ಮಗಳ ಧ್ವನಿ ಕೇಳಿ ಬಿಕ್ಕಿಬಿಕ್ಕಿ ಅತ್ತ ಧನರಾಜ್; ಬಿಗ್ ಬಾಸ್ ತಂದ್ರು ಮೋಟಿವೇಷನ್!

By Vaishnavi Chandrashekar  |  First Published Oct 16, 2024, 3:55 PM IST

ಪದೇ ಪದೇ ಟಾರ್ಗೆಟ್ ಆಗುತ್ತಿದ್ದ ಧನರಾಜ್‌ಗೆ ಬಿಗ್ ಬಾಸ್ ಕಡೆಯಿಂದ ಬಂತು ಬಿಗ್ ಸರ್ಪ್ರೈಸ್. ಇದೇ ನನ್ನ ಮೋಟಿವೇಷನ್ ಎಂದ ನಟ......
 


ಗಿಚ್ಚಿ ಗಿಲಿಗಿಲಿ ಸೀಸನ್ 2ರ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ಧನರಾಜ್ ಆಚಾರ್ ಸದ್ಯ ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸುತ್ತಿದ್ದಾರೆ. ಮೊದಲ ವಾರದಲ್ಲಿ ಕಾಮಿಡಿ ಮಾಡಿಕೊಂಡು ಖುಷ್ ಖುಷ್ ಆಗಿದ್ದ ಧನರಾಜ್ ತುಂಬಾ ವೀಕ್ ಆಗುತ್ತಿದ್ದಾರೆ ಮೂಲೆ ಸೇರುತ್ತಿದ್ದಾರೆ ಎಂದು ಇನ್ನಿತರ ಸ್ಪರ್ಧಿಗಳು ಟಾರ್ಗೆಟ್‌ ಮಾಡುತ್ತಿದ್ದರು. ಇದೇ ಕಾರಣ ಕೊಟ್ಟು ಎರಡು ವಾರವೂ ಧನರಾಜ್‌ರನ್ನು ನಾಮಿನೇಟ್ ಮಾಡಿದ್ದಾರೆ. ಯಾವ ರೀತಿ ಇರಬೇಕು, ಯಾವ ರೀತಿ ಮುಂದುವರೆಯಬೇಕು ಅನ್ನೋ ಗೊಂದಲದಲ್ಲಿ ಇರುವ ಧನರಾಜ್‌ಗೆ ಬಿಗ್ ಬಾಸ್ ಮೋಟಿವೇಷನ್ ನೀಡುತ್ತಾರೆ.

ಫೋನ್ ಕರೆ ಬರುತ್ತಿದ್ದಂತೆ ಹಲೋ ಹೇಳಿ ಬಿಗ್ ಬಾಸ್ ಎಂದು ಧನರಾಜ್ ಮಾತನಾಡುತ್ತಾರೆ. ನಿಮಗೆ ಏನೋ ಕೇಳಿಸಬೇಕು ಎಂದು ಇದ್ದಕ್ಕಿದ್ದಂತೆ ಮಗು ಅಳುತ್ತಿರುವ ವಿಡಿಯೋವನ್ನು ಬಿಗ್ ಬಾಸ್ ಹಾಕುತ್ತಾರೆ. ಮಗು ಅಳುತ್ತಿರುವ ಧ್ವನಿ ಕೇಳಿಸುತ್ತಿದ್ದಂತೆ ಬಿಕ್ಕಿಬಿಕ್ಕಿ ಕಣ್ಣೀರಿಟ್ಟ ಧನರಾಜ್ 'ಸಾರಿ ಪುಟ್ಟ ಸರಿಯಾಗಿ ಆಟವಾಡಲು ಆಗುತ್ತಿಲ್ಲ' ಎಂದು ಹೇಳುತ್ತಾರೆ. ಕರೆ ಇಟ್ಟ ನಂತರ ಕ್ಯಾಮೆರಾ ನೋಡುತ್ತಾ 'ನನ್ನ ಮಗಳು ನೆನಪಾದಾಗಲೆಲ್ಲಾ ಇನ್ನೂ ಚೆನ್ನಾಗಿ ಆಟವಾಡಬೇಕು ಅನಿಸುತ್ತದೆ. ಇದನ್ನು ಮೋಟಿವೇಷನ್ ಆಗಿ ಸ್ವೀಕರಿಸುತ್ತೀನಿ. ಇಲ್ಲಿ ನನ್ನ ಕಡೆ ಬೆರಳು ತೋರಿಸಿ ಪ್ರಶ್ನೆ ಮಾಡುವವರಿಗೆ ಉತ್ತರ ಕೊಡುತ್ತೀನಿ' ಎಂದು ಧನರಾಜ್ ಹೇಳುತ್ತಾರೆ. 

Tap to resize

Latest Videos

undefined

ಬಿಗ್ ಬಾಸ್ ಮನೆಯಲ್ಲಿ ಜಗಳ ಶುರು ಮಾಡಿದ್ದೇ ಉಗ್ರಂ ಮಂಜು; ಶಕುನಿ ಪಟ್ಟ ಕೊಟ್ಟ ವೀಕ್ಷಕರು

ನಾಮಿನೇಷನ್:

ಇಂದು, ಶಿಶಿರ್, ಧನರಾಜ್ ಅವರನ್ನು ನೇರವಾಗಿ ನಾಮಿನೇಟ್ ಮಾಡ್ತಾರೆ. ನೀವು ಗೆಸ್ಟಾ ಅಥವಾ ಸ್ಪರ್ಧಿಯಾ ಅನ್ನೋದು ತಿಳಿತಾ ಇಲ್ಲ. ಮನೆಯಲ್ಲಿ ಇದ್ದೂ ಇಲ್ಲದಂತೆ ಇದ್ದೀರಿ. ಎಲ್ಲೋ ಕಳೆದುಹೋಗಿದ್ದೀರಿ ಎನ್ನುವ ಶಿಶಿರ್, ಧನರಾಜ್ ಗೆ ಹಾಗಲಕಾಯಿ ಜ್ಯೂಸ್ ಕುಡಿಸ್ತಾರೆ. ಮಚ್ಚಾ, ಮಚ್ಚಾ ಬಚ್ಚಲ ಮನೆ ಸ್ವಚ್ಛ ಎನ್ನುತ್ತ ಕಹಿ ಜ್ಯೂಸ್ ಕುಡಿದು ಮುಗಿಸುವ ಧನರಾಜ್, ಕಣ್ಣೀರು ಹಾಕ್ತಿದ್ದಾರೆ. ಎಲ್ಲಿ ಮಾತನಾಡ್ಬೇಕು, ಎಲ್ಲಿ ಮಾತನಾಡ್ಬಾರದು ಎನ್ನುವ ಕನ್ಫ್ಯೂಸ್ ನಲ್ಲಿ ಧನರಾಜ್ ಇದ್ದು, ಬಿಗ್ ಬಾಸ್ ಗೆ ನಾನು ಅನ್ ಫಿಟ್ ಎನ್ನುವ ಅನುಮಾನ ಬರ್ತಿದೆ ಎನ್ನುತ್ತಲೇ ಭಾವುಕರಾಗ್ತಾರೆ.

ಲಾಯರ್ ಜಗದೀಶ್- ನಟ ರಂಜಿತ್ ಹೊಡೆದಾಟ; ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ಫೋಟೋ ವೈರಲ್?

click me!