ಈ ಇಬ್ಬರು ಸೊಸೆಯಂದಿರ ನಡುವಿನ ಕಥೆಯ ಹಂತಕ್ಕೆ ಬಂದು ತಲುಪಿದೆ.  ಕುಟುಂಬ, ಪತಿ, ಮಕ್ಕಳು ಎಂದು ಬಂದರೆ ಯಾವುದಕ್ಕೂ ಜಗ್ಗದೇ, ಕುಗ್ಗದೇ ಮುನ್ನುಗ್ಗುವವಳು ತುಳಸಿ. ಆದರೆ ಏನೇ ಆದರೂ ಸೈ. ಗಂಡನ ಇಡೀ ಕುಟುಂಬವನ್ನೇ ನಾಶ ಮಾಡಿ ನೆಮ್ಮದಿಯ ಉಸಿರು ಬಿಡುವ ತವಕದಲ್ಲಿದ್ದಾಳೆ ಶಾರ್ವರಿ.  ಅದೇ ಇನ್ನೊಂದೆಡೆ,  ಸಮರ್ಥ್​, ಅವಿ-ಅಭಿ ಎಲ್ಲರೂ ಒಂದಾಗಿದ್ದಾರೆ. ಶಾರ್ವರಿಯ ಕುತಂತ್ರ ಬಹುತೇಕ ಎಲ್ಲರಿಗೂ ಗೊತ್ತಾಗಿ, ಅವರೆಲ್ಲರೂ ಶಾರ್ವರಿಯ ವಿರುದ್ಧ ಸಿಡಿದೆದ್ದಿದ್ದಾರೆ. 

ಇದೀಗ ಯಾರೋ ಕುತಂತ್ರ ಮಾಡುತ್ತಿರುವುದನ್ನು ತಿಳಿದಿರುವ ಅವಿ, ಅಭಿ ಕಿತ್ತಾಡುವಂತೆ ಮಾಡಿಕೊಂಡಿದ್ದಾರೆ. ಆಸ್ತಿಯಲ್ಲಿ ಪಾಲು ಕೇಳುವ ಹಾಗೆ ನಾಟಕಮಾಡಿದ್ದಾರೆ. ಅದು ಶಾರ್ವರಿ ಎನ್ನುವುದು ಅವರಿಗೆ ಗೊತ್ತಿಲ್ಲ. ಅದನ್ನು ಹೇಳುವ ಸ್ಥಿತಿಯಲ್ಲಿ ತುಳಸಿ ಇಲ್ಲ. ಆದರೆ ಮಕ್ಕಳನ್ನು ಇಬ್ಭಾಗ ಮಾಡಿ ತಾನು ಗೆದ್ದೆ ಎಂದು ಬೀಗುತ್ತಿರೋ ಶಾರ್ವರಿಗೆ ಈಗ ಶಾಕ್​ ಆಗಿದೆ. ಇದು ಸದ್ಯ ಸೀರಿಯಲ್ ಕಥೆಯಾದರೆ, ಇದೀಗ ತುಳಸಿಯ ಮಗಳಾಗಿ ಬಂದಿರುವ ಮುದ್ದು ಕಂದನ ಮೇಲೆ ಎಲ್ಲರ ಕಣ್ಣುನೆಟ್ಟಿದೆ. ತುಳಸಿ ಗರ್ಭಿಣಿಯಾದಾಗ ಛೀ ಥೂ ಎಂದವರೆಲ್ಲಾ ಈಗ ಅದನ್ನು ಒಪ್ಪಿಕೊಂಡಿದ್ದಾರೆ. ಅಧಿಕೃತವಾಗಿ ಮಗುವನ್ನು ಪೂರ್ಣಿ ಮತ್ತು ಅವಿಗೆ ದತ್ತು ನೀಡಿದ್ದಾರೆ ತುಳಸಿ ಮತ್ತು ಮಾಧವ್​.

ಇದೇನಿದು ರಿಯಾಲಿಟಿ ಷೋನೋ ಅಥ್ವಾ ಪೋ*..? ಅಣ್ಣಯ್ಯ ಸೀರಿಯಲ್​​ ಪಾರುಗೆ ಇದೆಂಥ ಅವಸ್ಥೆ?


ಇದೀಗ ಶೂಟಿಂಗ್​ ಸಮಯದಲ್ಲಿ ಈ ಪುಟಾಣಿ ತುಳಸಿ ಅರ್ಥಾತ್ ಸುಧಾರಾಣಿ ಬಳಿ ಹೇಗೆ ಇರುತ್ತೆ, ಹೇಗೆ ಆಡುತ್ತೆ ಎನ್ನುವ ವಿಡಿಯೋ ವೈರಲ್​ ಆಗಿದೆ. ಇಷ್ಟು ಚಿಕ್ಕ ಕಂದ ಅಮ್ಮನನ್ನು ಬಿಟ್ಟು ಇರುವುದು ಕಷ್ಟವೇ. ಆದ್ದರಿಂದ ಶೂಟಿಂಗ್​ ವೇಳೆಯೂ ಇದು ದೊಡ್ಡ ಸವಾಲೇ ಆಗಿರುತ್ತದೆ. ಶೂಟಿಂಗ್​ ಲೈಟ್​ ಎಲ್ಲಾ ನೋಡಿ ಹಾಗೂ ಅಲ್ಲಿರುವ ಜನರು ಮತ್ತು ಹೊಸ ಮುಖಗಳನ್ನು ನೋಡಿ ಮಗು ಕಂಗಾಲಾಗುವುದು, ಜೋರಾಗಿ ಅಳುವುದು ಮಾಮೂಲು. ಇದರ ಹೊರತಾಗಿಯೂ ಮಗುವನ್ನು ಬಳಸಿ ಶೂಟಿಂಗ್​ ಮಾಡುವುದು ಕಷ್ಟ. ಆದರೆ ತುಳಸಿಯ ಕಂದ ಅಷ್ಟೊಂದು ತೊಂದರೆ ಕೊಟ್ಟಂತೆ ಕಾಣಿಸುತ್ತಿಲ್ಲ. ಸುಧಾರಾಣಿ ಅವರ ಕೈಯಲ್ಲಿ ಮಗು ಚೆನ್ನಾಗಿ ಆಡಿಕೊಂಡು ಇರುವುದನ್ನು ಈ ವೈರಲ್​ ವಿಡಿಯೋದಲ್ಲಿ ನೋಡಬಹುದಾಗಿದೆ. 

ಅಷ್ಟಕ್ಕೂ, ಶೂಟಿಂಗ್​ ಸೆಟ್​ನಲ್ಲಿಯೂ ಈ ಮಗು ಎಲ್ಲರಿಗೂ ಬೇಕು. ಸೀರಿಯಲ್​ನಲ್ಲಿ ಕೂಡ ಈ ಮಗುವಿಗಾಗಿ ಪೈಪೋಟಿ ನಡೆದಂತೆಯೇ ಆಫ್​ ದಿ ಸ್ಕ್ರೀನ್​ ಕೂಡ ಈ ಮಗುವನ್ನು ಎಲ್ಲರೂ ಎತ್ತಿಕೊಂಡು ಆಡಿಸುವ ವಿಡಿಯೋ ಈ ಹಿಂದೆ, ಶೇರ್​ ಆಗಿತ್ತು. ಇದರ ಜೊತೆಗಿನ ಆಟ-ತುಂಟಾದ ಕ್ಷಣಗಳನ್ನು ದೀಪಿಕಾ ಪಾತ್ರಧಾರಿ, ನಟಿ ದರ್ಶಿನಿ ಡೆಲ್ಟಾ ಶೇರ್​ ಮಾಡಿಕೊಂಡಿದ್ದರು. ಎಲ್ಲರೂ ಮಗುವನ್ನು ಹೇಗೆ ಆಡಿಸುತ್ತಾರೆ, ಆ ಮಗು ಶೂಟಿಂಗ್​ ಸೆಟ್​ನಲ್ಲಿ ಹೇಗೆ ಸೈಲಂಟ್​ ಆಗಿದೆ. ಎಲ್ಲರ ಬಳಿಯೂ ಎಷ್ಟೊಂದು ಸಲೀಸಾಗಿ ಹೊಂದಿಕೊಂಡಿದೆ ಎನ್ನುವುದನ್ನು ನೋಡಬಹುದಾಗಿದೆ. ಇದೀಗ ಈ ಮಗು ಯಾರು ಎಂಬ ಬಗ್ಗೆ ನೆಟ್ಟಿಗರು ತಡಕಾಡುತ್ತಿದ್ದಾರೆ. ಸಿಕ್ಕದ್ದೇ ಛಾನ್ಸ್ ಎಂದುಕೊಂಡೋ ಏನೋ, ಒಬ್ಬರು ಇದು ತಮ್ಮ ಪಕ್ಕದ ಮನೆಯ ಮಗು ಎಂದಿದ್ದಾರೆ. ಅದಕ್ಕೆ ಹಲವಾರು ಮಂದಿ ರಿಪ್ಲೈ ಮಾಡಿದ್ದು, ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಆದರೆ ಅದಕ್ಕೆ ಯಾವುದಕ್ಕೂ ಅವರು ಉತ್ತರ ಕೊಟ್ಟಿಲ್ಲ. ಒಟ್ಟಿನಲ್ಲಿ ಹುಟ್ಟಿ ಕೆಲವೇ ದಿನಗಳಲ್ಲಿ ಮಗು ಸೀರಿಯಲ್​ನಲ್ಲಿ ಕಾಣಿಸಿಕೊಳ್ಳುವಂತಾಗಿದೆ. ಅದು ತುಂಬಾ ಹಠ ಮಾಡದ ಕಾರಣ ಅಲ್ಲಿಯೇ ಇರುವ ಯಾರದ್ದೋ ಮಗುವಿರಬೇಕು ಎಂದೇ ನೆಟ್ಟಿಗರು ಊಹಿಸುತ್ತಿದ್ದಾರೆ. ಅಷ್ಟಕ್ಕೂ ಮಗು ಯಾರದ್ದೇ ಆಗಿದ್ದರೂ ಅದರ ಅಮ್ಮನನ್ನೂ ಶೂಟಿಂಗ್​ ಸೆಟ್​ಗೆ ಕರೆದುಕೊಂಡು ಬರಲೇಬೇಕು. ಅವರನ್ನು ಒಮ್ಮೆಯಾದರೂ ತೋರಿಸಿ ಎನ್ನುವುದು ಅಭಿಮಾನಿಗಳ ಕೋರಿಕೆ. 

ರೋಬೋ ಮಾಡಲು ಹೊರಟ ಡ್ರೋನ್​ ಪ್ರತಾಪ್​! ವಿಜ್ಞಾನಿಗಳ ಸಾಲಿನಲ್ಲಿ ಮಿಂಚಿಂಗ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?