ಸೋನು ಗೌಡ ತಮ್ಮ ಕನಸಿನ ಹುಡುಗನ ಬಗ್ಗೆ ಮಾತನಾಡಿದರೆ, ಸೆಕ್ಸ್ ಸ್ಕ್ಯಾಂಡಲ್ನಲ್ಲಿ ಸಿಕ್ಕಾಕಿಕೊಂಡ ಕರ್ನಾಟಕದ ಎಂಪಿಯೊಟ್ಟಿಗೆ ಮ್ಯಾಚ್ ಮಾಡೋದಾ ಟ್ರೋಲಿಗರು? ವೈರಲ್ ವಿಡಿಯೋದಲ್ಲಿ ಏನಿದೆ?
ಈಗ ಎಲ್ಲೆಲ್ಲೂ ಪೆನ್ಡ್ರೈವ್ದ್ದೇ ಮಾತು. ರಾಜ್ಯ ರಾಜಕಾರಣವನ್ನು ಅಲ್ಲಾಡಿಸುತ್ತಿರುವುದು ಮಾತ್ರವಲ್ಲದೇ, ದೇಶದ ರಾಜಕಾರಣದಲ್ಲಿಯೂ ಬಹು ಚರ್ಚಿತವಾಗಿದೆ ಕರ್ನಾಟಕದ ಸಂಸದನ ಸೆಕ್ಸ್ ಸ್ಕ್ಯಾಂಡಲ್. ಕರ್ನಾಟಕದ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಪೆನ್ಡ್ರೈವ್ ಲೀಕ್ ಆಗಿ ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಇದು ತಿಳಿಯುತ್ತಿದ್ದಂತೆಯೇ ಸಂಸದ ಬೇರೆ ದೇಶಕ್ಕೆ ಓಡಿ ಹೋಗಿದ್ದಾರೆ. ಕಣ್ಮರೆಯಾಗಿರೋ ಸಂಸದನಿಗಾಗಿ ಇದಾಗಲೇ ಕೋರ್ಟ್ಗಳ ಹಲವು ನೋಟಿಸ್ ನೀಡಿದರೂ ಅವರು ಪತ್ತೆಯಾಗಿಲ್ಲ. ರಾಜ್ಯದ ನಾಯಕರು ದೇಶದ ನಾಯಕರ ಮೇಲೆ ಗೂಬೆ ಕುಳ್ಳರಿಸುತ್ತಿದ್ದರೆ, ದೇಶದ ನಾಯಕರು ಕರ್ನಾಟಕ ರಾಜ್ಯ ಸರ್ಕಾರವೇ ಇದಕ್ಕೆ ನೇರ ಹೊಣೆ ಎನ್ನುತ್ತಿದೆ. ಒಟ್ಟಿನಲ್ಲಿ ಈ ಕೇಸು ಸದ್ಯ ಮಿಸ್ಟ್ರಿಯಾಗಿಯೇ ಉಳಿದಿದೆ.
ಎಷ್ಟೇ ನೋಟಿಸ್ ಕೊಟ್ಟರೂ ಪತ್ತೆ ಇಲ್ಲ. ಅಪ್ಪ-ತಾತ ಬೇಡಿಕೊಂಡರೂ ನಾಪತ್ತೆಯಾಗಿರುವ ಸಂಸದ ಇನ್ನೂ ಪತ್ತೆಯಾಗಿಲ್ಲ. ಯಾವ ದೇಶದಲ್ಲಿ ಅಡಗಿ ಕುಳಿತಿದ್ದಾರೋ ಗೊತ್ತಿಲ್ಲ. ರಾಜತಾಂತ್ರಿಕ ವೀಸಾ ಪಡೆದುಕೊಂಡು ಹೋಗಿರುವ ಕಾರಣ, ಅವರು ಇಂಥಲ್ಲಿಯೇ ಇದ್ದಾರೆ ಎಂದು ನಿಖರವಾಗಿ ಹೇಳಲು ಆಗುತ್ತಿಲ್ಲ ಎಂದೇ ಹೇಳಲಾಗುತ್ತಿದೆ. ದಿನವೂ ಒಂದೊಂದು ದೇಶಗಳ ಹೆಸರು ಕೇಳಿಬರುತ್ತಿದೆಯೇ ವಿನಾ, ಸಂಸದ ಮಾತ್ರ ನಿಗೂಢವಾಗಿಯೇ ಉಳಿದಿದ್ದಾರೆ. ಇವೆಲ್ಲವುಗಳ ಮಧ್ಯೆ ಸೆನ್ಸೇಷನಲ್ ಲೇಡಿ ಸೋನು ಗೌಡ ಅವರ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಕತ್ ಹಲ್ಚಲ್ ಸೃಷ್ಟಿಸುತ್ತಿದೆ.
ಈ ಏಳು ಗುಣವಿದ್ದರೆ ಸುಹಾನಾ ಖಾನ್ ಜೊತೆ ಡೇಟಿಂಗ್ ಮಾಡಲು ಅಪ್ಪ ಶಾರುಖ್ ಗ್ರೀನ್ ಸಿಗ್ನಲ್!
ಬಿಗ್ಬಾಸ್ ಖ್ಯಾತಿಯ ಸೋನು ಗೌಡ ಎಂದರೆ ಬೇರೆ ಹೇಳಬೇಕಾಗಿಲ್ಲ. ಬಿಗ್ಬಾಸ್ ಬಳಿಕ ಇವರ ಖ್ಯಾತಿ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇವರ ಹೇಳಿಕೆ, ಇವರ ವೇಷಭೂಷಣ ಎಲ್ಲವೂ ಸದ್ದು ಮಾಡುತ್ತಲೇ ಇರುತ್ತದೆ. ಇತ್ತೀಚಿಗಂತೂ ಬಿಕಿನಿಯಲ್ಲಿ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದಾರೆ ಸೋನು ಗೌಡ. ಬಾಲಕಿಯೊಬ್ಬಳನ್ನು ಅನಧಿಕೃತವಾಗಿ ದತ್ತು ಪಡೆದ ಆರೋಪದ ಮೇಲೆ ಜೈಲಿಗೂ ಹೋಗಿ ಬಂದು, ಆ ಬಳಿಕ ಮತ್ತಷ್ಟು ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ ಇವರು.
ಇದೀಗ ಸೋನುಗೌಡ ಅವರು ತಮಗೆ ಎಂಥ ಹುಡುಗ ಬೇಕು ಎಂಬ ಬಗ್ಗೆ ಮಾತನಾಡಿರುವ ಹಳೆಯ ವಿಡಿಯೋ ಒಂದು ವೈರಲ್ ಆಗುತ್ತಿದೆ. ಆ ವಿಡಿಯೋಗೆ, ಕಾಣೆಯಾಗಿರುವ ಪೆನ್ಡ್ರೈವ್ ಸಂಸದನನ್ನು ಲಿಂಕ್ ಮಾಡುವ ಮೂಲಕ ವಿಡಿಯೋ ವೈರಲ್ ಮಾಡಲಾಗುತ್ತಿದೆ. ನಾನು ನೊಂದಿದ್ದೇನೆ. ಅದಕ್ಕಾಗಿ ನೊಂದಿರೋರೇ ಸಿಕ್ಕರೆ ಅವರು ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಪಾಸ್ಟ್ ಈಸ್ ಪಾಸ್ಟ್ ಎಂದುಕೊಂಡು ಚೆನ್ನಾಗಿ ಸಂಸಾರ ನಡೆಸಿಕೊಂಡು ಹೋಗುವ ಗುಣವಂತ ವ್ಯಕ್ತಿ ಬೇಕು. ಅವನೂ ನೊಂದಿರಬೇಕು, ಎಲ್ಲವನ್ನೂ ಅರ್ಥ ಮಾಡಿಕೊಳ್ಳಬೇಕು. ಅವನು ತುಂಬಾ ಸ್ಟ್ರಾಂಗ್ ಆಗಿರಬೇಕು ಎಂದಿದ್ದಾರೆ. ತಮ್ಮ ಕನಸಿನ ಹುಡುಗನ ಬಗ್ಗೆ ಸೋನುಗೌಡ ಮಾತನಾಡಿದರೆ, ಸಂಸದನ ಜೊತೆ ಲಿಂಕ್ ಮಾಡಿ ನೀವು ಹೇಳಿದ ಎಲ್ಲಾ ಕ್ವಾಲಿಟಿಗಳೂ ಇವರ ಬಳಿ ಇದೆ ಎನ್ನೋದಾ ಟ್ರೋಲಿಗರು? ಸಾಮಾನ್ಯ ಕನ್ನಡಿಗ Samanya Kannadiga ಹೆಸರಿನ ಫೇಸ್ಬುಕ್ ಪೇಜ್ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ.
ದುಡ್ಡಿಗಾಗಿ ಎಲ್ಲವನ್ನೂ ಮಾಡಿಬಿಟ್ಟೆ, ದೇವ್ರೇ ಈ ಚಿತ್ರ ರಿಲೀಸ್ ಆಗದೇ ಇರ್ಲಿಯಂತ ಬೇಡಿಕೊಳ್ತಿದ್ದೆ- ನೀನಾ ಗುಪ್ತಾ