ಸಿಹಿಗೂ ತಿಳಿದೇ ಬಿಟ್ಟಿತು ಸತ್ಯ? ಅಪ್ಪ-ಅಮ್ಮನ ತೆಕ್ಕೆ ಸೇರುತ್ತಿದ್ದಂತೆಯೇ ಕುಸಿದು ಬಿದ್ದ ಸೀತಾ- ಇದೆಂಥ ಅಗ್ನಿ ಪರೀಕ್ಷೆ?

By Suchethana D  |  First Published Sep 17, 2024, 4:22 PM IST

ಡಾ.ಮೇಘಶ್ಯಾಮ್​  ಮತ್ತು ಶಾಲಿನಿ ತನ್ನ ಅಪ್ಪ-ಅಮ್ಮ ಎನ್ನುವ ಸತ್ಯ ಸಿಹಿಗೆ ತಿಳಿದಿದೆ. ಅವರ ಬಳಿ ಓಡಿ ಹೋಗಿ ಅವರನ್ನು ಅಪ್ಪಿಕೊಳ್ಳುತ್ತಿದ್ದಂತೆಯೇ ಸೀತಾ ಕುಸಿದಿದ್ದಾಳೆ. ಸೀತಾರಾಮದಲ್ಲಿ ಇದೇನಿದು ಟ್ವಿಸ್ಟ್​?
 


 ವರ್ಷದಿಂದ ಕಾಯುತ್ತಿದ್ದ ಸಿಹಿಯ ಜನ್ಮರಹಸ್ಯ ಕೊನೆಗೂ ತಿಳಿದುಬಿಟ್ಟಿದೆ. ಮೇಘಶ್ಯಾಮ್​ ಸಿಹಿಯ ಅಪ್ಪ ಎನ್ನುವ ವಿಷಯ ರಿವೀಲ್​ ಆಗಿದೆ. ಸಿಹಿ ಸೀತಾಳ ಮಗಳು ಅಲ್ಲ ಎನ್ನುವುದು ಇದಾಗಲೇ ತಿಳಿದಿದ್ದರೂ, ಆಕೆ ಬಾಡಿಗೆ ತಾಯಿ, ಜನ್ಮ ಕೊಟ್ಟ ತಾಯಿ. ಆದರೆ ಕಾನೂನಿನ ಪ್ರಕಾರ ತಾಯಿಯಲ್ಲ. ಅದೇ ಇನ್ನೊಂದೆಡೆ,  ಡಾ.ಮೇಘಶ್ಯಾಮಗೆ ತಮ್ಮ ಮಗಳು ಬದುಕಿರುವ ಸತ್ಯ ತಿಳಿದಿದೆ. ಸಿಹಿಯ ಮೇಲೆ ಆತನಿಗೆ ಇನ್ನಿಲ್ಲದ ಪ್ರೀತಿ. ಆದರೆ ಅವಳೇ ತನ್ನ ಮಗಳು ಎನ್ನುವ ಸತ್ಯ ಗೊತ್ತಿಲ್ಲ. ಆದರೆ ಸೀತಾಳಿಗೆ ವಿಷಯ ಗೊತ್ತಾಗಿ ಕಂಗಾಲಾಗಿ ಹೋಗಿದ್ದಾಳೆ.  ಇದರ ನಡುವೆಯೇ ಶಾಲಿನಿ ನಾವು ಬಾಡಿಗೆ ತಾಯಿಯ ಮೋಸಕ್ಕೆ ಒಳಗಾಗಿ ನಮ್ಮ ಮಗಳನ್ನು ಕಳೆದುಕೊಂಡಿದ್ದೇವೆ ಎಂದು ಭಾರ್ಗವಿ   ಮುಂದೆ ಹೇಳಿದ್ದಾಳೆ. ಅವಳು ಸೀತಾಳ ಮುಖದಲ್ಲಿ ಆಗುತ್ತಿದ್ದ ಬದಲಾವಣೆ ಗಮನಿಸಿ, ಸಿಹಿಯೇ ಅವರ ಮಗು ಎನ್ನುವ ಅನುಮಾನ ಶುರುವಾಗಿದೆ. 

ಇದಕ್ಕಾಗಿಯೇ ಸೀತಾ ಮತ್ತು ಸಿಹಿಯ ಸಂಬಂಧದ ಬಗ್ಗೆ ಇದೀಗ ಸೀರಿಯಲ್​ ಪ್ರೇಮಿಗಳಲ್ಲಿ ಆತಂಕ ಶುರುವಾಗಿದೆ. ಸೀತಾ ಮತ್ತು ಸಿಹಿಗೂ ಇರುವ ಸಂಬಂಧ ತಾಯಿ-ಮಗಳದ್ದೇ  ಆಗಿದ್ದರೂ ಅವರು ಕಾನೂನಿನ ದೃಷ್ಟಿಯಲ್ಲಿ ತಾಯಿ-ಮಗಳು ಅಲ್ಲ. ಸೀತಾ ತನ್ನ ಗರ್ಭದಲ್ಲಿ ಈ ಮಗುವನ್ನು ಇಟ್ಟು ಒಂಬತ್ತು ತಿಂಗಳು ಹೊತ್ತು ಹೆತ್ತಿದ್ದರೂ ಆಕೆ ಬಾಡಿಗೆ ತಾಯಿ ಮಾತ್ರ!  ಕಣ್ಣು ಅರಿಯದಿದ್ದರೂ ಕರುಳು ಅರಿಯುತ್ತದೆ ಎನ್ನುವ ಹಾಗೆ ಸಿಹಿ ಮತ್ತು ಡಾ.ಮೇಘಶ್ಯಾಮ್​ ನಡುವೆ ಪ್ರೀತಿ ಹೆಚ್ಚಾಗುತ್ತಿದೆ. ಮೇಘಶ್ಯಾಮ್​ಗೂ ಸಿಹಿಯನ್ನು ಘಳಿಗೆ ಬಿಟ್ಟಿರಲಾಗದ ಸ್ಥಿತಿ. ಶಾಲಿನಿಗೆ ಸಿಹಿಯನ್ನು ಕಂಡರೆ ಆಗದಿದ್ದರೂ, ಅವಳು ತೋರುವ ಪ್ರೀತಿಗೆ ಒಮ್ಮೊಮ್ಮೆ ಸೋತು ಹೋಗಿದ್ದು ಇದೆ. ಅನಿವಾರ್ಯವಾಗಿ ಅವರಿಬ್ಬರಿಗೂ ಸೀತಾಳ ಮನೆಯಲ್ಲಿ ಉಳಿದುಕೊಳ್ಳುವ ಸ್ಥಿತಿ ಬಂದಿದೆ. ಅಪ್ಪ ಮತ್ತು ಮಗಳ ನಡುವೆ ಬಾಂಡಿಂಗ್​ ಹೆಚ್ಚಾಗುತ್ತಿದೆ. ಮೇಘಶ್ಯಾಮ್​  ಅಂತೂ ಸಿಹಿಯನ್ನು ತನ್ನ ಮಗಳಂತೆಯೇ ನೋಡುತ್ತಿದ್ದಾನೆ. 

Tap to resize

Latest Videos

ಕಣ್ಣುಮುಚ್ಚಿ ಮೇಕಪ್​ ಮಾಡಿದ ಸೀತಾ-ಸಿಹಿ: ಸೀರಿಯಲ್​ ನಿರ್ದೇಶಕರಿಗೆ ಬೆದರಿಕೆ ಹಾಕಿದ ಫ್ಯಾನ್ಸ್​!

ಹಿಗೆ ಇಂಜೆಕ್ಷನ್​ ಕೊಟ್ಟಿದ್ದಾನೆ. ಇದನ್ನು ನೋಡಿ ಸೀತಾಳಿಗೆ ಹೊಟ್ಟೆ ಚುರುಕ್​ ಎಂದಿದೆ. ಡಾಕ್ಟರ್​ ಎಷ್ಟು ಚೆನ್ನಾಗಿ ನೋವಾಗದಂತೆ ಇಂಜೆಕ್ಷನ್​ ಕೊಡ್ತಾರೆ ಅಂದಿದ್ದಾಳೆ ಸಿಹಿ. ಇದನ್ನು ಕೇಳಿದ ಸೀತಾ, ಯಾಕೆ ನಾನು ಕೊಟ್ಟರೆ ನೋವಾಗ್ತಿತ್ತಾ ಎಂದು ನೊಂದು ಕೇಳಿದ್ದಾಳೆ. ಅದಕ್ಕೆ ಸಿಹಿ ಅಷ್ಟೇ ಮುಗ್ಧವಾಗಿ, ನನಗೆ ನೋವಾಗ್ತಾ ಇರಲಿಲ್ಲ, ಆದ್ರೆ ನನಗೆ ಇಂಜೆಕ್ಷನ್​ ಕೊಡುವಾಗ ನೀನು ನೋವು ಪಡೋದನ್ನು ನೋಡಲು ಆಗ್ತಿರಲಿಲ್ಲ ಎಂದಿದ್ದಾಳೆ. ಕೊನೆಗೆ ಸಿಹಿ ಮೇಘಶ್ಯಾಮ್​  ಮತ್ತು ಶಾಲಿಗೆ ಮುತ್ತು ಕೊಟ್ಟು ಶಾಲೆಗೆ ಹೊರಟಿದ್ದಾಳೆ. ಸಿಹಿಯನ್ನು ಕಂಡರೆ ಆಗದ ಶಾಲಿನಿಗೆ ಈ ಮುತ್ತಿನಿಂದ ಏನೋ ಪುಳಕ ಆದಂತಾಗಿದೆ. ಇದೇ ಸಮಯದಲ್ಲಿ ಸೀತಾಳ ಬಳಿ ಸಿಹಿ ಬಂದಿದ್ದಾಳೆ. ಸಿಹಿ ಮುತ್ತು ಕೊಡುತ್ತಾಳೆ ಎಂದು ಸೀತಮ್ಮಾ ಕಾಯುತ್ತಿದ್ದಳು.  ಆದರೆ ಅಷ್ಟರಲ್ಲಿಯೇ ಅಣ್ಣ ಕರೆದಿದ್ದರಿಂದ ಸೀತಾಳಿಗೆ ಬೈ ಹೇಳಿ ಹೊರಟೇ ಬಿಟ್ಟಿದ್ದಾಳೆ ಸಿಹಿ. ಇದರಿಂದ ಸೀತಾಳ ಹೃದಯಕ್ಕೆ ಚುಚ್ಚಿದ ಅನುಭವವಾಗಿದೆ.

ಅದೇ ಸಮಯಕ್ಕೆ ಮೇಘಶ್ಯಾಮ್​ ಮತ್ತು ಶಾಲಿನಿಯನ್ನು ಕಂಡ ಸಿಹಿ ಕೊನೆಗೂ ನನ್ನ ನಿಜವಾದ ಅಪ್ಪ-ಅಮ್ಮ ಸಿಕ್ಕೇಬಿಟ್ಟರು. ಎಷ್ಟು ವರ್ಷದಿಂದ ನಾನು ಕಾಯುತ್ತಿದ್ದೆ. ನೀವೇ ನನ್ನ ಅಪ್ಪ-ಅಮ್ಮ ಎಂದು ತಿಳಿದು ಖುಷಿಯಾಯಿತು ಎಂದು ಹೋಗಿ ಇಬ್ಬರನ್ನೂ ತಬ್ಬಿಕೊಂಡಿದ್ದಾಳೆ. ಇದನ್ನು ನೋಡಿದ ಸೀತಾಳಿಗೆ ಆಕಾಶವೇ ತಲೆಯ ಮೇಲೆ ಬಿದ್ದ ಅನುಭವ, ಕುಸಿದು ಹೋಗಿದ್ದಾಳೆ. ರಾಮ್​  ಆಕೆಯನ್ನು ಸಮಾಧಾನ ಪಡಿಸುತ್ತಿದ್ದಾನೆ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ, ಇದು ಖಂಡಿತವಾಗಿಯೂ ಸೀತಾಳ ಕನಸು ಎಂದು ಹಲವರು ಹೇಳುತ್ತಿದ್ದಾರೆ. ಮತ್ತೆ ಕೆಲವರು ಇದು ಸತ್ಯ ಆಗಿರಬಾರದು, ಕನಸೇ ಆಗಿರಬೇಕು ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಸೀತಾ ರಾಮ ಸೀರಿಯಲ್​ ಇನ್ನೇನು ತಿರುವು ಪಡೆದುಕೊಳ್ಳಲಿದೆ ಎಂದು ನೋಡಬೇಕಿದೆ. ಸಿಹಿ ಮೇಘಶ್ಯಾಮ್​  ಮಗಳು ಆಗದಿರಲಿ ಎಂದೂ ಹಲವರು ಹೇಳುತ್ತಿದ್ದಾರೆ. 

ಚಂದನ್​ ಶೆಟ್ಟಿ ಹುಟ್ಟುಹಬ್ಬಕ್ಕೆ ನಿವೇದಿತಾ ಹೀಗೆ ವಿಷ್​? ವಿಡಿಯೋ ನೋಡಿ ತಲೆ ಬಿಸಿ ಮಾಡ್ಕೊಂಡ ಫ್ಯಾನ್ಸ್​!

click me!