ಮಿನಿ ಸ್ಕರ್ಟ್​ ಬಿಟ್ಟು ಬುರ್ಖಾಧಾರಿಯಾದ ಗಗನಸಖಿ ರಿಧಿ ಜಾಧವ್​- ಬಿಗ್​ಬಾಸ್​ ಅದ್ನಾನ್​ ಶೇಖ್​​ ಚಪ್ಪಲಿ ಮೇಲೆ ನೆಟ್ಟಿಗರ ಕಣ್ಣು!

Published : Oct 16, 2024, 04:24 PM IST
ಮಿನಿ ಸ್ಕರ್ಟ್​ ಬಿಟ್ಟು ಬುರ್ಖಾಧಾರಿಯಾದ ಗಗನಸಖಿ ರಿಧಿ ಜಾಧವ್​-  ಬಿಗ್​ಬಾಸ್​ ಅದ್ನಾನ್​ ಶೇಖ್​​ ಚಪ್ಪಲಿ ಮೇಲೆ ನೆಟ್ಟಿಗರ ಕಣ್ಣು!

ಸಾರಾಂಶ

ಆಯೇಷಾ ಖಾನ್​ ಆಗಿ ಪರಿವರ್ತನೆಗೊಂಡು ಬಿಗ್​ಬಾಸ್​ ಖ್ಯಾತಿಯ ಅದ್ನಾನ್ ಶೇಖ್​ ಜೊತೆ ಮದುವೆಯಾಗಿರುವ  ಗಗನಸಖಿ ರಿಧಿ ಜಾಧವ್​ ಸಂಪೂರ್ಣ ಬುರ್ಖಾದಲ್ಲಿ ಕಾಣಿಸಿಕೊಂಡಿದ್ದಾರೆ.   

 ಹಿಂದಿ ಬಿಗ್​ಬಾಸ್​ನ ಓಟಿಟಿ-03  ಖ್ಯಾತಿಯ ಅದ್ನಾನ್ ಶೇಖ್ ಅವರು ತಮ್ಮ ಬಹುಕಾಲದ ಗೆಳತಿ ಜೊತೆ ಈಚೆಗೆ ಮದುವೆಯಾದರು.  ಆದರೆ ಈ ಮದುವೆಯ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣ ಇವರು ಮದುವೆಯಾಗಿದ್ದು,  ಇಂಡಿಗೋ ಏರ್‌ಲೈನ್ಸ್‌ನಲ್ಲಿ ಫ್ಲೈಟ್ ಅಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದ ರಿಧಿ ಜಾಧವ್​ ಅವರನ್ನು! ರಿಧಿ ಅವರನ್ನು ಆಯೇಷಾ ಶೇಖ್​ ಆಗಿ ಮತಾಂತರಗೊಳಿಸಿ ಮದುವೆಯಾಗಿರುವುದಾಗಿ ಖುದ್ದು ಅದ್ನಾನ್​ ಅವರ ಸಹೋದರಿಯೇ ಮೀಡಿಯಾಗಳ ಮುಂದೆ ಬಂದು ಹೇಳಿದಾಗಲೇ ವಿಷಯ ಬೆಳಕಿಗೆ ಬಂದಿದೆ!  ತಮ್ಮ ಪತ್ನಿಯ  ಹೆಸರನ್ನು ಆಯೇಷಾ ಶೇಖ್ ಎಂದೇ ಅದ್ನಾನ್​ ಹೇಳುತ್ತಲೇ ಬಂದಿದ್ದರು.   ಮದುವೆಯ ದಿನ ಪತ್ನಿಗೆ ಮಾಸ್ಕ್‌ ಹಾಕಿಸಿದ್ದ ಅವರು, ಯಾವುದೇ ಕಾರಣಕ್ಕೂ ಆಕೆಯ ಮುಖವನ್ನು ರಿವೀಲ್‌ ಮಾಡದಂತೆ ಮಾಧ್ಯಮಗಳಲ್ಲಿ ಹಾಗೂ ಪಾಪರಾಜಿಗಳಿಗೆ ಮನವಿ ಮಾಡಿಕೊಂಡಿದ್ದರು. ತಾವು ಮಾತ್ರ ಫೋಟೋ, ವಿಡಿಯೋಗೆ ಪೋಸ್‌ ಕೊಟ್ಟಿದ್ದ ಅದ್ನಾನ್‌, ಪತ್ನಿಗೆ ಮಾಸ್ಕ್‌ ಹಾಕಿಸಿದ್ದರು. ಎಲ್ಲಿಯೂ ಅವರ ಮುಖ ರಿವೀಲ್‌ ಮಾಡಲು ಬಿಟ್ಟಿರಲಿಲ್ಲ. ಇದು ಮುಸ್ಲಿಂ ಸಂಪ್ರದಾಯ ಆಗಿರುವ ಹಿನ್ನೆಲೆಯಲ್ಲಿ, ಗೌಪ್ಯತೆಯನ್ನು ಕಾಪಾಡಿ ಎಂದು ಅವರು ಮನವಿ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ, ಸೋಷಿಯಲ್‌ ಮೀಡಿಯಾದಲ್ಲಿಯೂ ಪತ್ನಿಯ ಮುಖ ಕಾಣಿಸದಂತೆ ತೋರಿಸಲಾಗಿತ್ತು. ಆದರೆ ಆಕೆಯ ಹಿಂದಿನ ಫೋಟೋಗಳೆಲ್ಲಾ ಇದರ ಜೊತೆಯೇ ವೈರಲ್‌ ಆಗುತ್ತಿದ್ದವು.

ಆದರೆ ಅಸಲಿಗೆ ಈಕೆಯ ಹೆಸರು ಆಯೇಷಾ ಖಾನ್‌ ಅಲ್ಲ, ಬದಲಿಗೆ ರಿಧಿ ಜಾಧವ್ ಎಂಬ ಸತ್ಯ ಕೊನೆಗೆ ತಿಳಿದುಬಂದಿತ್ತು.  ಈ ಶಾಕಿಂಗ್‌ ವಿಷ್ಯವನ್ನು ಖುದ್ದು ಅದ್ನಾನ್‌ ಸಹೋದರಿ ರಿವೀಲ್‌ ಮಾಡಿದ್ದರು. ಇವರಿಬ್ಬರೂ ಎರಡು ವರ್ಷಗಳ ಡೇಟಿಂಗ್​ನಲ್ಲಿ ಇದ್ದರು. ಈಗ ಮದುವೆಯಾಗಿದ್ದಾರೆ. ಮದುವೆಯ ಬಳಿಕ ಸಹೋದರಿ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಅಣ್ಣ, ಮದುವೆಯಾಗುವ ಸಲುವಾಗಿ ರಿಧಿ ಅವರನ್ನು ಮತಾಂತರ ಮಾಡಿದ್ದು, ಹೆಸರು ಬದಲಿಸಿರುವುದಾಗಿ ಅವರು ತಿಳಿಸಿದ್ದರು. ಇದಾಗಲೇ ತಮ್ಮ ಮೇಲೆ ಸಹೋದರ ದೌರ್ಜನ್ಯ ನಡೆಸಿರುವುದಾಗಿ ದೂರು ದಾಖಲಿಸಿರುವ ಸಹೋದರಿ ಇಫ್ಫತ್ ಶೇಖ್ ಈಗ ಮತ್ತೊಂದು ಶಾಕಿಂಗ್‌ ವಿಷಯವನ್ನು ರಿವೀಲ್‌ ಮಾಡಿದ್ದರು. ಅವರ ದೂರಿನ ಆಧಾರದ ಮೇಲೆ ಅದ್ನಾನ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. 

ಸೈಫ್​ ಅಲಿ ಮಕ್ಕಳು, ರವೀಂದ್ರನಾಥ್​ ಟ್ಯಾಗೋರ್​ರ ಮರಿಮೊಮ್ಮಕ್ಕಳು! ಮತಾಂತರದ ಕುತೂಹಲದ ಇತಿಹಾಸ
  
ಇದೀಗ ಈ ಜೋಡಿ ಮುಂಬೈಗೆ ಹೋಗುತ್ತಿರುವ ವಿಡಿಯೋ ವೈರಲ್​ ಆಗಿದೆ. ಇದರಲ್ಲಿ ರಿಧಿ ಅವರು ಸಂಪೂರ್ಣವಾಗಿ ಬಿಳಿ ಬಣ್ಣದ ಬುರ್ಖಾ ಧರಿಸಿರುವುದನ್ನು ನೋಡಬಹುದು. ಅವರ ಕಣ್ಣು ಕೂಡ ಕಾಣಿಸದಂತೆ ಬುರ್ಖಾ ಧರಿಸಿರುವುದನ್ನು ನೋಡಿ ಫ್ಯಾನ್ಸ್​ ಶಾಕ್​ ಆಗಿದ್ದಾರೆ. ಮಿನಿ ಸ್ಕರ್ಟ್​ ಬಿಟ್ಟು ಹೀಗೆ ಬದಲಾಗಿದ್ದನ್ನು ನೋಡಿ ವಿಭಿನ್ನ ರೀತಿಯ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. ಇನ್ನು ಹಿಂದೂ-ಮುಸ್ಲಿಮ್​ ಮದುವೆಯೆಂದ ಮೇಲೆ ಕೇಳಬೇಕೆ? ಥರಹೇವಾರಿ ಕಮೆಂಟ್ಸ್​ ಸೋಷಿಯಲ್​ ಮೀಡಿಯಾದಲ್ಲಿ ಬರುತ್ತಲೇ ಇವೆ. ಇದೇ ವೇಳೆ ಅದ್ನಾನ್​ ಅವರ ಚಪ್ಪಲಿ ಮೇಲೂ ನೆಟ್ಟಿಗರ ಕಣ್ಣು ಬಿದ್ದಿದೆ. ಇದಕ್ಕೆ ಕಾರಣ, ಹೂವಿನ ರೀತಿಯ ಚಪ್ಪಲ್​ ಅವರು ಧರಿಸಿದ್ದು, ಇದು ಹೆಂಗಸರ ಚಪ್ಪಲ್​ ಅಲ್ವಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. 

ಅಂದಹಾಗೆ, ಅದ್ನಾನ್‌ ಅವರ ವೆಡ್ಡಿಂಗ್‌ ಕಾರ್ಡ್ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿತ್ತು.  ಇದು ಆಯೇಷಾ ಅವರ ಹೆಸರಿನಲ್ಲಿ ಇದೆಯಾದರೂ, ಇದನ್ನು ಬರೆಸಿದವರು ಅದ್ನಾನ್​ ಎಂದಿದ್ದರು ನೆಟ್ಟಿಗರು. ಇದರಲ್ಲಿ 'ಮದುವೆಯ ಸಂದರ್ಭದಲ್ಲಿ ವಧುವಿನ ಫೋಟೋ ಯಾರೂ ಸೆರೆ ಹಿಡಿಯಬಾರದು. ಇದು ತಮ್ಮ ಸಂಪ್ರದಾಯದ ಪ್ರಶ್ನೆ ಎಂದು ಬರೆದಿದ್ದರು.  ಮದುವೆಗೆ ಆಹ್ವಾನ ನೀಡಿದ್ದ ಅದ್ನಾನ್‌  ಮದುಮಗಳ ಫೋಟೋ ಮಾತ್ರ ತೋರಿಸಬೇಡಿ ಎಂದಿದ್ದರು. ಅದರಂತೆಯೇ ಮದುವೆಯ ಸಂಪೂರ್ಣ ಶಾಸ್ತ್ರಗಳು ನಡೆಯುವವರೂ ಮದುಮಗಳಿಗೆ ಮಾಸ್ಕ್​ ಹಾಕಿ ಇಡಲಾಗಿತ್ತು. ಅಂದಹಾಗೆ, ಅದ್ನಾನ್ ಶೇಖ್ ಬಿಗ್ ಬಾಸ್ OTT 3 ಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಪ್ರವೇಶಿಸಿದ್ದರು. ಅವರು ಸಹ ಸ್ಪರ್ಧಿ ಲವಕೇಶ್ ಕಟಾರಿಯಾ ಅವರೊಂದಿಗೆ  ಪೈಪೋಟಿ ನೀಡಿದ್ದರು.  ಇಬ್ಬರೂ ಆಗಾಗ್ಗೆ ಮನೆಯೊಳಗೆ  ಕಚ್ಚಾಡುತ್ತಿದ್ದರು. ಇವರು ಸೋಷಿಯಲ್​ ಮೀಡಿಯಾ ಇನ್​ಫ್ಲುಯೆನ್ಸರ್​ ಕೂಡ. ತಮ್ಮ ಚಮತ್ಕಾರಿ ಇನ್‌ಸ್ಟಾಗ್ರಾಮ್ ವೀಡಿಯೊಗಳು ಮತ್ತು ಟ್ರೆಂಡಿಂಗ್ ರೀಲ್‌ಗಳಿಗೆ ಹೆಸರುವಾಸಿಯಾಗಿದ್ದಾರೆ. ಇವರು,  ಪ್ರಸಿದ್ಧ ಸಾಮಾಜಿಕ ಮಾಧ್ಯಮದ ಪ್ರಭಾವಶಾಲಿ ಗುಂಪು ತಂಡ 07 ರ ಭಾಗವಾಗಿದ್ದಾರೆ. ಇದರಲ್ಲಿ ಫೈಜು ಶೇಖ್, ಹಸ್ನೈನ್ ಖಾನ್, ಶಾದನ್ ಫಾರೂಕಿ ಮತ್ತು ಫೈಜ್ ಬಲೋಚ್ ಇತರರು ಸೇರಿದ್ದಾರೆ. ಏಸ್ ಆಫ್ ಸ್ಪೇಸ್ ಸೀಸನ್ 2 ರಿಯಾಲಿಟಿ ಷೋನಲ್ಲಿಯೂ ಇವರು  ಭಾಗವಹಿಸಿದ್ದರು.

ಈ ನಟಿ ಬಾಯ್​ಫ್ರೆಂಡ್​ನನ್ನು ಬಿಡಲು ಕಾರಣವಾಗಿದ್ದು ಮೂತ್ರವಂತೆ! ಕೈನಾತ್ ಹೇಳಿದ್ದೇನು ಕೇಳಿ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಪ್ಲ್ಯಾನ್‌ ಬದಲಾಯಿಸಿದ ಜಯದೇವ್;‌ ಇನ್ನೊಂದು ಅವಾಂತರ ಆಗಲಿದೆಯಾ?
ಡೂಡಲ್ ಫೋಟೊ ಮೂಲಕ ಅವಿ ಬರ್ತ್ ಡೇಗೆ ವಿಶ್ ಮಾಡಿದ Divya Uruduga… ಫ್ಯಾನ್ಸ್’ಗೆ ಮದ್ವೆ ಚಿಂತೆ