ಕನ್ನಡದ ಅನೇಕ, ಧಾರಾವಾಹಿಗಳಲ್ಲಿ ನಟಿಸಿರುವ ಸೀತಾ ಕೋಟೆ ಒಳ್ಳೆಯ ನೃತ್ಯಗಾರ್ತಿ. ಈಗ ಅವರು ನಿರೂಪಕಿ ಅಪರ್ಣಾರ ಬಗ್ಗೆ ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ಕನ್ನಡದ ಖ್ಯಾತ ನಿರೂಪಕಿ, ನಟಿ ಅಪರ್ಣಾ ಅವರು ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದಾರೆ. ಇಂದು ಅಪರ್ಣಾ ಎಂಬ ಅಪ್ಪಟ ಕನ್ನಡದ ಧ್ವನಿ ಈಗ ನೆನಪಷ್ಟೇ. ಅಪರ್ಣಾ ಜೊತೆಗೆ ನಟಿಸಿದ ಅನುಭವದ ಬಗ್ಗೆ ನಟಿ ಸೀತಾ ಕೋಟೆಯವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸೀತಾ ಕೋಟೆ ಹೇಳಿದ್ದೇನು?
ಅಪರ್ಣಾ ಎಂಬ ಒಲವಿನ ಸೆಲೆಯೇ .... ಯಾವತ್ತೂ ನಾನು ಹೀಗೆಲ್ಲ ವ್ಯಕ್ತಪಡಿಸಲ್ಲ. ಆದ್ರೆ ಇವತ್ತು ಯಾಕೋ ಮನಸ್ಸು ತಡಿಲಿಲ್ಲ.. ಗ್ರಾಮಾಯಣ ಶೂಟಿಂಗ್‌ನಲ್ಲಿ ಇದ್ದೀನಿ. ಕ್ಷಣ ಕ್ಷಣಕ್ಕೂ ನಿನ್ನ ನೆನಪು ಕಾಡುತ್ತಿದೆ. ನಾವಿಬ್ಬರೂ ಬರೋಬ್ಬರಿ ಆರು ವರ್ಷಗಳ ಹಿಂದೆ ಒಟ್ಟಿಗೇ ಈ ಸಿನಿಮಾಕ್ಕೆ ಹುರುಪುಗಣ್ಣಿಂದ ಜೊತೆ ಆಗಿದ್ವಿ. ನಾವಿಬ್ರೂ ನಮ್ಮ ನಮ್ಮ ಪಾತ್ರ ಪೋಷಣೆಯ ಬಗ್ಗೆ ಪ್ರತೀ ಶಾಟ್ ನಂತರವೂ ಕೂತು ವಿಮರ್ಶೆ ಮಾಡಿಕೊಂಡು ಅದನ್ನ ಸೀನ್‌ಗಳಲ್ಲಿ ಜೀವಿಸ್ತಾ ಇದ್ವಿ. ಯಾರ ದೃಷ್ಟಿ ಬಿತ್ತೋ? ಕೋವಿಡ್ ಬಂತು, ಪ್ರೊಡಕ್ಷನ್ ಬದಲಾಯ್ತು.. ಕಳೆದ ವರ್ಷ ಮತ್ತೆ ದೇವನೂರಿನಲ್ಲಿ ಶೂಟಿಂಗ್‌ಗೆ ಸೇರಿದ್ವಿ.. ರಾತ್ರಿಯೆಲ್ಲಾ ಊರು ಜಾತ್ರೆ ಸೀನ್.. ಎಲ್ಲಂದ್ರಲ್ಲಿ ಹೊಗೆ ಧೂಳು ಅದ್ಹೇಗೆ ನಿಭಾಯಿಸಿದೆ ತಾಯಿ?
ಸಂಸ್ಕೃತ ಬಲ್ಲ ಬ್ರಾಹ್ಮಣ ಸುಂದರಿಯೇ ಬೇಕೆ? ನಿರೂಪಕಿ ಅಪರ್ಣಾ ವಿರುದ್ಧ ಸರ್ಕಾರಕ್ಕೆ ಇದೆಂಥ ದೂರು?
ಒಂದುಸಲ ಮುಖ ಸಪ್ಪಗೆ ಮಾಡ್ಕೊಳ್ಲಿಲ್ಲ ಒಳಗೇ ಒದ್ದಾಡ್ತಿದ್ದ ಹಿಂಸೆ ತೋರಿಸಿಕೊಳ್ಳಿಲ್ಲ.. ಉಸಿರಾಡೋದಿಕ್ಕೆ ಒದ್ದಾಡ್ತಿದ್ವಿ ಎಲ್ಲರೂ... ಎಂಥಾ ಗಟ್ಟಿಗಿತ್ತಿ ನೀನು..ನಿನ್ನಿಂದ ಕಲಿಯೋದು ತುಂಬಾ ಇದೆ ಗೆಳತಿ... ವೈರಲ್ ಕಾಟದಿಂದ ಒದ್ದಾಡ್ತಾ ಸೆಟ್‌ಗೆ ಬಂದು ಕೊತಿರುವ ಈ ಹೊತ್ತಿನಲ್ಲಿ ನಿನ್ನ ನೆನಪು ತುಂಬಾ ಕಾಡುತ್ತಿದೆ. ನಿನ್ನ ಭಾಗದ ಕಥೆಯನ್ನು ಅಚ್ಚುಕಟ್ಟಾಗಿ ಮುಗಿಸಿ ಕೊಟ್ಟು ಇಡೀ ತಂಡಕ್ಕೆ ಒಳ್ಳೆಯದನ್ನು ಹಾರೈಸಿ ಹೊರಟುಬಿಟ್ಟೆ ನೋಡು ನೀನು. ದೇವನೂರು ಚಂದ್ರು ಭಕ್ತಿಯಿಂದ ಶೃದ್ಧೆಯಿಂದ ಮಾಡುತ್ತಿರುವ ಸಿನಿಮಾ ಇದು. ಅವರು ಗೆಲ್ಲಲೇ ಬೇಕು. ನಿನ್ನ ಪ್ರೀತಿ ಇಡೀ ತಂಡವನ್ನು ಗೆಲ್ಲಿಸತ್ತೆ..ಮೊನ್ನೆ ಶೂಟಿಂಗ್ ಬಂದಾಗ ಮೇಕಪ್ ತಂಡ ಅವರ ಅರಿವಿಗೇ ಬರದೆ ನೀನು ನಿನ್ನ ಪಾತ್ರಕ್ಕೆ ಬಳಸಿದ ತಾಳಿಸರ ಬಳೆ ಓಲೆ ಕೊಟ್ಟರು. ನಿನ್ನ ಹಾರೈಕೆ ನನ್ನ ಜೊತೆ ಇರಲಿ ಅಂತ ಅದನ್ನೇ ತೊಟ್ಟುಕೊಂಡು ಶೂಟಿಂಗ್ ಮಾಡ್ತಾ ಇದ್ದೀನಿ.. ನೀನು ಕೊಟ್ಟ ಪ್ರೀತಿಗೆ ನಿನ್ನ ಆತ್ಮಸ್ಥೆರ್ಯಕ್ಕೆ ಒಂದು ದೊಡ್ಡ ನಮಸ್ಕಾರ ಅಪ್ಪೀ
ಅಪರ್ಣಾ ಅವರಿಗೆ ನಾಗರಾಜ್ ವಸ್ತಾರೆ ಎಂಬ ಪತಿ ಇದ್ದಾರೆ. ಅಪರ್ಣಾ ನಿಧನದ ಬಳಿಕ ಸಂದರ್ಶನಗಳಲ್ಲಿ ಅವರು ಪತ್ನಿಯ ಬಗ್ಗೆ ಸಾಕಷ್ಟು ವಿಷಯಗಳನ್ನು ಹೇಳಿಕೊಂಡಿದ್ದಾರೆ.