ಚಂದನ್​ ಶೆಟ್ಟಿ ಹುಟ್ಟುಹಬ್ಬಕ್ಕೆ ನಿವೇದಿತಾ ಹೀಗೆ ವಿಷ್​? ವಿಡಿಯೋ ನೋಡಿ ತಲೆ ಬಿಸಿ ಮಾಡ್ಕೊಂಡ ಫ್ಯಾನ್ಸ್​!

By Suchethana D  |  First Published Sep 17, 2024, 3:42 PM IST


ಇಂದು ಗಾಯಕ, ರ‍್ಯಾಪರ್ ಚಂದನ್​ ಶೆಟ್ಟಿ ಅವರಿಗೆ 35ನೇ ಹುಟ್ಟುಹಬ್ಬದ ಸಂಭ್ರಮ. ಆದರೆ ಎಲ್ಲರ ಗಮನ ಅವರ ಮಾಜಿ ಪತ್ನಿ ನಿವೇದಿತಾ ಅವರ ವಿಡಿಯೋ ಕಡೆ ಹೋಗಿದೆ. ಅಷ್ಟಕ್ಕೂ ಅವರ ವಿಡಿಯೋದಲ್ಲಿ ಅಂಥದ್ದೇನಿದೆ?
 


ಇಂದು ಗಾಯಕ ಚಂದನ್​ ಶೆಟ್ಟಿ ಅವರಿಗೆ 35ನೇ ಹುಟ್ಟುಹಬ್ಬದ ಸಂಭ್ರಮ. 1989ರ ಇದೇ ದಿನ ಹುಟ್ಟಿದ ಚಂದನ್​ ಶೆಟ್ಟಿ ಅವರಿಗೆ ಶುಭಾಶಯಗಳ ಸುರಿಮಳೆಯೇ ಆಗುತ್ತಿದೆ.  ಚಂದನ್ ಶೆಟ್ಟಿ ಅವರು ನಿವೇದಿತಾ ಜೊತೆ ವಿಚ್ಛೇದನ ಆದಾಗಿನಿಂದಲೂ ಅವರ ಅಭಿಮಾನಿಗಳಿಗೆ ಒಂದೇ ಚಿಂತೆ. ಅವರು  ಯಾವಾಗ ಗುಡ್‌ನ್ಯೂಸ್‌ ಕೊಡುತ್ತಾರೆ ಎಂದೇ ಬಹುತೇಕ ಮಂದಿ ಕಾಯುತ್ತಿದ್ದಾರೆ. ಸದ್ಯ ಚಂದನ್‌ ಶೆಟ್ಟಿ ಅವರು ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಈಚೆಗಷ್ಟೇ ಅವರ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರ ಬಿಡುಗಡೆಯಾಗಿದೆ.  ಇದೇ ರೀತಿ ಇವರ ಇನ್ನೂ ಕೆಲವು ಚಿತ್ರಗಳು ಬಿಡುಗಡೆಯಾಗಬೇಕಿದೆ.  ಸದ್ಯ ತಮ್ಮ ಕರಿಯರ್‌ ಬಗ್ಗೆ ಗಮನ ಹರಿಸುತ್ತಿದ್ದೇನೆ. ಮದುವೆ ಎಲ್ಲಾ ಆಮೇಲೆ ಎಂದು ಇದಾಗಲೇ ಹಲವು ಬಾರಿ ಚಂದನ್‌ ಅವರು ಹೇಳಿದ್ದರೂ, ಅವರ ಅಭಿಮಾನಿಗಳಿಗೆ ಅವರನ್ನು ಮದುವೆ ಮಾಡಿಸುವವರೆಗೂ ಸಮಾಧಾನವಿಲ್ಲ. 

ಅಷ್ಟಕ್ಕೂ,  ನಿವೇದಿತಾ ಗೌಡ ಜೊತೆ ಚಂದನ್​ ಶೆಟ್ಟಿಯವರು  ಯಾವುದೇ ಗಲಾಟೆ, ಗೊಂದಲಕ್ಕೆ ಆಸ್ಪದ ಕೊಡದೇ ಡಿವೋರ್ಸ್​ ಪಡೆದುಕೊಂಡಿದ್ದರಿಂದ ಭಾರಿ ಶ್ಲಾಘನೆಗೆ ಒಳಗಾಗಿದ್ದಾರೆ.  ಚಂದನ್​  ಶೆಟ್ಟಿ ಪರವೇ ಬಹುತೇಕ ಮಂದಿ ನಿಂತಿರುವುದೂ ಸಾಕ್ಷಿಯಾಗಿದೆ.  ಡಿವೋರ್ಸ್​ ಬಳಿಕವೂ ಮಾಜಿ ಪತ್ನಿಯ ಬಗ್ಗೆ ಅದೇ ಗೌರವ ಉಳಿಸಿಕೊಂಡು, ನಿವೇದಿತಾರನ್ನು ಬಹುವಚನದಿಂದಲೇ ಸಂಬೋಧಿಸುತ್ತಾ ಆಕೆಯ ಬಗ್ಗೆ ಕಾಳಜಿ ತೋರುವುದರಿಂದಲೂ ಚಂದನ್​  ಶೆಟ್ಟಿ ಅಭಿಮಾನಿಗಳಿಗೆ ಮತ್ತಷ್ಟು ಆಪ್ತರಾಗುತ್ತಿದ್ದಾರೆ. ಡಿವೋರ್ಸ್ ಬಳಿಕ ಚಂದನ್‌ ಶೆಟ್ಟಿಯವರಿಗೆ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿ ಎನ್ನಬಹುದು.

Tap to resize

Latest Videos

undefined

ಚೆನ್ನಾಗಿಯೇ ಇದ್ದ ನಿವೇದಿತಾಗೆ ಇದ್ದಕ್ಕಿದ್ದಂಗೆ ಇದೇನಾಯ್ತು? ವಿಡಿಯೋ ನೋಡಿ ಚಿಂತೆಗೀಡಾದ ಫ್ಯಾನ್ಸ್!

ಇದೆರಲ್ಲರ ನಡುವೆಯೇ, ಹುಟ್ಟುಹಬ್ಬದಂದು ಅವರ ಮಾಜಿ ಪತ್ನಿ ನಿವೇದಿತಾ ಹೇಗೆ ವಿಷ್​ ಮಾಡಿರಬಹುದು, ಮಾಡಿದ್ದಾರೋ, ಇಲ್ಲವೋ ಎಂಬ ಬಗ್ಗೆ ಅಭಿಮಾನಿಗಳಲ್ಲಿ ಒಂದು ರೀತಿಯ ಕೆಟ್ಟ ಕುತೂಹಲ. ಇದಕ್ಕಾಗಿಯೇ ನಿವೇದಿತಾ ಅವರ ಮೇಲೆ ವಿಶೇಷವಾಗಿ ಅವರ ಮತ್ತು ಚಂದನ್​ ಶೆಟ್ಟಿ ಅಭಿಮಾನಿಗಳು ಕಣ್ಣು ಇಟ್ಟಿದ್ದಾರೆ. ಅವರೆಲ್ಲರಿಗೂ ಮತ್ತಷ್ಟು ಕುತೂಹಲ ಉಂಟು ಮಾಡಿದ್ದು, ನಿವೇದಿತಾ ಅವರ ಹೊಸ ರೀಲ್ಸ್​. ಅಷ್ಟಕ್ಕೂ ಡಿವೋರ್ಸ್​ ಆದ ಬಳಿಕ ನಿವೇದಿತಾ ಅವರು ರೀಲ್ಸ್​ ಮಾಡುವುದು ಹೆಚ್ಚುತ್ತಲೇ ಇದೆ, ಅದೇನೂ ಹೊಸ ವಿಷಯವಲ್ಲ. ಆದರೆ, ಬರ್ತ್​ಡೇ ಬೆನ್ನಲ್ಲೇ ನಿವೇದಿತಾ ಅವರು ಗುಲಾಬಿ ಬಣ್ಣದ ಹಾರ್ಟ್​ ಇರುವ ಡ್ರೆಸ್​ ಒಂದನ್ನು ಎದೆಯ ಸಂಪೂರ್ಣ ಭಾಗ ಕವರ್​ ಆಗುವ ರೀತಿಯಲ್ಲಿ ತೊಟ್ಟು ವಿಡಿಯೋ ಶೇರ್​ ಮಾಡಿದ್ದಾರೆ. ಚಂದನ್​ ಶೆಟ್ಟಿ ಅವರ ಹುಟ್ಟುಹಬ್ಬದ ಬೆನ್ನಲ್ಲೇ ಇಂಥದ್ದೊಂದು ವಿಡಿಯೋ ಶೇರ್​ ಮಾಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇದನ್ನು ನೋಡಿ ಅಭಿಮಾನಿಗಳು ತಲೆ ಬಿಸಿ ಮಾಡಿಕೊಂಡಿದ್ದಾರೆ. ನಿಜಕ್ಕೂ ನಿವೇದಿತಾ ಮಾಜಿ ಪತಿಯನ್ನು ಗಮನದಲ್ಲಿ ಇಟ್ಟುಕೊಂಡೇ ಈ ರೀತಿ ಮಾಡಿದ್ದಾರಾ ಎನ್ನುವುದು ಅವರ ಚಿಂತೆ. 


ಅಷ್ಟಕ್ಕೂ ಮೊನ್ನೆಯಷ್ಟೇ  ನಿವೇದಿತಾ, ಜವಾನ್​ ಚಿತ್ರದ ಇಶ್ಕ್​ ಮೇ ದಿಲ್​ ಬನಾ ಹೈ,  ಇಶ್ಕ್​ ಮೇ ದಿಲ್​ ಫನಾ ಹೈ (ಹೃದಯವು ಪ್ರೀತಿಯಿಂದ ಮಾಡಲ್ಪಟ್ಟಿದೆ. ನನ್ನ ಹೃದಯವು ಪ್ರೀತಿಯಿಂದ ತುಂಬಿಹೋಗಿದೆ) ಎಂಬ ಹಾಡಿಗೆ ರೀಲ್ಸ್​ ಮಾಡಿದ್ದರು. ಎಂದಿನಂತೆ ನಟಿ ತಮ್ಮ ಒಂದೆರಡು ಪೋಸ್​ಗಳನ್ನು ನೀಡಿದ್ದಾರೆ. ಆದರೆ ಈ ಬಾರಿ ಸೀರೆ ಉಟ್ಟಿರುವುದೇ ವಿಶೇಷ. ಪ್ರತಿ ಬಾರಿಯೂ ನಿವೇದಿತಾ ರೀಲ್ಸ್​ ಮಾಡಿದಾಗ ಎದೆಗೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿರುವಿರಾ ಎಂಬ ಪ್ರಶ್ನೆ ಎದುರಾಗುತ್ತದೆ.  ಆದರೆ ಇದೀಗ ನಟಿ ಸೀರೆಯಲ್ಲಿ ಸುಂದರವಾಗಿ ಕಾಣಿಸುತ್ತಿದ್ದಾರೆ. ಇದರ ಹೊರತಾಗಿಯೂ ನೆಟ್ಟಿಗರೇನೂ ಸುಮ್ಮನೇ ಕುಳಿತಿಲ್ಲ. ಚಂದನ್​ ಶೆಟ್ಟಿ ಜೊತೆ ಡಿವೋರ್ಸ್​ ಬಳಿಕ, ಪ್ರೀತಿ- ಪ್ರೇಮ ಎನ್ನುವಂಥ ರೀಲ್ಸ್​ ಹಾಕುವುದು, ಅರೆಬರೆ ಡ್ರೆಸ್​ ಹಾಕಿ ದೇಹ ಪ್ರದರ್ಶನ ಮಾಡುವುದು... ಹೀಗೆ ನಿವೇದಿತಾರ ರೀಲ್ಸ್​ಗಳು ಇರುವ ಹಿನ್ನೆಲೆಯಲ್ಲಿ, ಚಂದನ್​ ಶೆಟ್ಟಿ ಬಳಿಕ ಈಕೆಯ ಲೈಫ್​ನಲ್ಲಿ ಯಾರದ್ದೋ ಎಂಟ್ರಿ ಆಗಿದೆ ಎಂದೇ ಪ್ರಶ್ನೆ ಕೇಳಲಾಗುತ್ತಿದೆ. ಈಗ ಹಾರ್ಟ್​ ಡ್ರೆಸ್​ ನೋಡಿ, ಇದು ಹೊಸ ಎಂಟ್ರಿಗೋ, ಮಾಜಿ ಪತಿಗೋ ಕೇಳುತ್ತಿದ್ದಾರೆ. 

ಹೃದಯ ಪ್ರೀತಿಯಲ್ಲಿ ಕರಗೋಗಿದೆ ಎಂದ ನಿವೇದಿತಾ! ಹೊಸ ಎಂಟ್ರಿಗೆ ಗ್ರೀನ್​ ಸಿಗ್ನಲ್​ ಕೊಟ್ರಾ? ಯಾರೀತ?

click me!