
ಬಿಗ್ ಬಾಸ್ ಸೀಸನ್ 11 ರಿಯಾಲಿಟಿ ಶೋ 50 ದಿನ ಪೂರೈಸುತ್ತಿದ್ದಂತೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ರಜತ್ ಕಿಶನ್ ಮತ್ತು ಶೋಭಾ ಶೆಟ್ಟಿ ಎಂಟ್ರಿ ಕೊಟ್ಟರು. ಬಿಬಿ ಮನೆಗೆ ಕಾಲಿಡುತ್ತಿದ್ದಂತೆ ಆರಂಭದಿಂದ ಆಟವಾಡುತ್ತಿದ್ದ ಸ್ಪರ್ಧಿಗಳಿಗೆ ತಮ್ಮ ನೇರ ನುಡಿಯಿಂದ ಬಿಗ್ ಶಾಕ್ ಕೊಟ್ಟರು. ಅಯ್ಯೋ ಯಾರಪ್ಪ ಈ ಖಡಕ್ ವ್ಯಕ್ತಿ ಎಂದು ಪ್ರಶ್ನೆ ಮಾಡಲು ಜನ ಶುರು ಮಾಡಿದ್ದರು, ಆಗ ನೆಟ್ಟಿಗರಿಗೆ ಸಿಕ್ಕಿದ್ದು ಈ ಒಂದು ವೈರಲ್ ಫೋಟೋ.
33 ವರ್ಷದ ರಜತ್ ಕಿಶನ್ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ತಾತ ಎಲ್‌ಐಸಿ ಏಜೆಂಟ್ ಆಗಿದ್ದರು..ತಾತನ ಕಾಲದಿಂದ ಶಂಕರಮಠದಲ್ಲಿ ನೆಲೆಸಿದ್ದಾರೆ. ಹಲವು ವರ್ಷಗಳ ಕಾಲ ಪಕ್ಕದ ರೋಡಿನ ಹುಡುಗಿ ಅಕ್ಷತಾಳನ್ನು ಪ್ರೀತಿ ಮನೆಯವರನ್ನು ಒಪ್ಪಿಸಿ ಮದುವೆಯಾದರು. ಈ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಆದರೆ ಈ ಜೋಡಿ ತಾವೇ ಅಪ್ಲೋಡ್ ಮಾಡಿರುವ ಫೋಟೋದಿಂದ ಈಗ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ. ಗೋಲ್ಡ್ ಸುರೇಶ್ ವಿರುದ್ಧ ರಜತ್ ಮಾತನಾಡಿದ್ದಕ್ಕೂ ಈಗ ವೈರಲ್ ಆಗುತ್ತಿರುವ ಫೋಟೋಗೂ ಲಿಂಕ್ ಕಟ್ಟಿಕೊಂಡು ಟ್ರೋಲ್ ಮಾಡುತ್ತಿದ್ದಾರೆ.
2021 ಏಪ್ರಿಲ್ ತಿಂಗಳಿನಲ್ಲಿ ರಜತ್ ಕಿಶನ್ ತಮ್ಮ ಪತ್ನಿಯನ್ನು ತಬ್ಬಿಕೊಂಡಿರುವ ಫೋಟೋ ಅಪ್ಲೋಡ್ ಮಾಡುತ್ತಾರೆ. 'sometimes it is wonderfull to...!!! Not give F*** to anything' ಎಂದು ಬರೆದುಕೊಂಡಿದ್ದಾರೆ. ಒಂದು ಕೈ ಹೆಂಡತಿಯ ಹೆಗಲಿನ ಮೇಲೆ ಇದ್ದರೆ ಮತ್ತೊಂದು ಕೈ ಬೆರಳಿನಲ್ಲಿ ಮಿಡಲ್ ಫಿಂಗರ್ ತೋರಿಸಿದ್ದಾರೆ. ಮಿಡಲ್ ಫಿಂಗರ್‌ನ ಸಾಮಾಜಿಕ ಜಾಲತಾಣದಲ್ಲಿ ಅಥವಾ ಯಾರೊಬ್ಬರಿಗೂ ತೋರಿಸುವುದು ತಪ್ಪ ಏಕೆಂದರೆ ಅದು ತಪ್ಪು ಅರ್ಥ ಕೆಟ್ಟ ಅರ್ಥ ನೀಡುತ್ತದೆ. ಈ ಫೋಟೋ ಮೂಲಕ ಯಾರಿಗೆ ಉತ್ತರ ಕೊಡುತ್ತಿದ್ದಾರೆ ಗೊತ್ತಿಲ್ಲ ಆದರೆ ಮೂರು ವರ್ಷಗ ಹಿಂದೆನೇ ರಜತ್ ಸಖತ್ ರೆಬೆಲ್ ಆಗಿದ್ದರು ಎಂದು ತೋರಿಸುತ್ತದೆ.
'ಅಯ್ಯೋ ಹೆಂಡತಿ ಪಕ್ಕ ಇದ್ರೂ ನೀನು ಮತ್ತೊಬ್ಬರಿಗೆ ಬೆರಳು ತೋರಿಸುವುದು ತಪ್ಪು, ಪಬ್ಲಿಕ್ ಫಿಗರ್ ಆಗಿ ಹೇಗೆ ಇರಬೇಕು ಎಂದು ಗೊತ್ತಿ, ಗೋಲ್ಡ್ ಸುರೇಶ್‌ಗೆ ನೆಗೆಟಿವ್ ಆಗಿ ಮಾತನಾಡಿದ್ದಾಗ ಏನೋ ಗೇಮ್ ಅನಿಸಿತ್ತು ಆದರೆ ಈ ಫೋಟೋ ನೋಡಿದ ಮೇಲೆ ನಿಮ್ಮ ಕ್ಯಾರೆಕ್ಟರ್ ಗೊತ್ತಾಗುತ್ತಿದೆ' ಎಂದು ಸಖತ್ ನೆಗೆಟಿವ್ ರೀತಿಯಲ್ಲಿ ರಜತ್ ಟ್ರೋಲ್ ಆಗುತ್ತಿದ್ದಾರೆ. ಪ್ಯಾಟೆ ಹುಡುಗೀರ್ ಹಳ್ಳಿ ಲೈಫ್, ಸೂಪರ್ ಜೋಡಿ, ರಾಜಾ ರಾಣಿ, ಸೂಪರ್ ಕಬ್ಬಡಿ ಸೇರಿದಂತೆ ಹಲವು ಶೋಗಳಲ್ಲಿ ಈ ಕಪಲ್ ಭಾಗಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.