ಮಗು ಹೆರುವುದು ಸರಿಯೋ-ತಪ್ಪೊ? ಹೆಣ್ಣಿನ ಮೂರು ರೂಪಗಳಿವು- ಸೀತಾ, ಸಾಧನಾ, ಶಾಲಿನಿ...

By Suchethana D  |  First Published Sep 17, 2024, 5:08 PM IST

ಯಾರದ್ದೋ ಮಗುವನ್ನು ಹೆತ್ತು ಮಗುವನ್ನು ದೂರ ಮಾಡಿಕೊಳ್ಳಲಾಗದೇ ನೋವನ್ನು ಅನುಭವಿಸುತ್ತಿರುವ ಸೀತಾ, ಮಗುವಾಗಲಿಲ್ಲ ಎಂಬ ಕೊರಗಿನಲ್ಲಿ ಇರುವ ಸಾಧನಾ, ಸೌಂದರ್ಯ ಹಾಳಾಗುತ್ತದೆ ಎಂದು ಮಗು ಬೇಡ ಎನ್ನುವ ಶಾಲಿನಿ... ಹೆಣ್ಣಿನ ಮೂರು ರೂಪಗಳ ಪರಿಚಯ ಇಲ್ಲಿದೆ...
 


ಅಮ್ಮಾ... ಈ ಒಂದು ಮಾತು ಕೇಳಲು ಅದೆಷ್ಟೋ ಹೆಣ್ಣುಮಕ್ಕಳು ಹಂಬಲಿಸುವುದು ಇದೆ. ಆದರೆ ಆ ದೇವರ ಲೀಲೆಯೇ ವಿಚಿತ್ರವಾದದ್ದು. ಕೆಲವರಿಗೆ ಬೇಡ ಬೇಡ ಎಂದರೂ ವರ್ಷಕ್ಕೊಂದು ಮಗು ದಯಪಾಲಿಸಿದರೆ, ಇನ್ನು ಕೆಲವರು ಜೀವನಪೂರ್ತಿ ಅಮ್ಮಾ ಎನ್ನುವ ತನ್ನ ಒಡಲಿನ ಕುಡಿಯನ್ನು ನೋಡಲು ಹಂಬಲಿಸಬೇಕಾದ ಸ್ಥಿತಿ. ಕೆಲವು ಹೆಣ್ಣು ಮಕ್ಕಳಿಗೆ ಮಗು ಕೊಟ್ಟು ಕಸಿದು ಕೊಳ್ಳುವ ದೇವರು, ಮಗುನೇ ಬೇಡ ಎಂದವರಿಗೆ ಮಗು ಕೊಟ್ಟು ಕಸದ ತೊಟ್ಟಿಯಲ್ಲಿ ಹಾಕುವಂತೆ ಮಾಡುತ್ತಾನೆ! ಮಕ್ಕಳಿಗಾಗಿ ಇನ್ನಿಲ್ಲದ ಕಠಿಣಾತಿಕಠಿಣ ವ್ರತ ಮಾಡುವ ಹೆಣ್ಣುಗಳು ಒಂದೆಡೆಯಾದರೆ, ಏನೋ ಎಡವಟ್ಟು ಮಾಡಿಕೊಂಡು ಮಕ್ಕಳಾಗದಿದ್ದರೆ ಸಾಕಪ್ಪಾ ಎಂದುಕೊಂಡರೂ ಗರ್ಭಿಣಿಯಾಗಿ ಪೇಚಿಗೆ ಸಿಲುಕುವ ಹೆಣ್ಣುಗಳು ಇನ್ನೊಂದೆಡೆ!  ಸೌಂದರ್ಯವೇ ಮೇಲು ಎಂದು ಬಗೆಯುವ ಹೆಣ್ಣುಮಕ್ಕಳು, ಮಗುವಾದರೆ ತಮ್ಮ ಸೌಂದರ್ಯ ಹಾಳಾಗುತ್ತದೆ ಎನ್ನುವ ಕಾರಣಕ್ಕೆ ಮಗುವನ್ನು ಮಾಡಿಕೊಳ್ಳದೇ ಬಾಡಿಗೆ ತಾಯ್ತನದ ಮೊರೆ ಹೋಗುವುದು ಇದೆ. ಈ ಟ್ರೆಂಡ್​ ಸೆಲೆಬ್ರಿಟಿಗಳಲ್ಲಿ ಮಾತ್ರ ಹೆಚ್ಚು ಎಂದುಕೊಂಡರೆ ಅದು ತಪ್ಪು. ಶ್ರೀಮಂತರ ಮನೆಗಳಲ್ಲಿ ಹುಟ್ಟಿದ ಹೆಚ್ಚಿನ ಹೆಣ್ಣುಮಕ್ಕಳು ಸೌಂದರ್ಯಕ್ಕೆ ಮೊರೆ ಹೋಗಿ ಮಕ್ಕಳಾಗುವುದನ್ನು ತಪ್ಪಿಸಿಕೊಳ್ಳುವುದು ಇದೆ.

ಇವೆಲ್ಲಾ ಕ್ಯಾರೆಕ್ಟರ್​ನ ಮೂರು ಮುಖಗಳೇ ಸೀತಾರಾಮ ಸೀರಿಯಲ್​ನ ಸೀತಾ, ಶಾಲಿನಿ ಮತ್ತು ಸಾಧನಾ.  ಹೌದು. ಸೀತಾರಾಮ ಸೀರಿಯಲ್​ ನೋಡುಗರಿಗೆ ಇದಾಗಲೇ ತಿಳಿದಿರುವಂತೆ, ಸೀತಾ ಸಿಹಿಯನ್ನು ಬಾಡಿಗೆ ತಾಯ್ತನದ ಮೂಲಕ ಹೆತ್ತಿದ್ದಾಳೆ. ಈಗ ಸಿಹಿಯ ಅಪ್ಪ-ಅಮ್ಮ ಡಾ.ಮೇಘಶ್ಯಾಮ್  ಮತ್ತು ಶಾಲಿನಿ ಎನ್ನುವ ಸತ್ಯ ಬಹಿರಂಗವಾಗಿದೆ. ಸಿಹಿ ಎಲ್ಲಿ ಮೂಲ ಅಪ್ಪ-ಅಮ್ಮನ ಜೊತೆ ಹೋಗುತ್ತಾಳೆಯೋ ಎನ್ನುವ ಸಂಕಟದಲ್ಲಿದ್ದಾಳೆ ಸೀತಾ. ನಾಲ್ಕೈದು ವರ್ಷ ಸಾಕಿ ಬೆಳೆಸಿದ ಕಂದ ಬೇರೊಬ್ಬರ ಪಾಲಾಗುವುದನ್ನು ಆಕೆ ಸಹಿಸಳು. ತನ್ನ ಕರುಳ ಬಳ್ಳಿಯನ್ನು ಮತ್ತೊಬ್ಬರಿಗೆ ಒಪ್ಪಿಸಲು ಈ ಅಮ್ಮ ಸಹಿಸಳು. ಕಾನೂನಿನ ಪ್ರಕಾರ ಈಕೆ ತಾಯಿಯಲ್ಲ, ಆದರೆ ಜನ್ಮ ಕೊಟ್ಟ ಮಗುವನ್ನು ಅನಿವಾರ್ಯ ಕಾರಣಗಳಿಂದಾಗಿ ತಾನೇ ಸಾಕು-ಸಲಹಬೇಕಾದ ಸ್ಥಿತಿ ಬಂದಾಗ, ಆ ಮಗುವಿಗಾಗಿ ತನ್ನ ಸರ್ವಸ್ವವನ್ನೇ ತ್ಯಾಗ ಮಾಡಿದ ತಾಯಿ ಸೀತಾ. ಇಂಥ ಪರಿಸ್ಥಿತಿಯಲ್ಲಿ ಈಗ ಏಕಾಏಕಿ ಬಂದು ಮಗು ನಿನ್ನದಲ್ಲ ಎಂದುಬಿಟ್ಟರೆ, ಆ ಒಡಲಿಗೆ ಅದ್ಯಾವ ಪರಿಯ ಸಂಕಟವಾಗುತ್ತದೆ ಎನ್ನುವುದು ತಾಯಿಯಾದವಳು ಮಾತ್ರ ಅರ್ಥ ಮಾಡಿಕೊಳ್ಳಬಲ್ಲಳು.

Tap to resize

Latest Videos

undefined

ಲೋ ತಾಂಡವ್​, ಶ್ರೇಷ್ಠಾ ಬೇಕೇನೋ ನಿನಗೆ? ಕೋಲು ಹಿಡಿದು ಬಂದ ಅಜ್ಜಿ ಕೋಪಕ್ಕೆ ತಾಂಡವ್​ ಸುಸ್ತೋ ಸುಸ್ತು!

ಇದು ಸೀತಾ ಕ್ಯಾರೆಕ್ಟರ್​. ಮಕ್ಕಳಿಗಾಗಿ ಯಾವ ಹಂತಕ್ಕಾದರೂ ಹೋಗಲು ಸೈ, ಮಗುವೇ ಪ್ರಪಂಚ, ಅಮ್ಮನಾಗುವುದೇ ಭಾಗ್ಯ ಎಂದುಕೊಳ್ಳುವಂಥ ಸೀತಾ ಕ್ಯಾರೆಕ್ಟರ್​ನ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎನ್ನುವುದು ಹೇಳಬೇಕಾಗಿಲ್ಲ. ಇನ್ನೊಂದು ಕ್ಯಾರೆಕ್ಟರ್​ ಸಾಧನಾದ್ದು. ಈಕೆಗೆ ಮಕ್ಕಳಿಲ್ಲ. ಮಕ್ಕಳಿಗಾಗಿ ಹಂಬಲಿಸುತ್ತಿದ್ದಾಳೆ. ಆದರೆ ಆ ದೇವರು ಈಕೆಯ ಮೇಲೆ ಕೃಪೆ ತೋರಲಿಲ್ಲ. ಸಾಧನಾಳಂಥ ಹೆಣ್ಣುಮಕ್ಕಳು ಅದೆಷ್ಟೋ ಮಂದಿ ಇದ್ದಾರೆ. ಕಾರಣ ಏನೇ ಇರಬಹುದು, ದೋಷ ಗಂಡನದ್ದೋ, ಹೆಂಡತಿಯದ್ದೋ ಬೇರೆಯ ವಿಷಯ.  ಆದರೆ ತನ್ನ ಗರ್ಭದಿಂದ ಮಗು ಬಂದು ಆ ಮಗು ತನ್ನನ್ನು ಅಮ್ಮಾ ಎಂದು ಕರೆಯಬೇಕು ಎಂದು ಬಯಸುವ ಸಾಧನಾಳಂತೆ ಕಣ್ಣೀರು ಹಾಕುವ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುವುದಕ್ಕೆ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಐವಿಎಫ್​ ಸೆಂಟರ್​ಗಳೇ ಸಾಕ್ಷಿಯಾಗಿದೆ. 

ಅದೇ ಇನ್ನೊಂದು ಕ್ಯಾರೆಕ್ಟರ್​ ಶಾಲಿನಿಯದ್ದು. ಈಕೆ ಸೀರಿಯಲ್​ನಲ್ಲಿ ಸೀತಾಳ ಜೈವಿಕ ತಾಯಿ. ಕಾನೂನುಬದ್ಧ ತಾಯಿ. ಆದರೆ ತಾಯಿಯೆನ್ನುವ ಮಮಕಾರ ಎಳ್ಳಷ್ಟೂ ಇಲ್ಲ. ಈಗ ಸಾಧನಾ ಬಂದು ನೀವ್ಯಾಕೆ ಬಾಡಿಗೆ ತಾಯಿಯ ಮೊರೆ ಹೋಗಿದ್ದೀರಿ ಎನ್ನುವ ಪ್ರಶ್ನೆಗೆ ಆಕೆ, ತಾಯಿಯಾದರೆ ಸೌಂದರ್ಯ ಹಾಳಾಗುತ್ತದೆ, ಅದೆಲ್ಲಾ ನನಗೆ ಹಿಡಿಸದು. ಒಂದು ಮಗುವಿಗಾಗಿ ಹೆಣ್ಣು ಇಷ್ಟೆಲ್ಲಾ ಕಷ್ಟಪಡಬೇಕಾ ಅದಕ್ಕಾಗಿಯೇ ಬಾಡಿಗೆ ತಾಯ್ತನದ ಮೊರೆ ಹೋಗಿದ್ದು ಎನ್ನುತ್ತಾಳೆ. ಆಗ ಸಾಧನಾ ತನಗೆ ಮಗುವಾಗದೇ ಇರುವ ನೋವನ್ನು ತೋಡಿಕೊಂಡರೆ, ಸೀತಾ ತಾಯ್ತನದ ಸುಖವನ್ನು ಹೇಳುತ್ತಾಳೆ. ಸೌಂದರ್ಯ ಹಾಳಾಗುತ್ತದೆ ಎನ್ನುವುದು ಸುಳ್ಳು. ಆದರೆ ಹೆಣ್ಣು ಮಗುವಾದ ಮೇಲೆ ಇನ್ನೂ ಹೆಚ್ಚು ಸುಂದರಿಯಾಗುತ್ತಾಳೆ ಎಂದೆಲ್ಲಾ ಹೇಳುತ್ತಾಳೆ. ಆದರೆ ಇದ್ಯಾವುದನ್ನೂ ಕೇಳುವ ಸ್ಥಿತಿಯಲ್ಲಿ ಇಲ್ಲ ಶಾಲಿನಿ. ಈ ಮೂವರು ಮಹಿಳೆಯರು ಇಂದಿನ ಸಮಾಜದ ಪ್ರತಿರೂಪಗಳು! 

ಸಿಹಿಗೂ ತಿಳಿದೇ ಬಿಟ್ಟಿತು ಸತ್ಯ? ಅಪ್ಪ-ಅಮ್ಮನ ತೆಕ್ಕೆ ಸೇರುತ್ತಿದ್ದಂತೆಯೇ ಕುಸಿದು ಬಿದ್ದ ಸೀತಾ- ಇದೆಂಥ ಅಗ್ನಿ ಪರೀಕ್ಷೆ?

click me!