ಸೀತಾಳ ಜೊತೆ ಸಿಹಿಗೊಂದು ಸೇರು: ಅಮ್ಮ-ಮಗಳ ಮನೆತುಂಬಿಸಿಕೊಂಡ ಪರಿಯೇ ಅಮೋಘ

Published : Jul 12, 2024, 03:52 PM IST
ಸೀತಾಳ ಜೊತೆ ಸಿಹಿಗೊಂದು ಸೇರು: ಅಮ್ಮ-ಮಗಳ ಮನೆತುಂಬಿಸಿಕೊಂಡ ಪರಿಯೇ ಅಮೋಘ

ಸಾರಾಂಶ

ಸೀತಾಳ ಜೊತೆ ಸಿಹಿಯನ್ನೂ ಮನೆತುಂಬಿಸಿಕೊಳ್ಳಲಾಗಿದೆ. ಭಾರ್ಗವಿಯ ಕುತಂತ್ರ ಇಲ್ಲಿಯೂ ನಡೆಯದೇ ಠುಸ್​ ಆಗಿದೆ. ಮುಂದೇನು?  

ಸೀತಾ ಮತ್ತು ರಾಮರ ಮದುವೆ ಎಲ್ಲಾ ಅಡೆತಡೆಗಳನ್ನೂ ಮೀರಿ ನಡೆದಿದೆ. ಕೊನೆಗೂ ಸುಸೂತ್ರವಾಗಿ ಮದುವೆ ನಡೆದಿದೆ. ಕೊನೆಯವರೆಗೂ ಇದ್ದ ಆತಂಕ ಮರೆಯಾಗಿದೆ. ಈಗೇನಿದ್ದರೂ ಸೀತಾಳನ್ನು ಮನೆ ತುಂಬಿಸಿಕೊಳ್ಳುವುದು. ಸಂಪ್ರದಾಯದಂತೆ ಸೇರನ್ನು ಒದ್ದು ಸೀತಾ ಒಳ ಬಂದಿದ್ದಾಳೆ. ಅವಳಿಗೆ ಮನೆಯಲ್ಲಿ ಭಾರ್ಗವಿ ಬಿಟ್ಟು ಎಲ್ಲರೂ ಸಂತೋಷದಿಂದ ಮನೆತುಂಬಿಸಿಕೊಂಡಿದ್ದಾರೆ. ಆದರೆ ಇಲ್ಲಿ ಹೈಲೈಟ್​ ಆಗಿರುವುದು ಸಿಹಿ. ಸಿಹಿಯನ್ನು ಎಲ್ಲರೂ ಮನೆತುಂಬಿಸಿಕೊಂಡಿರುವ ಪರಿಯೇ ಖುಷಿ ಕೊಡುವಂಥದ್ದು. ಸಿಹಿಗೂ ಪುಟ್ಟ ಸೇರು ಇಟ್ಟು ಎಲ್ಲರೂ ಪ್ರೀತಿಯಿಂದ ಮನೆ ತುಂಬಿಸಿಕೊಂಡಿದ್ದಾರೆ. ಇದಕ್ಕೆ ಭಾರ್ಗವಿ ಅಡ್ಡಗಾಲು ಹಾಕಲು ನೋಡಿದ್ದಾಳೆ. ಇದು ಸರಿಯಲ್ಲ ಎಂದಿದ್ದಾಳೆ. ಆಗ ದೇಸಾಯಿ ತಾತಾ, ಸೇರು ಒದ್ದು ಬರುವ ಹಿಂದಿರುವ ಶಾಸ್ತ್ರ ಹೇಳಿದ್ದಾರೆ. ಈ ಸೇರಿನಲ್ಲಿ ಇರುವ ಅಕ್ಕಿ ಬೀರಿದಂತೆ ಮನೆಗೆ ಬರುವಾಕೆ ಸಂತೋಷವನ್ನು ತರಲಿ ಎನ್ನುವುದೇ ಆಗಿದೆ. ಅದೇ ಸಂತೋಷ ಈಗ ಸೀತಾ ಜೊತೆ ಸಿಹಿಯ ರೂಪದಲ್ಲಿಯೂ ಬರುತ್ತಿದೆ ಎಂದಿದ್ದಾನೆ.

ಒಟ್ಟಿನಲ್ಲಿ ಸೀತಾ ರಾಮರ ಮನೆಗೆ ಮುದ್ದು ಸಿಹಿಯ ಎಂಟ್ರಿಯೂ ಸುಲಭದಲ್ಲಿ ಆಗಿದೆ. ಕೊನೆಯವರೆಗೂ ಸೀತಾರಾಮರ ಕಲ್ಯಾಣ ಆಗಬಾರದು ಎಂದುಕೊಂಡಿದ್ದ ಭಾರ್ಗವಿಗೆ ಏಟು ಬಿದ್ದಿದೆ. ಕಲ್ಯಾಣ ಆಗುತ್ತಿರುವ ಸಮಯದಲ್ಲಿ ಸಿಹಿಯನ್ನು ದೂರ ಮಾಡಲು ನೋಡಿದ್ದ ಭಾರ್ಗವಿಗೂ ಹಿನ್ನಡೆಯಾಗಿದೆ. ಸೀತಾ-ರಾಮರ ಮದುವೆ ನಡೆಯುತ್ತಿರುವ ಸಂದರ್ಭದಲ್ಲಿ ಖುಷಿಯಿಂದ ಸಿಹಿ ಓಡಾಡಿಕೊಂಡಿದ್ದರೆ, ಭಾರ್ಗವಿ ಬಂದು ನೀನು ಅವರ ಮಧ್ಯೆ ಹೋಗಬಾರದು. ಅದು ಸರಿಯಲ್ಲ. ಅವರು ಖುಷಿಯಾಗಿ ಇದ್ದಾರೆ. ನೀನು ಹೋಗಬಾರದು ಎಂದಿದ್ದಳು. ಈ ಹಿಂದೆ ಕೂಡ ಸಿಹಿಯನ್ನು ದೂರ ಮಾಡಲು ಹಲವು ರೀತಿಯಲ್ಲಿ ಪ್ಲ್ಯಾನ್​ ಮಾಡಿದ್ದಳು. ಆದರೆ ಅದ್ಯಾವುದೂ ಹೆಚ್ಚಿನ ರೀತಿಯಲ್ಲಿ ಸಕ್ಸಸ್​ ಆಗಿರಲಿಲ್ಲ. ಆದರೆ ಇದೀಗ ಭಾರ್ಗವಿ ಚಿಕ್ಕಿಯ ಮಾತಿನಿಂದ ಸಿಹಿ ನೊಂದುಕೊಂಡಿದ್ದಳು. ಅತ್ತ ಸೀತಾ ಸಿಹಿ ಎಲ್ಲಿ ಎಂದು ಹುಡುಕಾಟ ನಡೆಸುತ್ತಿದ್ದರೆ, ಇತ್ತ ಸಿಹಿ ಯಾರಿಗೂ ಕಾಣದಂತೆ ದೂರ ಹೋಗಿದ್ದಳು.

ನಗುವ... ನಯನ... ಎಂದ ಪ್ರಿಯಾ-ಅಶೋಕ್​: ರಸಕಾವ್ಯ ತೋರಿಸಿ ಮತ್ತೆ ಎಂದ ನೆಟ್ಟಿಗರು
 
ಆದರೆ ರಾಮ ಬಿಡಬೇಕಲ್ಲ. ಮುದ್ದಿನ ಮಗಳು ಎಂದು ಒಪ್ಪಿಕೊಂಡಿಯಾಗಿದೆ. ಸಿಹಿ ಕೂಡ ಅಪ್ಪ ಎಂದು ಒಪ್ಪಿಕೊಂಡಿದ್ದಾಳೆ. ಅತ್ತ ಸೀತಾ-ರಾಮರ ಮದುವೆ ನಡೆಯುತ್ತಿದ್ದರೆ, ಸಿಹಿಯ ತಲೆಗೆ ಇನ್ನಿಲ್ಲದ ಹುಳಿ ಹಿಂಡುವ ಕೆಲಸ ಮಾಡಿದ್ದಳು ಭಾರ್ಗವಿ. ಅವರಿಬ್ಬರ ಮದುವೆಯಾದರೆ ನೀನು ದೂರವಾಗುತ್ತಿ, ನಿನ್ನ ಅಮ್ಮ ನಿನಗೆ ಸಿಗುವುದಿಲ್ಲ ಎಂದೆಲ್ಲಾ ಹೇಳಿದ್ದಳು. ಇದನ್ನು ಕೇಳಿ ಸಿಹಿಗೆ ಶಾಕ್​ ಆಗಿತ್ತು. ಅಲ್ಲಿ ಸಪ್ತಪದಿ ತುಳಿಯುವಷ್ಟರಲ್ಲಿಯೇ ಶಾಕ್​ನಿಂದ ಓಡಿ ಹೋಗಿದ್ದಳು ಅವಳು. ಆಗ ಸಿಹಿಯನ್ನು ಮುದ್ದಾಡಿದ ರಾಮ್​ ನೀನು ಎಂದೆಂದಿಗೂ ನನ್ನ ಮಗಳೇ ಎಂದು ಅವಳನ್ನು ಎತ್ತಿಕೊಂಡಿದ್ದ . ಸಪ್ತಪದಿಯ ಬಳಿಕ ಸಿಹಿಯ ಜೊತೆ ಅಪ್ಪನಾಗಿ ಮತ್ತೊಂದು ಹೆಜ್ಜೆಯನ್ನು ತುಳಿದಿದ್ದ ರಾಮ್​. ಇಲ್ಲಿಯವರೆಗೆ ಫ್ರೆಂಡ್​ ಫ್ರೆಂಡ್​ ಎನ್ನುತ್ತಿದ್ದ ಸಿಹಿ ಇದೇ  ಮೊದಲ ಬಾರಿಗೆ ರಾಮ್​ನನ್ನು ಬಾಯ್ತುಂಬಾ ಅಪ್ಪಾ ಎಂದು ಕರೆದಿದ್ದಳು. 

ಆದರೂ ಮುಂದೆ ಭಾರ್ಗವಿ ಇನ್ನೇನು ಮಾಡಿಯಾಳು ಎನ್ನುವ ಆತಂಕವೂ ಅಭಿಮಾನಿಗಳಲ್ಲಿ ಇದೆ. ಇದರ ಜೊತೆಗೆ  ಮದುವೆಗೆಂದು ಆಭರಣದ ಅಂಗಡಿಗೆ ಹೋದಾಗ  ಬಂದಿರುವ ಯುವತಿಯೊಬ್ಬಳ ಗುಟ್ಟು ಇನ್ನೂ ರಟ್ಟಾಗಿಲ್ಲ. ಅವಳನ್ನು ಸೀತಾ ಗಾಬರಿಯಾಗಿದ್ದಳು. ಇವಳು ಯಾರು ಎನ್ನುವುದು ಈಗಿರುವ ಪ್ರಶ್ನೆ.   ಅನಂತ ಲಕ್ಷ್ಮಿಯವರ ಕುರಿತು ರಾಮ್​ ಹತ್ರ ಹೇಳಬೇಕಾ ಎಂದು ಯುವತಿಯೊಬ್ಬಳು ತನ್ನಷ್ಟಕ್ಕೇ ತಾನು ಮಾತನಾಡಿಕೊಂಡಿದ್ದಾಳೆ. ಅವಳನ್ನು ನೋಡಿದ ಸೀತಾಳಿಗೆ ಶಾಕ್​ ಆಗಿತ್ತು. ಇವೆಲ್ಲಾ ಪ್ರಶ್ನೆಗಳು ಸದ್ಯ ಸೀರಿಯಲ್​ನಲ್ಲಿ ಬಾಕಿ ಇವೆ.  

ಗಂಡನನ್ನು ಬಿಟ್ಟು ಮಗಳ ಮನೆಯಲ್ಲೇ ಕಾಯಂ ಉಳಿಯೋದು ಎಷ್ಟು ಸರಿ? ತಾಂಡವ್​ ಪರ ನೆಟ್ಟಿಗರ ಬ್ಯಾಟಿಂಗ್!


PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಸಮಾನ್ಯಳಲ್ಲಿ ಅಸಮಾನ್ಯ ಈ ಪುಟಾಣಿ: Naa Ninna Bidalaare ಹಿತಾ ನಿಬ್ಬೆರಗಾಗುವ ಫೋಟೋಶೂಟ್​!
Bigg Boss ಅಭಿಷೇಕ್​ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್​ ನಿರೀಕ್ಷೆ ಸುಳ್ಳಾಗೋಯ್ತು!