
ಮಜಾ ಭಾರತದ (Maja Bharata) ರಾಘು (Raghu) ಅಲಿಯಾಸ್ ರಾಗಿಣಿ ಯಾರಿಗೆ ಗೊತ್ತಿಲ್ಲ ಹೇಳಿ. ಹೆಣ್ಣು ಪಾತ್ರಕ್ಕೆ ಹೇಳಿ ಮಾಡಿಸಿದ ಕಲಾವಿಧ ರಾಘು. ಹೆಣ್ಮಕ್ಕಳನ್ನು ನಾಚಿಸುವಂತೆ ಸೀರೆಯುಡುವ ರಾಘು, ಹೆಣ್ಣಲ್ಲ ಅನ್ನೋಕೆ ಸಾಧ್ಯವೇ ಇಲ್ಲ. ಅವರ ಮೈಮಾಟ, ಹುಡುಗಿಯಂತೆ ನಾಚಿಕೊಳ್ಳುವ ಅವರ ನಟನೆ, ಅವರ ನೃತ್ಯ ಎಲ್ಲವೂ ಅಭಿಮಾನಿಗಳನ್ನು ಮಂತ್ರಮುಗ್ದಗೊಳಿಸುತ್ತದೆ. ಈಗ ರಾಘು, ಹೆಣ್ಮುಕ್ಕಳಿಗೆ ಹೊಟ್ಟೆ ಕಿಚ್ಚು ಬರುವಂತ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ತಮ್ಮ ಇನ್ಸ್ಟಾ ಖಾತೆಯಲ್ಲಿ ರಾಘವೇಂದ್ರ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಚಕ್ರಬಡ್ಡಿ ಚಂದ್ರಮ್ಮ ಇನ್ ಮಜಾ ಟಾಕೀಸ್ (Maja Talkies) ಅಂತ ರಾಘು ಶೀರ್ಷಿಕೆ ಹಾಕಿದ್ದಾರೆ. ಅಪ್ಪು ಅವರಿಗೆ ಮೇಕಪ್ ಮಾಡಿದ್ದಾರೆ. ರಾಘು, ಚಂದ್ರಮ್ಮನಾಗಿ ಬದಲಾಗುವ ಮೇಕಪ್ ವಿಡಿಯೋವನ್ನು ನಾವು ಕಾಣ್ಬಹುದು. ಕಣ್ಣಿಗೆ ಕಾಡಿಗೆ ಹಚ್ಚಿ, ಹೂ ಮುಡಿದು, ಬಳೆ ಹಾಕಿ, ಸರ, ಉಂಗುರ, ದೃಷ್ಟಿ ಬೊಟ್ಟಿಟ್ಟು, ಸೊಂಟ ಕುಣಿಸ್ತಾ ರಾಘು ನಡೆಯುತ್ತಿದ್ದಾರೆ. ಪುಟ್ಟ ಮಲ್ಲಿ ಪುಟ್ಟ ಮಲ್ಲಿ ಹಾಡಿಗೆ ರಾಘು ಸೀರೆ ಲುಕ್ ಸರಿಯಾಗಿ ಹೋಲ್ತಿದೆ. ಅಲ್ಲಲ್ಲಿ ನಾಚಿಕೊಳ್ಳೋ ರಾಘು ವಿಡಿಯೋಕ್ಕೆ ಅಭಿಮಾನಿಗಳು ಸೋತು ಹೋಗಿದ್ದಾರೆ. 44 ಸಾವಿರಕ್ಕಿಂತಲೂ ಹೆಚ್ಚು ಲೈಕ್ಸ್ ಪಡೆದಿರುವ ರಾಘು ವಿಡಿಯೋಕ್ಕೆ ಸಿಕ್ಕಾಪಟ್ಟೆ ಕಮೆಂಟ್ ಬಂದಿದೆ.
ಸಿಹಿ ಅಸ್ಥಿ ವಿಸರ್ಜನೆಗೆ ಮುಂದಾದ ಅಶೋಕ್... ಮೋಕ್ಷ ಸಿಕ್ಕಿಲ್ಲಾಂದ್ರೂ ಪರ್ವಾಗಿಲ್ಲ ಸಿಹಿ-ಸುಬ್ಬಿ ಜೊತೆಗಿರ್ಬೇಕು!
ಬಳಕೆದಾರರು ರಾಘು ಸೌಂದರ್ಯವನ್ನು ಹೊಗಳಿದ್ದಾರೆ. ಹುಡುಗಿಯರೇ ನಾಚಿಕೊಳ್ಳುವ ಅಂದದ ಬಾಲಿಕೆ. ಕನ್ಯಾಮಣಿಗಳೆ ಆ ಚೆಂದದ ನಗುವಿಗೆ ನೀವೆಲ್ಲಿ ಹೋಲಿಕೆ ಅಂಥ ಒಬ್ಬರು ಕವನವನ್ನೆ ಬರೆದಿದ್ದಾರೆ. ರಾಘು ತುಂಬಾ ಸುಂದರವಾಗಿ ರೆಡಿಯಾಗಿದ್ದಾರೆ ಅಂತ ಅಭಿಮಾನಿಗಳು ತಮ್ಮ ಮೆಚ್ಚುಗೆಯ ಮುದ್ರೆ ಒತ್ತಿದ್ದಾರೆ. ಮುಂದಿನ ಜನ್ಮದಲ್ಲಿ ನೀವು ಹುಡುಗಿ ಆಗಿ, ನಾನು ನಿಮ್ಮನ್ನೆ ಮದುವೆ ಆಗ್ತೇನೆ ಅಂತ ಅಭಿಮಾನಿಯೊಬ್ಬರು ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ರಾಘು, ಆಗಾಗ ತಮ್ಮ ವಿಡಿಯೋಗಳನ್ನು ಹಂಚಿಕೊಳ್ತಿರುತ್ತಾರೆ. ರಾಘವೇಂದ್ರ, ಮಜಾ ಭಾರತ ರಿಯಾಲಿಟಿ ಶೋ ಮೂಲಕ ಕರ್ನಾಟಕ ಜನತೆಗೆ ಪರಿಚಯವಾದ್ರು. ಅಲ್ಲಿ ರಾಗಿಣಿ ಎಂದೇ ಹೆಸರು ಪಡೆದ ರಾಘು ಅವರನ್ನು ಅನೇಕರು ಈಗ್ಲೂ ಹಾಗೆ ಕರೆಯುತ್ತಾರೆ. ರಾಘುಗಿಂತ ರಾಗಿಣಿಯಾಗಿಯೇ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ ರಾಘವೇಂದ್ರ.
Naari in sareee… ದೀಪಿಕಾ ದಾಸ್ ನೋಡಿ ನಿನ್ನಂದಕ್ಕೆ ಸಮನಾರು ಎಂ
ಮಜಾ ಭಾರತದ ನಂತ್ರ ಗಿಚ್ಚಿ ಗಿಲಿಗಿಲಿ (Gichi Gili Gili)ಯಲ್ಲಿ ಕಾಣಿಸಿಕೊಂಡ ರಾಘು, ಸಾಕಷ್ಟು ಹೆಣ್ಣು ಪಾತ್ರಗಳಿಗೆ ಜೀವ ತುಂಬಿದ್ದರು. ಆರಂಭದಲ್ಲಿ ಒಂದೆರಡು ಬಾರಿ ಹೆಣ್ಣು ಪಾತ್ರ ಮಾಡಿದ್ದ ರಾಘುಗೆ ರಿಯಾಲಿಟಿ ಶೋನಲ್ಲಿ ಹೆಣ್ಣು ಪಾತ್ರವೇ ಖಾಯಂ ಆಯ್ತು. ಆದ್ರೆ ಸಾಕಷ್ಟು ಮಂದಿ ರಾಘು ಕಾಲೆಳೆದಿದ್ದರು. ಸೋಶಿಯಲ್ ಮೀಡಿಯಾದಲ್ಲಿ ರಾಘು ಟ್ರೋಲ್ (Troll) ಆಗಿದ್ದರು. ಇದ್ರಿಂದ ಸ್ವಲ್ಪ ಬೇಸರಗೊಂಡಿದ್ದ ರಾಘು ರಿಯಾಲಿಟಿ ಶೋ ಬಿಡುವ ನಿರ್ಧಾರಕ್ಕೂ ಬಂದಿದ್ದರು. ನಂತ್ರ ತಮ್ಮನ್ನು ತಾವು ಬದಲಿಸಿಕೊಂಡ ರಾಘು, ಸಿಕ್ಕ ಪಾತ್ರಕ್ಕೆ ಜೀವ ತುಂಬ್ತಾ ಹೋದ್ರು. ಗಿಚ್ಚಿ ಗಿಲಿಗಿಲಿ ಎಲ್ಲ ಸೀಸನ್ ನಲ್ಲಿ ಮಿಂಚಿರುವ ರಾಘುಗೆ ಗಂಡು ಮಕ್ಕಳ ಪಾತ್ರ ಸಿಕ್ಕಿದ್ದು ಬಹಳ ಅಪರೂಪ.
ಅನೇಕ ರಿಯಾಲಿಟಿ ಶೋ (Reality Show)ಗಳಲ್ಲಿ ಕಾಣಿಸಿಕೊಂಡಿರುವ ರಾಘು, ಈಗ ಮಜಾ ಟಾಕೀಸ್ ನಲ್ಲಿ ಮಿಂಚುತ್ತಿದ್ದಾರೆ. ಸಾಗರ ಮೂಲದ ರಾಘವೇಂದ್ರ ಪ್ರಶಸ್ತಿ ಸಮಾರಂಭಗಳಲ್ಲೂ ಹೆಣ್ಣು ಪಾತ್ರದಲ್ಲಿಯೇ ಬರೋದು ವಿಶೇಷ. ಅವರಿಗೆ ಕುಟುಂಬಸ್ಥರ ಸಂಪೂರ್ಣ ಬೆಂಬಲ ಇದೆ. ಅಮ್ಮನೇ ರಾಘುಗೆ ಸಾಕಷ್ಟು ಬ್ಲೌಸ್ ಕೂಡ ಹೊಲಿದು ಕೊಡ್ತಾರಂತೆ. ಹೆಣ್ಣು ಪಾತ್ರಗಳಲ್ಲಿ ನಟಿಸುವ ರಾಘುಗೆ ಹೆಣ್ಮಕ್ಕಳ ಕಷ್ಟದ ಅರಿವಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.