ಶಾಂಭವಿ ಮಾತು ಕೇಳಿ ಅಲ್ಲಿ ಬಳಿಯಲ್ಲೇ ಇದ್ದ ಪಲ್ಲವಿ ಅಕ್ಷರಶಃ ನಡುಗಿ ಹೋಗಿದ್ದಾಳೆ. ಈ ಸಿಟಿ ಹಕ್ಕಿ ಇನ್ಮುಂದೆ ತನಗೂ ತಾಯಿಗೂ ಅದೆಷ್ಟು ಕಿರುಕುಳ ಕೊಡುತ್ತಾಳೋ ಏನೋ ಎಂದು ಭಾವಿಸಿ ಹೆದರಿಕೊಂಡಿದ್ದಾಳೆ. ಪಲ್ಲವಿ ಅಮ್ಮನಂತೂ ಅಳು ತಡೆಯಲಾಗದೇ, ಮುಂದೆ ಶಾಂಬವಿ ಮಾತನ್ನು ಕೇಳಲಾಗದೇ ಕಾಲ್ ಕಟ್ ಮಾಡಿದ್ದಾಳೆ.
ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶನಿವಾರ ಮಧ್ಯಾಹ್ನ 2.00 ಗಂಟೆಗೆ ಗೃಹಪ್ರವೇಶ ಪ್ರಸಾರ ಕಾಣುತ್ತಿದೆ. ಈ ಸೀರಿಯಲ್ ಸುಮಾರು 6 ತಿಂಗಳಿಂದ ಪ್ರಸಾರವಾಗುತ್ತಿದ್ದು, ಮಧ್ಯಾನ್ಹ ಊಟ ಮುಗಿಸಿ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳುವ ಗೃಹಿಣಿಯರಿಗೆ ವರದಾನ ಆಗಿದೆ ಎನ್ನಬಹುದು. ಆದರೆ, ಕೆಲಸಕ್ಕೆ ಹೋಗುವ ಗೃಹಿಣಿಯರು ಮತ್ತು ಟಿವಿ ಸೀರಿಯಲ್ ಪ್ರಿಯರು ಈ ಧಾರಾವಾಹಿಯನ್ನು ಮಿಸ್ ಮಾಡಿಕೊಳ್ಳಬೇಕಾಗಿರುವುದು ಗ್ಯಾರಂಟಿ. ಏಕೆಂದರೆ, ಸೀರಿಯಲ್ ಪ್ರಸಾರ ಆಗುವುದು ಮಧ್ಯಾಹ್ನ 2.00 ಗಂಟೆಗೆ ಅಲ್ಲವೇ?
ಗೃಹಪ್ರವೇಶ ಸೀರಿಯಲ್ ಕಥೆಯಲ್ಲಿ ಸದ್ಯ ಏನಾಗುತ್ತಿದೆ? ಪ್ರೋಮೋ ನೋಡಿದರೆ ಭಾರೀ ಕುತೂಹಲ ಕೆರಳಿಸುವಂತಿದೆ. ಶಾಂಭವಿಗೆ ಕೋಪ ನೆತ್ತಿಗೇರಿದ್ದು, ಅವಳು ಪಲ್ಲವಿ ತಾಯಿಯನ್ನು ಕಾಡತೊಡಗಿದ್ದಾಳೆ. ಪಲ್ಲವಿಯನ್ನು ತನ್ನ ಮುಂದೆ ನಿಲ್ಲಿಸಿಕೊಂಡಿರುವ ಶಾಂಭವಿ, ಪಲ್ಲವಿ ತಾಯಿಗೆ ಕಾಲ್ ಮಾಡಿ ಹಿಗ್ಗಾಮುಗ್ಗಾ ಬೈದಿದ್ದಾಳೆ. "ಹಳ್ಳಿಯವ್ರು ನೀವೇ ಇಷ್ಟೊಂದು ನಸುಗುನ್ನಿ ತರ ಆಡಿದ್ರೆ ನಾವ್ ಸಿಟಿಯವ್ರು ಇನ್ನೆಷ್ಟು ಹುಶಾರಾಗಿ ಪ್ಲಾನ್ ಮಾಡ್ತೀವಿ ಗೊತ್ತಾ?" ಎಂದು ಟಾಂಗ್ ಕೊಟ್ಟಿದ್ದಾಳೆ.
"ನೀನೇ ತಾನೇ ಶ್ರೀಮತಿ ಸೀತಾರಾಮ್.. ನನಗೆ ನಿಮ್ಮ ಬಗ್ಗೆ ಎಲ್ಲಾ ಗೊತ್ತು.. ನೀವು ಸೀತಾರಾಮ್ ಅವರ ಮೊದಲನೇ ಹೆಂಡತಿ.. ಸಾಲ್ದು ಅಂತ ನನ್ನ ಬಾವನ್ನ ಬುಟ್ಟಿಗೆ ಹಾಕ್ಕೊಂಡಿದೀರ.. ನಾನು ನಿಮ್ಮನ್ನ ನೋಡಿದಿನಲ್ಲಾ, ನಿಮ್ಮ ಮುಸುಡಿ ಚೆನ್ನಾಗಿಲ್ಲ, ಆದ್ರೂ ಅದ್ಹೇಗೆ ನಮ್ ಭಾವನ್ನ ಬೀಳಿಸ್ಕೊಂಡ್ರಿ? ಅದಿರ್ಲಿ, ನಿಮ್ಮ ಮಗಳನ್ನ ಮೆಲ್ಲಗೆ ನನ್ನ ಹತ್ರ ಕಳ್ಸಿ, ಅಲ್ಲಿ ನೀವು ಆಟ ಆಡ್ತೀರಾ? ಅದೆಲ್ಲ ನನ್ ಹತ್ರ ನಡೆಯಲ್ಲ" ಎಂದು ಪಲ್ಲವಿ ತಾಯಿಗೆ ಗುಡುಗಿದ್ದಾರೆ ಶಾಂಭವಿ.
ನವಶಕ್ತಿ ನವರಾತ್ರಿ: ಅನಾಥ ಕಂದನಿಗೆ ಜಗನ್ಮಾತೆಯೇ ತಾಯಿ, ದುಷ್ಟರ ಪಾಲಿಗೆ ಅವಳೇ ಚಂಡಿ - ಚಾಮುಂಡಿ!!
ಶಾಂಭವಿ ಮಾತು ಕೇಳಿ ಅಲ್ಲಿ ಬಳಿಯಲ್ಲೇ ಇದ್ದ ಪಲ್ಲವಿ ಅಕ್ಷರಶಃ ನಡುಗಿ ಹೋಗಿದ್ದಾಳೆ. ಈ ಸಿಟಿ ಹಕ್ಕಿ ಇನ್ಮುಂದೆ ತನಗೂ ತಾಯಿಗೂ ಅದೆಷ್ಟು ಕಿರುಕುಳ ಕೊಡುತ್ತಾಳೋ ಏನೋ ಎಂದು ಭಾವಿಸಿ ಹೆದರಿಕೊಂಡಿದ್ದಾಳೆ. ಪಲ್ಲವಿ ಅಮ್ಮನಂತೂ ಅಳು ತಡೆಯಲಾಗದೇ, ಮುಂದೆ ಶಾಂಬವಿ ಮಾತನ್ನು ಕೇಳಲಾಗದೇ ಕಾಲ್ ಕಟ್ ಮಾಡಿದ್ದಾಳೆ. ಪಲ್ಲವಿ ಹಾಗೂ ತಾಯಿ ಹೆದರಿಕೊಂಡಿದ್ದಾರೆ ಎಂಬುದನ್ನು ತಿಳಿದು ಶಾಂಭವಿಗೆ ಸಖತ್ ಸಂತೋಷವಾಗಿದೆ. ಇನ್ನು ತಾನು 'ಆಡಿದ್ದೇ ಆಟ, ನೋಡಿದ್ದೇ ನೋಟ' ಎಂಬ ಭಾವನೆ ತಲೆಯಲ್ಲಿ ಹೊಕ್ಕಿ ತಾನೇ ತನ್ನ ತಲೆಗೆ ಕಿರೀಟ ಇಟ್ಟುಕೊಂಡಿದ್ದಾಳೆ.
ಯುವ ದಸರಾಗೆ ರಂಗು ತಂದ 'ಘೋಸ್ಟ್': ಹಾಡಿ-ಕುಣಿದು ರಂಜಿಸಿದ ಶಿವಣ್ಣ
ಸೀರಿಯಲ್ ವೀಕ್ಷಕರಿಂದ ಸೋಷಿಯಲ್ ಮೀಡಿಯಾಗಳಲ್ಲಿ ಈ ಸೀರಿಯಲ್ ಬಗ್ಗೆ ಬೇರೆ ಸೀರಿಯಲ್‌ಗಳ ರೀತಿಯಲ್ಲೇ ವಿಭಿನ್ನ ಕಾಮೆಂಟ್‌ಗಳು ಹರಿದು ಬರುತ್ತಿವೆ. ಸಹಜವಾಗಿ 'ಲೋಕೋ ಭಿನ್ನ ರುಚಿಃ' ಎಂಬಂತೆ ಇಲ್ಲೊಂದು ಕಾಮೆಂಟ್ ಗಮನಸೆಳೆಯುತ್ತಿದೆ. ಹಾಳಾದ ಧಾರಾವಾಹಿಗಳು ನೆಮ್ಮದಿ ಇಲ್ಲ, ಇಂಥವೆಲ್ಲ ನೋಡಿ ಬಿಪಿ ಶುಗರ್ ಬರುತ್ತೆ.. ' ಎಂಬುದು ಅಲ್ಲಿರುವ ಒಂದು ಕಾಮೆಂಟ್. 'ಅವರವರ ಭಾವ ಅವರವರ ಭಕುತಿ' ಎನ್ನಬೇಕಷ್ಟೇ! ಮುಂದೇನು ಕಾದಿದೆ ಎಂಬುದನ್ನು ತಿಳಿಯಲು ಇಂದಿನ 2.00 ಗಂಟೆ ಸಂಚಿಕೆ ನೋಡಬೇಕು.