ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ಪಾತ್ರದಲ್ಲಿ ನಟಿಸಿರುವ ಪುಟಾಣಿ ರಿತು ಸಿಂಗ್ ಬಗ್ಗೆ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಆಡಿರುವ ಮಾತುಗಳು ಗಮನಸೆಳೆದಿವೆ. ಜೀ ಕನ್ನಡ ಕುಟುಂಬ ಅವಾರ್ಡ್ಸ್‌ನಲ್ಲಿ ಅವರು ಮಾತನಾಡಿದ್ದಾರೆ.
ಅದ್ಭುತವಾಗಿ ಪ್ರಸಾರವಾಗ್ತಿರುವ ಜೀ ಕನ್ನಡದ ಸೀತಾ ರಾಮ ಧಾರವಾಹಿಯಲ್ಲಿನ ಪುಟಾಣಿ ಸಿಹಿ ಪಾತ್ರ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಧಾರವಾಹಿಯಲ್ಲಿ ವೈಷ್ಣವಿ ಗೌಡ ಅವರ ಸೀತಾ ಪಾತ್ರ, ಗಗನ್ ಚಿನ್ನಪ್ಪ ಅವರ ಶ್ರೀರಾಮ್ ದೇಸಾಯಿ ಪಾತ್ರಕ್ಕಿಂತ ಮುದ್ದು ಪುಟಾಣಿ ಸಿಹಿಯನ್ನು ನೋಡೋಕೆ ಅಭಿಮಾನಿಗಳು ಜಾಸ್ತಿ. ಇನ್ನು ಸೀತಾ-ರಾಮ ಜೋಡಿಗಂತೂ ಸಖತ್ ಫ್ಯಾನ್ಸ್ ಇದ್ದಾರೆ. ಇದರ ನಡುವೆ ಜೀ ಕುಟುಂಬ ಕನ್ನಡ ಅವಾರ್ಡ್ಸ್‌ನ ಪ್ರೋಮೋಗಳು ಬರಲು ಆರಂಭಿಸಿದ್ದು, ಸೀತಾ ರಾಮ ಧಾರವಾಹಿಯಲ್ಲಿ ಸೂರ್ಯಪ್ರಕಾಶ್ ದೇಸಾಯಿ 'ಸೂರಿ' ಪಾತ್ರದಲ್ಲಿರುವ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ಸಿಹಿ ಬಗ್ಗೆ ಅವರು ಹೇಳಿರುವ ಮಾತು ಜನ ಮೆಚ್ಚುಗೆಗೆ ಕಾರಣವಾಗಿದೆ. ಧಾರವಾಹಿಯಲ್ಲೂ ತಮ್ಮ ವಯಸ್ಸಿಗೆ ತಕ್ಕಂತ ಪಾತ್ರವೇ ಸಿಕ್ಕಿರುವುದಕ್ಕೆ ಮುಖ್ಯಮಂತ್ರಿ ಚಂದ್ರು ಖುಷಿಯಾಗಿದ್ದಾರೆ.
ನಾಮಿನೇಷನ್ ಪಾರ್ಟಿ ರೆಡ್ ಕಾರ್ಪೆಟ್‌ನಲ್ಲಿ ಪತ್ನಿಯ ಜೊತೆಗೆ ಬಂದ ಮುಖ್ಯಮಂತ್ರಿ ಚಂದ್ರು ಇವರು ನನ್ನ ಸಿನಿಮಾ ಶ್ರೀಮತಿಯಲ್ಲ, ರಿಯಲ್ ಶ್ರೀಮತಿ ಎಂದರು. ಸೀತಾ ರಾಮ ಸೀರಿಯಲ್‌ನಲ್ಲೂ ನೀವು ನಿಮ್ಮ ಕುಟುಂಬವನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತದ್ದೀರಿ ಎನ್ನುವ ಮಾತಿಗೆ, ಧಾರವಾಹಿಯ ಪಾತ್ರವೇ ಹಾಗಿದೆ.ನನ್ನ ವಯಸ್ಸಿಗೆ ತಕ್ಕಂತ ಪಾತ್ರ. ನಾನು ಮನೆಯಲ್ಲಿ ಹೇಗಿರುತ್ತೇನೋ ಅಂಥದ್ದೇ ಪಾತ್ರ. ನನ್ನ ಗುಣಕ್ಕೆ ಹೊಂದಿಕೊಳ್ಳುವ ಪಾತ್ರ. ನನ್ನ ಮೊಮ್ಮಗಳು ಕೂಡ ಸಿಹಿ ರೀತಿಯಲ್ಲೇ ಮನೆಯಲ್ಲಿ ಇರುತ್ತಾಳೆ. ನೋಡೋಕೆ ನನ್ನ ಮೊಮ್ಮಗಳ ರೀತಿಯಲ್ಲೇ ಇದಾಳೆ. ಹಾಗಾಗಿ ಬಹಳ ಲೀಲಾಜಾಲವಾಗಿ ಪಾತ್ರ ಮಾಡೋಕೆ ಅನುಕೂಲವಾಗಿದೆ ಎಂದಿದ್ದಾರೆ. ಇನ್ನೂ ಒಂದು ಸಂತೋಷ ಏನೆಂದರೆ, ನನ್ನ ಪಾತ್ರದಲ್ಲಿ ಪಾಸಿಟಿವ್ ಇದೆ. ಸಮಾಜಕ್ಕೆ ಒಳ್ಳೆಯದನ್ನು ಹೇಳೋಕೆ ಇಂಥ ಒಬ್ಬ ತಾತ ಪ್ರತಿ ಮನೆಯಲ್ಲಿ ಇರಬೇಕು ಎನ್ನುವಂತೆ ಚಿತ್ರಿಸಲಾಗಿದೆ ಇದು ನನಗ ಬಹಳ ಖುಷಿ ನೀಡಿದೆ ಎಂದಿದ್ದಾರೆ.
ಇನ್ನೊಂದೆಡೆ ರಾಮ್‌ನ ಎದುರು ಮನಸ್ಸಿನಲ್ಲಿರುವ ಎಲ್ಲಾ ವಿಚಾರವನ್ನ ಹೇಳಿಕೊಳ್ಳೋಕೆ ಸೀತಾ ತಯಾರಾಗಿದ್ದಾಳೆ.'ಇಷ್ಟದಿನ ನಾನು ಮಾತನಾಡೋಕೆ ಬಂದಾಗಲೆಲ್ಲಾ ನೀವು ನನ್ನ ತಡೀತಾ ಇದ್ರಿ.ಇವತ್ತು ನೀವು ಯಾವುದೇ ಕಾರಣಕ್ಕೂ ತಡೆಯಬಾರದು.ನಾನು ಮಾತನಾಡ್ಲೇಬೇಕು' ಎಂದು ಸೀತಾ ಹೇಳಿರುವ ಬೆನ್ನಲ್ಲೇ, ಅಭಿಮಾನಿಗಳು ಇದ್ದ ಸತ್ಯವನ್ನೆಲ್ಲಾ ಹೇಳಿಬಿಡು ಎಂದು ಸೀತಾಗೆ ದುಂಬಾಲು ಬಿದ್ದಿದ್ದಾರೆ. 'ನೀವು ನನ್ನ ಫೂಲ್ ಮಾಡ್ತಾ ಇಲ್ಲಾ ಅಲ್ವಾ, ಮಾತಾಡೋದಿಕ್ಕೋಸ್ಕರ, ಬೆಡ್‌ರೂಮ್‌ಅನ್ನು ಇಷ್ಟೆಲ್ಲಾ ಸ್ಪೆಷಲ್ ಆಗಿ ಡೆಕೋರೇಷನ್ ಮಾಡಿದ್ದೀರಾ..' ಅನ್ನೋದಕ್ಕೆ ಸೀತಾ ಹೌದು ಎಂದಿದ್ದಾಳೆ.
undefined
ಸೀತಾ ರಾಮಂಗೆ ಮುತ್ತು ಕೊಡೋಕೆ ಬಂದ್ಲು, ಅಷ್ಟರಲ್ಲಿ ಹಿಂಗಾಗ್ಬಿಡೋದಾ!
'ನನ್ನ ಮನಸ್ಸಲ್ಲಿ ಏನಿದ್ಯೋ ಅದೆಲ್ಲವನ್ನೂ ಹೇಳಿಕೊಳ್ಳಬೇಕು ರಾಮ್, ಬೇರೆಯವರ ಜೀವನ ಸರಿ ಮಾಡೋಕೆ ಹೋಗಿ ನಮ್ಮ ಜೀವನವನ್ನ ನಾವು ದಾರಿ ತಪ್ಪೋ ಹಾಗೆ ಮಾಡಿಕೊಳ್ಳಬಾರದಲ್ಲ. ಬೇರೆಯವರ ಸಂತೋಷನ ಹುಡುಕಿಕೊಡೋಕೆ ಹೋಗಿ ನಮ್ಮ ಸಂತೋಷನ ಕಳೆದುಕೊಳ್ಳಬಾರದು ಎಂದು ಅತ್ತಿಗೆ ಹೇಳಿದ್ದು ನನಗೆ ನಿಜ ಅಂತಾ ಅನಿಸ್ತು. ಅದು ತಪ್ಪಲ್ಲ ಅಲ್ವಾ' ಎಂದು ಕೇಳಿದ್ದಾಳೆ.
ವೈಷ್ಣವಿ ಗೌಡ: ಸಂತೂರ್ ಮಮ್ಮಿ ಸೀತಮ್ಮಗೆ ಕಾಲೇಜ್ ಕ್ವೀನ್ ಎಂದ ಫ್ಯಾನ್ಸ್!
ಇದಕ್ಕೆ ರಾಮ್ ತಪ್ಪೇನೂ ಇಲ್ಲ, ಬೆಳಗ್ಗೆ ನೀವು ಹೇಳಬೇಕು ಅಂದುಕೊಂಡಿದ್ದ ಮಾತು ಇದೇ ಅಲ್ವಾ. ಸಡನ್ ಆಗಿ ಎಲ್ಲಾ ಹುಡುಕಾಟ ಎಲ್ಲಾ ನಿಲ್ಸಿ ಅಂದ್ರಲ್ಲ. ಇತ್ತೀಚೆಗೆ ನಿಮಗೆ ಹಾಗೂ ಸಿಹಿ ಪುಟ್ಟಗೆ ಜಾಸ್ತಿ ಟೈಮ್ ಕೊಡೋಕೆ ಆಗ್ತಾ ಇಲ್ಲ ಅಂತಾ ಗೊತ್ತಿದೆ. ಆದರೆ, ಈ ರಾತ್ರಿ ನಮಗಾಗಿ, ನಿಮಗೋಸ್ಕರ ಮಾತ್ರ. ನಂಬಬಹುದು. ನಾನೂ ಕೂಡ ನಿಮ್ಮ ಜೊತೆ ಇಂಪಾರ್ಟೆಂಟ್ ಮಾತನಾಡಬೇಕು ಅಂತಾನೇ ಬಂದೆ. ಅದರೆ, ಇಂದು ನಿಮಗೋಸ್ಕರ ಮಾತ್ರ' ಎಂದು ರಾಮ್ ಹೇಳಿದ್ದು ಎಲ್ಲರ ಕೂತೂಹಲ ಕೆರಳಿಸಿದೆ.