ಕರ್ನಾಟಕ, ಕನ್ನಡಿಗರು ಕಂಡ ಖ್ಯಾತ ನಿರೂಪಕಿ, ನಟಿ ನಾಡಿನ ಮನೆಮಗಳಾದ ಅಪರ್ಣಾ ಶ್ವಾಸಕೋಶದ ಕ್ಯಾನ್ಸರ್‌ನಿಂದ ನಿಧನರಾಗಿರುವುದು ಕನ್ನಡಮನಸುಗಳನ್ನು ದುಃಖದ ಕಡಲಲ್ಲಿ ಮುಳುಗಿಸಿದೆ. ಗಣ್ಯರು, ಚಿತ್ರರಂಗದ ಕಲಾವಿದರು ಕಂಬನಿ ಮಿಡಿದಿದ್ದಾರೆ, ಇದೀಗ ನಮ್ಮ ಮೆಟ್ರೋ ಆಡಳಿತ ಮಂಡಳಿ ಕೂಡ ಅಪರ್ಣಾ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದೆ
Aparna vastarey: ಕರ್ನಾಟಕ, ಕನ್ನಡಿಗರು ಕಂಡ ಖ್ಯಾತ ನಿರೂಪಕಿ, ನಟಿ ನಾಡಿನ ಮನೆಮಗಳಾದ ಅಪರ್ಣಾ ಶ್ವಾಸಕೋಶದ ಕ್ಯಾನ್ಸರ್‌ನಿಂದ ನಿಧನರಾಗಿರುವುದು ಕನ್ನಡಮನಸುಗಳನ್ನು ದುಃಖದ ಕಡಲಲ್ಲಿ ಮುಳುಗಿಸಿದೆ. ಸಿಎಂ ಸಿದ್ದರಾಮಯ್ಯರಿಂದಿಡಿದು ಗಣ್ಯರು,ಕನ್ನಡ ಚಿತ್ರೋದ್ಯಮದ ಕಲಾವಿದರು ಕಂಬನಿ ಮಿಡಿದಿದ್ದಾರೆ. ಇದೀಗ ಅಪರ್ಣಾ ಅಗಲಿಕೆಗೆ ನಮ್ಮ ಮೆಟ್ರೋ(BMRCL) ಆಡಳಿತ ಮಂಡಳಿ ಕೂಡ ಸಂತಾಪ ಸೂಚಿಸಿದೆ.
'ಕನ್ನಡ ಅಂದ್ರೆ ಅಪರ್ಣಾ, ಅಪರ್ಣಾ ಅಂದ್ರೆ ಕನ್ನಡ. ಆಕೆಯ ಸಾವಿನಿಂದ ನನಗೆ ಗರ ಬಡಿದಂತಾಗಿದೆ: ಮಂಡ್ಯ ರಮೇಶ್ ಭಾವುಕ
ಈ ಬಗ್ಗೆ ಆಡಿಯೋ ಬಿಡುಗಡೆ ಮಾಡಿದ್ದು, ಸ್ಪಷ್ಟವಾಗಿ ಅಚ್ಚಗನ್ನಡದಲ್ಲಿ ಶುದ್ಧವಾಗಿ ಮಾತನಾಡುತ್ತಿದ್ದ ನಾಡು ಕಂಡ ಅಪರೂಪದ ನಿರೂಪಕಿಯನ್ನ ಕಳೆದುಕೊಂಡಿದ್ದೇವೆ. ಕನ್ನಡದ ಭಾಷಾ ಗಣಿಯಾಗಿದ್ದ ಅಪರ್ಣಾ ಅಗಲಿಕೆಯಿಂದ ತುಂಬಾ ನೋವುಂಟು ಮಾಡಿದೆ ಎಂದು ಮೆಟ್ರೋ ಸಂತಾಪ ಸೂಚಿಸಿದೆ.
ಅಪರ್ಣಾರ ಸುಮಧುರ ಸ್ಪಷ್ಟ ಧನಿಗುಚ್ಛವಾಗಿ ನಮ್ಮ ಮೆಟ್ರೋದಲ್ಲಿ ಅವರೆಂದು ಅಜರಾಮರ ಆಗಿರಲಿದ್ದಾರೆ ಎಂದು ಆಡಿಯೋ ಮೂಲಕ ಸಂತಾಪ ಸೂಚಿಸಿರುವ ನಮ್ಮ ಮೆಟ್ರೋ ಆಡಳಿತ ಮಂಡಳಿ.
ಅಪರ್ಣಾ ಮಾತಲ್ಲಿ ಕನ್ನಡ ಕೇಳೋದೇ ಒಂದು ಖುಷಿ: ಮಜಾ ಟಾಕೀಸ್‌ನ ದಿನಗಳ ನೆನೆದು ಕಣ್ಣೀರಾದ ಇಂದ್ರಜಿತ್ ಲಂಕೇಶ್
ನಟನೆಗೂ ಸೈ, ನಿರೂಪಣೆಗೂ ಸೈ ಎನಿಸಿದ್ದ ಅಪರ್ಣಾ ಅವರು 90ರ ದಶಕದಲ್ಲಿಯೇ ಚಂದನ ವಾಹಿನಿ ಕಾರ್ಯಕ್ರಮಗಳನ್ನ ನಡೆಸಿಕೊಟ್ಟಿದ್ದರು. ಅನಂತರ ರೆಡಿಯೋ, ಅನೇಕ ಟಿವಿ ಕಾರ್ಯಕ್ರಮ, ರಿಯಾಲಿಟಿ ಶೋಗಳಷ್ಟೇ ಅಲ್ಲದೆ ಸಾರ್ವಜನಿಕ ಸಾರಿಗೆ ಬೆಂಗಳೂರು ಮೆಟ್ರೋ(Namma metro) ರೈಲಿನಲ್ಲಿ ಘೋಷಣೆಗಳಿಗೆ ಹಾಗೂ ಹಲವಾರು ಬಸ್ ನಿಲ್ದಾಣಗಳಲ್ಲಿನ ಘೋಷಣೆಗಳಿಗೆ ಅಪರ್ಣಾ ಅವರು ಧ್ವನಿ ನೀಡಿದ್ದಾರೆ. ಅಪರ್ಣಾ ಅವರ ಸೌಮ್ಯ ಧ್ವನಿಯೇ ಆಕರ್ಷಣೀಯವಾಗಿತ್ತು.