ಯುಟ್ಯೂಬರ್ ಮಧು ಗೌಡ ಅದೃಷ್ಟ ಖುಲಾಯಿಸದಂತಿದೆ. ಇತ್ತೀಚೆಗೆ ಮನೆಯನ್ನು ಉಡುಗೊರೆಯಾಗಿ ಪಡೆದಿದ್ದ ಮಧುಗೆ ಈಗ ಒಡವೆ ಸಿಕ್ಕಿದೆ.
ಯುಟ್ಯೂಬರ್ ಮಧು ಗೌಡಗೆ ದೊಡ್ಡ ಪ್ರಮಾಣದಲ್ಲಿ ಅಭಿಮಾನಿ ವರ್ಗವಿದೆ. ನಿಖಿಲ್ ರವೀಂದ್ರರನ್ನು ಮದುವೆಯಾಗಿರೋ ಮಧು ಗೌಡಗೆ ಒಂದಾದ ಮೇಲೆ ಒಂದರಂತೆ ಗಿಫ್ಟ್ ಸಿಗುತ್ತಿದೆ. ಇತ್ತೀಚೆಗೆ ಅಣ್ಣ ಮದನ್ ಗೌಡ, ಮನೆಯನ್ನು ಗಿಫ್ಟ್ ಮಾಡಿದ್ದರು. ಈಗ ಅಕ್ಕ ಬಂಗಾರದ ಆಭರಣ ನೀಡಿದ್ದಾರಂತೆ.
ಅದ್ದೂರಿ ಮದುವೆ ಸಂಭ್ರಮ!
ಮಧು ಗೌಡ ಕುಟುಂಬವೇ ಯುಟ್ಯೂಬ್‌ನಲ್ಲಿ ಮುಳುಗಿ ಹೋಗಿದೆ ಎನ್ನಬಹುದು. ಪತಿ ನಿಖಿಲ್, ನಾದಿನಿ ನಿಶಾ, ಅಣ್ಣ ಮದನ್ ಕೂಡ ಸ್ವಂತ ಯುಟ್ಯೂಬ್ ಚಾನೆಲ್ ಹೊಂದಿದ್ದಾರೆ. ಇನ್ನು ಮಧು ಗೌಡ ಯುಟ್ಯೂಬ್ ಚಾನೆಲ್‌ನಲ್ಲಿ ಏಳು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಗೆಳತಿ ನಿಶಾರ ಅಣ್ಣ ನಿಖಿಲ್ ಅವರನ್ನೇ ಮಧು ಪ್ರೀತಿಸಿ ಮದುವೆಯಾಗಿದ್ದಾರೆ. ಅನಂತ್ ಅಂಬಾನಿ ಮದುವೆ ಸಂಭ್ರಮ ವಾರಗಟ್ಟಲೇ ನಡೆದಿತ್ತು. ಅಂತೆಯೇ ಕರ್ನಾಟಕದಲ್ಲಿ ಮಧು ಗೌಡ ಮದುವೆ ನಡೆಯಿತು ಎಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಮದುವೆಯಾದ ತಂಗಿ, ಯೂಟ್ಯೂಬರ್ ಮಧು ಗೌಡಗೆ ಮನೆಯನ್ನೇ ಗಿಫ್ಟ್ ಮಾಡಿದ ʼಕಲಿಯುಗದ ಅಣ್ಣʼ ಮದನ್ ಗೌಡ!
ಬಂಗಾರದ ಒಡವೆಯಲ್ಲಿ ಮದುವೆಯಾಗಿದ್ದ ಮಧು ಗೌಡ
ಇನ್ನು ಮಧು ಗೌಡ ಹಾಗೂ ನಿಖಿಲ್ ಅವರು ಬಹಳ ಅದ್ದೂರಿಯಾಗಿ ಮದುವೆಯಾಗಿದ್ದರು. ಪ್ರಿ ವೆಡ್ಡಿಂಗ್, ಹಳದಿ, ಸಂಗೀತ, ಮೆಹೆಂದಿ, ಮದುವೆ, ಆರತಕ್ಷತೆ ಎಂದು ಇವರು ಸಿಕ್ಕಾಪಟ್ಟೆ ಗ್ರ್ಯಾಂಡ್ ಆಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದರು. ಇನ್ನು ಮದುವೆ ದಿನ ಮಧು ಗೌಡ ಅವರು ಸಂಪೂರ್ಣ ಬಂಗಾರದ ಒಡವೆ ಧರಿಸಿದ್ದರು. ಈ ಬಗ್ಗೆ ಅವರೇ ಯುಟ್ಯೂಬ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರಮುಖ ಯುಟ್ಯೂಬರ್‌ಗಳು ಈ ಮದುವೆಯಲ್ಲಿ ಭಾಗಿಯಾಗಿದ್ದರು.
ನಾದಿನಿ ನಿಶಾಳ ಕೊರಳಿಗೆ ಚಿನ್ನದ ನೆಕ್‌ಲೆಸ್ ಹಾಕಿದ ಯೂಟ್ಯೂಬರ್ ಮಧು ಗೌಡ; ಫೋಟೋ ವೈರಲ್
ಊಟಕ್ಕೆಂದು ಕರೆದು ಬಂಗಾರ ಕೊಟ್ಟರು!
ಇತ್ತೀಚೆಗೆ ಮಧು ಗೌಡ ಅವರು ಅಕ್ಕನ ಮನೆಗೆ ಊಟಕ್ಕೆಂದು ಹೋಗಿದ್ದಾರೆ. ಆ ವೇಳೆ ಭರ್ಜರಿ ಭೋಜನ ನೀಡಿ, ಬಂಗಾರದ ಸರವನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ. ಈ ಒಡವೆ ನೀಡಿ ಮಧು ಖುಷಿಯಾಗಿದ್ದಾರೆ. ಅಕ್ಕನ ಮಗನ ನಾಮಕರಣಕ್ಕೆ ನಾನು ಏನಾದರೂ ಕೊಡ್ತೀನಿ ಎಂದು ಮಧು ಗೌಡ ಹೇಳಿದ್ದಾರೆ.
ಮಧು ಗೌಡ ತಂದೆ ಹದಿನಾಲ್ಕು ಮನೆಗಳ ಒಡೆಯ ಅಂತೆ. ಇಂದು ಮಧು ತಂದೆ ಇಲ್ಲ, ತಂದೆ ಜಾಗದಲ್ಲಿ ನಿಂತು ಅಣ್ಣ ಮದನ್ ಅವರೇ ಎಲ್ಲವನ್ನು ನೋಡಿಕೊಳ್ತಿದ್ದಾರೆ. ತಂದೆಯ ಆಸೆಯಂತೆ ಈ ಮನೆಯನ್ನು ಮದನ್ ಅವರು ಮಧುಗೆ ಮದುವೆಯ ಉಡುಗೊರೆಯಾಗಿ ನೀಡಿದ್ದಾರೆ. “ನನಗೆ ಬೇಡ, ನೀವು ಚೆನ್ನಾಗಿರಿ” ಎಂದು ಮಧು ಹೇಳಿದ್ದರೂ ಕೂಡ ಮದನ್ ಅವರೇ ಒತ್ತಾಯ ಮಾಡಿ ನೀಡಿದ್ದಾರೆ.