
ಕಳೆದ ಮೂರೂವರೆ ವರ್ಷಗಳಿಂದ ಎಲ್ಲರ ಮನ ಗೆದ್ದ ಜೀ ಕನ್ನಡದ ಸತ್ಯ ಸೀರಿಯಲ್ ಕೊನೆಗೂ ಮುಕ್ತಾಯ ಕಂಡಿದೆ. ಇಬ್ಬರು ವಿಲ್ನಗಳಾದ ಸತ್ಯ ಅಕ್ಕ ದಿವ್ಯಾ ಹಾಗೂ ಸತ್ಯಳ ನಾದಿನಿ ಕೀರ್ತನಾ ಕ್ಲೈಮ್ಯಾಕ್ಸ್ನಲ್ಲಿ ಒಳ್ಳೆಯವಾಗಿದ್ದಾರೆ. ಕೊನೆ ಕ್ಷಣದವರೆಗೂ ಕೀರ್ತನಾ ತನ್ನ ನಿಜವಾದ ಬಣ್ಣವನ್ನು ತೋರಿಸುತ್ತಲೇ ಬಂದಿದ್ದಳು. ಅಂತಿಮ ಎಪಿಸೋಡ್ನಲ್ಲಿ ಅವರು ಒಳ್ಳೆಯವಳಾಗುವ ಮೂಲಕ ಸೀರಿಯಲ್ ಮುಕ್ತಾಯಗೊಳಿಸಲಾಗಿದೆ. ಕೆಲವು ಸೀರಿಯಲ್ಗಳನ್ನು ಗಡಿಬಿಡಿಯಲ್ಲಿ ಅಂತಿಮಗೊಳಿಸಲಾಗುತ್ತಿತ್ತು. ಆದರೆ ಸತ್ಯ ಸೀರಿಯಲ್ ಅನ್ನು ಸಮಾಧಾನಪೂರ್ವಕವಾಗಿ ಎಲ್ಲರಿಗೂ ನ್ಯಾಯ ಒದಗಿಸಿ ಸಂಪೂರ್ಣಗೊಳಿಸಿರುವ ನೆಮ್ಮದಿ ವೀಕ್ಷಕರಿಗೆ ಇದೆ. ಸತ್ಯಾಳ ಮಾವ, ಊರ್ಮಿಯ ಗಂಡ ಲಕ್ಷ್ಮಣ, ಆತನ ಎರಡನೆಯ ಪತ್ನಿ ಹಾಗೂ ರೀತುವಿನ ಸ್ನೇಹಿತ ಸೇರಿದಂತೆ ಕೆಲವು ಕಲಾವಿದರು ಕೊನೆಯ ಸಂಚಿಕೆಯಲ್ಲಿ ಮಿಸ್ ಆಗಿದ್ದಾರೆ. ಆದರೆ ವಿಶೇಷವೆಂದರೆ ಈ ಸೀರಿಯಲ್ನಲ್ಲಿ ಹೈಲೈಟ್ ಎನಿಸಿದರುವ ಕೀರ್ತನಾ ಪಾತ್ರಧಾರಿ ಬಿಟ್ಟರೆ ಬಹುತೇಕ ಎಲ್ಲರೂ ಮೊದಲಿನಿಂದಲೂ ಅವರೇ ಇದ್ದರು. ಮೇನ್ ಕ್ಯಾರೆಕ್ಟರ್ಗಳು ಅವರೇ ಇರುವುದೇ ಸಮಾಧಾನ ಎನ್ನುತ್ತಿದ್ದಾರೆ ವೀಕ್ಷಕರು. ಜೊತೆಗೆ ಎಲ್ಲರೂ ಒಳ್ಳೆಯವರಾಗಿ ಮಾಡಿ ಸೀರಿಯಲ್ ಮುಗಿಸಿರುವುದಕ್ಕೂ ಸಮಾಧಾನ ತಂದಿದೆ.
ಇದೀಗ ಸೀರಿಯಲ್ ಮುಗಿದ ಖುಷಿಗೆ ಇಬ್ಬರು ವಿಲನ್ಗಳಾಗಿರುವ ಕೀರ್ತನಾ ಮತ್ತು ದಿವ್ಯಾ ಭರ್ಜರಿ ರೀಲ್ಸ್ ಮಾಡಿದ್ದಾರೆ. ಇದಕ್ಕೆ ಗಿರಿಜಮ್ಮಾ ಸ್ಟೆಪ್ ಹಾಕುವ ಮೂಲಕ ನೆಟ್ಟಿಗರಿಂದ ಭೇಷ್ ಭೇಷ್ ಎನಿಸಿಕೊಂಡಿದ್ದಾರೆ. ದಿವ್ಯಾಳ ಪಾತ್ರವನ್ನು ವಿಭಿನ್ನ ಶೇಡ್ಗಳಲ್ಲಿ ತೋರಿಸುತ್ತಲೇ ಎಲ್ಲರ ಮನಸ್ಸನ್ನು ಗೆದ್ದವರು ಪ್ರಿಯಾಂಕಾ ಶಿವಣ್ಣ. ಇವರು ತೆಲುಗು ಸೀರಿಯಲ್ಗಳಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡಿಗರಿಗೆ ಪರಿಚಯವಾದದ್ದು ಅಗ್ನಿಸಾಕ್ಷಿಯ ವಿಲನ್ ಪ್ರಿಯಾಂಕಾ ಮೂಲಕ. ಮೊದಲು ಈ ಪಾತ್ರದಲ್ಲಿ ನಟಿಸುತ್ತಿದ್ದಾಕೆ ಅರ್ಧಕ್ಕೆ ಬಿಟ್ಟಾಗ ಆ ಅವಕಾಶ ಪ್ರಿಯಾಂಕಾ ಅವರಿಗೆ ಒದಗಿ ಬಂತು. ಈ ಸೀರಿಯಲ್ನಲ್ಲಿ ನೆಗೆಟಿವ್ ರೋಲ್ ಮೂಲಕ ಎಲ್ಲರ ಮನೆ ಮಾತಾದರು ಪ್ರಿಯಾಂಕಾ. ಇದೀಗ ಸತ್ಯ ಸೀರಿಯಲ್ನಲ್ಲಿಯೂ ನೆಗೆಟಿವ್ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ ಪ್ರಿಯಾಂಕಾ ಅವರು ಅಗ್ನಿಸಾಕ್ಷಿಯಲ್ಲಿ ವಿಲನ್ ಮಾಡುತ್ತಿದ್ದ ಸಮಯದಲ್ಲಿ ಇವರ ವಿರುದ್ಧ ಸಿಕ್ಕಾಪಟ್ಟೆ ಜನ ಬೈಯುತ್ತಿದ್ದುದನ್ನು ನೆನಪಿಸಿಕೊಂಡಿದ್ದರು.
ತಿನ್ಬೇಕು ಅಂದ್ರೆ ಒಂದು ದಿನ ಬ್ರೇಕ್ ಮಾಡ್ಬೇಕು... ಏನದು? ಸೀತಾಳ ಪ್ರಶ್ನೆಗೆ ನಿಮ್ಗೆ ಗೊತ್ತಾ ಉತ್ತರ?
ಇನ್ನು ಗಿರಿಜಮ್ಮಾ ಆಗಿರೋ ಗಿರಿಜಾ ಲೋಕೇಶ್ ಕುರಿತು ಎಲ್ಲರಿಗೂ ತಿಳಿದದ್ದೇ. ಗಿರಿಜಾ ಲೋಕೇಶ್ ಕನ್ನಡ ಚಿತ್ರರಂಗದ ಕಲಾತ್ಮಕ ನಟಿ ಮತ್ತು ರಂಗಭೂಮಿ ಕಲಾವಿದೆ. ನಟ ಲೋಕೇಶ್ ರವರ ಧ ಪತ್ನಿ. ಕನ್ನಡ ಚಿತ್ರರಂಗದಲ್ಲಿ ಟಾಕಿಂಗ್ ಸ್ಟಾರ್ ಎಂದೇ ಗುರುತಿಸಿಕೊಂಡಿರುವ ಸೃಜನ್ ಲೋಕೇಶ್ ಇವರ ಮಗ. ಪುತ್ರಿ ಪೂಜಾ ಲೋಕೇಶ್ ಕೂಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಚಿತ್ರರಂಗ ಮಾತ್ರವಲ್ಲದೇ ಕಿರುತೆರೆಯಲ್ಲೂ ಸಕ್ರಿಯವಾಗಿ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. `ಕ್ರೇಜಿ ಕರ್ನಲ್',`ಮುತ್ತಿನ ತೋರಣ' ಸೇರಿದಂತೆ ಅನೇಕ ಸೀರಿಯಲ್ಗಳಲ್ಲಿ ಭಾಗವಹಿಸಿದ್ದಾರೆ. `ಭುಜಂಗಯ್ಯನ ದಶಾವತಾರಗಳು' ಮತ್ತು `ಸಿದ್ಲಿಂಗು' ಚಿತ್ರಗಳಿಗೆ ಗಿರಿಜಾ ಲೋಕೇಶ್ ಅವರಿಗೆ ಕರ್ನಾಟಕ ರಾಜ್ಯದ ಅತ್ತ್ಯುತ್ತಮ ಪೋಷಕ ನಟಿ ಪ್ರಶಸ್ತಿ ತಂದುಕೊಟ್ಟಿವೆ.
ಭರತನಾಟ್ಯದಲ್ಲಿ ಪರಿಣಿತಿ ಪಡೆದ ಗಿರಿಜಾ ಲೋಕೇಶ್ ಅವರು, ಹದಿನಾಲ್ಕನೇ ವಯಸ್ಸಿನಲ್ಲಿ ರಂಗಭೂಮಿ ಪ್ರವೇಶಿಸಿದರು. ಇವರು ನಟಿಸಿದ ಮೊದಲ ನಾಟಕ `ಸಾಮ್ರಾಟ್ ಅಶೋಕ್ ಕುಮಾರ್'. ಈ ಸಮಯದಲ್ಲೇ ನಟ ಲೋಕೇಶ್ ಅವರ ಪರಿಚಯವಾಯಿತು. ಹಲವು ಭಾಷೆಗಳಲ್ಲಿ ಸಾವಿರಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇವರು ನಟಿಸಿದ ಮೊದಲ ನಾಟಕ `ಮಾಡಿ ಮಡಿದವರು' ಎಂಬ ಸಾಮಾಜಿಕ ನಾಟಕ. ಸಾಕಷ್ಟು ನಾಟಕಗಳಲ್ಲಿ ಜೊತೆಯಾಗಿ ನಟಿಸುತ್ತಿದ್ದ ಲೋಕೇಶರ ಜೊತೆ ಪ್ರೇಮಾಂಕುರವಾಗಿ ನಂತರ ಈ ಜೋಡಿ ಮದುವೆಯಾಯಿತು. ಮದುವೆಯಾದ ರಾತ್ರಿಯೇ `ಕಾಕನಕೋಟೆ' ನಾಟಕದಲ್ಲಿ ನಟಿಸಬೇಕಿತ್ತು. ಆ ದಿನ ನಾಟಕದಲ್ಲಿ ತಂದೆ ಮಗಳಾಗಿ ನಟಿಸಿದ್ದು ಈ ಜೋಡಿಯ ಕಲಾಪರತೆಗೆ ಹಿಡಿದ ಸಾಕ್ಷಿ.
ಸತ್ಯ ಸೀರಿಯಲ್ ಮುಗಿದ ಬೆನ್ನಲ್ಲೇ ರಿಯಲ್ ಪತಿ ಜೊತೆ ಗೌತಮಿ ಜಾಲಿ ಮೂಡ್- ವಿಡಿಯೋ ವೈರಲ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.