ಸಮಯ ಕಳೆದಂತೆ ನನ್ನ ಗಂಡ ಚಂದ್ರಕಾಂತ್ ನಡವಳಿಕೆಯಲ್ಲಿ ಭಾರೀ ಬದಲಾವಣೆ ಕಾಣತೊಡಗಿತು. ದಿನಾಲು ಮನೆಗೆ ಕುಡಿದು ಬರುವುದು, ನಾನೇನಾದರೂ ಕೇಳಿದರೆ ಕೋಪಿಸಿಕೊಳ್ಳುವುದು, ಹೊಡೆಯುವುದು ಶುರು ಮಾಡಿದ್ದರು.
ತೆಲುಗಿನ 'ತ್ರಿನಯನಿ' ನಟಿ ಪವಿತ್ರಾ ಜಯರಾಂ (Pavithra Jayaram) ಕಾರು ಅಪಘಾತದಲ್ಲಿ ಅಸು ನೀಗಿದ ಬಳಿಕ ಆಕೆಯ ಪ್ರೇಮಿ, ಶಿಲ್ಪಾ ಪ್ರೇಮಾ (Shilpa Prema) ಪತಿ ನಟ ಚಂದ್ರಕಾಂತ್ (Chandrakanth) ನಾಲ್ಕು ದಿನಗಳ ಬಳಿಕ ನೇಣಿಗೆ ಶರಣಾಗಿ ಸಾವನ್ನಪ್ಪಿದ್ದು ಗೊತ್ತೇ ಇದೆ. ಆ ದುರಂತ ಸಾವುಗಳ ಬಳಿಕ, ನಟ ಚಂದ್ರಕಾಂತ್ ಪತ್ನಿ ಶಿಲ್ಪಾ ಪ್ರೇಮಾ ಮಾಧ್ಯಮಗಳ ಮುಂದೆ ಬಂದು ತಮ್ಮ ಸಂಸಾರಕ್ಕೆ ಸಂಬಂಧಪಟ್ಟ ಕೆಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಚಂದ್ರಕಾಂತ್ ಹಾಗೂ ತಮ್ಮದು 2015ರಲ್ಲಿ ನಡೆದ ಪ್ರೇಮ ವಿವಾಹ, ಹಾಗೂ ತಮಗೆ ಈಗಾಗಲೇ ಎರಡು ಮಕ್ಕಳಿದ್ದಾರೆ ಎಂಬ ಸಂಗತಿಯನ್ನೂ ಸಹ ಶಿಲ್ಪಾ ಪ್ರೇಮಾ ಹೇಳಿಕೊಂಡಿದ್ದಾರೆ.
ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರುವ ನಟ ಚಂದ್ರಕಾಂತ್ ಹಾಗೂ ಅಪಘಾತದಲ್ಲಿ ತೀರಿಕೊಂಡಿರುವ ನಟಿ ಪವಿತ್ರಾ ಜಯರಾಂ ಇಬ್ಬರೂ ತೆಲುಗಿನ 'ತ್ರಿನಯನಿ' ಸೀರಿಯಲ್‌ನಲ್ಲಿ ಒಟ್ಟಿಗೇ ನಟಿಸುತ್ತಿದ್ದರು. ಆಗಲೇ ಅವರಿಬ್ಬರ ಪರಿಚಯವಾಗಿದ್ದು. ಬಳಿಕ ಲಾಕ್‌ಡೌನ್ ವೇಳೆಯಲ್ಲಿ ಅವರಿಬ್ಬರೂ ರೀಲ್ಸ್, ಫೋಟೋ ಶೂಟ್ ಎಂದು ಒಟ್ಟಿಗೇ ಓಡಾಡುತ್ತಿದ್ದು ಈ ವೇಳೆ ಅವರಿಬ್ಬರೂ ಪರಸ್ಪರ ಹತ್ತಿರವಾಗಿದ್ದಾರೆ. ಒಂದೇ ಧಾರಾವಾಹಿಯಲ್ಲಿ ನಟಿಸುತ್ತಿರುವ ಸಹಕಲಾವಿದರಲ್ಲಿ ಇದೆಲ್ಲ ಸಹಜ ಎಂದೇ ಭಾವಿಸಿ ಅನ್ಯತಾ ಯೋಚಿಸಿ ಮನಸ್ಸು ಕೆಡಿಸಿಕೊಳ್ಳಲಿಲ್ಲ.
ನಟಿ ತನಿಷಾ ಕುಪ್ಪಂಡ ಭರ್ಜರಿ ಪ್ರೊಜೆಕ್ಟ್‌ಗೆ ಸದ್ಯದಲ್ಲೇ ಚಾಲನೆ; ಏನದು ಹೊಸ ಬಿಸಿನೆಸ್?
ಆದರೆ, ಸಮಯ ಕಳೆದಂತೆ ನನ್ನ ಗಂಡ ಚಂದ್ರಕಾಂತ್ ನಡವಳಿಕೆಯಲ್ಲಿ ಭಾರೀ ಬದಲಾವಣೆ ಕಾಣತೊಡಗಿತು. ದಿನಾಲು ಮನೆಗೆ ಕುಡಿದು ಬರುವುದು, ನಾನೇನಾದರೂ ಕೇಳಿದರೆ ಕೋಪಿಸಿಕೊಳ್ಳುವುದು, ಹೊಡೆಯುವುದು ಶುರು ಮಾಡಿದ್ದರು. ಮಕ್ಕಳ ಮುಂದೆಯೇ ಮನೆಯೊಳಕ್ಕೆ ಪವಿತ್ರಾ ಕರೆದುಕೊಂಡು ಬಂದು ರೂಮಿನೊಳಕ್ಕೆ ಹೋಗಿ ಬಾಗಿಲು ಹಾಕಿಕೊಳ್ಳುವುದು, ರಾತ್ರಿ ಮನೆಗೇ ಬಾರದಿರುವುದು ಹೀಗೆ ಸಿಕ್ಕಾಪಟ್ಟೆ ಬದಲಾಗಿದ್ದರು. ಆಗ ನನಗೆ ಸ್ವಲ್ಪ ಸಂದೇಹ ಬಂದು ಅದೇ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಇನ್ನೊಬ್ಬ ವ್ಯಕ್ತಿಯ ಬಳಿ ಕೇಳಲಾಗಿ, ಆತ ಅವರಿಬ್ಬರ ಅನೈತಿಕ ಸಂಬಂಧದ ಬಗ್ಗೆ ಹೇಳಿದ್ದ.
ಡಾ ರಾಜ್‌ಕುಮಾರ್ 'ಯಾರಿವನು' ಶೂಟಿಂಗ್ ಬಳಿಕ ಮತ್ತೆಂದೂ ಊಟಿಗೆ ಕಾಲಿಡಲಿಲ್ಲ ಯಾಕೆ?
ಚಂದು ಹಾಗೂ ಪವಿತ್ರಾ ಪ್ರೀತಿಸಿತೊಡಗಿದ್ದಾರೆ, ಮುಂದೆ ಮದುವೆಯಾಗುವ ಪ್ಲಾನ್ ಕೂಡ ಮಾಡಿಕೊಂಡಿದ್ದಾರೆ ಎಂಬುದು ನನಗೆ ತಿಳಿಯುತ್ತಿದ್ದಂತೆ, ಅಲರ್ಟ್ ಆದ ನಾನು ನನ್ನದೇ ಆದ ರೀತಿಯಲ್ಲಿ ಚಂದುಗೆ ಹೇಳಿದ್ದೆ. 'ಮಕ್ಕಳಿರುವ ಸುಂದರ ಸಂಸಾರ ನಮ್ಮದು. ಸಮಾಜದಲ್ಲಿ ಗೌರವ ಕಾಪಾಡಿಕೊಂಡು ಬದುಕುತ್ತಿರುವ ನಮ್ಮ ಸಂಸಾರ ಈ ಮೂಲಕ ಬೀದಿಗೆ ಬರುವುದು ಬೇಡ. ಆಕೆಯ ಸಂಬಂಧ ಬಿಟ್ಟುಬಿಡು. ಆಕೆ ನಿನ್ನ ಜತೆ ಮಾತ್ರ ಸರಸ-ಸಲ್ಲಾಪ ಮಾಡುತ್ತಿಲ್ಲ, ನೀನು ಆಕೆಗೆ ಆರನೆಯವನು ಎಂಬ ಸತ್ಯವನ್ನು ಹೇಳಿದ್ದೆ.
ಮುಂಬರುವ ಮೋದಿ ಬಯೋಪಿಕ್‌ನಲ್ಲಿ 'ಕಟ್ಟಪ್ಪ' ಸತ್ಯರಾಜ್ ನಟನೆ, ಅಧಿಕೃತ ಘೋಷಣೆಯಷ್ಟೇ ಬಾಕಿ!
ಆದರೆ, ನಾನು ಹೇಳಿದ ಈ ಸತ್ಯವನ್ನಾಗಲೀ ಅಥವಾ ಆಕೆಯ ಸಂಬಂಧವನ್ನು ಬಿಟ್ಟುಬಿಡು ಎಂಬ ಮಾತನ್ನಾಗಲೀ ಚಂದು ಸೀರಿಯಸ್ಸಾಗಿ ತೆಗೆದುಕೊಳ್ಳಲೇ ಇಲ್ಲ. ಆತನಿಗೆ ನಾನು ಅಥವಾ ಮಕ್ಕಳಿಗಿಂತ ಪವಿತ್ರಾ ಜತೆಗಿನ ಪ್ರೇಮಸಲ್ಲಾಪವೇ ಮುಖ್ಯ ಎನಿಸಿಬಿಟ್ಟಿತ್ತು. ಆಕೆಯ ಮಕ್ಕಳಿಗೆ ತಾನೇ ಅಪ್ಪ ಎಂದು ಹೇಳಿ ಪವಿತ್ರಾ ಮಕ್ಕಳ ಸ್ಕೂಲಿಗೂ ಹೋಗಿ ಸಹಿ ಹಾಕಿ ಬಂದಿದ್ದಾರೆ ಎಂಬ ಸುದ್ದಿಯೂ ಇದೆ. ಅದೆಷ್ಟು ಸತ್ಯವೋ ಗೊತ್ತಿಲ್ಲ, ಹೇಳಬೇಕಾದವರು ಈಗ ನಮ್ಮ ಜೊತೆಗಿಲ್ಲ. ಆದರೆ, ಆಕೆಯ ಜತೆಯಲ್ಲೇ ಅಪಾರ್ಟ್‌ಮೆಂಟ್‌ನಲ್ಲಿ ವಾಸ ಮಾಡುವ ಮಟ್ಟಿಗೆ ಚಂದ್ರಕಾಂತ್ ಹತ್ತಿರವಾಗಿಬಿಟ್ಟಿದ್ದ.
ಅಯ್ಯೋ, ಚಂದ್ರಕಾಂತ್ ಜೀವ ಉಳಿಸಲು ಪತ್ನಿ ಶಿಲ್ಪಾಗೆ ಸಾಧ್ಯವಿತ್ತು; ಹೀಗಂತಾರೆ ಘಟನೆ ಬಲ್ಲವರು!
ಈಗ ಇಬ್ಬರೂ ನಮ್ಮನ್ನಗಲಿ ದೂರ ಹೋಗಿದ್ದಾರೆ. ನಾನು ಯಾರಲ್ಲಿ ಅದೆಷ್ಟು ಹೇಳಿಕೊಂಡರೂ ನಮ್ಮ ಮಕ್ಕಳಿಗೆ ಮತ್ತೆ ಅಪ್ಪ ಸಿಗಲಾರರು. ಪವಿತ್ರಾ ಎಂಟ್ರಿಯಿಂದ ನಮ್ಮ ಸಂಸಾರ ಹಾಳಾಗಿ ಸರ್ವನಾಶವಾಯ್ತು. ಆಕೆಯ ಮೋಹಕ್ಕೆ ಬಿದ್ದು ತನ್ನ ಅಮೂಲ್ಯ ಜೀವವನ್ನೂ, ಸುಂದರ ಸಂಸಾರವನ್ನೂ ತೊರೆದು ಮತ್ತೆ ಬಾರದ ಲೋಕಕ್ಕೆ ಹೋಗಿಬಿಟ್ಟ ನನ್ನ ಚಂದ್ರಕಾಂತ್. 2015ರಲ್ಲಿ ನಮ್ಮ ಎರಡೂ ಫ್ಯಾಮಿಲಿಗಳ ವಿರೋಧಗಳ ನಡುವೆಯೂ ನಾವಿಬ್ಬರು ಪ್ರೀತಿಸಿ ಮದುವೆಯಾಗಿ ಬದುಕು ಕಟ್ಟಿಕೊಂಡಿದ್ದೆವು. ಈಗ ನನ್ನ ಜೊತೆ ಚಂದ್ರಕಾಂತ್ ಇಲ್ಲ' ಎಂದು ಹೇಳಿ ಕಣ್ಣೀರಿಟ್ಟಿದ್ದಾರೆ ಚಂದ್ರಕಾಂತ್ ಮಡದಿ ಶಿಲ್ಪಾ ಪ್ರೇಮಾ.