ಸೀತಾ-ರಾಮ ಒಂದಾಗುವ ಹೊತ್ತಿನಲ್ಲಿಯೇ ಮತ್ತೊಮ್ಮೆ ಬಿರುಗಾಳಿ ಎದ್ದಿದೆ. ಸೀತಾಳ ಎದುರೇ ಸಿಹಿಯನ್ನು ಹೊತ್ತೊಯ್ದಿದ್ದಾರೆ ರೌಡಿಗಳು. ಮುಂದೇನು?
ಒಟ್ಟಿನಲ್ಲಿ ಸೀತಾ ಮತ್ತು ರಾಮ್ ಒಂದಾಗುವ ಹಾಗೆ ಸದ್ಯ ಕಾಣಿಸುತ್ತಿಲ್ಲ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದಾಗಲೇ ಒಂದೋ ಭಾರ್ಗವಿ, ಇಲ್ಲವೇ ಚಾಂದನಿಯಿಂದ ಏನೇನೋ ಸಮಸ್ಯೆಗಳು ಆಗುತ್ತಲೇ ಇವೆ. ಅದೇ ಇನ್ನೊಂದೆಡೆ ಸಿಹಿಯ ಹುಟ್ಟಿನ ರಹಸ್ಯ ಮಾತ್ರ ಇದುವರೆಗೂ ರಹಸ್ಯವಾಗಿಯೇ ಉಳಿದಿದೆ. ಈಕೆ ಸೀತಾಳ ಮಗಳೇ ಅಲ್ಲ ಎನ್ನುವ ವೀಕ್ಷಕರ ಅನಿಸಿಕೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ರಾಮ್ ಜೊತೆಗೆ ಇರುವಾಗಲೇ ಈ ಗುಟ್ಟನ್ನು ಸೀತಾ ಹೇಳುತ್ತಿಲ್ಲಾ ಯಾಕೆ ಎಂದು ಸೀರಿಯಲ್ ಫ್ಯಾನ್ಸ್ ಪ್ರಶ್ನೆ ಮಾಡುತ್ತಿರುವ ಹೊತ್ತಲ್ಲೇ ಸಿಹಿಯ ಗುಟ್ಟನ್ನು ವಾಯ್ಸ್ ಮೆಸೇಜ್ ಮೂಲಕ ಸೀತಾ ಮಾಡಿ ಕಳುಹಿಸಿದ್ದಾಳೆ. ಮದುವೆಗೂ ಮುನ್ನ ಸಿಹಿಯ ಬಗ್ಗೆ ರಾಮ್ ತಿಳಿದುಕೊಳ್ಳಲೇಬೇಕು ಎನ್ನುವ ಕಾರಣಕ್ಕೆ ಹೀಗೆ ಮಾಡಿದ್ದಾಳೆ. ಆದರೆ ಆ ಗುಟ್ಟು ರಾಮ್ ಕೇಳುತ್ತಾನೋ ಇಲ್ಲವೋ ಸದ್ಯ ತಿಳಿದಿಲ್ಲ.
ಇದರ ಬೆನ್ನಲ್ಲೇ, ಇದೀಗ ಸೀತಾ ಮತ್ತು ರಾಮ್ ಬಅಳಲ್ಲಿ ಬಿರುಗಾಳಿ ಎದ್ದಿದೆ. ಸಿಹಿಯ ಅಪಹರಣವಾಗಿದೆ. ಸೀತಾ ಕೂಗಿಕೊಳ್ಳುತ್ತಿದ್ದರೂ ಸಿಹಿ ಅಮ್ಮಾ ಎನ್ನುತ್ತಿದ್ದರೂ ಕೇಳದ ರೌಡಿಗಳು ಸಿಹಿಯನ್ನು ಎಳೆದುಕೊಂಡು ಹೋಗಿದ್ದಾರೆ. ಇದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಇದು ಕನಸೋ, ನನಸೋ ಇನ್ನೂ ತಿಳಿದಿಲ್ಲ. ಆದರೆ ಇದು ಕನಸೇ ಆಗಿರಪ್ಪಾ ಎನ್ನುತ್ತಿದ್ದಾರೆ ಸೀತಾರಾಮ ಫ್ಯಾನ್ಸ್. ಇದಾಗಲೇ ಸಾಕಷ್ಟು ಬಾರಿ ಗೋಳು ಆಗಿದೆ. ಈಗಲಾದರೂ ಬೇಗ ರಾಮ್ ಮತ್ತು ಸೀತಾರನ್ನು ಒಂದು ಮಾಡಿ ಅನ್ನುವುದು ಅಭಿಮಾನಿಗಳ ಮಾತು.
ಬುರ್ಖಾ ಮೊರೆ ಹೋಗಿದ್ದ ರಾಖಿಯಿಂದ ಟವಲ್ ಡ್ಯಾನ್ಸ್: ಎರಡು ಕಣ್ಣು ಸಾಲ್ತಿಲ್ಲ ಅಂತಿದ್ದಾರೆ ಅಭಿಮಾನಿಗಳು!
ಅದೇ ಇನ್ನೊಂದೆಡೆ, ಸೀತಾ ಮತ್ತು ರಾಮ್ ಇನ್ನೇನು ಒಂದಾಗುತ್ತಾರೆ ಎನ್ನುವ ಕಾಲಕ್ಕೆ ರಾಮ್ನನ್ನು ಕೊಲ್ಲಲು ಚಿಕ್ಕಮ್ಮ ಭಾರ್ಗವಿ ಸಂಚು ರೂಪಿಸಿದ್ದಳು. ಆತನ ಕಾರನ್ನು ಆ್ಯಕ್ಸಿಡೆಂಟ್ ಮಾಡಿಸಿದ್ದಾಳೆ. ಸೀತಾಳನ್ನು ತಾತ ದೇಸಾಯಿ ಮನೆಗೆ ಕರೆಸಿ ಇನ್ನೇನು ಮದುವೆ ಮಾತುಕತೆ ಮುಂದುವರೆಸಬೇಕು ಎನ್ನುವಾಗಲೇ ಇದು ಸಾಧ್ಯವಾಗಬಾರದು ಎನ್ನುವ ಕಾರಣಕ್ಕೆ ಭಾರ್ಗವಿ ಈ ತಂತ್ರವನ್ನು ರೂಪಿಸಿದ್ದಳು. ಇದಕ್ಕಾಗಿ ಎಲ್ಲರ ಎದುರು ಒಳ್ಳೆಯತನದ ಸೋಗು ಹಾಕಿಕೊಂಡಿರೋ ಭಾರ್ಗವಿ, ಯಾರಿಗೂ ಅನುಮಾನ ಬಾರದಂತೆ ರಾಮ್ನನ್ನು ವಿದೇಶಕ್ಕೆ ಕಳುಹಿಸುವ ಸಂಚು ರೂಪಿಸಿದಳು. ಅಲ್ಲಿ ತುರ್ತಾಗಿ ಯಾವುದೇ ಆಫೀಸ್ ಕೆಲಸಕ್ಕೆ ಸಂಬಂಧಿಸಿದಂತೆ ಮೀಟಿಂಗ್ ಇದೆ ಎಂದು ಅವನನ್ನು ಕಳುಹಿಸಿದಳು. ಭಾರ್ಗವಿಯ ಕುತಂತ್ರ ಗೆಳೆಯ ಅಶೋಕ್ಗೆ ತಿಳಿದಿತ್ತು. ಆದ್ದರಿಂದ ರಾಮ್ ಬದಲು ತಾನು ಹೋಗಿದ್ದ. ಭಾರ್ಗವಿ ಅಪಘಾತ ಮಾಡಿಸಿದ್ದರೂ ಅದರಿಂದ ಅಶೋಕ್ ಬಚಾವ್ ಆಗಿದ್ದ.
ಇದೀಗ ದೇಸಾಯಿ ಈ ಬಗ್ಗೆ ತನಿಖೆ ಮಾಡುವಂತೆ ಅಶೋಕ್ಗೆ ಹೇಳಿದ್ದಾರೆ. ಉದ್ದೇಶಪೂರ್ವಕವಾಗಿ ವಿದೇಶಕ್ಕೆ ಕಳುಹಿಸುವ ಪ್ಲ್ಯಾನ್ ಯಾರು ಮಾಡಿದ್ದು ಎಂದು ತನಿಖೆ ಮಾಡುವಂತೆ ಹೇಳಿದ್ದಾರೆ. ಇದು ಭಾರ್ಗವಿಯ ಕುತಂತ್ರ ಎನ್ನುವುದು ಅಶೋಕ್ಗೆ ಗೊತ್ತು. ಸತ್ಯಜೀತ್ ಎಲ್ಲಾ ಸತ್ಯವನ್ನೂ ಹೇಳಿದ್ದ. ಇದಕ್ಕೂ ಮುನ್ನವೇ ಭಾರ್ಗವಿಯ ಎಲ್ಲಾ ತಂತ್ರಗಳೂ ಅವನಿಗೆ ಗೊತ್ತಿದ್ದರೂ, ರಾಮ್ ಅದನ್ನು ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ಏಕೆಂದರೆ ಅವನು ತನ್ನ ಚಿಕ್ಕಮ್ಮ ಒಳ್ಳೆಯವಳು ಎಂದೇ ಅಂದುಕೊಂಡಿದ್ದಾನೆ. ತನ್ನ ತಾಯಿಯ ಸಾವಿಗೆ ಅವಳೇ ಕಾರಣ ಎನ್ನುವುದೂ ಅವನಿಗೆ ಗೊತ್ತಿಲ್ಲ. ಅದರೆ ಸೀತಾ ಮತ್ತು ರಾಮ್ನನ್ನು ಬೇರೆ ಮಾಡಲು ಅವನನ್ನು ವಿದೇಶಕ್ಕೆ ಕಳುಹಿಸುವ ಪ್ಲ್ಯಾನ್ ಮಾಡಿರುವುದು ಅಶೋಕ್ಗೆ ಗೊತ್ತಾಗಿದೆ. ತಾನು ಇದರ ಬಗ್ಗೆ ತನಿಖೆ ಮಾಡುವುದಾಗಿ ತಾತಂಗೆ ಅಶೋಕ್ ಹೇಳಿದ್ದಾನೆ.
ಶ್ರೇಷ್ಠಾಗೆ ಕಿಸ್ ಕೊಡುವಂತೆ ಪತಿ ತಾಂಡವ್ಗೆ ಭಾಗ್ಯ ಒತ್ತಾಯ ಮಾಡೋದಾ? ಇದೇನಿದು ಟ್ವಿಸ್ಟ್?