ಹಣಕ್ಕಿಂತಲೂ ಸ್ವಾಭಿಮಾನವೇ ಹೆಚ್ಚು ಎಂದು ಮಧ್ಯಮ ವರ್ಗದ ಜನರ ಮನಸ್ಥಿತಿಯನ್ನು ತೋರಿಸುತ್ತಿರುವ ಧಾರಾವಾಹಿಗಳಿಗೆ ಸೀರಿಯಲ್ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಜೀವನದಲ್ಲಿ ಹಣ ಬೇಕು ಎನ್ನುವುದು ಎಷ್ಟು ನಿಜವೋ, ಹಣವೇ ಸರ್ವಸ್ವ ಅಲ್ಲ ಎನ್ನುವುದೂ ಅಷ್ಟೇ ದಿಟ. ಹಣವೊಂದಿದ್ದರೆ ಎಲ್ಲವೂ ಕೊಳ್ಳಲು ಸಾಧ್ಯ ಎನ್ನುವ ಮಾತಿನಲ್ಲಿ ಅರ್ಥವಿಲ್ಲ ಎನ್ನುವುದನ್ನು ಇದಾಗಲೇ ಸಾಬೀತು ಮಾಡಲಾಗಿದೆ. ಹಣ ಕಂಡರೆ ಹೆಣನೂ ಬಾಯಿ ಬಿಡುತ್ತದೆ ಎನ್ನುವ ಮಾತು ಎಲ್ಲರಿಗೂ ಅನ್ವಯ ಆಗುವುದಿಲ್ಲ ಎನ್ನುವುದೂ ಅಷ್ಟೇ ದಿಟ. ಅದರಲ್ಲಿಯೂ ಮಿಡ್ಲ್ಕ್ಲಾಸ್ ಎಷ್ಟೋ ಕುಟುಂಬಗಳಿವೆ ಹಣಕ್ಕಿಂತಲೂ ಮಿಗಿಲಾದದ್ದು ಸ್ವಾಭಿಮಾನ. ಹಣವಿಲ್ಲದೇ ಉಪವಾಸ ಬೇಕಾದರೂ ಇರಬಹುದು, ಆದರೆ ಸ್ವಾಭಿಮಾನ ಬಿಟ್ಟುಕೊಡಲು ಸಾಧ್ಯವಿಲ್ಲ. ಇದೀಗ ಕೆಲ ಸೀರಿಯಲ್ಗಳಲ್ಲಿಯೂ ಇಂಥ ಪಾತ್ರಗಳನ್ನು ತೋರಿಸಲಾಗುತ್ತಿದ್ದು, ಇದರ ಬಗ್ಗೆ ಹಲವರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
ಚಿಟಿಕೆ ಹೊಡೆದರೆ ಹಣದ ರಾಶಿಯೇ ಮುಂದೆ ಬೀಳುವ ಸಾಧ್ಯತೆ ಇದ್ದರೂ, ಸ್ವಾಭಿಮಾನವೇ ಹೆಚ್ಚು ಎಂದು ಸಾರುವ ಪಾತ್ರಗಳ ಕುರಿತು ಸೋಷಿಯಲ್ ಮೀಡಿಯಾಗಳಲ್ಲಿ ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ. ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಕೆಲವು ಸೀರಿಯಲ್ಗಳ ಉದಾಹರಣೆ ನೀಡುವ ನೆಟ್ಟಿಗರು, ಹಣ ಕಂಡರೆ ಹೆಣನೂ ಬಾಯಿ ಬಿಡುತ್ತದೆ ಎನ್ನುವ ಗಾದೆ ಮಾತು ಎಲ್ಲರಿಗೂ ಅನ್ವಯ ಆಗುವುದಿಲ್ಲ ಎಂದಿದ್ದಾರೆ. ಇದು ಸೀರಿಯಲ್ ಪಾತ್ರಗಳು ಮಾತ್ರವಲ್ಲದೇ ನಿಜ ಜೀವನದಲ್ಲಿಯೂ ಇಂಥವರು ಇದ್ದಾರೆ ಎನ್ನುತ್ತಿದ್ದಾರೆ ಸೀರಿಯಲ್ ಪ್ರೇಮಿಗಳು.
ಭೂಮಿಗೆ ಉಸಿರು ತುಂಬಿ ಜೀವ ನೀಡಿದ ಗೌತಮ್: ಸೀರಿಯಲ್ ಜೋಡಿ ಅನ್ನೋದನ್ನೂ ಮರೆತುಬಿಟ್ರಾ ಫ್ಯಾನ್ಸ್?
ಅಮೃತಧಾರೆಯ ಭೂಮಿಕಾ ಬಿಲೇನಿಯರ್ ಪತ್ನಿ. ಒಂದು ಹಂತದಲ್ಲಿ ಹತ್ತು ಕೋಟಿ ರೂಪಾಯಿಗಳನ್ನು ಪತಿ ಬ್ಯಾಂಕ್ ಅಕೌಂಟ್ಗೆ ವರ್ಗಾವಣೆ ಮಾಡಿದಾಗ ಅದನ್ನು ಸಹಿಸಿಕೊಳ್ಳುವ ಶಕ್ತಿಯೂ ಇಲ್ಲದೇ ವಾಪಸ್ ಹಣ ಮರಳಿಸಿದವಳು ಇವಳು. ಚಿಕಿಟೆ ಹೊಡೆದರೆ ಹಣದ ಹೊಳೆಯೇ ಇವಳ ಮುಂದೆ ಬಂದು ಬೀಳುತ್ತದೆ. ಆದರೆ ತಮ್ಮ ಜೀವಾ ಕೆಲಸ ಕಳೆದುಕೊಂಡಾಗ ಈಕೆ ಅಮ್ಮನ ಮನೆಯಲ್ಲಿ ಕೊಟ್ಟ ತನ್ನ ಒಡವೆ ಅಡುವು ಇಟ್ಟು ತಮ್ಮನಿಗೆ ದುಡ್ಡಿನ ಸಹಾಯ ಮಾಡಿದಳೇ ವಿನಾ ಗಂಡನ ಬಳಿ ಹಣ ಕೇಳಲಿಲ್ಲ. ತಾನೇ ದುಡಿಯುವುದಾಗಿ ಹೇಳಿ ಕಚೇರಿಗೂ ಹೋದಳು. ಅದೇ ಇನ್ನೊಂದೆಡೆ, ಮಿಡ್ಲ್ಕ್ಲಾಸ್ ಜೀವ ಕೂಡ ಅಕ್ಕ ಅಥವಾ ಭಾವನ ಬಳಿ ಹಣಕ್ಕಾಗಿ ಕೈಯೊಡ್ಡಲಿಲ್ಲ, ಬದಲಿಗೆ ಡೆಲಿವರಿ ಬಾಯ್ ಆಗಿ ಸೇರಿಕೊಂಡ. ಭೂಮಿಕಾ ಸಾಲ ಎಂದು ಹಣ ಕೊಟ್ಟಾಗ ಮಾತ್ರ ಅದನ್ನು ಪಡೆದ.
ಇನ್ನು ಸೀತಾರಾಮ ಸೀರಿಯಲ್ ಸೀತಾ. ಮಧ್ಯಮ ವರ್ಗದ ಸೀತಾ, ರಾಮ್ ಆಗರ್ಭ ಶ್ರೀಮಂತ ಎಂದು ತಿಳಿದ ಕೂಡಲೇ ದೂರವಾದಳು. ಆದರೆ ವಿಧಿ ಇಬ್ಬರನ್ನೂ ಒಂದು ಮಾಡಿತು. ಆದರೆ ಇದೀಗ ಅದೇ ಶ್ರೀಮಂತಿಕೆ ಅವಳಿಗೆ ಚುಚ್ಚುತ್ತಿದೆ. ರಾಮ್ ಮನೆಯಲ್ಲಿ ಮದುವೆಯಾಗಿ ತೋರಿಸುತ್ತಿರುವ ವಜ್ರ, ವೈಢೂರ್ಯಗಳು ಅವಳಿಗೆ ಬೇಡವಾಗಿದೆ. ಇದೇ ಮನಸ್ಥಿತಿಯನ್ನು ಅರಿತೇ ರಾಮ್ನ ಚಿಕ್ಕಮ್ಮ ಶ್ರೀಮಂತಿಕೆಯಿಂದಲೇ ಆಕೆಯನ್ನು ಮುಗಿಸುವ ಪ್ಲ್ಯಾನ್ ಮಾಡಿದ್ದಾಳೆ. ಸಿಂಪಲ್ ಆಗಿ ಇರುವುದೆಂದರೆ ಇಷ್ಟಪಡುವ ಸೀತಾಳಿಗೆ ಶ್ರೀಮಂತಿಕೆ ಆಗಿ ಬರುವುದಿಲ್ಲ ಎನ್ನುವ ಕಾರಣಕ್ಕೆ, ಇದನ್ನೇ ತೋರಿಸಿ ಅವಳನ್ನು ತುಳಿಯುವ ಪ್ರಯತ್ನದಲ್ಲಿದ್ದಾಳೆ ಭಾರ್ಗವಿ. ಆದರೆ ಸೀತಾಳಿಗೆ ಸ್ವಾಭಿಮಾನವೇ ಮುಖ್ಯ. ಅದೇ ಶ್ರೀರಸ್ತು-ಶುಭಮಸ್ತು ಸೀರಿಯಲ್ನ ಸಿರಿ ಮತ್ತು ಸಮರ್ಥ್. ಇವರಿಗೆ ಈಗ ರೇಷನ್ ತೆಗೆದುಕೊಳ್ಳಲೂ ಹಣ ಇಲ್ಲದ ಸ್ಥಿತಿ. ಇವರಿಬ್ಬರೂ ತುಳಸಿ ಅಥವಾ ಮಾಧವ್ ಬಳಿ ಕೈಚಾಚುತ್ತಿಲ್ಲ. ಉಪವಾಸವಾದರೂ ಇದ್ದಾರು, ಸ್ವಾಭಿಮಾನ ಬಿಡದ ಪಾತ್ರ ಇವರದ್ದು. ಇಂಥ ಪಾತ್ರಗಳನ್ನು ತೋರಿಸುತ್ತಿರುವ ನಿರ್ದೇಶಕರಿಗೆ ಸಲಾಂ ಎನ್ನುತ್ತಿದ್ದಾರೆ ನೆಟ್ಟಿಗರು.
ಸೋನು ಗೌಡ ಮಾತು ಕೇಳಿಯಾದ್ರೂ ವಾಪಸ್ ಆಗ್ತಾರಾ ಪೆನ್ಡ್ರೈವ್ ಸಂಸದ? ವೈರಲ್ ಆಗ್ತಿದೆ ನಟಿಯ ವಿಡಿಯೋ...