
ಬಿಗ್ ಬಾಸ್ ಮನೆಯಲ್ಲಿ ಜಗಳ, ಕಿತ್ತಾಟ, ಲವ್, ಅಸಭ್ಯ ವರ್ತನೆಗಳು, ಒಂದಿಷ್ಟ ಅಶ್ಲೀಲತೆ ಎಲ್ಲವೂ ಕಾಮನ್. ಇದು ಎಲ್ಲಾ ಭಾಷೆಗಳ ಬಿಗ್‌ಬಾಸ್‌ನಲ್ಲಿಯೂ ನೋಡಬಹುದು. ಅದೇ ರೀತಿ, ಹಿಂದಿಯ ಬಿಗ್‌ಬಾಸ್ ಸೀಸನ್ 4ರಲ್ಲಿ ಸ್ಪರ್ಧಿಗಳಾಗಿದ್ದ ಕಿರುತೆರೆ ನಟಿ ಸಾರಾ ಖಾನ್ ಮತ್ತು ಅಲಿ ಮರ್ಚೆಂಟ್ ಬಿಗ್‌ಬಾಸ್ ಮನೆಯಲ್ಲಿಯೇ ಪ್ರೀತಿ ಮಾಡಿ, ಅಲ್ಲಿಯೇ ಮದುವೆಯನ್ನೂ ಮಾಡಿಕೊಂಡಿದ್ದರು. ಬಿಗ್‌ಬಾಸ್ ಮನೆಯಲ್ಲಿನ ಇವರ ಪ್ರೀತಿ ಕಂಡು ಎಂಥ ಜೋಡಿ ಆಹಾ ಎಂದವರೇ ಬಹುತೇಕ ಮಂದಿ. ಇದ್ದರೆ ಈ ರೀತಿಯ ಜೋಡಿ ಇರಬೇಕು ಎಂದರು. ಈ ಮದುವೆಯಾದ ಮೇಲೆ ಇಬ್ಬರೂ ಸಕತ್ ಫೇಮಸ್ ಆದರು. ಇದಾದ ಬಳಿಕ ಬಿಗ್‌ಬಾಸ್ ಮನೆಯಿಂದ ಹೊರಕ್ಕೆ ಬರುತ್ತಿದ್ದಂತೆಯೇ ಒಟ್ಟಿಗೇ ಬಾಳಲು ಸಾಧ್ಯವೇ ಇಲ್ಲ ಎಂದುಕೊಂಡು ಈ ಜೋಡಿ ಬೇರೆಯಾಯಿತು!
2011 ರಲ್ಲಿ ಸಾರಾ ಖಾನ್ ಮತ್ತು ಅಲಿ ಮರ್ಚೆಂಟ್ ಪರಸ್ಪರ ವಿಚ್ಛೇದನ ಪಡೆದರು. ಐದು ವರ್ಷ ಮದ್ವೆಯಾಗದೇ ಉಳಿದ ಅಲಿ 2016ರಲ್ಲಿ ಅನಮ್ ಎನ್ನುವವರನ್ನು ಮದುವೆಯಾದರು. ಆದರೆ ಅದೂ ಅವರಿಗೆ ಸರಿ ಹೊಂದಲಿಲ್ಲ. ಕೆಲವೇ ತಿಂಗಳಿನಲ್ಲಿ ದಂಪತಿ ಬೇರ್ಪಟ್ಟು ಹೊಸ ಹುಡುಗಿಯ ತಲಾಷ್‌ನಲ್ಲಿ ತೊಡಗಿದರು ಅಲಿ ಮರ್ಚೆಂಟ್. ಇದೀಗ ನಟ ಹೊಸ ಸಂಗಾತಿಯನ್ನು ಕಂಡುಕೊಂಡಂತೆ ತೋರುತ್ತಿದೆ. ಇದರ ಬಗ್ಗೆ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ಶೇರ್ ಮಾಡಿಕೊಂಡಿದ್ದಾರೆ.
ಓಟಿಟಿಯಲ್ಲಿ ಎಗ್ಗಿಲ್ಲದ ಸೆಕ್ಸ್, ಬೋಲ್ಡ್ ದೃಶ್ಯಗಳು- ಜನರೂ ರಿಪೋರ್ಟ್ ಮಾಡಲ್ಲ: ನಟಿ ಸುಹಾಸಿನಿ ಹೇಳಿದ್ದೇನು?
ಅಲಿ ಮರ್ಚೆಂಟ್ ತನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ತಾವು ತಮ್ಮ ಗೆಳತಿ ಆಂಡ್ಲೀಬ್ ಜೈದಿ ಅವರೊಂದಿಗೆ ಎಂಗೇಜ್ ಆಗಿರುವಂಥ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಇದರ ಜೊತೆ ಇಬ್ಬರೂ ಜೊತೆಗಿರುವ ವಿಡಿಯೋ ಕೂಡ ಇದೆ.ವಿಡಿಯೋದಲ್ಲಿ ಅಲಿ ಮತ್ತು ಆಂಡ್ಲೀಬ್‌ರನ್ನು ನೋಡಬಹುದು. ಅಲಿ ಅವರು, ಮೊಣಕಾಲುಗಳ ಮೇಲೆ ಕುಳಿತು ಪ್ರೇಯಸಿಗೆ ಉಂಗುರ ಹಾಕಿದ್ದಾರೆ. ಹಿಂಭಾಗದಲ್ಲಿ ಬುರ್ಜ್ ಖಲೀಫಾದ ಸನ್ನಿವೇಶ ಕ್ರಿಯೇಟ್ ಮಾಡಲಾಗಿದೆ, ಜೊತೆಗೆ ಕಾರಂಜಿಗಳು ನೃತ್ಯ ಮಾಡುವುದನ್ನು ನೋಡಬಹುದು.
ಅಲಿ ಮತ್ತು ಆಂಡ್ಲೀಬ್ ಕೂಡ ಒಬ್ಬರನ್ನೊಬ್ಬರು ತಬ್ಬಿಕೊಂಡರು ಮತ್ತು ಅವರು ಚುಂಬಿಸುವುದನ್ನು ನೋಡಬಹುದು. ಅಷ್ಟಕ್ಕೂ ಈ ಜೋಡಿ ಒಂದು ವರ್ಷದಿಂದ ಸಂಬಂಧದಲ್ಲಿದೆ. ಆಂಡ್ಲೀಬ್ ಹೈದರಾಬಾದ್ ಮೂಲದ ಮಾಡೆಲ್ ಆಗಿದ್ದು, ಅವರು ಸಾಮಾಜಿಕ ಮಾಧ್ಯಮದ ಮೂಲಕ ಪರಸ್ಪರ ಸಂಪರ್ಕ ಹೊಂದಿದ್ದಾರೆ. ಅವರು ಮೊದಲ ಬಾರಿಗೆ ಹೈದರಾಬಾದ್‌ನಲ್ಲಿ ನಡೆದ ಫ್ಯಾಷನ್ ಶೋನಲ್ಲಿ ಭೇಟಿಯಾದರು. ಬಾಂಬೆ ಟೈಮ್ಸ್‌ಗೆ ನೀಡಿದ ಹಿಂದಿನ ಸಂದರ್ಶನದಲ್ಲಿ, ಅಲಿ ತಮ್ಮ ಸಂಬಂಧವು ಏನಾದರೂ ಗಣನೀಯವಾಗಿ ಸಾಗುತ್ತಿದೆ ಎಂದು ಬಹಿರಂಗಪಡಿಸಿದ್ದರು. ಮತ್ತೊಂದೆಡೆ, ಅಲಿ ಮರ್ಚೆಂಟ್ ಅವರ ಮೊದಲ ಪತ್ನಿ, ಸಾರಾ ಖಾನ್ ಕೂಡ ವೃತ್ತಿಯಲ್ಲಿ ಪೈಲಟ್ ಆಗಿರುವ ಶಾಂತನು ರಾಜೆ ಅವರೊಂದಿಗೆ ಸಂಬಂಧವನ್ನು ಹೊಂದಿದ್ದಾರೆ. Pinkvilla ಗೆ ನೀಡಿದ ಸಂದರ್ಶನದಲ್ಲಿ, ಸಾರಾ ಅವರು ಆರಂಭದಲ್ಲಿ, ಶಾಂತನು ಮನರಂಜನಾ ಹಿನ್ನೆಲೆಯಿಂದ ಬಂದವರಲ್ಲದ ಕಾರಣ ತಮ್ಮ ಸಂಬಂಧವನ್ನು ಮರೆಮಾಡಲು ನಿರ್ಧರಿಸಿದ್ದರು ಎಂದು ಹಂಚಿಕೊಂಡಿದ್ದಾರೆ.
ಜನರಿಗೆ ಮುಖ ತೋರಿಸದ ಕೆಲ್ಸ ಯಾಕೆ ಮಾಡ್ಕೊಂಡ್ರಿ ಅಂತ ಶಿಲ್ಪಾ ಶೆಟ್ಟಿಗೆ ಕೇಳ್ತಿದ್ದಾರೆ ಫ್ಯಾನ್ಸ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.