ಇವರು ಸೀತಾ ಅಲ್ಲಾ ಗೀತಾ! ಸೀತಾರಾಮ ಸಿಹಿ ರಿಯಲ್​ ಅಮ್ಮನ ಕ್ಯೂಟ್​ ಡಾನ್ಸ್​ ವೈರಲ್​

Published : Apr 19, 2025, 01:02 PM ISTUpdated : Apr 20, 2025, 08:34 AM IST
ಇವರು ಸೀತಾ ಅಲ್ಲಾ ಗೀತಾ! ಸೀತಾರಾಮ ಸಿಹಿ ರಿಯಲ್​ ಅಮ್ಮನ ಕ್ಯೂಟ್​ ಡಾನ್ಸ್​ ವೈರಲ್​

ಸಾರಾಂಶ

ರಿತು ಸಿಂಗ್ "ಸಿಹಿ" ಮತ್ತು "ಸುಬ್ಬಿ" ಎಂಬ ಡಬಲ್ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ನೇಪಾಳ ಮೂಲದ ರಿತು, ತಾಯಿ ಗೀತಾ ಜೊತೆ ಬೆಂಗಳೂರಿನಲ್ಲಿದ್ದಾರೆ. ಗೀತಾ, ಕುಡುಕ ಗಂಡನಿಂದ ದೂರವಾಗಿ ರಿತುವನ್ನು ಒಂಟಿಯಾಗಿ ಸಾಕಿದ್ದಾರೆ. ರಿತು ಈಗ ಕುಟುಂಬದ ಆಧಾರವಾಗಿದ್ದಾರೆ. ರಿತು ತಂದೆಯನ್ನು ತಿರಸ್ಕರಿಸಿದ್ದಾರೆ. ಗೀತಾ ಅವರ ರೀಲ್ಸ್‌ಗಳು ಜನಪ್ರಿಯವಾಗಿವೆ.

ಸಿಹಿ ಈಗ ಸುಬ್ಬಿ ಆಗಿದ್ದಾಳೆ . ಇಲ್ಲಿಯವರೆಗೆ ಸಿಹಿ ಸಿಹಿ ಎಂದು ಎಲ್ಲರ ಬಾಯಲ್ಲಿಯೂ ನಲಿದಾಡುತ್ತಿದ್ದ ಮುದ್ದು ರಿತು ಸಿಂಗ್​ ಈಗ ಸುಬ್ಬಿ ಆಗಿ ವಿಭಿನ್ನ ರೀತಿಯ ಗೆಟಪ್​ ಜೊತೆ, ಹಳ್ಳಿ ಭಾಷೆಯಲ್ಲಿಯೂ ಮಿಂಚುತ್ತಿದ್ದಾಳೆ.  ಅತ್ತ ಸಿಹಿಯಾಗಿ, ಇತ್ತ ಸುಬ್ಬಿಯಾಗಿ ಡಬಲ್​ ರೋಲ್​ನಲ್ಲಿ ಮಿಂಚ್ತಿರೋ ರಿತು ಸಿಂಗ್​, ನಿಜಕ್ಕೂ ಬೇರೆ ಬೇರೆ ಎನ್ನಿಸುವುದು ಉಂಟು. ಅಷ್ಟು ಸುಂದರವಾಗಿ ಎರಡೂ ಪಾತ್ರಗಳನ್ನು ನಿರ್ವಹಿಸ್ತಿದ್ದಾಳೆ ಈ ಪುಟಾಣಿ. ವಯಸ್ಸಿಗೂ ಮೀರಿದ ಪ್ರತಿಭೆಯನ್ನು ತೋರಿಸುವ ಈಕೆಯ ಸೀರಿಯಲ್​ ಅಮ್ಮ ಸೀತಾ ಆದ್ರೆ ರಿಯಲ್​ ಅಮ್ಮನ ಹೆಸರು ಗೀತಾ. ನೇಪಾಳ ಮೂಲದ ರಿತು,  ತಾಯಿ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಇತ್ತ ರೀಲ್​ ಅಮ್ಮ ಸೀತಾ ಉರ್ಫ್​ ವೈಷ್ಣವಿ ಗೌಡ ಅವರು ಮದುವೆಯ ಸಂತಸದಲ್ಲಿದ್ದಾರೆ. ಇತ್ತೀಚೆಗಷ್ಟೇ ಎಂಗೇಜ್​ಮೆಂಟ್​ ಮಾಡಿಕೊಂಡಿರುವ ವೈಷ್ಣವಿ ಅವರು, ಈಗ ಮದುವೆಯ ಸಡಗರದಲ್ಲಿದ್ದಾರೆ. ಅದೇ ಇನ್ನೊಂದೆಡೆ ಸಿಹಿಯ ರಿಯಲ್​ ಅಮ್ಮ ಗೀತಾ ಸಕತ್​ ರೀಲ್ಸ್​ ಮಾಡಿದ್ದಾರೆ. 

ಕುಡುಕ ಗಂಡ ಕೈಬಿಟ್ಟು ಹೋದ ಸಂದರ್ಭದಲ್ಲಿ, ಒಂಟಿಯಾಗಿ ಮಗಳನ್ನು ಸಾಕಿದವರು ಗೀತಾ.  ಈ ಹಿಂದೆ ರಿಯಾಲಿಟಿ ಷೋನಲ್ಲಿ  ಗೀತಾ, ನಾನು ಇವಳಿಗೆ ಅಮ್ಮ ಅಲ್ಲ, ಇವಳೇ ನನ್ನ ಅಮ್ಮ ಎಂದುಹೇಳಿದ್ದರು. ನಾನು ಊಟ ಮಾಡಿಲ್ಲ ಅಂದ್ರೆ ರಿತು ಯಾಕೆ ಊಟ ಮಾಡಿಲ್ಲ ಅಂತ ಕೇಳ್ತಾಳೆ. ಮಕ್ಕಳನ್ನು ತಾಯಿ ಕೇರ್ ಮಾಡಬೇಕು, ಆದರೆ ನನ್ನ ಮಗಳು ನನ್ನನ್ನು ಕೇರ್ ಮಾಡ್ತಾಳೆ, ನನಗೆ ಕನ್ನಡ ಬರೋದಿಲ್ಲ. ನೇಪಾಳದಲ್ಲಿ ಕೂಡ ಜೀ ಕನ್ನಡ ವಾಹಿನಿ ನೋಡ್ತಾರೆ. ಅವರು ರಿತು ನೋಡಿ ಹೊಗಳ್ತಾರೆ. ರಿತು ತಂದೆಗೂ ಕೂಡ ಮಗಳು ಏನು ಅಂತ ಗೊತ್ತಾಗಬೇಕು ಅಂತ ಜನರು ಹೇಳ್ತಾರೆ  ಗೀತಾ ಹೇಳಿದ್ದರು. ರಿತು ಸಿಂಗ್ ತಾಯಿ ಗೀತಾ ಬೆಂಗಳೂರಿನಲ್ಲಿ ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರ ಕುಟುಂಬಕ್ಕೆ ಸದ್ಯ ರಿತು ಸಿಂಗ್​ ಆಧಾರವಾಗಿದ್ದಾಳೆ. 

ಅಪ್ಪ ನಮ್ಮನ್ನು ಸುಟ್ಟುಹಾಕಲು ನೋಡಿದ್ದ, ಈಗೇನಾದ್ರೂ ವಾಪಸ್‌ ಬಂದ್ರೆ... ತಂದೆ ಬಗ್ಗೆ ರಿತು ಸಿಂಗ್‌ ಕಿಡಿಯ ನುಡಿ

ಇಂತಿಪ್ಪ ಗೀತಾ ಇದೀಗ ರೀಲ್ಸ್ ಮಾಡಿದ್ದಾರೆ. ಇವರ ಈ ಡಾನ್ಸ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಿಹಿಯ ರೀಲ್​ ಅಮ್ಮ ಸೀತಾಳಿಗಿಂತ ನೀವೇನೂ ಭಿನ್ನ ಇಲ್ಲ ಬಿಡಿ ಎನ್ನುತ್ತಿದ್ದಾರೆ. ಇನ್ನು ಈ ಹಿಂದೆ ಸಿಹಿ ಅರ್ಥಾತ್​ ರಿತು ಸಿಂಗ್ ಕೂಡ ಅಪ್ಪನ ಬಗ್ಗೆ ಮಾತನಾಡಿದ್ದಳು.  ಅಪ್ಪನ ಮೇಲೆ ಕಿಡಿ ಕಾರಿದ್ದಳು  ರಿತು. ಅಪ್ಪ ಮಧ್ಯೆ ಆಗಾಗ ಬರುತ್ತಿದ್ದುದು ನೆನಪಿದೆ. ಅವನು ಕುಡುಕ, ನಮ್ಮ ಊಟವನ್ನೆಲ್ಲಾ ಕಸಿದುಕೊಳ್ತಿದ್ದ. ಲಾಕ್‌ ಮಾಡಿ ನಾನು ಮತ್ತು ಅಣ್ಣ ಊಟ ಮಾಡುತ್ತಿದ್ವಿ. ಬಹಳ ಸಲ ಅಣ್ಣನಿಗೆ ಹೊಡೆದಿದ್ದಾನೆ. ನಾನು ತುಂಬಾ ಚಿಕ್ಕವಳು ಇದ್ನಲ್ಲಾ, ಆದರೂ ಬಿಡುತ್ತಿರಲಿಲ್ಲ. ನನ್ನನ್ನು ಹೊಡೆಯಲು ಬಂದಾಗಲೆಲ್ಲಾ ಅಣ್ಣ ಬಂದು ತಡೀದಿದ್ದ ಎಂದು ರಿತು ಸಿಂಗ್‌ ಹೇಳಿದ್ದಳು .

ನನಗೆ ಅಪ್ಪ ಅಂದ್ರೆ ಆಗಲ್ಲ, ಈಗ ನಾನು ಫೇಮಸ್‌ ಆಗಿರೋದನ್ನು ನೋಡಿ ಏನಾದ್ರೂ ಬಂದ್ರೆ ನಾನುಸುಮ್ಮನೇ ಬಿಡಲ್ಲ. ಆಗ ನನಗಿನ್ನೂ ನೆನಪಿದೆ. ಅಣ್ಣನ ಪುಸ್ತಕ ಎಲ್ಲಾ ರಸ್ತೆ ಮೇಲೆ ಹಾಕಿ ಸುಟ್ಟುಹಾಕಲು ನೋಡಿದ್ದ. ನನ್ನ ಮತ್ತು ಅಣ್ಣನನ್ನು ಸಾಯಿಸಲು ನೋಡಿದ್ದ. ಪಕ್ಕದ ಮನೆ ಆಂಟಿ ಬಂದು ತಳ್ಳಿದ್ರು. ಅವನೇನಾದ್ರೂ ಈಗ ಬಂದ್ರೆ ಗೆಟ್‌ಔಟ್‌ ಅಂತೇನೆ. ನನಗೆ ನನ್ನ ಅಪ್ಪ ಬೇಡ. ಅಮ್ಮನೇ ಎಲ್ಲಾ. ಅಂಥ ಅಪ್ಪ ಯಾರಿಗೂ ಬೇಡ ಎಂದು ರಿತು ಸಿಂಗ್‌ ಈ ವಿಡಿಯೋದಲ್ಲಿ ಹೇಳಿದ್ದಳು . 

ರೀಲ್​ ಮತ್ತು ರಿಯಲ್​ ಅಮ್ಮನ ಜೊತೆ ಸೀತಾರಾಮ ಸಿಹಿಯ ಮೊದಲ ವಿಮಾನ ಪ್ರಯಾಣ ಹೀಗಿತ್ತು ನೋಡಿ...!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!