ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಜ್ಯೂನಿಯರ್ ರಾಕಿಭಾಯ್ ಅರ್ಥಾತ್ ಅನ್ಮೋಲ್ ಭಟ್ಕಳ್ ಎಂಟ್ರಿ ಕೊಟ್ಟಿದ್ದಾನೆ. ಭಾಗ್ಯಳ ಲೈಫೇ ಚೇಂಜ್ ಆಗೋಗಿದೆ.
ಹಲವು ಹೆಣ್ಣುಮಕ್ಕಳಿಗೆ ಮಾದರಿ ಎಂದೇ ಬಿಂಬಿತವಾಗಿರೋ ಭಾಗ್ಯಲಕ್ಷ್ಮಿ ಸೀರಿಯಲ್ ಭಾಗ್ಯ ಈಗ ಡೋಲಾಯಮಯ ಸ್ಥಿತಿಯಲ್ಲಿದ್ದಾಳೆ. ಎಷ್ಟೆಲ್ಲಾ ಸಾಧನೆ ಮಾಡಿದರೂ ಈಗ ಜೋಕರ್ ಆಗಿ ಕೆಲಸ ಮಾಡುವ ಸ್ಥಿತಿಗೆ ಬಂದು ತಲುಪಿದ್ದಾಳೆ. ಅದೇ ಇನ್ನೊಂದೆಡೆ, ಆಕೆಯನ್ನು ಎಲ್ಲಿಯೂ ನೆಮ್ಮದಿಯಿಂದ ಇರಲು ಬಿಡಬಾರದು ಎಂದು ತಾಂಡವ್ ಶತ ಪ್ರಯತ್ನ ಮಾಡುತ್ತಿದ್ದಾನೆ. ಅಮ್ಮ ತನ್ನ ಫೀಸ್ಗೋಸ್ಕರ ಇಷ್ಟೆಲ್ಲಾ ಕೆಲಸ ಮಾಡುತ್ತಿದ್ದಾಳೆ ಎಂದು ಅರಿತಿರೋ ಗುಂಡ, ಈಗ ಶೂಸ್ ಪಾಲಿಷ್ ಮಾಡಲು ಹೋಗಿ ಅಪ್ಪನ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ. ಮೊದಲೇ ಭಾಗ್ಯಳನ್ನು ಹಂಗಿಸಲು ಏನು ಸಿಗುತ್ತದೆ ಎಂದು ಕಾಯುತ್ತಿರುವ ತಾಂಡವ್ಗೆ ಈಗ ಇದು ಅಸ್ತ್ರವಾಗಿದೆ. ಮನೆಯವರಿಗೆಲ್ಲಾ ವಿಷಯ ತಿಳಿಸಿದ್ದಾನೆ. ಇದರಿಂದ ಎಲ್ಲರೂ ಸಿಟ್ಟುಗೊಂಡಿದ್ದಾರೆ. ಆದರೆ ಭಾಗ್ಯಳನ್ನು ನೆಮ್ಮದಿಯಿಂದ ಇಡಲು ಬಿಡಬಾರದು ಎನ್ನುವ ಕಾರಣಕ್ಕೆ ತಾಂಡವ್ ಆ ಕೆಲಸವನ್ನೂ ಕಸಿದುಕೊಂಡಿದ್ದಾನೆ.
ಭಾಗ್ಯ ಇನ್ನೇನು ಮಾಡುವುದು ಎಂದು ದಿಕ್ಕೇ ತೋಚದ ಸ್ಥಿತಿ ನಿರ್ಮಾಣವಾಗಿರುವಾಗಲೇ ಜ್ಯೂನಿಯರ್ ರಾಕಿ ಭಾಯ್ ಎಂಟ್ರಿಯಾಗಿದೆ. ಕೆಜಿಎಫ್ ಚಿತ್ರದಲ್ಲಿ ರಾಕಿ ಭಾಯ್ ಪಾತ್ರದಲ್ಲಿ ನಟಿಸಿರೋ ಬಾಲಕ ಅನ್ಮೋಲ್ ಭಟ್ಕಳ್ ಎಂಟ್ರಿ ಕೊಟ್ಟಿದ್ದಾನೆ. ಈಕೆಯಿಂದಾಗಿ ಭಾಗ್ಯಳ ದಿಕ್ಕೇ ಬದಲಾಗಿದೆ. ಭಾಗ್ಯಳ ಲೈಫ್ನಲ್ಲಿ ಈ ಬಾಲಕ ಬೆಳಕು ತೋರಿದ್ದಾನೆ. ಭಾಗ್ಯಳ ಮಗಳು ತನ್ಮಯಿಯ ಫ್ರೆಂಡ್ ಪಾತ್ರದಲ್ಲಿ ಈತ ನಟಿಸುತ್ತಿದ್ದಾನೆ. ತನ್ಮಯಿ ಈತನಿಗೆ ಅಮ್ಮನ ಕೈರುಚಿ ತೋರಿಸಿದ್ದಳು. ಅದರಿಂದ ಫುಲ್ ಖುಷ್ ಆಗಿರೋ ಆತ, ಮನೆಯವರೆಗೂ ಹುಡುಕಿ ಬಂದಿದ್ದಾನೆ. ಇನ್ನೊಂದು ಬಾಕ್ಸ್ ಊಟ ಬೇಕು ಎಂದು ಕೇಳಿದ್ದಾನೆ. ನಿಮ್ಮ ಕೈರುಚಿ ತಿನ್ನುತ್ತಿದ್ದರೆ ಎಲ್ಲರೂ ಮತ್ತೆ ಮತ್ತೆ ಕೇಳುವಂತಿದೆ ಎಂದಿದ್ದಾನೆ. ಆದರೆ ಆ ಸಮಯದಲ್ಲಿ ಭಾಗ್ಯಳಿಗೆ ಅಷ್ಟೊಂದು ತಲೆಗೆ ಹೊಳೆದೇ ಇರಲಿಲ್ಲ.
ಸಂಸಾರದ ನೊಗ ಹೊತ್ತು ಸುಸ್ತಾಗೋದ ಭಾಗ್ಯ ಈ ಪರಿ ಸೊಂಟ ಬಳುಕಿಸೋದಾ? ಬೇಡ ಕಣಮ್ಮಿ ಅಂತಿರೋ ಫ್ಯಾನ್ಸ್
ಆದರೆ, ಅದೇ ಇನ್ನೊಂದೆಡೆ ತಾಂಡವ್ ಆಕೆಯನ್ನು ಹಂಗಿಸುವುದನ್ನು ನಿಲ್ಲಿಸಲಿಲ್ಲ. ನಿನ್ನಿಂದ ಹೇಗೆ ಕೆಲಸ ಕಸಿದುಕೊಂಡೆ ಎಂದು ಖುಷಿಯಿಂದ ಕುಣಿದಾಡಿದ್ದಾನೆ. ಆತನಿಗೆ ಉತ್ತರ ಹೇಳಿ ಪ್ರಯೋಜನ ಇಲ್ಲ ಎಂದು ಮುಂದೆ ಹೋಗುತ್ತಿದ್ದರೆ, ಅದಕ್ಕೂ ತಾಂಡವ್ ಬಿಡಲಿಲ್ಲ. ಆಗ ಭಾಗ್ಯ ಕೊಚ್ಚೆ ಮೇಲೆ ಕಲ್ಲು ಎಸೆಯಬಾರದು ಎಂದು ಹೇಳಿದ್ದಾರಲ್ಲ, ಅದಕ್ಕೇ ಎಂದಾಗ ಶ್ರೇಷ್ಠಾ ಮತ್ತ ತಾಂಡವ್ಗೆ ಉರಿ ಹೊತ್ತಿಕೊಂಡಿದೆ. ಆದರೂ, ಕಿಚಾಯಿಸುವುದನ್ನು ಬಿಡಲಿಲ್ಲ.
ಆಗ ತಾಂಡವ್ ಮುಂದಿನ ತಿಂಗಳ ಇಎಂಐ ಹೇಗೆ ಕಟ್ಟುತ್ತಿಯಾ? ಸಂಸಾರ ನಡೆಸುವುದು ಎಂದರೆ ಅಡುಗೆ ಮನೆಯಲ್ಲಿ ಸೌಟು ಆಡಿಸಿದಂತೆ ಅಲ್ಲ ಎಂದಿದ್ದಾನೆ. ಇದನ್ನು ಕೇಳುತ್ತಿದ್ದಂತೆಯೇ ಭಾಗ್ಯಳಿಗೆ ಹೊಸ ಜೀವವೇ ಬಂದಂತಾಗಿದೆ. ಆಗ ಜ್ಯೂನಿಯರ್ ರಾಕಿ ಭಾಯ್ ಮಾತು ನೆನಪಾಗಿದೆ. ತನ್ನ ಅಡುಗೆಯನ್ನು ಆತ ಅಷ್ಟೆಲ್ಲಾ ಹೊಗಳುತ್ತಿದ್ದನಲ್ಲ, ಅಡುಗೆ ಮನೆಯಲ್ಲಿ ಸೌಟು ಆಡಿಸಿ, ಬದುಕನ್ನು ಕಟ್ಟಿಕೊಳ್ಳಬಹುದಲ್ಲ ಎನ್ನುವ ಯೋಚನೆ ಬಂದಿದೆ. ಈ ಕೆಲಸವನ್ನಂತೂ ತಾಂಡವ್ ಕಿತ್ತುಕೊಳ್ಳಲು ಸಾಧ್ಯವೇ ಇಲ್ಲ. ಇದೇ ತನಗೆ ವರದಾನ ಆಗಬಹುದು ಎಂದುಕೊಂಡು ಅದನ್ನು ಮಾಡುವ ಯೋಚನೆಯಲ್ಲಿದ್ದಾಳೆ. ಒಟ್ಟಿನಲ್ಲಿ ಸೀರಿಯಲ್ ಕುತೂಹಲದ ಘಟ್ಟ ತಲುಪಿದೆ.
ಭಾಗ್ಯಲಕ್ಷ್ಮಿ ಅಮ್ಮ-ಮಕ್ಕಳ ಭರ್ಜರಿ ರೀಲ್ಸ್: ಯಾರ ಕಣ್ಣೂ ಬೀಳದಿರಲಪ್ಪ ಎಂದು ದೃಷ್ಟಿ ತೆಗೆದ ನೆಟ್ಟಿಗರು!