ಸೀತಾರಾಮ ಸೀರಿಯಲ್ ನಲ್ಲಿ ರಾಮನ ಜೀವದ ಗೆಳೆಯ ಅಶೋಕ 'ಟಾಕ್ಸಿಕ್' ಹೀರೋ ಯಶ್ ಬಗ್ಗೆ ಎಮೋಶನಲ್ ಸ್ಟೇಟ್‌ಮೆಂಟ್ ಕೊಟ್ಟಿದ್ದಾರೆ. ಏನೀ ಕಥೆ? ಆ ಕೆಲ್ಸ ಮಾಡಿ ಯಶ್ ಅನ್ನದ ಋಣ ತೀರಿಸಿದ ಅಂದಿದ್ಯಾಕೆ ಅಶೋಕ್..
ಸೀತಾರಾಮ ಸೀರಿಯಲ್‌ನಲ್ಲಿ ಸದ್ಯ ದುರಂತದ ಕತೆ ನಡೀತಿದೆ. ಪುಟ್ಟ ಹುಡುಗಿ ಸಿಹಿ ಸೀತಾ ಮತ್ತು ರಾಮರನ್ನು ಅಗಲಿದ್ದಾಳೆ. ಎಲ್ಲ ಅದೇ ನೋವಲ್ಲಿದ್ದಾರೆ. ಆಕೆಯ ಅಂತ್ಯಸಂಸ್ಕಾರದ ಸೀನ್‌ಗೆ ಎಲ್ಲ ಕಡೆಯಿಂದ ವಿರೋಧ ವ್ಯಕ್ತವಾಗ್ತಿದೆ. ಈ ನಡುವೆ ಸೀತಾರಾಮ ಸೀರಿಯಲ್‌ನಲ್ಲಿ ನಾಯಕ ರಾಮನ ಜೀವದ ಗೆಳೆಯನಾಗಿ ಪಾತ್ರ ನಿರ್ವಹಿಸಿರೋ ಅಶೋಕ್ ಯಶ್ ಬಗ್ಗೆ ಎಮೋಶನಲ್ ಆಗಿ ಹೇಳಿರೋ ಮಾತೊಂದು ವೈರಲ್ ಆಗ್ತಿದೆ. ಅಷ್ಟಕ್ಕೂ ಅಶೋಕ್ ಆ ಮಾತನ್ನು ಯಾಕೆ ಹೇಳ್ತಿದ್ದಾರೆ? ಅಶೋಕ್‌ಗೂ ಯಶ್ ನಡುವೆ ಏನಾದ್ರೂ ಆಗ್ಬಿಡ್ತಾ ಅನ್ನೋ ಪ್ರಶ್ನೆ ಮೂಡಿದೆ. ಸದ್ಯ ಯಶ್ ಟಾಕ್ಸಿಕ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ. ಮೊದಲೆಲ್ಲ ಗೆಳೆಯರ ಮಧ್ಯೆ ಕುಚಿಕು ಗೆಳೆಯನಾಗಿದ್ದ ಯಶ್ ಈಗ ಸಿಕ್ಕಾಪಟ್ಟೆ ಎತ್ತರಕ್ಕೇರಿದ್ದಾರೆ. ಯಾರಿಗೂ ಕೈಗೆ ಸಿಗದ ಸ್ಥಾನದಲ್ಲಿ ಕೂತುಬಿಟ್ಟಿದ್ದಾರೆ. ವಿಶ್ವದ ಯಾವ ಕಡೆಗೆ ಹೋದರೂ ಅವರಿಗೆ ಅಭಿಮಾನಿಗಳಿದ್ದಾರೆ. ಕಳೆದ ವರ್ಷ ಯಶ್ ಹೆಚ್ಚಿನವರು ಹೆಸರೇ ಕೇಳಿರದ ದೇಶವೊಂದಕ್ಕೆ ಹೋಗಿದ್ದರು. ಯಾರ ಗಲಾಟೆಯೂ ಇಲ್ಲದೇ ಸುತ್ತಾಡಬೇಕು ಅನ್ನೋ ಉದ್ದೇಶ ಇದ್ದಿರಬಹುದು, ಆದರೆ ಅವರು ಅಲ್ಲೂ ಅಭಿಮಾನಿಗಳ ಕೈಗೆ ಸಿಕ್ಕಾಕೊಂಡರು. ಇಂಥಾ ಮಹಾನ್ ಸೆಲೆಬ್ರಿಟಿ ಯಶ್ ಕುಚಿಕು ಗೆಳೆಯರಲ್ಲೊಬ್ಬರು 'ಸೀತಾರಾಮ' ಸೀರಿಯಲ್ ಫೇಮ್‌ನ ಅಶೋಕ್.
ಇದೀಗ ಅಶೋಕ್ ಯಶ್ ಬಗ್ಗೆ ಎಮೋಶನಲ್ ಆಗಿ ಮಾತನಾಡಿದ್ದಾರೆ. 'ಆ ಕೆಲಸ ಮಾಡೋ ಮೂಲಕ ಯಶ್ ನಮ್ಮನೆ ಅನ್ನದ ಋಣ ತೀರಿಸಿಬಿಟ್ಟ' ಎಂಬ ಮಾತನ್ನು ಹೇಳಿದ್ದಾರೆ. ಅವರು ಈ ಮಾತನ್ನ ಯಾಕೆ ಹೇಳ್ತಿದ್ದಾರೆ ಅನ್ನೋ ಬಗ್ಗೆ ಯಶ್ ಅಭಿಮಾನಿಗಳು ಹಾಗೂ ಅಶೋಕ್ ಫ್ಯಾನ್ಸ್‌ಗೆ ಡೌಟ್ ಇತ್ತು. ಅದಕ್ಕೆ ಉತ್ತರವನ್ನೂ ಅಶೋಕ್ ಅವರೇ ನೀಡಿದ್ದಾರೆ.
ಬಿಗ್ ಬಾಸ್ ಕ್ಯಾಪ್ಟನ್ ಗೌತಮಿ ಹೀಗೆಲ್ಲ ಪ್ರಾಂಕ್ ಮಾಡ್ತಾರ, ಅಷ್ಟಕ್ಕೂ ಅವ್ರು ಕಾಗೆ ಹಾರಿಸಿದ್ದು ಯಾರಿಗೆ ಗೊತ್ತಾ?
ಅಶೋಕ್ ಸೀರಿಯಲ್ ಮಾತ್ರ ಅಲ್ಲ ಸಿನಿಮಾ ನಟನೂ ಹೌದು. ಹಿನ್ನೆಲೆ ಗಾಯಕನೂ ಹೌದು. ಇವರು ಹಾಡಿದ್ದ 'ಜಿಂಗಿಚಕ ಜಿಂಗಿಚಕ' ಹಾಡು ನಿಮಗೆಲ್ಲ ಗೊತ್ತಿರಬಹುದು. ಈ ಹಾಡನ್ನು ಹಾಡಿದ್ದು ಅಶೋಕ್ ಅಂತ ತಿಳಿದ ಮೇಲೆ ಇವರ ಪಾಪುಲ್ಯಾರಿಟಿ ಇನ್ನು ಹೆಚ್ಚಾಗಿದೆ. 'ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ' ಸಿನಿಮಾದಲ್ಲಿ ನಟ ಯಶ್ ಹಾಗೂ ಅಶೋಕ್ ಅವರು ಭಾವ ಮೈದುನನ ಪಾತ್ರದಲ್ಲಿ ನಟಿಸಿದ್ದರು. ಇವರಿಬ್ಬರದು ಎರಡು ದಶಕವನ್ನು ಮೀರಿದ ಸ್ನೇಹ. ನಟನೆಯ ಹೊರತಾಗಿ ಅಶೋಕ್ ಶರ್ಮ ಅವರು ಗಾಯಕರಾಗಿದ್ದಾರೆ. ಆರಂಭದ ದಿನಗಳಲ್ಲಿ ಆರ್ಕೆಸ್ಟ್ರಾದಲ್ಲಿ ಹಾಡುಗಳನ್ನು ಹಾಡುತ್ತಿದ್ದರು. ನಟ ಕಂ ಗಾಯಕ ಇವರ ಕಲೆಯನ್ನು ನೋಡಿ ಬಹಳಷ್ಟು ಆರ್ಕೆಸ್ಟ್ರಾ ಇವರನ್ನು ಹಾಡು ಹೇಳಲು ಕಲಾವಿದನಾಗಿ ಕರೆಸಿಕೊಳ್ಳುತ್ತಿತ್ತು. ಎಲೆಕ್ಟ್ರಾನಿಕ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಇವರು ಆರ್ಕೆಸ್ಟ್ರಾಗಳಲ್ಲಿ ಕಲಾವಿದನಾಗಿ ಹಾಡು ಹೇಳಲು ಶುರು ಮಾಡಿದರು. ಕ್ರಮೇಣ ಅವರಿಗೆ ಸಿನಿಮಾದಲ್ಲಿಯೂ ಹಾಡು ಹಾಡಲು ಅವಕಾಶ ಸಿಕ್ಕಿತ್ತು. ಈಗಾಗಲೇ ಅವರು ಹಲವಾರು ಸಿನಿಮಾಗಳಿಗೆ ಹಾಡಿದ್ದಾರೆ. ಅದರಲ್ಲಿ ಇತ್ತೀಚೆಗಂತೂ ಬಹಳ ವೈರಲ್ ಆಗಿ ಜನರನ್ನು ಮರಳು ಮಾಡಿದ ಹಾಡೆಂದರೆ ಜಿಂಗಿಚಕ ಜಿಂಗಿಚಕ.
ಇವರ ವಾಯ್ಸ್ ಹಾಗೂ ಸ್ಟೇಜ್ ಅಪಿಯರೆನ್ಸ್ ನೋಡಿ ಇವರಿಗೆ ಆಂಕರಿಂಗ್ ಮಾಡಲು ಒಂದಷ್ಟು ಜನ ಸಲಹೆ ಇತ್ತರಂತೆ. ನಿಧಾನಕ್ಕೆ ಆಂಕರಿಂಗ್ ಕಡೆ ವಾಲಿದ ಅಶೋಕ್ ಶರ್ಮ ಹಲವಾರು ಕಾರ್ಯಕ್ರಮಗಳಲ್ಲಿ ಆಂಕರಿಂಗ್ ಕೂಡ ಮಾಡಿದ್ದಾರೆ. ಸುವರ್ಣ ವಾಹಿನಿಯಲ್ಲಿ, ಹೃದಯ ಹೃದಯ ಮ್ಯೂಸಿಕ್ನಲ್ಲಿ ಆಂಕರ್ ಆಗಿದ್ದವರು ಅಶೋಕ್ ಶರ್ಮ .ಮಾಸ್ಟರ್ ಆನಂದ್ ಅವರ ನಿರ್ದೇಶನದ 'ಎಸ್ ಎಸ್ ಎಲ್ ಸಿ ನನ್ನ ಮಕ್ಕಳು' ಸೀರಿಯಲ್ ನಿಂದ ಕಿರುತೆರೆಗೆ ಕಾಲಿಟ್ಟ ಇವರು ಇದೀಗ 'ಸೀತಾರಾಮ' ಸೀರಿಯಲ್ನಲ್ಲಿ ಪಾಪ್ಯುಲಾರಿಟಿ ಪಡೆದಿದ್ದಾರೆ.
ಚಿನ್ನುಮರಿ ಚಿನ್ನುಮರಿ ಅಂತ ತಲೆ ತಿನ್ನೋ ಜಯಂತ ಸೆಟ್‌ನಲ್ಲಿ ಚಿನ್ನುಮರಿ ಜೊತೆ ಹೇಗಿರ್ತಾರೆ ನೋಡಿ!
ಇವರು ಯಶ್ ಬಗ್ಗೆ ಎಮೋಶನಲ್ ಆಗಿ ಮಾತಾಡ್ತ, 'ಯಶ್ ನಟನೆಯ ಸಿನಿಮಾಗಳಲ್ಲೆಲ್ಲ ನನಗೆ ಅವಕಾಶ ಸಿಕ್ತಿತ್ತು. ಆಗೆಲ್ಲ ಯಶ್, ನಿಂಗೆ ಇನ್ನೂ ಚೆನ್ನಾಗಿರುವ ಪಾತ್ರ ಸಿಗುತ್ತೆ ನೋಡ್ತಿರು ಅಂತಿದ್ದ, ರಾಮಾಚಾರಿಯಲ್ಲಿ ಉತ್ತಮ ಪಾತ್ರ ನೀಡಿ ಅವನ ಮಾತನ್ನ ನಿಜವಾಗಿಸಿ ಬಿಟ್ಟ. ನಮ್ಮನೆಯಲ್ಲಿ ಊಟ ಮಾಡಿದ ಅನ್ನದ ಋಣ ತೀರಿಸಿಬಿಟ್ಟ' ಅಂದಿದ್ದಾರೆ. ಇದೀಗ ವೈರಲ್ ಆಗಿದೆ.