ಭೂಮಿಗೆ ಉಸಿರು ತುಂಬಿ ಜೀವ ನೀಡಿದ ಗೌತಮ್​: ಸೀರಿಯಲ್​ ಜೋಡಿ ಅನ್ನೋದನ್ನೂ ಮರೆತುಬಿಟ್ರಾ ಫ್ಯಾನ್ಸ್​?

By Suchethana D  |  First Published May 26, 2024, 12:18 PM IST

ಭೂಮಿಕಾಳ ಬಾಯಿಗೆ ಉಸಿರು ತುಂಬಿ  ಮರುಜನ್ಮ ನೀಡಿದ ಗೌತಮ್​. ಇಬ್ಬರ ನಟನೆ ನೋಡಿ ಕಣ್ಣೀರಾದ ಫ್ಯಾನ್ಸ್. ಇದರ ಪ್ರೊಮೋ ರಿಲೀಸ್​ ಮಾಡಿದೆ ವಾಹಿನಿ...
 


ಧಾರಾವಾಹಿಗಳು ಎಂದರೆ ಹಾಗೆ ಅಲ್ವಾ? ಅಲ್ಲಿ ಮಾಡುತ್ತಿರುವುದು ಕೇವಲ ನಟನೆ ಮಾತ್ರ, ಅದು ನಿಜವಲ್ಲ ಎಂದು ತಿಳಿದಿದ್ದರೂ ಕೆಲವೊಂದು ಭಾವುಕ ಸನ್ನಿವೇಶ ಬಂದಾಗ ಹಲವರು ಕಣ್ಣೀರಾಗುವುದು ಇದೆ.  ನಾಯಕ-ನಾಯಕಿ ಒಂದಾಗಲಿ ಎಂದು ಹಾರೈಸುವವರು ಅದೆಷ್ಟೋ ಮಂದಿ.  ಅಲ್ಲಿರುವ ವಿಲನ್​ಗಳು ಕೇವಲ ಪಾತ್ರಧಾರಿಗಳು ಎನ್ನುವುದನ್ನೂ ಮರೆತು ಅವರನ್ನು ಶಪಿಸುವುದು ಇದೆ. ಅದು ಎಷ್ಟರಮಟ್ಟಿಗೆ ಎಂದರೆ ವಿಲನ್​ ಪಾತ್ರಧಾರಿಗಳು ಹೊರಗಡೆ ಎಲ್ಲಿಯಾದರು ಸಿಕ್ಕರೂ ಅವರನ್ನು ಬೈಯುವುದೂ ಇದೆ. ಅಷ್ಟರಮಟ್ಟಿಗೆ ಸೀರಿಯಲ್​ಗಳು ವೀಕ್ಷಕರನ್ನು ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರನ್ನು ಆವರಿಸಿಕೊಂಡು ಬಿಟ್ಟಿವೆ. ಇದೀಗ ಅಮೃತಧಾರೆ ಸೀರಿಯಲ್​ನಲ್ಲಿಯೂ ಅದೇ ರೀತಿ ಆಗಿದ್ದು, ಭೂಮಿಕಾ ಮತ್ತು ಗೌತಮ್​ ಪಾತ್ರಧಾರಿಗಳ ನಟನೆಗೆ ವೀಕ್ಷಕರು ಕಣ್ಣೀರು ಹಾಕಿದ್ದು, ಅದನ್ನು ಕಮೆಂಟ್​ ಮೂಲಕ ತಿಳಿಸುತ್ತಿದ್ದಾರೆ. ನಿಮ್ಮ ಜೋಡಿ ನೂರುಕಾಲ ಹೀಗೆ ಚೆನ್ನಾಗಿ ಇರಲಿ, ಯಾರ ಕಣ್ಣೂ ಬೀಳದಿರಲಿ. ಹೀಗೆ ಖುಷಿಖುಷಿಯಾಗಿರಿ ಎಂದು ಹಲವರು ಹೇಳುತ್ತಿದ್ದಾರೆ. ಭೂಮಿಕಾ ಮತ್ತು ಗೌತಮ್​ ಪಾತ್ರಧಾರಿಗಳು ಇದಾಗಲೇ ವಿವಾಹಿತರಾಗಿದ್ದು, ಈ ಜೋಡಿ ಕೇವಲ ಸೀರಿಯಲ್​ ಜೋಡಿ ಎನ್ನುವುದನ್ನೂ ಮರೆತು, ಇಬ್ಬರೂ ಸಂತೋಷದಿಂದ ಇರಿ ಎಂದು ಕೆಲವರು ಹಾರೈಸುತ್ತಿದ್ದಾರೆ! 

ಜಮೀನೊಂದರ ವಿವಾದಕ್ಕೆ ಸಂಬಂಧಿಸಿದಂತೆ ಕೆಲವರು ಮನೆಗೆ ಬಂದು ಧಮ್ಕಿ ಹಾಕಿ ಹೋಗಿದ್ದರು. ಆ ಜಮೀನು ಇರುವುದು ಚಿಕ್ಕಮಗಳೂರಿನಲ್ಲಿ. ಆ ಜಮೀನಿನ ವಿವಾದದ ಬಗ್ಗೆ ಗೌತಮ್​ಗೆ ಯಾವುದೇ ಮಾಹಿತಿ ಇಲ್ಲ.  ಇದನ್ನೇ ದಾಳವಾಗಿಸಿಕೊಂಡ ಶಕುಂತಲಾ ಇಬ್ಬರನ್ನೂ ಹನಿಮೂನ್​ ನೆಪದಲ್ಲಿ ಚಿಕ್ಕಮಗಳೂರಿಗೆ ಕಳಿಸುವ ಪ್ಲ್ಯಾನ್​ ಮಾಡಿದ್ದಳು. ಅಲ್ಲಿ ಹೋದರೆ ಇಬ್ಬರ ಸಾವು ಖಂಡಿತ ಎನ್ನುವುದು ಆಕೆಯ ಪ್ಲ್ಯಾನ್​. ಇದೇ ಕಾರಣಕ್ಕೆ ಇದೀಗ ಸಂಚು ರೂಪಿಸಿದ್ದಳು. ಅದೇ ರೀತಿ ಹನಿಮೂನ್​ ಮಾಡುತ್ತಿದ್ದ ದಂಪತಿಗೆ ಬರಸಿಡಿಲು ಬಡಿದಿತ್ತು. ಭೂಮಿಕಾ ಅಪಹರಣ ಆಗಿದ್ದಳು.

Tap to resize

Latest Videos

ಕಾಂತಾರ ಚಿತ್ರದ ಬಳಿಕ ಸಪ್ತಮಿ ಗೌಡ ಸಂಭಾವನೆ ಎಷ್ಟು ಪಟ್ಟು ಹೆಚ್ಚಾಯ್ತು? ನಟಿಯಿಂದಲೇ ಗುಟ್ಟು ರಟ್ಟು

ಅದೇ ವೇಳೆ ಹಣಕ್ಕಾಗಿ ಗೌತಮ್​ಗೆ ರೌಡಿಗಳ ಕರೆ ಬರುತ್ತದೆ. ಭೂಮಿಕಾಳ ಕಥೆ ಮುಗಿಸಿದರೆ ದುಡ್ಡು ನೀಡುವುದಾಗಿ ಜೈದೇವ್​ ಹೇಳಿರುತ್ತಾನೆ. ಅವನ ಬಳಿ ಹಣ ಪಡೆಯುವ ಬದಲು ನೇರವಾಗಿ ಗೌತಮ್​ಗೆ ಬ್ಲ್ಯಾಕ್​ಮೇಲ್​ ಮಾಡಿದ್ರೆ ಹೆಚ್ಚು ಹಣ ಸಿಗುತ್ತದೆ ಎಂದು ರೌಡಿ ಕೆಂಚ ಕರೆ  ಮಾಡುತ್ತಾನೆ. ಆ ಸಮಯದಲ್ಲಿ ದೇವಸ್ಥಾನದ ಗಂಟೆ ಕೇಳಿಸುತ್ತದೆ. ಜೊತೆಗೆ ಭೂಮಿಕಾ ತನ್ನ ಕಿವಿಯೋಲೆ ಮತ್ತು ಬಳೆಗಳನ್ನು ಎಸೆದು ತನ್ನನ್ನು ಈ ಜಾಗದಿಂದ ಕರೆದುಕೊಂಡು ಹೋಗಿರುವ ಬಗ್ಗೆ ಕುರುಹು ಬಿಟ್ಟಿರುತ್ತಾಳೆ. ಈ ಕುರುಹು ಮತ್ತು ಗಂಟೆಯ ನಾದ ಇವುಗಳ ಬೆನ್ನತ್ತಿ ಗೌತಮ್​ ಮತ್ತು ಆನಂದ್​ ಅದೇ ದಾರಿಯಲ್ಲಿ ಸಾಗುತ್ತಾರೆ. ಕೊನೆಗೂ ಅಪಕರಣಕಾರ ಕೆಂಚ ಸಿಗುತ್ತಾನೆ. ಬಂದೂಕಿನಿಂದ ಕೆಂಚನನ್ನು ಗೌತಮ್​ ಹೆದರಿಸಿದಾಗ ಭೂಮಿಕಾಳನ್ನು ಹೂತು ಹಾಕಿದ ಜಾಗ ತೋರಿಸುತ್ತಾನೆ.
 
ಗಾಬರಿಗೊಂಡ ಗೌತಮ್​  ಮತ್ತು ಆನಂದ್​ ನೆಲದ ಒಳಗಿನ ಡ್ರಮ್​ನಿಂದ ಭೂಮಿಕಾಳನ್ನು ಹೊರಕ್ಕೆ ತೆಗೆಯುತ್ತಾರೆ. ಭೂಮಿಕಾ ಎಚ್ಚರ ತಪ್ಪಿದ್ದಾಳೆ. ನಂತರ ಭೂಮಿಕಾಳ ಬಾಯಿಗೆ ತನ್ನ ಬಾಯಿಯಿಂದ ಉಸಿರು ನೀಡುವ ಮೂಲಕ ಗೌತಮ್​ ಆಕೆಗೆ ಎಚ್ಚರ ತರಿಸುತ್ತಾನೆ. ಭೂಮಿಕಾಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ. ಅಲ್ಲಿ ಅವಳಿಗೆ ಎಚ್ಚರ ಆಗುತ್ತಿದ್ದಂತೆಯೇ ಗೌತಮ್​ಗೆ ಥ್ಯಾಂಕ್ಸ್​ ಹೇಳುತ್ತಾಳೆ. ನೀವು ನನಗೆ ಮರುಜನ್ಮ ನೀಡಿರುವುದಾಗಿ ಹೇಳುತ್ತಾನೆ. ಭೂಮಿಕಾ ಎಚ್ಚರ ಆಗಿದ್ದನ್ನು ನೋಡಿ ಗೌತಮ್​ಗೆ ಜೀವವೇ ಬಂದಂತಾಗುತ್ತದೆ. ನಾನಿರುವವರೆಗೂ ನಿಮಗೆ ಏನೂ ಆಗುವುದಿಲ್ಲ ಎನ್ನುತ್ತಾನೆ. ಈ ಭಾವುಕ ಕ್ಷಣಗಳ ಪ್ರೊಮೋ ನೋಡಿ ನೆಟ್ಟಿಗರು ಕಣ್ಣೀರಾಗಿದ್ದಾರೆ. 

ಭಾಗ್ಯಳಿಂದ ಮಾಲಿಷ್​ ಮಾಡಿಕೊಳ್ತಿರೋ ತಾಂಡವ್​ ಫುಲ್​ ಖುಷ್​! ಒಂದಾಗಿ ಬಿಟ್ರಾ ಗಂಡ-ಹೆಂಡ್ತಿ?

click me!