ನಾನು, ಗುರುಕಿರಣ್‌, ನಟ ಶ್ರೀಮುರಳಿ ಡ್ಯಾನ್ಸ್ ಶೋಗೆ ಬ್ಯಾಕ್ ಡಾನ್ಸರ್‌ ಆಗಿದ್ದೆ: ನಿರೂಪಕಿ ಅನುಶ್ರಿ

ಮೊದಲು ನಾನು ಬೆಂಗಳೂರಿಗೆ ಹೋಗಿದ್ದೇ ಡಾ. ರಾಜ್‌ ಕುಮಾರ್ ಅವರ ಸಾರ್ಥಕ ಸುವರ್ಣ ಎಂಬ ಕಾರ್ಯಕ್ರಮಕ್ಕೆ ಖುಷಿ ಹಂಚಿಕೊಂಡ ನಿರೂಪಕಿ ಅನುಶ್ರೀ


ಕರಾವಳಿ ಬೆಡಗಿ ಪ್ರಸಿದ್ಧ ನಿರೂಪಕಿ ಅನುಶ್ರೀ ಅವರು ಮೊದಲ ಬಾರಿಗೆ ತುಳುವಿನಲ್ಲಿ ಸಂದರ್ಶನ ನೀಡಿದ್ದಾರೆ. ತುಳುವಿನ ಪಾಡ್‌ ಕಾಸ್ಟ್ ಚಿಲ್ಲಿಂಗ್ ವಿಥ್ ಚಿಲಿಂಬಿ ಕಾರ್ಯಕ್ರಮಕ್ಕೆ ಬಂದಿದ್ದು, ದಿ ಪವರ್ ಹೌಸ್‌ ವೈನ್ಸ್ ಯೂಟ್ಯೂಬ್‌ ನಲ್ಲಿ ಲಭ್ಯವಿದೆ.  ತುಳು ಸಂದರ್ಶನಕ್ಕೆ ಕರಾವಳಿಗರು ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ಕಾಲೇಜು ದಿನಗಳ ಬಗ್ಗೆ ಮಾತನಾಡುತ್ತಾ ಮೊದಲ ಬಾರಿಗೆ ಬ್ಯಾಕ್‌ ಡಾನ್ಸರ್‌ ಆಗಿ ಕೆಲಸ ಮಾಡಿದ ದಿನಗಳ ಬಗ್ಗೆ ಮಾತನಾಡಿದ್ದಾರೆ. 

ಕಾಲೇಜು ಜೀವನದ ರಜೆಯಲ್ಲಿ ನಾನು ಸ್ಟೇಟ್‌ ಬ್ಯಾಂಕ್‌ (ಪ್ರದೇಶ) ನಲ್ಲಿ ಟಾಟ ಎಜಿ ಲೈಫ್ ಇನ್ಯೂರೆನ್ಸ್ ಎಂಬ ಕಂಪೆನಿಗೆ ಟೆಲಿ ಕಾಲರ್‌ ಆಗಿ ಕೆಲಸಕ್ಕೆ ಸೇರಿದೆ. ಅಲ್ಲಿ ದಕ್ಷಿಣ ಕನ್ನಡದಲ್ಲಿ ಆಗ ಫೇಮಸ್‌ ಆಗಿದ್ದ ಜೂನಿಯರ್‌ ಪ್ರಭುದೇವ ಅಂತಲೇ ಕರೆಯುತ್ತಿದ್ದ ಡಾನ್ಸರ್ ಅರುಣ್‌ ಆಳ್ವ ಅವರು ನನ್ನ ಬಳಿ ನಿನಗೆ ಡಾನ್ಸ್ ಇಷ್ಟವೇ ಎಂದು ಕೇಳುತ್ತಿದ್ದರು. ಅವರು ಗುರುಕಿರಣ್ ಅವರ ಶೋ ಗಳಿಗೆ ಬ್ಯಾಕ್ ಡಾನ್ಸರ್‌ ಗಳನ್ನು ಕಳುಹಿಸುತ್ತಿದ್ದರು. ಹಾಗೇ ನಾನು ಹೇಳಿದ್ದೆ ಅವರಲ್ಲಿ ನಾನು ಕೂಡ ಉತ್ತಮ ನೃತ್ಯಗಾರ್ತಿ ಅಂತ. ಹೀಗಾಗಿ ಅವರು ನನ್ನನ್ನು ಎರಡು ಮೂರು ಶೋ ಗಳಿಗೆ ಕರೆದುಕೊಂಡು ಹೋದರು.

Latest Videos

 Anchor Anushree ಉತ್ತರ ಕರ್ನಾಟಕ ಜನರ ನಿಷ್ಕಲ್ಮಶ ಪ್ರೀತಿಗೆ ಆ್ಯಂಕರ್ ಅನುಶ್ರೀ ಫಿದಾ

ಮೊದಲು ನಾನು ಬೆಂಗಳೂರಿಗೆ ಹೋಗಿದ್ದೇ ಡಾ. ರಾಜ್‌ ಕುಮಾರ್ ಅವರ ಸಾರ್ಥಕ ಸುವರ್ಣ ಎಂಬ ಕಾರ್ಯಕ್ರಮಕ್ಕೆ ಅಲ್ಲಿ ಚಿತ್ರರಂಗದ ದೊಡ್ಡ ಸೆಲೆಬ್ರಿಟಿಗಳು ಇದ್ದರು. ಅಲ್ಲಿ ಶ್ರೀಮುರಳಿ, ವಿಜಯರಾಘವೇಂದ್ರ ಅವರು ಸ್ಪೆಷಲ್‌ ಡಾನ್ಸ್‌ ಪ್ರೋಗ್ರಾಂ ಕೊಟ್ಟಿದ್ದರು, ನಾನು ಅವ್ರಿಗೆ ಬ್ಯಾಕ್ ಡಾನ್ಸರ್ ಆಗಿದ್ದೆ. ಈಗಲೂ ನನ್ನ ಬಳಿ ಅದರ ಪೇಪರ್ ಕಟ್ಟಿಂಗ್ ಇದೆ. ಆವಗೆಲ್ಲ ಪಿಂಕಿ ಪ್ಯಾಷನ್‌ ಬಟ್ಟೆ ಹಾಕಿ ತೆಗೆದಿರುವ ಫೋಟೋ ಇದೆ ಎಂದರು.

ನಾವೆಲ್ಲ ಬ್ಯಾಕ್ ಸ್ಟೇಜ್‌ ನಲ್ಲಿರಬೇಕಾದರೆ ಬಹಳ ದೂರದಲ್ಲಿ ಬಿಳಿ ಪಂಚೆ ಮತ್ತು ಲುಂಗಿ ಹಾಕಿಕೊಂಡು ಯಾರೋ ಬರುತ್ತಿರುವಂತೆ ಕಾಣಿಸಿತ್ತು. ಎರಡೂ ಬದಿಯಲ್ಲಿ ನಿಂತಿದ್ದವರೆಲ್ಲ ಕಾಲಿಗೆ ಬೀಳಲಾರಂಬಿಸಿದರು. ನಾನು ಆಗ ಮನಸ್ಸಿನಲ್ಲಿ ನೆನೆಸಿಕೊಂಡೆ ಯಾರಿಗಾಗಿರಬಹುದು ಈ ರೀತಿ ಸಾಲಾಗಿ ಜನ ಕಾಲಿಗೆ ಬೀಳುತ್ತಿರುವುದೆಂದು, ಮತ್ತೆ ತೀರಾ ಸಮೀಪಕಕ್ಕೆ ಬಂದಾಗ ನೋಡಿದ್ರೆ ಅದು ಡಾ. ರಾಜ್‌ ಕುಮಾರ್ ಆಗಿದ್ದರು. ನಾನು ಬಳಿಕ ನೋಡೇ ಇಲ್ಲ. ತಿರುಪತಿಯಲ್ಲಿ ಬೀಳುವಂತೆ ನೂರಾರು ಜನರೊಂದಿಗೆ ರಪ್‌ ಅಂತ ಅಡ್ಡ ಬಿದ್ದೆ. ಯಾಕಂದ್ರೆ ನಾನು ಅಮ್ಮ ಅವರ ಬಹುದೊಡ್ಡ ಅಭಿಮಾನಿಗಳು.  ನಾನು ಈ ಸನ್ನಿವೇಶವನ್ನು ಜೀವನದಲ್ಲೇ ಮರೆಯುವುದಿಲ್ಲ. ಓರಾ (ಪ್ರಭಾವಳಿ) ಎನ್ನುವ ನಿಜವಾದ ಅರ್ಥ ತಿಳಿಯಬೇಕಾದರೆ ನೀವು ರಾಜ್‌ಕುಮಾರ್ ಸರ್‌ ಅವರನ್ನು ನೋಡಲೇಬೇಕು. 

ಎಷ್ಟೋ ಜನಕ್ಕೆ ರಾಜ್‌ಕುಮಾರ್ ಸರ್‌ ಅವರನ್ನು ನೋಡದವರಿಗೆ ಗೊತ್ತಿಲ್ಲ. ಯಾಕೆ ಅವರನ್ನು ದೇವರಂತೆ ಕಾಣುತ್ತಾರೆ ಎಂದು ಅವರು ನಿಜವಾಗಲೂ ಓರಾ ಶಕ್ತಿಯನ್ನು ಹೊಂದಿದ್ದಾರೆ. ಅವರು ನಡೆದುಕೊಂಡು ಬರುವಾಗ ನನಗೆ ಅವರು ಶ್ರೀನಿವಾಸ ಕಲ್ಯಾಣದಲ್ಲಿ ದೇವರಾಗಿದ್ದು, ರಾಘವೇಂದ್ರ ಸ್ವಾಮಿ ಪಾತ್ರಗಳನ್ನು ಮಾಡಿದ್ದು, ಅದೆಲ್ಲ ನನಗೆ ನೆನಪಾಯ್ತು. ನಿಮಗೆ ಗೊತ್ತೇ ಇಲ್ಲದೆ ಅವರು ಬಂದಾಗ ಹೋಗಿ ಅವರ ಪಾದವನ್ನು ನೀವು ಮುಟ್ಟುತ್ತೀರಿ. ಆದರೆ ಅವರು ಬೇಡ ಬೇಡ ಎಂದೇ ಹೇಳುತ್ತಿದ್ದರು.

ಸೀತಾರಾಮ ನಟಿ ವೈಷ್ಣವಿ ಗೌಡ ಮಾಡಿದ ತಪ್ಪಿಗೆ ನೊಟೀಸ್‌ ಕೊಟ್ಟು ಬೆಂಗಳೂರು ಪೊಲೀಸರ ವಾರ್ನಿಂಗ್!

ಹೀಗಾಗಿ ನನಗೆ ಬಹಳ ಖುಷಿ ಇದೆ ನನ್ನ ಮೊದಲ ಸ್ಟೇಜ್‌ ಶೋ ರಾಜ್‌ ಕುಮಾರ್ ಸರ್‌ ಕಾರ್ಯಕ್ರಮಕ್ಕೆ ಮಾಡಿದ್ದು, ಮತ್ತು ಸೆಲೆಬ್ರೆಟಿಗಳ ಜೊತೆಗೆ ಮಾಡಿದ್ದೆಂದು ಅದಕ್ಕೆ ನಾನು ಗುರುಕಿರಣ್‌ ಸರ್ ಮತ್ತು ಅರುಣ್ ಆಳ್ವಾ ಅವರಿಗೆ ಧನ್ಯವಾದ ಹೇಳಲೇಬೇಕು. ಆಗ ನಾನು ತುಂಬಾ ಮಾತನಾಡುತ್ತಿದ್ದೆ. ಅದಕ್ಕೆ ನನಗೆ ತುಂಬಾ ಸಲ ಹೇಳಿದ್ದರು. ಹೋಗು ನಮ್ಮ ಟಿವಿ ಅವರು ಆಡಿಷನ್‌ ಮಾಡುತ್ತಿದ್ದಾರೆ ಹೋಗಿ ಕೊಡು ಎಂದು ಒತ್ತಾಯಿಸುತ್ತಿದ್ದರು. ಆಗ ನನಗೆ ಅದರ ಬಗ್ಗೆ ಒಂದು ಆಲೋಚನೆ ಕೂಡ ಇರಲಿಲ್ಲ ಆ್ಯಂಕರ್ ಆಗುತ್ತೇನೆಂದು. ಆಗೆಲ್ಲ ನ್ಯೂಸ್‌ ರೀಡರ್‌ ಗಳೇ ಹೆಚ್ಚು ಇದ್ದಿದ್ದು, ಅವರಿಗೆಲ್ಲ ತುಂಬಾ ಗೌರವ ಇತ್ತು. ಟೆಲಿವಿಷನ್‌ ಆ್ಯಂಕರ್ ಬಗ್ಗೆ ಗೊತ್ತೇ ಇರಲಿಲ್ಲ. 

ಹೀಗಾಗಿ ನಮ್ಮ ಟಿವಿ ಚಾನೆಲ್‌ ಆಡಿಷನ್‌ ಗೆ ಹೋದೆ. ಅವರು ನಾನು  ಮಾತನಾಡುವುದನ್ನು ನೋಡಿ ಎಷ್ಟು ಚಂದ ಮಾತನಾಡುತ್ತೀರಿ ಎಂದು ಡೈರೆಕ್ಟ್ ಇವರಿಗೆ 2 ಶೋ ಆ್ಯಂಕರಿಂಗ್ ಕೊಡಿ ಎಂದರು. ಅದು ಬಹಳ ತಮಾಷೆಯ ಶೋ ಟೆಲಿ ಅಂತ್ಯಾಕ್ಷರಿ. ಆವಾಗೆಲ್ಲ ಟಾಕ್‌ ಬ್ಯಾಕ್‌ ಎಂಬುದು ಇರಲಿಲ್ಲ. ಮುಂದಿನ ಕಾಲರ್‌ ಬಗ್ಗೆ ಬೋರ್ಡ್ ನಲ್ಲಿ ಬರೆದು ತೋರಿಸುತ್ತಿದ್ದರು. ಗ್ಯಾಸ್‌ ಹಿಂಬದಿಯಿಂದ ಎಲ್ಲಾ ಆ್ಯಕ್ಷನ್‌ ನಲ್ಲೇ ಹೇಳುತ್ತಿದ್ದರು. ನಾವು ಆ ಪ್ರಕಾರ ಮಾಡಬೇಕಿತ್ತು. ಅಲ್ಲಿಂದಲೇ  ನನ್ನ ನಿಜವಾದ ವೃತ್ತಿ ಜರ್ನಿ ಆರಂಭವಾಗಿದ್ದು ಕುಡ್ಲದ ಚಾನೆಲ್‌ ನಿಂದಲೇ  ಎಂದು ಅನುಶ್ರೀ ಹೇಳಿದ್ದಾರೆ.

ಆ ಬಳಿಕ ನಾನು ಬೆಂಗಳೂರಿಗೆ ಹೋದೆ, ನಾನು ನನ್ನೂರಿಗೆ ಬರುವಾಗ ಬಾರೀ ಖುಷಿಯಿಂದ ಬರುತ್ತಿದ್ದೆ ಮರಳಿ ಹೋಗುವಾಗ ಬೇಸರದಿಂದಲೇ ಹೋಗುತ್ತಿದೆ. ಈಗ ಕಾರಿನಲ್ಲಿ ಹೋಗೋದು. ಮೊದಲೆಲ್ಲ ಬಸ್‌ ನಲ್ಲೇ ಪ್ರಯಾಣ  ಮಾಡುತ್ತಿದ್ದೆ. ನಾನು ತುಂಬಾ ಎಮೋಷನಲ್ ಪರ್ಸನ್‌ ಹೀಗಾಗಿ ಊರು ಬಿಡುವಾಗ ಅಮ್ಮನನ್ನು ಬಿಟ್ಟು ಹೋಗಬೇಕಲ್ಲ ಎಂದು ಬೇಸರವಾಗುತ್ತಿತ್ತು. ಈಗ 6 ವರ್ಷದಿಂದ ಅಮ್ಮ ನನ್ನ ಜೊತೆಗೆ ಇದ್ದಾರೆ. ಹೀಗಾಗಿ ಸ್ವಲ್ಪ ಕಡಿಮೆ ಭೇಟಿ ನೀಡುತ್ತೇನೆ. ಅಮ್ಮ ಮಂಗಳೂರಿನಲ್ಲಿದ್ದಾಗ ತಿಂಗಳಿಗೊಮ್ಮೆ ಬರುತ್ತಿದ್ದೆ ಎಂದಿದ್ದಾರೆ.

 

click me!