ಶೂಟಿಂಗ್​ ವೇಳೆ ಮುಗುಚಿ ಬಿದ್ದ ತೆಪ್ಪ: ನೀರಲ್ಲಿ ಮುಳುಗಿದ ನಟಿ ವೈಷ್ಣವಿ ಗೌಡ & ಟೀಮ್​!

Published : Apr 18, 2025, 03:55 PM ISTUpdated : Apr 18, 2025, 04:59 PM IST
ಶೂಟಿಂಗ್​ ವೇಳೆ ಮುಗುಚಿ ಬಿದ್ದ ತೆಪ್ಪ: ನೀರಲ್ಲಿ ಮುಳುಗಿದ ನಟಿ ವೈಷ್ಣವಿ ಗೌಡ & ಟೀಮ್​!

ಸಾರಾಂಶ

ನಟಿ ವೈಷ್ಣವಿ ಗೌಡ, ವಾಯುಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುಕೂಲ್ ಮಿಶ್ರಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಸುದ್ದಿಯ ಜೊತೆಗೆ, ತಾಯಿ ಭಾನು ರವಿಕುಮಾರ್ ಅವರ ವಕೀಲಿಕೆ ವೃತ್ತಿ ಮತ್ತು ವೈಷ್ಣವಿ ಅವರ 'ದೇವಿ' ಧಾರಾವಾಹಿಯ ಚಿತ್ರೀಕರಣದ ಒಂದು ಸವಿ ನೆನಪು ವೈರಲ್ ಆಗಿದೆ. ಭಾನು ರವಿಕುಮಾರ್ ಇತ್ತೀಚೆಗೆ ಕಾನೂನು ಮತ್ತು ಮನೋವಿಜ್ಞಾನದಲ್ಲಿ ಪದವಿ ಪಡೆದಿದ್ದಾರೆ.

ನಟಿ ವೈಷ್ಣವಿ ಗೌಡ ಅರ್ಥಾತ್​ ಸೀತಾರಾಮ ಸೀರಿಯಲ್​ ಸೀತೆ ಸದ್ಯ ಮದುವೆಯ ಸಂಭ್ರಮದಲ್ಲಿದ್ದಾರೆ.  ಸೀತಾರಾಮ ಸೀತೆಯ ಕಲ್ಯಾಣಕ್ಕೆ ಇನ್ನೇನು ಕೆಲವೇ ತಿಂಗಳು ಬಾಕಿ ಇದೆ. ಈಚೆಗಷ್ಟೇ ನಟಿ ವೈಷ್ಣವಿ ಅದ್ಧೂರಿ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ. ಮದ್ವೆ ಫಿಕ್ಸ್​ ಆಗಿದ್ದ ವಿಷಯವನ್ನು ಗುಟ್ಟಾಗಿ ಇಟ್ಟಿದ್ದ ನಟಿ ಎಲ್ಲರಿಗೂ ಬಿಗ್​ ಸರ್​ಪ್ರೈಸ್​ ಕೊಟ್ಟಿದ್ದಾರೆ. ಸದ್ಯ ವೈಷ್ಣವಿ ಗೌಡ ಅವರು ಅನುಕೂಲ್‌ ಮಿಶ್ರಾ ಎನ್ನುವವರ ಜೊತೆ ಎಂಗೇಜ್‌ ಆಗಿದ್ದಾರೆ. ಅನುಕೂಲ್ ಅವರು ಬೇರೆ ರಾಜ್ಯದವರು ಎನ್ನಲಾಗಿದೆ. ಏರ್‌ಫೋರ್ಸ್‌ನಲ್ಲಿ ಅನುಕೂಲ್ ಕೆಲಸ ಮಾಡುತ್ತಿದ್ದಾರೆ. ಅನುಕೂಲ್ ಅವರಿಂದಲೇ ವೈಷ್ಣವಿ ಈ ಬಾರಿ ಬೆಂಗಳೂರಿನಲ್ಲಿ ನಡೆದಿದ್ದ ಏರ್‌ ಷೋ ವೀಕ್ಷಣೆ ಮಾಡಿದ್ದರು. ಇದನ್ನೇ ಅವರು ಪರೋಕ್ಷವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, “ಥ್ಯಾಂಕ್ಯು ಎ. ನಿಮ್ಮಿಂದಲೇ ಏರ್‌ ಷೋ ನೋಡೋದು ಸಾಧ್ಯ ಆಯ್ತು, ಇದೊಂದು ಅದ್ಭುತ ಅನುಭವ” ಎಂದು ಹೇಳಿದ್ದರು. ಆದರೆ, ಗುಟ್ಟನ್ನು ಮಾತ್ರ ಬಿಟ್ಟು ಕೊಟ್ಟಿರಲಿಲ್ಲ. ಇದೀಗ ಕೊನೆಗೂ ಗುಟ್ಟನ್ನು ಅವರೇ ರಿವೀಲ್​ ಮಾಡಿದ್ದು, ಭಾವಿ ಪತಿಯನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.

ನಟಿಯ ಎಂಗೇಜ್​ಮೆಂಟ್​ ಸುದ್ದಿ ವೈರಲ್​ ಆಗುತ್ತಲೇ, ಅವರ  ಹಳೆಯ ವಿಡಿಯೋಗಳೆಲ್ಲವೂ ಪುನಃ ಸೋಷಿಯಲ್​ ಮಿಡಿಯಾದಲ್ಲಿ ಸದ್ದು ಮಾಡ್ತಿವೆ. ಕೆಲ ದಿನಗಳ ಹಿಂದೆ ಅವರು ತಮ್ಮ ಅಮ್ಮನ ಜೊತೆ ಮಾತನಾಡಿರುವ ವಿಡಿಯೋ ಒಂದು ಈಗ ಸದ್ದು ಮಾಡ್ತಿದೆ. ಅಷ್ಟಕ್ಕೂ ವೈಷ್ಣವಿ ಗೌಡ ಅವರ  ಅಮ್ಮ ಭಾನು ರವಿಕುಮಾರ್​ ಅವರು ಕಾನೂನು ಪದವಿ ಮತ್ತು ಸೈಕಾಲಾಜಿ ಪದವಿಯನ್ನು ಪಡೆದಿದ್ದು ವಕೀಲೆಯಾಗಿ ವೃತ್ತಿ ನಡೆಸುತ್ತಿದ್ದಾರೆ. ಅವರು ಈಗ ವಕೀಲಿಕೆ ಶುರು ಮಾಡಿದ್ದು, ಆ ಬಗ್ಗೆಯೂ ವೈಷ್ಣವಿ ಅವರು ಈ ಹಿಂದೆ ವಿಡಿಯೋ ಶೇರ್​ ಮಾಡಿಕೊಂಡಿದ್ದರು. ಇದೀಗ ಇನ್ನೊಂದು ವಿಡಿಯೋ ಹಂಚಿಕೊಂಡಿದ್ದಾರೆ.

ಹಿಂದಿವಾಲಾ ಜೊತೆ ರಾಜ್ಯನೇ ಬಿಟ್ಟು ಹೋಗ್ತಾರಾ ವೈಷ್ಣವಿ? ಸೀರಿಯಲ್​ ಮುಂದಿನ ಸೀತೆ ಯಾರು?

ಅದರಲ್ಲಿ ವೈಷ್ಣವಿ ಅವರು, ನಿಮಗೆ ನನ್ನ ಯಾವ ಸೀರಿಯಲ್​ ಇಷ್ಟ ಆಯ್ತು ಎಂದು ಕೇಳಿದಾಗ, ಅವರ ಅಮ್ಮ ಭಾನು ಅವರು ದೇವಿ ಸೀರಿಯಲ್​ ಎಂದು ಹೇಳಿದ್ದಾರೆ. ದೇವಿ ಸೀರಿಯಲ್​ ವೈಷ್ಣವಿ ಅವರ ಮೊದಲ ಧಾರಾವಾಹಿ. 2010ರಲ್ಲಿ ಈ ಸೀರಿಯಲ್​ ಜೀ ಕನ್ನಡದಲ್ಲಿ ಪ್ರಸಾರ ಆಗಿತ್ತು. ಈ ಸೀರಿಯಲ್​ ತಮಗೆ ಇಷ್ಟ ಎಂದಿದ್ದಾರೆ ಅಮ್ಮ. ಆಗ ವೈಷ್ಣವಿ ಅವರು, ಅಂದು ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.  ನಾನಾಗ ತುಂಬಾ ಚಿಕ್ಕವಳಿದ್ದೆ. ಆ ಸೀರಿಯಲ್‌ ಶೂಟಿಂಗ್‌ಗೆ ತೆಪ್ಪದ ಮೇಲೆ ಹೋಗಬೇಕಿತ್ತು. ನಾವು ಎಲ್ಲಾ ಟೀಂ ನವರು  ತೆಪ್ಪದ ಮೇಲೆ ಹೋಗಿದ್ವಿ. ಆಗ, ನಡುವೆ ತೆಪ್ಪ ಮಗುಚಿಬಿದ್ದಿತ್ತು. ಎಲ್ಲರೂ ನೀರಿನಲ್ಲಿ ಮುಳುಗಿದ್ವಿ. ಆದರೆ  ಪುಣ್ಯ ಎಂದ್ರೆ ಮುಳುಗುವಷ್ಟು ನೀರಿರಲಿಲ್ಲ. ಸೋ, ಎಲ್ಲರಿಗೂ ನೀರಿಗೆ ಬಿದ್ದು ಖುಷಿಪಟ್ವಿ.  ಶೂಟಿಂಗ್ ಮಾಡೋದು ಬಿಟ್ಟು ಎಲ್ಲ ನೀರಾಟ ಆಡುತ್ತ ಕೂತಿದ್ವಿ ಎಂದು ಹೇಳಿದ್ದಾರೆ.   ಇದೇ ವಿಡಿಯೋದಲ್ಲಿ ತಮ್ಮ ಸೀರಿಯಲ್​ನ ಬಗ್ಗೆ ಹಾಗೂ ಅಮ್ಮ ತಮಗೆ ನೀಡಿರುವ ಸ್ಫೂರ್ತಿಯ ಬಗ್ಗೆ ನಟಿ ಮಾತನಾಡಿದ್ದಾರೆ.


ಅಂದಹಾಗೆ, ಈ ಹಿಂದೆಯೂ  ವೈಷ್ಣವಿ ಗೌಡ ಅವರು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಅಮ್ಮನ ಬಗ್ಗೆ ಹೇಳಿದ್ದರು. ಆ ಸಂದರ್ಭದಲ್ಲಿ ಈ ವಯಸ್ಸಿನಲ್ಲಿ ಓದುವ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದ ಭಾನು ಅವರು, ಓದುವ ಸಮಯದಲ್ಲಿ ಓದಲು ಆಗಲಿಲ್ಲ. ಈಗ ಮನೆಯವರ ಪ್ರೋತ್ಸಾಹದಿಂದ ಎರಡು ಪದವಿಗಳನ್ನು ಮುಗಿಸಿದ್ದೇನೆ ಎಂದಿದ್ದರು. ಗೃಹಿಣಿ ಎಂದರೆ ಕೇವಲ ಗೃಹಿಣಿಯೇ ಆಗಿರಬೇಕೆಂದೇನೂ ಇಲ್ಲ. ಆಕೆಯೂ ಸಾಧನೆ ಮಾಡಬಹುದು ಎಂದು ಹೇಳಿದ್ದರು. ಎಲ್​ಎಲ್​ಬಿಯನ್ನು ರೆಗ್ಯುಲರ್​ ಕಾಲೇಜಿಗೆ ಹೋಗಿ ಮುಗಿಸಿದೆ. ಆ ಸಮಯದಲ್ಲಿ ಸ್ವಲ್ಪ ಮುಜುಗರ ಆಯ್ತು. ನಾನೇ ದೊಡ್ಡವಳು, ಉಳಿದವರೆಲ್ಲಾ ಮಕ್ಕಳು ಇದ್ದರು. ನನ್ನನ್ನು ಲೆಕ್ಚರರ್​ ಎಂದುಕೊಂಡು ಬಿಡುತ್ತಿದ್ದರು. ಮೊದಮೊದಲಿಗೆ ಸ್ವಲ್ಪ ಮುಜುಗರ ಎನ್ನಿಸಿದರೂ, ಕೊನೆಗೆ ಎಲ್ಲವೂ ಸರಿಯಾಯ್ತು ಎಂದಿದ್ದಾರೆ. ಇದೇ ವೇಳೆ ವೈಷ್ಣವಿ ಅವರ ಅಪ್ಪ ಕೂಡ ಪತ್ನಿಗೆ ಶುಭ ಕೋರಿದ್ದು, ಸಮಾಜಕ್ಕೆ ಕಿರುಸೇವೆಯನ್ನಾದರೂ ಮಾಡುವಂತವಳಾಗು ಎಂದು ಹಾರೈಸಿದ್ದಾರೆ.

ಮಹಿಳೆಯರಿಗೆ ಸ್ಫೂರ್ತಿಯಾದ ನಟಿ ವೈಷ್ಣವಿ ಅಮ್ಮ: ಈಗಷ್ಟೇ ಕಾನೂನು, ಸೈಕಾಲಾಜಿ ಡಿಗ್ರಿ ಮುಗಿಸಿದ ಅವರ ಮಾತು ಕೇಳಿ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?