MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ವೈಷ್ಣವಿ ಗೌಡ: ಸಂತೂರ್ ಮಮ್ಮಿ ಸೀತಮ್ಮಗೆ ಕಾಲೇಜ್ ಕ್ವೀನ್ ಎಂದ ಫ್ಯಾನ್ಸ್!

ವೈಷ್ಣವಿ ಗೌಡ: ಸಂತೂರ್ ಮಮ್ಮಿ ಸೀತಮ್ಮಗೆ ಕಾಲೇಜ್ ಕ್ವೀನ್ ಎಂದ ಫ್ಯಾನ್ಸ್!

ಜನಪ್ರಿಯ ಕನ್ನಡ ಧಾರಾವಾಹಿ ಸೀತಾರಾಮದಲ್ಲಿ ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಅವರು ನವರಾತ್ರಿ ಹಬ್ಬದ ಪ್ರಯುಕ್ತ ಕೇಸರಿ ಬಣ್ಣದ ಮ್ಯಾಕ್ಸಿ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಧಾರಾವಾಹಿಯಲ್ಲಿ ಸೀತೆಯ ಮಗಳ ನಿಜ ತಂದೆಯ ಹುಡುಕಾಟ ಮುಂದುವರೆದಿದ್ದು, ಹೊಸ ತಿರುವುಗಳೊಂದಿಗೆ ಕುತೂಹಲ ಕೆರಳಿಸುತ್ತಿದೆ.

3 Min read
Sathish Kumar KH
Published : Oct 06 2024, 08:41 PM IST
Share this Photo Gallery
  • FB
  • TW
  • Linkdin
  • Whatsapp
19

ಕನ್ನಡದ ಸೀತಾರಾಮ ಧಾರಾವಾಹಿಯಲ್ಲಿ ಸೀತಮ್ಮಳಾಗಿ ಮನೆ ಮಾತಾಗಿರುವ ನಟಿ ವೈಷ್ಣವಿ ಗೌಡ ಅವರಿಗೆ ನಿಮ್ಮ ಮದುವೆ ಯಾವಾಗ ಎಂದು ಕೇಳುವವರೇ ಹೆಚ್ಚು. ನಿಮಗೆ ಮದುವೆ ಆಗದಿದ್ದರೂ ಧಾರಾವಾಹಿಯಲ್ಲಿ ಅಮ್ಮನ ಪಾತ್ರವನ್ನು ತುಂಬಾ ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದೀರಿ. ಹೀಗಾಗಿ, ಸೀತಾಗೆ ನೀವು ಮದುವೆ ಮಾಡಿಕೊಳ್ಳಿ ಎಂದು ಹೇಳುವವರೇ ಹೆಚ್ಚಾಗಿದ್ದಾರೆ. ಇನ್ನು ಅಭಿಮಾನಿಗಳಿಗೆ ಕಾಲೆಳೆಯಲು ಮತ್ತಷ್ಟು ಪುಷ್ಟಿ ನೀಡುವಂತೆ ನಟಿ ವೈಷ್ಣವಿ ಗೌಡಾ ಅವರು ಇತ್ತೀಚೆಗೆ ಸಂತೂರ್ ಸೋಪಿನ ಜಾಹೀರಾತೊಂದನ್ನು ನೀಡಲು ಸ್ನಾನದ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣಕ್ಕೆ ಹಂಚಿಕೊಂಡಿದ್ದರು.

29

ವೈಷ್ಣವಿ ಅವರ ಸ್ನಾನದ ವಿಡಿಯೋ ಭಾರಿ ವೈರಲ್ ಆಗಿತ್ತು. ನಿಮಗೆ ಮದುವೆ ಆಗಿಲ್ಲ, ಮಕ್ಕಳಾಗಿಲ್ಲ ಆದರೂ ಸಂತೂರ್ ಮಮ್ಮಿ ಜಾಹೀರಾತು ನೀಡಿದ್ದೇಕೆ ಎಂದು ಅಭಿಮಾನಿಗಳು ನೇರವಾಗಿಯೇ ಪ್ರಶ್ನೆ ಮಾಡಿದ್ದರು. ಮತ್ತೊಂದೆಡೆ ವೈಷ್ಣವಿ ಗೌಡ ಅವರ ಅಂಕು ಡೊಂಕಾದ ಮೈಮಾಟವನ್ನು ನೋಡಿದ ಅಭಿಮಾನಿಗಳು ನೀವೊಬ್ಬ ಅದ್ಭುತ ಸುಂದರಿ ಎಂದು ಹಾಡಿ ಹೊಗಳಿದ್ದರು. ಇದಾದ ಬಳಿಕ ಕೆಲವು ದಿನಗಳು ಕಳೆದ ನಂತರ ತಮ್ಮ ಜಾಹೀರಾತು ವಿಡಿಯೋವನ್ನು ವೈಷ್ಣವಿ ಗೌಡ ಅವರು ಡಿಲೀಟ್ ಮಾಡಿಕೊಂಡಿದ್ದಾರೆ.

39

ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ವೈಷ್ಣವಿ ಪ್ರತಿ ಹಬ್ಬಗಳಿಗೂ ಸೀರೆ, ಗೌನ್ ಹಾಗೂ ಇತರೆ ಉಡುಗೆಗಳನ್ನು ತೊಟ್ಟು ಚೆಂದ ಫೋಟೋಗಳನ್ನು ಅಭಿಮಾನಿಗಳಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾರೆ. ಇನ್ನು ವೈಷ್ಣವಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಗೆ ಬರೋಬ್ಬರಿ 1.4 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಹೀಗಾಗಿ, ಅವರು ಪೋಸ್ಟ್ ಮಾಡುವ ಎಲ್ಲ ಪೋಸ್ಟ್‌ಗಳು ಕೆಲವೇ ಗಂಟೆಗಳಲ್ಲಿ ಸಾವಿರಾರು ವೀಕ್ಷಣೆಗಳು, ಲೈಕ್ಸ್‌ಗಳು ಹಾಗೂ ಕಾಮೆಂಟ್‌ಗಳನ್ನು ಪಡೆಯುತ್ತವೆ.

49

ಇದೀಗ ನಟಿ ವೈಷ್ಣವಿ ಗೌಡ ಅವರು ವಿಜಯದಶಮಿ ಹಬ್ಬದ ಭಾನುವಾರದ ದಿನ ನವರಾತ್ರಿಯ ನವ ಬಣ್ಣಗಳಲ್ಲಿ ಕೇಸರಿ ಬಣ್ಣದ ಪೋಶಾಕು ಧರಿಸಿ ಪೋಟೋ ಪೋಸ್ ಕೊಟ್ಟಿದ್ದಾರೆ. ಅದರಲ್ಲಿ ಅದ್ಭುತವಾಗಿರುವ ಕೆಲವು ಫೋಟೋಗಳನ್ನು ವೈಷ್ಣವಿ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗೆ ಹಂಚಿಕೊಂಡಿದ್ದು, ಇದಕ್ಕೆ ಸಾವಿರಾರು ಲೈಕ್ಸ್‌ಗಳು ಬಂದಿವೆ.

59

ಝೀ ಕನ್ನಡ ಸೀರಿಯಲ್ ಸೀತಾರಾಮ (Zee Kannada Serial Seetha Raama) ಫೇಮ್ ಸೀತಾ ಹಾಗೂ ರಾಮನ ಸ್ಟೈಲ್ ಒಂದೆರೆಡು ದಿನದ ಮಟ್ಟಿಗೆ ಪಾತ್ರಕ್ಕೆ ಅನುಗುಣವಾಗಿ ಬದಲಾಗಿತ್ತು. ಯಾವಾಗಲೂ ಸೀರೆ ಉಡುತ್ತಿದ್ದ ನಟಿ ವೈಷ್ಣವಿ (actress Vaishnavi), ಸ್ಕೂಲ್ ಯೂನಿಫಾರ್ಮ್ ಹಾಕಿದ್ದರು. ಕೇವಲ ವೈಷ್ಣವಿ ಮಾತ್ರವಲ್ಲದೇ ರಾಮ್ ಕೂಡ ಸ್ಕೂಲಿಗೆ ಹೋಗುವ ಹುಡುಗನ ರೀತಿ ಯೂನಿಫಾರ್ಮ್ ಧರಿಸಿದ್ದರು.

69

ಆದರೆ, ಧಾರಾವಾಹಿ ಶೂಟಿಂಗ್ ನಂತರ ಎಲ್ಲ ಧಾರಾವಾಹಿ ತಂಡವದವರು ಹಾಡೊಂದಕ್ಕೆ ರೀಲ್ಸ್ ಮಾಡುತ್ತಾ ಸಖತ್ ಡಾನ್ಸ್ ಮಾಡಿದ್ದಾರೆ. ನಟ ದರ್ಶನ್ (Sandalwood Darshan) ಜೈಲಿಗೆ ಹೋದ್ಮೇಲೆ ಅವರ ಹಾಡಿಗೆ ಸ್ಟೆಪ್ ಹಾಕುವವರ ಸಂಖ್ಯೆ ಹೆಚ್ಚಾಗಿದೆ. ಈ ಪಟ್ಟಿಯಲ್ಲಿ ವೈಷ್ಣವಿ ಗೌಡ ಕೂಡ ಸೇರಿದ್ದಾರೆ. ನಟಿ ವೈಷ್ಣವಿ ಹಾಗೂ ನಟ ಗಗನ್ (Actor Gagan) ಸೇರಿ ದರ್ಶನ್ ಅಭಿನಯದ ಸಖತ್ತಾಗವ್ಳೆ, ಸುಮ್ನೆ ನಗ್ತಾಳೆ ಹಾಡಿಗೆ ಸ್ಟೆಪ್ಸ್ ಹಾಕಿದ್ದು, ಈ ವಿಡಿಯೋಗೆ ತರಹೇವಾರಿ ಕಾಮೆಂಟ್‌ಗಳು ಬಂದಿದ್ದವು.

79

ನಟಿ ವೈಷ್ಣವಿ ಗೌಡ ಅವರು ಯಾವಾಗಲೂ ಮೈತುಂಬಾ ಬಟ್ಟೆಗಳನ್ನು ಹಾಕಿಕೊಂಡೇ ಪೋಸ್ ಕೊಡುವ ಸುಂದರಿ. ಆದರೆ, ಇದೀಗ ಹೂವಿನ ಅಲಂಕಾರವುಳ್ಳ ಕೇಸರಿ ಬಣ್ಣದ ಮ್ಯಾಕ್ಸಿಡ್ರೆಸ್ (Spring Sunsets Maxi Dress Floral) ಧರಿಸಿ ಫೋಟೋ ಶೂಟ್ ಮಾಡಿಸಿದ್ದಾರೆ. ಇನ್ನು ತಮ್ಮ ಫೋಸ್ಟ್‌ಗೆ ನಾವು ಧರಿಸುವ ಬಣ್ಣವು ತಮ್ಮ ಮನಸ್ಸಿನ ಮೇಲೆ ನೇರವಾಗಿ ಪ್ರಭಾವ ಬೀರುತ್ತದೆ (Colour is a power that directly influences the soul) ಎಂದು ಟ್ಯಾಗ್‌ಲೈನ್ ಬರೆದುಕೊಂಡಿದ್ದಾರೆ.

89

ಸೀತಾರಾಮ ಧಾರಾವಾಹಿಯಲ್ಲಿ ನಟಿ ಸೀತಾಳ ಮಗಳು ಸಿಹಿಯ ಜನ್ಮರಹಸ್ಯ ಎಲ್ಲರಿಗೂ ತಿಳಿಯುತ್ತಿದೆ. ಸೀತಾಗೆ ಹೆರಿಗೆ ಮಾಡಿಸಿದ ವೈದ್ಯೆ ಡಾ.ಅನಂತಲಕ್ಷ್ಮಿ ಅವರನ್ನು ಸಂಪರ್ಕ ಮಾಡಿದ ಭಾರ್ಗವಿ ದೇಸಾಯಿ ಹಾಗೂ ಆಕೆಯ ಚೇಲ ಚಾಂದಿನಿಗೆ ಹುಟ್ಟಿನ ಗುಟ್ಟು ಹೇಳದೇ ವಾಪಸ್ ಕಳಿಸಿದ್ದಾರೆ. ಇನ್ನು ಸೀತಾಳ ಗಂಡ ಯಾರೆಂದು ಹುಡುಕುವುದರಲ್ಲಿ ಸೋತಿರುವ ದುಷ್ಟ ಕೂಟದ ಸದಸ್ಯರಾದ ಭಾರ್ಗವಿ ದೇಸಾಯಿ, ರುದ್ರಪ್ರತಾಪ್ ಹಾಗೂ ಚಾಂದಿನಿ ಮೂವರು ಸೇರಿಕೊಂಡು ಸೀತಾಗೆ ಮದುವೆ ಆಗಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

99

ಭಾರ್ಗವಿ ಮತ್ತು ರುದ್ರಪ್ರತಾಪ್ ಇಬ್ಬರೂ ಸೇರಿಕೊಂಡು ಸೀತಾ ಬಾಡಿಗೆ ತಾಯಿ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಇದಕ್ಕಾಗಿ ಸೀತಾಗೆ ಇಲ್ಲದ ಗಂಡನನ್ನು ಹುಡುಕುವುದನ್ನು ಬಿಟ್ಟು ಸಿಹಿಯ ಅಪ್ಪ ಯಾರೆಂಬುದನ್ನು ಹುಡುಕಲು ಮುಂದಾಗಿದ್ದಾರೆ. ಇದೀಗ ರುದ್ರಪತಾಪ್ ಚಿತ್ರ ಕಲಾವಿದರನ್ನು ಹಿಡಿದುಕೊಂಡು ಸಿಹಿಯ ಅಪ್ಪ ಯಾರೆಂದು ಊಹಿಸಿ ಚಿತ್ರ ಬಿಡಿಸಲು ಹೇಳಿದ್ದಾರೆ. ಆಗ ಸಿಹಿಯ ಅಪ್ಪ ಡಾ. ಶ್ಯಾಮ್ ಅವರ ಹೋಲಿಕೆಯ ಚಿತ್ರವನ್ನು ಕಲಾವಿದ ಬಿಡಿಸಿದ್ದಾನೆ. ಈ ರೇಖಾಚಿತ್ರ ಭಾರ್ಗವಿ ಕೈಗೆ ಸೇರಿದರೆ ಡಾ.ಶ್ಯಾಮ್ ಅವರ ಮಗುವಿನ ಬಾಡಿಗೆ ತಾಯಿ ಸೀತಾ ಎಂಬ ಸತ್ಯ ತಿಳಿಯಲಿದೆ. ಇದನ್ನು ಎಲ್ಲರ ಮುಂದಿಡುವ ಮೂಲಕ ಸೀತಾಳನ್ನು ಮನೆಯಿಂದ ಹೊರಗೆ ಹಾಕಲು ಭಾರ್ಗವಿ ಯೋಜನೆ ರೂಪಿಸಿಕೊಂಡಿದ್ದಾಳೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved