ಮೈಮೇಲೆಲ್ಲಾ ಕ್ಯಾಂಡಲ್ ಹಚ್ಚಿಟ್ಟುಕೊಂಡ್ರೂ ನೆಟ್ಟಿಗರಿಗೆ ಕಿಶನ್ ಪ್ಯಾಂಟ್ದೇ ತಲೆಬಿಸಿ

Published : Apr 21, 2025, 12:21 PM ISTUpdated : Apr 21, 2025, 12:37 PM IST
ಮೈಮೇಲೆಲ್ಲಾ ಕ್ಯಾಂಡಲ್ ಹಚ್ಚಿಟ್ಟುಕೊಂಡ್ರೂ ನೆಟ್ಟಿಗರಿಗೆ ಕಿಶನ್ ಪ್ಯಾಂಟ್ದೇ ತಲೆಬಿಸಿ

ಸಾರಾಂಶ

ಬಿಗ್‌ಬಾಸ್ ಖ್ಯಾತಿಯ ಕಿಶನ್ ಬಿಳಗಲಿ, ಉರಿಯುವ ಮೇಣದಬತ್ತಿಗಳನ್ನು ಭುಜದ ಮೇಲಿಟ್ಟುಕೊಂಡು ವಿಭಿನ್ನ ಫೋಟೋಶೂಟ್ ಮಾಡಿದ್ದಾರೆ. ಮೇಣವನ್ನು ಮೈಮೇಲೆ ಹಾಕಿಕೊಂಡು ನೋವುಂಡರೂ, ಫೋಟೋಗೆ ಪೋಸ್ ನೀಡಿದ್ದಾರೆ. ಸಾಹಸ ಮೆಚ್ಚಿದರೂ, ಬಳಕೆದಾರರು ಅಪಾಯಕಾರಿ ಎಂದಿದ್ದಾರೆ. ಕೆಲವರು ಉಡುಪಿನ ಬಗ್ಗೆ ಪ್ರಶ್ನಿಸಿದ್ದಾರೆ. ಕಿಶನ್ ಹೊಸ ಪ್ರಯೋಗಗಳಿಗೆ ಹೆಸರುವಾಸಿ.

ಬಿಗ್ ಬಾಸ್ (Bigg Boss) ಮಾಜಿ ಸ್ಪರ್ಧಿ ಕಿಶನ್ ಬಿಳಗಲಿ (Kishan Bilagala) ಅಧ್ಬುತ ಡಾನ್ಸರ್. ಇದ್ರಲ್ಲಿ ಎರಡು ಮಾತಿಲ್ಲ. ಅನೇಕ ಕಿರುತೆರೆ ನಟಿಯರ ಜೊತೆ ಸ್ಟೆಪ್ಸ್ ಹಾಕಿ ಭೇಷ್ ಎನ್ನಿಸಿಕೊಂಡಿರುವ ಕಿಶನ್ ಈಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಅವರ ಕ್ಯಾಂಡಲ್ ಫೋಟೋಶೂಟ್ ಸೋಶಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿದೆ. ಎರಡೂ ಭುಜದ ಮೇಲೆ ಉರಿಯುತ್ತಿರುವ ಕ್ಯಾಂಡಲ್ ಇಟ್ಕೊಂಡು ಫೋಟೋಕ್ಕೆ ಕಿಶನ್ ಫೋಸ್ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೂಟ್ ಜೊತೆ ಮೇಕಿಂಗ್ ವಿಡಿಯೋವನ್ನು ಕಿಶನ್ ಹಂಚಿಕೊಂಡಿದ್ದಾರೆ.

ಸಣ್ಣ ಬೆಂಕಿ ಉರಿ ತಾಕಿದ್ರೆ ನಮಗೆ ಜೀವ ಹೋದಂಗೆ ಆಗುತ್ತೆ. ಇನ್ನು ಉರಿಯುವ ಕ್ಯಾಂಡಲ್ (candle) ಮೈಮೇಲೆ ಇಟ್ಟುಕೊಳ್ಳೋದು ಸುಲಭ ಅಲ್ಲ. ಹಾಗಿರುವಾಗ ಕಿಶನ್, ತುಂಬಾ ಸಮಯ ಉರಿಯುವ ಕ್ಯಾಂಡಲ್ ಭುಜದ ಮೇಲೆ ಇಟ್ಕೊಂಡಿದ್ದಲ್ಲದೆ, ಅದಕ್ಕೂ ಮುನ್ನವೇ ವ್ಯಾಕ್ಸ್ ಬಿಸಿ ಮಾಡಿ ಅದನ್ನು ಮೈಮೇಲೆ ಹೊಯ್ದುಕೊಂಡಿದ್ದಾರೆ. ನಂತ್ರ ಫೋಟೋಕ್ಕೆ ಫೋಸ್ ನೀಡಿದ್ದಾರೆ. ತಮ್ಮ ಇನ್ಸ್ಟಾ ಖಾತೆಯಲ್ಲಿ ಇದ್ರ ವಿಡಿಯೋ, ಫೋಟೋ ಹಾಗೂ ಮೇಕಿಂಗ್ ವಿಡಿಯೋವನ್ನು ಕಿಶನ್ ಪೋಸ್ಟ್ ಮಾಡಿದ್ದಾರೆ. ನೋವು ಮತ್ತು ಆನಂದ, ಬೆಳಕು ಮತ್ತು ಕತ್ತಲಿದ್ದ ಹಾಗೆ, ಇವೆರಡೂ   ಯಶಸ್ವಿಗೆ ಕಾರಣ ಎಂದು ಕಿಶನ್ ಶೀರ್ಷಿಕೆ ಹಾಕಿದ್ದಾರೆ. ಅಷ್ಟೇ ಅಲ್ಲ, ಶೂಟಿಂಗ್ ನಂತ್ರ ನೋವಿಲ್ಲದೆ ಫೋಟೋ ಶೂಟ್ ಮಾಡೋದು ಹೇಗೆ ಎಂಬುದನ್ನು ನಾನು ಕಂಡುಕೊಂಡೆ. ದಯವಿಟ್ಟು ಈ ಪ್ರಯತ್ನ ಮಾಡ್ಬೇಡಿ ಎಂದು ಮನವಿ ಕೂಡ ಮಾಡಿದ್ದಾರೆ.

ಇದೇನಿದು ರಿಯಾಲಿಟಿ ಷೋನೋ ಅಥ್ವಾ ಪೋ*..? ಅಣ್ಣಯ್ಯ ಸೀರಿಯ

ವಿಡಿಯೋದಲ್ಲಿ ಕಿಶನ್ ಮೈ ಮೇಲೆ ವ್ಯಾಕ್ಸ್ ಹಾಕೋದನ್ನು ನೀವು ಕಾನ್ಬಹುದು. ವ್ಯಾಕ್ಸ್ ಮೈಮೇಲೆ ಬೀಳ್ತಿದ್ದಂತೆ ನೋವು ಅನುಭವಿಸುವ ಕಿಶನ್ ಕೂಗಿಕೊಳ್ತಾರೆ. ಅದ್ರ ನಂತ್ರ ಕ್ಯಾಂಡಲ್ ಹಚ್ಚಲಾಗುತ್ತದೆ. ಉರಿಯುವ ಕ್ಯಾಂಡಲ್ ಮೈಮೇಲೆ ಇಟ್ಟುಕೊಂಡು ಒಂದಾದ್ಮೇಲೆ ಒಂದು ಫೋಟೋಕ್ಕೆ ಕಿಶನ್ ಫೋನ್ ನೀಡಿದ್ದಾರೆ.

ಬಳಕೆದಾರರ ಕಮೆಂಟ್ ಏನು? : ಬಳಕೆದಾರರು, ಅಭಿಮಾನಿಗಳನ್ನು ಮೆಚ್ಚಿಸೋದೇ ಕಿಶನ್ ಗುರಿ. ಇಷ್ಟುಕಷ್ಟಪಟ್ಟು ಕಿಶನ್ ಫೋಟೋ ಶೂಟ್ ಮಾಡಿದ್ರೂ ನೆಗೆಟಿವ್ ಕಮೆಂಟ್ ಕಡಿಮೆಯೇನಿಲ್ಲ. ಬಹುತೇಕರು, ಕಿಶನ್ ಸಾಹಸವನ್ನು ಮೆಚ್ಚಿದ್ದಾರೆ. ಆದ್ರೆ ಇಷ್ಟೆಲ್ಲ ಮಾಡಿ ಪ್ರಯೋಜನ ಏನು? ಇನ್ನೊಮ್ಮೆ ಇಂಥ ಸಾಹಸಕ್ಕೆ ಕೈ ಹಾಕ್ಬೇಡಿ ಅಂತ ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಕಿಶನ್ ಕ್ರಿಯೇಟಿವಿಟಿ ಮೆಚ್ಚಿದ್ದಾರೆ. ಆದ್ರೆ ಕೆಲ ಬಳಕೆದಾರರಿಗೆ ಕಿಶನ್ ಈ ಕೆಲ್ಸ ಇಷ್ಟವಾಗಿಲ್ಲ. ಕಿಶನ್ ವಿಡಿಯೋ ಶೂಟ್ ವೇಳೆ ಪ್ಯಾಂಟ್ ಧರಿಸಿಲ್ಲ. ಕ್ಯಾಮರಾ ಪ್ಯಾನ್ ಆದಾಗ ಅವರ ಬರಿಗಾಲು ಕಾಣಿಸುತ್ತೆ. ಕಿಶನ್ ಭುಜದ ಮೇಲೆ ಮೇಣದ ಬತ್ತಿ ಹಚ್ಚಿಕೊಳ್ತಿದ್ದಾರೆ, ಪ್ಯಾಂಟ್ ಯಾಕೆ ಧರಿಸಿಲ್ಲ ಅಂತ ಕೆಲವರು ಕಮೆಂಟ್ ಮಾಡಿದ್ದಾರೆ. ಕಿಶನ್ ಗೆ ಎಐ ಸಹಾಯ ಪಡೆಯುವಂತೆ ಕೆಲವರು ಸೂಚಿಸಿದ್ದಾರೆ. ಮೊದಲು ಐಸ್ ಹಾಕಿ ನಂತ್ರ ಕ್ಯಾಮಡಲ್ ಇಟ್ಟರೆ ನೋವು ಕಡಿಮೆ ಅಂತ ಮತ್ತೊಬ್ಬರು ಸಲಹೆ ನೀಡಿದ್ದಾರೆ. 

ಮತ್ತೆ ಒಂದಾದ ಶ್ರೀನಾಥ್-ಪದ್ಮಾ ವಾಸಂತಿ ಜೋಡಿ; 'ಗೌರಿ ಶಂಕರ'ಕ್ಕೆ

ಕಮೆಂಟ್ ಏನೇ ಇರಲಿ, ಕಿಶನ್ ಹೊಸ ಹೊಸ ಪ್ರಯೋಗ ಮಾಡೋದ್ರಲ್ಲಿ ಸದಾ ಮುಂದೆ. ಅವರ ವಿಡಿಯೋಗಳು ಸದಾ ಭಿನ್ನತೆಯಿಂದ ಕೂಡಿರುತ್ತವೆ. ನಮೃತಾ, ಅನುಪಮಾ ಗೌಡ, ತನ್ವಿ ರಾವ್, ದೀಪಿಕಾ ದಾಸ್ ಸೇರಿದಂತೆ ಅನೇಕ ಹೀರೋಯಿನ್ ಜೊತೆ ಹಳೆ ಹಾಡಿಗೆ ಹೊಸ ಸ್ಟೈಲ್ ನಲ್ಲಿಡಾನ್ಸ್ ಮಾಡುವ ಕಿಶನ್, ಕೆಲ ದಿನಗಳ ಹಿಂದೆ ಗುಡ್ ನ್ಯೂಸ್ ನೀಡಿದ್ರು. ಕ್ಯಾಮರಾ ಹಾಗೂ ಡಾನ್ಸ್ ನಿರ್ದೇಶನ ಗೊತ್ತಿರುವ ಕಾರಣ ಹೊಸ ಬ್ಯುಸಿನೆಸ್ ಶುರು ಮಾಡಿರೋದಾಗಿ ತಿಳಿಸಿದ್ದರು. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಎಲ್ಲಾ ಸೀರಿಯಲ್​ ಜ್ಯೋತಿಷಿಗಳೇಕೇ ಮಹಾ ವಂಚಕರು? ಕರ್ಣ- ನಿಧಿ ಮದ್ವೆ ಮುಹೂರ್ತಕ್ಕೆ ಜಾಲತಾಣದಲ್ಲಿ ಭಾರಿ ಆಕ್ರೋಶ!
ಸಂಭ್ರಮದಿಂದ ಕ್ರಿಸ್ಮಸ್ ಆಚರಿಸುತ್ತಿದ್ದಾರೆ Niveditha Gowda… ಶೋಕಿ ಎಂದ ಜನ