ಶ್ರೇಷ್ಠಾ ಮತ್ತು ತಾಂಡವ್ ಕಿಸ್ಸಿಂಗ್ನಲ್ಲಿ ತೊಡಗಿಕೊಂಡಿದ್ದರೆ ಅವರಿಗೆ ಉತ್ತೇಜಿಸುತ್ತಿದ್ದಾಳೆ ಭಾಗ್ಯ. ಅಷ್ಟಕ್ಕೂ ಆಗಿರೋದೇನು?
ಒಂದೆಡೆ ತನ್ನ ಸಂಸಾರವನ್ನು ಉಳಿಸಿಕೊಳ್ಳಲು ಭಾಗ್ಯ ಹೋರಾಟ ಮಾಡುತ್ತಿದ್ದಾಳೆ. ಅವಳ ಸಂಸಾರದಲ್ಲಿ ದೊಡ್ಡ ಬಿರುಕೇ ಬಿಟ್ಟಿದೆ. ಅದು ಅಷ್ಟು ಸುಲಭದಲ್ಲಿ ಒಂದಾಗುವ ಹಾಗೆ ಕಾಣಿಸುತ್ತಿಲ್ಲ. ಅದೇ ಇನ್ನೊಂದೆಡೆ ಶ್ರೇಷ್ಠಾ ಭಾಗ್ಯಳ ಗಂಡನನ್ನೇ ಬುಟ್ಟಿಗೆ ಹಾಕಿಕೊಂಡಿದ್ದು, ಭರ್ಜರಿ ಮದುವೆಯ ಪ್ಲ್ಯಾನ್ ಕೂಡ ಮಾಡಿದ್ದಾಳೆ. ಇದಾಗಲೇ ಇವರಿಬ್ಬರ ನಿಶ್ಚಿತಾರ್ಥವೂ ನಡೆದುಬಿಟ್ಟಿದೆ. ಈ ವಿಷಯ ಯಾರಿಗೂ ಗೊತ್ತಿಲ್ಲ. ತನ್ನ ಪತಿ ಒಂದಲ್ಲೊಂದು ದಿನ ತನ್ನೊಟ್ಟಿಗೆ ಸಂಸಾರ ಮಾಡುತ್ತಾನೆ ಎಂದು ಭಾಗ್ಯ ಕನಸು ಕಾಣುತ್ತಿದ್ದರೆ, ಇವರ ಜೀವನವನ್ನು ಸರಿ ಮಾಡುವ ಪ್ರಯತ್ನದಲ್ಲಿ ಭಾಗ್ಯಳ ಅತ್ತೆ-ಮಾವ ಹಾಗೂ ಅಮ್ಮ ಇದ್ದಾರೆ. ಆದರೆ ತಾಂಡವ್ ಸಂಪೂರ್ಣವಾಗಿ ಶ್ರೇಷ್ಠಾಳ ವಶವಾಗಿರುವ ಹಿನ್ನೆಲೆಯಲ್ಲಿ ಸದ್ಯ ಇಂಥದ್ದೇನೂ ಚಮತ್ಕಾರ ಆಗುವಂತೆ ಕಾಣುತ್ತಿಲ್ಲ.
ಶ್ರೇಷ್ಠಾ ಮತ್ತು ತಾಂಡವ್ ತುಂಬಾ ಕ್ಲೋಸ್ ಎನ್ನುವುದು ಇಡೀ ಕುಟುಂಬಕ್ಕೆ ಗೊತ್ತಿದ್ದರೂ, ಅವರಿಬ್ಬರೂ ಲವರ್ಸ್ ಎನ್ನುವುದಾಗಲೀ, ಮದುವೆ ಪ್ಲ್ಯಾನ್ ಮಾಡಿದ್ದಾರೆ ಎನ್ನುವುದಾಗಲೀ ಯಾರಿಗೂ ಗೊತ್ತಿಲ್ಲ. ಶ್ರೇಷ್ಠಾಳ ಮದುವೆ ನಿಶ್ಚಯವಾಗಿದ್ದು ತಿಳಿದಿದ್ದರೂ ಅದು ತಾಂಡವ್ ಜೊತೆಗೆ ಎನ್ನುವುದು ತಿಳಿದಿಲ್ಲ. ಅಷ್ಟಕ್ಕೂ ಈಗ ಭಾಗ್ಯಳ ಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. ಮನೆಯ ಅರ್ಧ ಇಎಂಐ ನಾನೇ ಕಟ್ಟುತ್ತೇನೆ ಎಂದು ಪತಿ ತಾಂಡವ್ ಎದುರು ಭಾಗ್ಯ ಒಪ್ಪಿಕೊಂಡು ಬಂದಿದ್ದಾಳೆ. ಈಕೆ ಹೇಗಾದರೂ ಮಾಡಿ ದುಡಿಯಲೇಬೇಕು. ಹೇಗೆ ದುಡಿಯುವುದು ಎನ್ನುತ್ತಿರುವಾಗಲೇ ಮಗಳು ತನ್ವಿ ನಿನ್ನ ಅಡುಗೆ ಸಕತ್ ರುಚಿಯಾಗಿರುತ್ತದೆ ಎಂದಿದ್ದಾಳೆ. ಹಾಗಿದ್ದರೆ ನಾನು ಯಾವುದಾದರೂ ಹೋಟೆಲ್ನಲ್ಲಿ ಅಡುಗೆಗೆ ಸೇರಿಕೊಳ್ಳಬೇಕು ಎಂದು ಭಾಗ್ಯ ಮನಸ್ಸು ಮಾಡುತ್ತಾಳೆ. ಆರಂಭದಲ್ಲಿ ಸಿಕ್ಕಾಪಟ್ಟೆ ಅವಮಾನ ಅನುಭವಿಸಿದರೂ ಕೊನೆಗೂ ಅವಳಿಗೆ ಅದೃಷ್ಟ ಖುಲಾಯಿಸಿದೆ. ಸ್ಟಾರ್ ಹೋಟೆಲ್ನಲ್ಲಿ ಅಡುಗೆ ಕೆಲಸ ಸಿಕ್ಕಿದೆ. ಇತ್ತ ಅತ್ತೆ ಕುಸುಮಾಳೂ ಹೋಟೆಲ್ ಒಂದಕ್ಕೆ ಸೇರಿಕೊಂಡಿದ್ದಾಳೆ.
ಬುರ್ಖಾ ಮೊರೆ ಹೋಗಿದ್ದ ರಾಖಿಯಿಂದ ಟವಲ್ ಡ್ಯಾನ್ಸ್: ಎರಡು ಕಣ್ಣು ಸಾಲ್ತಿಲ್ಲ ಅಂತಿದ್ದಾರೆ ಅಭಿಮಾನಿಗಳು!
ಆದರೆ ಈ ನಡುವೆಯೇ ಪ್ರೊಮೋ ಒಂದು ರಿಲೀಸ್ ಆಗಿದೆ. ಅದು ತಾಂಡವ್ ಮತ್ತು ಶ್ರೇಷ್ಠಾ ಕಿಸ್ ಮಾಡುವ ದೃಶ್ಯ. ಲಿಪ್ಲಾಕ್ ಇತ್ಯಾದಿ ದೃಶ್ಯಗಳನ್ನು ವೀಕ್ಷಕರಿಗೆ ತೋರಿಸುವ ರೀತಿಯಲ್ಲಿ ನಿಜವಾಗಿಯೂ ಇದರ ಶೂಟಿಂಗ್ ನಡೆದಿರುವುದಿಲ್ಲ. ಅಲ್ಲಿ ನಡೆಯುವುದೇ ಬೇರೆ. ಕೊನೆಗೆ ಅದನ್ನು ಎಡಿಟ್ ಮಾಡಿ ಕಿಸ್ ಮಾಡಿದಂತೆ ತೋರಿಸಲಾಗುತ್ತದೆ. ಇಂದಿನ ಹಲವು ಚಿತ್ರಗಳಲ್ಲಿ ಇಂಥ ದೃಶ್ಯಗಳನ್ನು ನೇರಾನೇರವಾಗಿಯೇ ಮಾಡಲಾಗುತ್ತದೆ. ಅಂದರೆ ನಟ-ನಟಿಯರು ನೇರವಾಗಿಯೇ ದೀರ್ಘ ಚುಂಬನದಲ್ಲಿ ತೊಡಗಿಸಿಕೊಳ್ಳುವುದು ಮಾಮೂಲು. ಆದರೆ ಸೀರಿಯಲ್ಗಳಲ್ಲಿ ಹಾಗೂ ಕೆಲವು ಸಿನಿಮಾಗಳಲ್ಲಿ ನಾವು ನೋಡುವುದೇ ಬೇರೆ, ಶೂಟಿಂಗ್ ಆಗುವುದೇ ಬೇರೆ. ಅದೇ ರೀತಿ ಇಲ್ಲಿ ಶ್ರೇಷ್ಠಾ ಮತ್ತು ತಾಂಡವ್ ಕಿಸ್ಸಿಂಗ್ ದೃಶ್ಯವಿದ್ದು, ಅದರ ಶೂಟಿಂಗ್ ವಿಡಿಯೋ ಇದಾಗಿದೆ.
ಇಬ್ಬರ ನಡುವೆ ಕೈಗಳನ್ನು ಅಡ್ಡಲಾಗಿ ಹಿಡಿಯಲಾಗಿದ್ದು, ಅಲ್ಲಿ ಅವರ ಕಿಸ್ ಮಾಡಬೇಕಿದೆ. ಆದರೆ ಕಿಸ್ ಮಾಡಲು ಇಬ್ಬರೂ ಒದ್ದಾಡುತ್ತಿದ್ದಾರೆ. ಅದಕ್ಕಾಗಿ ನಿರ್ದೇಶಕರು ಕಿಸ್ ಮಾಡಿ ಮಾಡಿ ಎಂದು ಹೇಳುತ್ತಿರುವಾಗಲೇ ಭಾಗ್ಯನೂ ಬೇಗ ಬೇಗ ಕಿಸ್ ಮಾಡಿ ಎಂದಿದ್ದಾಳೆ. ಅಂದರೆ ಭಾಗ್ಯಪಾತ್ರಧಾರಿಯಾಗಿರುವ ಸುಷ್ಮಾ ಅವರು ತಾಂಡವ್ ಮತ್ತು ಶ್ರೇಷ್ಠಾ ಪಾತ್ರಧಾರಿಗಳಿಗೆ ಕಿಸ್ ಮಾಡುವಂತೆ ಹೇಳಿದ್ದಾರೆ. ಇನ್ನು ಈ ಕಣ್ಣಲ್ಲಿ ಏನೇನು ನೋಡಬೇಕೋ ಎಂದು ಅಲ್ಲಿದ್ದವರು ಹೇಳುವುದನ್ನೂ ಕೇಳಬಹುದು. ಇದರ ವಿಡಿಯೋ ಅನ್ನು ಅಂದರೆ ಸೀರಿಯಲ್ ಮೇಕಿಂಗ್ ವಿಡಿಯೋ ಅನ್ನು ಸುಷ್ಮಾ ಅವರು ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಕಿಸ್ ಮಾಡಿ ಎಂದು ಅವರು ಹೇಳುತ್ತಿರುವ ಕಾರಣ, ಶ್ರೇಷ್ಠಾ ನಿನ್ನ ಸವತಿ ಕಣೆ ಎಂದು ಸೀರಿಯಲ್ ಫ್ಯಾನ್ಸ್ ಭಾಗ್ಯಳ ಕಾಲೆಳೆದಿದ್ದಾರೆ.
ಒಂದೂವರೆ ಲಕ್ಷ ಬೆಲೆಯ ಡ್ರೆಸ್ನಲ್ಲಿ ಮಿಂಚಿದ ದಿಶಾ ಪಟಾನಿ : ಡ್ರೆಸ್ಸೇ ಕಾಣಿಸ್ತಿಲ್ವಲ್ಲಾ ಕೇಳೋದಾ ಫ್ಯಾನ್ಸ್!