ಮಾಡೆಲ್​ ಫ್ಲರ್ಟ್​ ಮಾಡ್ತಿದ್ದಂತೆ ಕಂಟ್ರೋಲ್​ ಕಳಕೊಂಡ ಸಿದ್ಧಾರ್ಥ್​? ಪತ್ನಿ ಕಿಯಾರಾಗೆ ಸಾರಿ ಕೇಳಿದ ರೂಪದರ್ಶಿ!

By Suchethana D  |  First Published Aug 11, 2024, 11:00 AM IST

ನಟ ಸಿದ್ಧಾರ್ಥ್ ಮಲ್ಹೋತ್ರಾ  ಜೊತೆ ಫ್ಲರ್ಟ್​ ಮಾಡಿ ಟ್ರೋಲ್​ಗೆ ಒಳಗಾದ ಮಾಡೆಲ್​ ಅಲಿಸಿಯಾ ಕೌರ್, ಸಿದ್ಧಾರ್ಥ್​ ಪತ್ನಿ ಕಿಯಾರಾ ಅಡ್ವಾನಿಗೆ ಕ್ಷಮೆ ಕೋರಿದ್ದಾರೆ. ಆದರೆ ನಟ? 
 


ಬಾಲಿವುಡ್​ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಮಾಡೆಲ್​ ​ ಅಲಿಸಿಯಾ ಕೌರ್ ರ‍್ಯಾಂಪ್ ಮೇಲೆ ರೊಮಾನ್ಸ್​ ಜೊತೆ ಫ್ಲರ್ಟ್​ ಮಾಡಿರುವ ವಿಡಿಯೋ ಒಂದು ಸೋಷಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಸೃಷ್ಟಿಸಿತ್ತು. ರೂಪದರ್ಶಿಯಾಗಿರುವ ಅಲಿಸಿಯಾ ಕೌರ್ ಅವರು ಸಿದ್ಧಾರ್ಥ್​ ಅವರನ್ನು ದಿಟ್ಟಿಸಿ ಕಣ್ಣಲ್ಲಿ ಕಣ್ಣು ಇಟ್ಟು ನೋಡಿದರು, ಮೈಗೆ ಅಂಟಿಕೊಂಡೇ ಡಾನ್ಸ್​ ಮಾಡಿದ್ರು, ನಟನ ಮೈಕೈಯೆಲ್ಲಾ ಮುಟ್ಟಿದರು. ಇದನ್ನು ಮೈಮೇಲಿನ ಕಂಟ್ರೋಲ್​ ಕಳೆದುಕೊಂಡಂತೆ ಸಿದ್ಧಾರ್ಥ್​ ಆಸ್ವಾದಿಸಿದರು ಕೂಡ! ಆದರೆ ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್​ ಸೃಷ್ಟಿಯಾಗಿತ್ತು. ಕೆಲವರು,  ಮಾಡೆಲ್​ ಮತ್ತು ಸಿದ್ಧಾರ್ಥ್​ ಅವರ ಕೆಮೆಸ್ಟ್ರಿಯನ್ನು ಮೆಚ್ಚಿಕೊಂಡಿದ್ದರೂ, ಹಲವರು  ಕಿಯಾರಾ ಎಲ್ಲಿದ್ಯಮ್ಮಾ ಎಂದು ಪ್ರಶ್ನಿಸುತ್ತಿದ್ದರು.

ಅಷ್ಟಕ್ಕೂ ಬಣ್ಣದ ಲೋಕದಲ್ಲಿ ತೆರೆಯ ಮೇಲೆ ಯಾರದ್ದೋ ಪತ್ನಿ, ಗರ್ಲ್​ಫ್ರೆಂಡ್​  ಜೊತೆ ಇನ್ನಾರದ್ದೋ ಪತಿ, ಬಾಯ್​ಫ್ರೆಂಡ್​ ಈ ರೀತಿ ಫ್ಲರ್ಟ್​ ಮಾಡುವುದು ಹೊಸ ವಿಷಯವೇನಲ್ಲ. ನಟರ ಜೊತೆ ನಟಿಯರು ಸಂಪೂರ್ಣ ಬೆತ್ತಲಾಗಿಯೂ ನಟಿಸುತ್ತಿರುವುದೂ ಮಾಮೂಲೇ. ಆದರೂ ಇಲ್ಲಿ ಈಕೆ ವಿದೇಶಿ ಮಾಡೆಲ್​ ಆಗಿರೋ ಕಾರಣ ಹಾಗೂ ಈ ಪರಿಯ ಫ್ಲರ್ಟ್​ ನೋಡಿ ನೆಟ್ಟಿಗರು ಸಿದ್ಧಾರ್ಥ್​ ಪತ್ನಿ ಕಿಯಾರಾ ಅಡ್ವಾನಿ ಬಗ್ಗೆ ಪ್ರಶ್ನಿಸಿದ್ದರು. ಕಳೆದ ವರ್ಷವಷ್ಟೇ ಇವರಿಬ್ಬರ ಮದುವೆಯಾಗಿದ್ದು, ಇದನ್ನು ನೋಡ್ತಾ ಇದ್ಯಾ ಎಂದು ನಟಿಯನ್ನು ಹಲವರು ಪ್ರಶ್ನಿಸಿದ್ದರು.  ವೇದಿಕೆಯ ಮೇಲೆ ಮಾಡೆಲ್​ ಮತ್ತು ಸಿದ್ಧಾರ್ಥ್​ ಪ್ರೀತಿಯ ಬೆಂಕಿ ಹಚ್ಚಿದ್ದಾರೆ ಎಂದು ಕಮೆಂಟ್​ಗಳ ಸುರಿಮಳೆ ಕೂಡ ಇನ್ನೊಂದೆಡೆ ಆಗಿತ್ತು.

Tap to resize

Latest Videos

undefined

ಹೆಜ್ಜೆಹೆಜ್ಜೆಗೂ ಬಾಡಿಶೇಮಿಂಗ್​ ಅನುಭವಿಸ್ತಿರೋ ಬ್ರಹ್ಮಗಂಟು ನಾಯಕಿ ದೀಪಾ ನಿಜಜೀವನ ಗೊತ್ತಾ?
 
ಆದರೆ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಟ್ರೋಲ್​ ಕಂಡ ಮಾಡೆಲ್​ ಅಲಿಸಿಯಾ ಕೌರ್, ಕಿಯಾರಾ ಕ್ಷಮೆ ಕೋರಿದ್ದಾರೆ. I Am sorry Kiara ಎಂದು ಹೇಳಿದ್ದಾರೆ. ಆದರೆ ಮಾಡೆಲ್​ ಬಗ್ಗೆ ಸಿಟ್ಟಾಗದ ನೆಟ್ಟಿಗರು, ಆಕೆಯೇನೋ ಮಾಡೋದೆಲ್ಲಾ ಮಾಡಿದ ಮೇಲಾದ್ರೂ ಸಾರಿ ಕೇಳಿದ್ಲು,  ಆದ್ರೆ ಸಿದ್ಧಾರ್ಥ್​ ಕಂಟ್ರೋಲ್​ ಕಳೆದುಕೊಂಡಿದ್ದ. ಅವನು ಒಮ್ಮೆಯಾದ್ರೂ ಪತ್ನಿ ಕಿಯಾರಾಗೆ ಸಾರಿ ಕೇಳಿದ್ನಾ ಎಂದು ಪ್ರಶ್ನಿಸುತ್ತಿದ್ದಾರೆ. ಸಿದ್ಧಾರ್ಥ್​ ಮಾಡೆಲ್​ ಜೊತೆ ಸಾಕಷ್ಟು ಎಂಜಾಯ್​ ಮಾಡಿದ್ರು, ಆದ್ರೆ ಪತ್ನಿಗೆ ಮಾತ್ರ ಸಾರಿ ಕೇಳಬೇಕು ಎನ್ನಿಸದೆ ಇರುವುದು ವಿಚಿತ್ರವಾದದ್ದು ಎಂದಿದ್ದರೆ, ಮತ್ತೆ  ಕೆಲವರು ತಾರೆಯರಿಗೆ ಫ್ಲರ್ಟ್​, ರೊಮಾನ್ಸ್​ ಎಲ್ಲವೂ ಮಾಮೂಲು. ಅವರ್ಯಾಕೆ ಸಾರಿ ಕೇಳಬೇಕು ಎಂದು ಪ್ರಶ್ನಿಸಿದ್ದಾರೆ.  

 
ಅಂದಹಾಗೆ  ಸಿದ್ಧಾರ್ಥ್ ಕೊನೆಯದಾಗಿ ದಿಶಾ ಪಟಾನಿ ಮತ್ತು ರಾಶಿ ಖನ್ನಾ ಅವರೊಂದಿಗೆ ಯೋಧಾದಲ್ಲಿ ಚಿತ್ರದಲ್ಲಿ ಕಾಣಿಸಿಕೊಂಡರು. ಚಿತ್ರವು ಹೇಳಿಕೊಳ್ಳುವಷ್ಟು ಹೆಸರು ಗಳಿಸಲಿಲ್ಲ.  ಭಾರತದಲ್ಲಿ ರೂ 35 ಕೋಟಿ ಮತ್ತು ಜಾಗತಿಕವಾಗಿ ರೂ 11 ಕೋಟಿಗಿಂತ ಸ್ವಲ್ಪ ಹೆಚ್ಚು ಗಳಿಸಿದೆ. ಅಮಿತಾಭ್ ಬಚ್ಚನ್ ಮತ್ತು ಸಂಜಯ್ ದತ್ ಅಭಿನಯದ ಅಭಿನಯ್ ಡಿಯೋ ಅವರ ನಿರ್ದೇಶನದ ಆಂಖೇನ್ 2 ಸೇರಿದಂತೆ ಇನ್ನು ಕೆಲವು ಪ್ರಾಜೆಕ್ಟ್​ಗಳು ಸದ್ಯ ಸಿದ್ಧಾರ್ಥ್​ ಜೊತೆಗಿದೆ.  ಅವರು ಜಾಹ್ನವಿ  ಕಪೂರ್ ಜೊತೆಯಲ್ಲಿ ಸ್ಪೈಡರ್ ಚಿತ್ರದಲ್ಲಿಯೂ  ಕಾಣಿಸಿಕೊಳ್ಳಲಿದ್ದಾರೆ. ಇವುಗಳ ಹೊರತಾಗಿ, ಅವರು ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರೊಂದಿಗೆ ಹೆಸರಿಸದ ಯೋಜನೆ ಮತ್ತು ಶಶಾಂಕ್ ಖೈತಾನ್ ಅವರೊಂದಿಗೆ ಚಲನಚಿತ್ರವನ್ನೂ ಹೊಂದಿದ್ದಾರೆ.

ದುಬೈ ಶೇಖ್​ಗೆ ಮಾರಲು ಹೊಂಚುಹಾಕಿದ್ರಂತೆ ತಾಪ್ಸಿ ಪನ್ನು ಪತಿ! ಆ ದಿನಗಳ ಕುರಿತು ನಟಿ ಹೇಳಿದ್ದೇನು?
 

click me!