
ಕಲರ್ಸ್ ಕನ್ನಡದಲ್ಲಿ ಇಂದು ಸಂಜೆ 4ಕ್ಕೆ 'ನವಶಕ್ತಿ ನವರಾತ್ರಿ' ಕಾರ್ಯಕ್ರಮ ಪ್ರಸಾರವಾಗಲಿದೆ. ನವರಾತ್ರಿ ಸ್ಪೆಷಲ್ ಕಾರ್ಯಕ್ರಮ ಇದಾಗಿದ್ದು, ದೇವಿಯ ವೈಭವ, ಹಿರಿಮೆ-ಗರಿಮೆಗಳನ್ನು ಸಾರುವ ಈ ಕಾರ್ಯಕ್ರಮ ವೀಕ್ಷಕರಿಗೆ ಇಷ್ಟವಾಗಬಹುದು ಎನ್ನಲಾಗಿದೆ. ಈ ನವರಾತ್ರಿ ಸಮಯದಲ್ಲಿ, 9 ದಿನಗಳನ್ನು ದೇವಿಯ ಪೂಜೆಗಾಗಿಯೇ ಮೀಸಲಾಗಿ ಇಡಲಾಗಿದೆ. 9 ದಿನಗಳು ದೇವಿಯ 9 ಅವತಾರಗಳನ್ನು ಭಕ್ತಿಯಿಂದ ಪೂಜಿಸಿ ದೇವಿಯ ಕೃಪೆಗೆ ಪಾತ್ರರಾಗಲು ಸನಾತನಿಗಳು ಇಷ್ಟಪಡುತ್ತಾರೆ.
ನವರಾತ್ರಿ ಹೆಸರೇ ಸೂಚಿಸುವಂತೆ 9 ರಾತ್ರಿಗಳು ದೇವಿಯ ಆರಾಧನೆಗೆ ಮೀಸಲಾಗಿದೆ. ದುರ್ಗೆ, ಚಂಡಿ, ಚಾಮುಂಡಿ, ಹೀಗೆ ಹಲವು ಹೆಸರುಗಳನ್ನು ದೇವಿಗೆ ಕರೆಯುವುದು ವಾಡಿಕೆ. ಆದರೆ, ನವರಾತ್ರಿಗಳಲ್ಲಿ ಕೂಷ್ಮಾಂಡ ದೇವಿ ಸೇರಿದಂತೆ ದುರ್ಗೆಯ 9 ಹೆಸರುಗಳಲ್ಲಿ ದೇವಿಯನ್ನು ಅಲಂಕರಿಸಿ ಆರಾಧಿಸುತ್ತದೆ ಭಕ್ತವೃಂದ. ಇದೀಗ, ನವರಾತ್ರಿ ಸ್ಪೆಷಲ್ ಕಾರ್ಯಕ್ರಮವನ್ನು ಕಲರ್ಸ್ ಕನ್ನಡ ಚಾನೆಲ್ 'ನವಶಕ್ತಿ ನವರಾತ್ರಿ' ಹೆಸರಿನ ಕಾರ್ಯಕ್ರಮದ ಮೂಲಕ ಆಚರಿಸಲು ಮುಂದಾಗಿದೆ. ಈ ಕಾರ್ಯಕ್ರಮದ ಮೂಲಕ ದುಷ್ಟರಿಗೆ ಒಳ್ಳೆಯದಾಗಲು ಸಾಧ್ಯವಿಲ್ಲ. ಸ್ವಲ್ಪ ದಿನಗಳು ಅಥವಾ ಕಾಲ ಅವರು ಮೈಮರೆತು ಮೆರಯಬಹುದು ಅಷ್ಟೇ ಎಂಬ ಸಂದೇಶವನ್ನು ಈ ಕಾರ್ಯಕ್ರಮದ ಮೂಲಕ ಹೇಳಹೊರಟಿದೆ ಈ ಸಂಚಿಕೆ ಎನ್ನಬಹುದು.
400 ಸಿನಿಮಾದಲ್ಲಿ ನಟನೆ, ಒಂದೇ ಒಂದು ಮೂವಿ 100 ಕೋಟಿ ಕ್ಲಬ್ ಸೇರಿಲ್ಲ, ಆದ್ರೂ ಜನ ಸೂಪರ್ಸ್ಟಾರ್ ಅಂತಾರೆ!
'ಅನಾಥ ಕಂದನಿಗೆ ಜಗನ್ಮಾತೆಯೇ ತಾಯಿ; ದುಷ್ಟರ ಪಾಲಿಗೆ ಅವಳೇ ಚಂಡಿ - ಚಾಮುಂಡಿ!' ಎಂದು ಪ್ರೊಮೋದಲ್ಲಿ ಹೇಳಲಾಗಿದ್ದು, ಟಿವಿ ವೀಕ್ಷಕರು ಕುತೂಹಲದಿಂದ ಈ ಸಂಚಿಕೆಗಾಗಿ ಕಾಯುವಂತಾಗಿದೆ. "ಈ ಕಂದನನ್ನು ನಿನ್ನ ಮಡಿಲಿಗೆ ಹಾಕುತ್ತಿದ್ದೇನೆ, ದಯವಿಟ್ಟು ಸ್ವೀಕರಿಸಿ ಕಾಪಾಡು ತಾಯೆ.. " ಎಂಬ ತಾಯಿಯೊಬ್ಬಳ ಮನವಿಯೊಂದಿಗೆ ಶುರುವಾಗುವ ಪ್ರೊಮೋದಲ್ಲಿ, ಮುಂದೆ ದುಷ್ಟಶಕ್ತಿ ಎನಿಸಿರುವ ಹೆಣ್ಣೊಂದು 'ನೀನು ಬದುಕಿದ್ದರೆ ನಾನು ಸಾಯಬೇಕಾಗುತ್ತದೆ' ಎಂದು ಮಗುವಿನ ಮೇಲೆ ತ್ರಿಶೂಲ ಪ್ರಯೋಗಕ್ಕೆ ಮುಂದಾಗುವ ದೃಶ್ಯವಿದೆ.
UT 69: ಜೈಲಲ್ಲಿ ರಾಜ್ಕುಂದ್ರಾ- ಪೊಲೀಸ್ರು ನಗ್ನಗೊಳಿಸಿದ್ರು, ಕೈದಿಗಳು ಛೀಮಾರಿ ಹಾಕಿದ್ರು! ವಿಡಿಯೋ ರಿಲೀಸ್
ಮುಗುಳ್ನಗುತ್ತಿರುವ ಮುಗ್ಧ ಮಗುವನ್ನು ರಕ್ಷಿಸಲು ತಾಯಿ ದುರ್ಗೆ ಚಂಡಿ-ಚಾಮುಂಡಿಯಾಗಿ ಅವತಾರ ಎತ್ತುತ್ತಾಳೆ. ಆ ದುಷ್ಟ ಶಕ್ತಿಯಿಂದ ಮಗುವನ್ನು ಕಾಪಾಡುತ್ತಾಳೆ. ಮುಂದೆ ಅದೇ ಮಗು ಸಮಾಜಕ್ಕೆ ಕಂಟಕವಾಗಿರುವ ಎಲ್ಲ ದುಷ್ಟ ಶಕ್ತಿಗಳನ್ನು ಸದೆ ಬಡಿಯಲಿದೆ' ಎಂದ ಸಂದೇಶ ಈ ಸಂಚಿಕೆಯಲ್ಲಿ ಇದೆ ಎನ್ನಬಹುದು. ಒಟ್ಟಿನಲ್ಲಿ, 'ನವಶಕ್ತಿ ನವರಾತ್ರಿ' ಕಾರ್ಯಕ್ರಮದಲ್ಲಿ ನವರಾತ್ರಿ ಸ್ಲೋಗನ್ ಎನ್ನಬಹುದಾದ 'ದುಷ್ಟರ ಸಂಹಾರ, ಶಿಷ್ಟರ ರಕ್ಷಣೆ' ಎಂಬುದನ್ನು ಈ ಕಾರ್ಯಕ್ರಮದ ಮೂಲಕ ನಿರೂಪಿಸಲಾಗುವುದು ಎನ್ನಬಹುದು. ಸಂಜೆ 4.00 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಈ ಕಾರ್ಯಕ್ರಮ ಪ್ರಸಾರ ಕಾಣಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.