ಬಿಗ್​ಬಾಸ್​ಗೆ ಸಂಜನಾ ಬುರ್ಲಿ ವೈಲ್ಡ್​ ಕಾರ್ಡ್​ ಎಂಟ್ರಿ ಕೊಡ್ತಾರಾ? ಸೀರಿಯಲ್​ ಬಿಟ್ಟಿದ್ದೇಕೆ? ನಟಿ ಏನಂದ್ರು ಕೇಳಿ..

By Suchethana D  |  First Published Nov 3, 2024, 5:25 PM IST

ಬಿಗ್​ಬಾಸ್​ಗೆ ಪುಟ್ಟಕ್ಕನ ಮಗಳು ಸ್ನೇಹಾ ಉರ್ಫ್​ ಸಂಜನಾ ಬುರ್ಲಿ ವೈಲ್ಡ್​ ಕಾರ್ಡ್​ ಎಂಟ್ರಿ ಕೊಡ್ತಾರಾ? ಸೀರಿಯಲ್​ ಬಿಟ್ಟಿದ್ದೇಕೆ? ನಟಿ ಏನಂದ್ರು ಕೇಳಿ..
 


ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ಸ್ನೇಹಾಳ ಪಾತ್ರ ಮುಗಿದಿದೆ. ಅಪಘಾತ ಮಾಡಿಸಿ ಸ್ನೇಹಾಳನ್ನು ಸಾಯಿಸಲಾಗಿದೆ. ಪುಟ್ಟಕ್ಕ ಒಂಟಿಯಾದ ತನ್ನ ಮಕ್ಕಳನ್ನು ಹೇಗೆ ಬೆಳೆಸಿದಳು, ಆ ಪೈಕಿ ಸ್ನೇಹಾ ಹೇಗೆ ಎಲ್ಲ ಸಮಸ್ಯೆಗಳನ್ನೂ ಹಿಮ್ಮೆಟ್ಟಿ ಜಿಲ್ಲಾಧಿಕಾರಿಯಾದಳು ಎಂದು ತೋರಿಸಿ ಇಂಥ ಹೆಣ್ಣುಮಕ್ಕಳಿಗೆ ಮಾದರಿಯಾಗುವ ಹೊತ್ತಿನಲ್ಲಿಯೇ, ಕೊನೆಯಲ್ಲಿ ಸ್ವಲ್ಪ ತರಾತುರಿ ಮಾಡಿ ಏಕಾಏಕಿ ಸ್ನೇಹಾಳನ್ನು ಸಾಯಿಸಿದ್ದು ಏಕೆ ಎನ್ನುವ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಲೇ ಇದೆ. ಇಡೀ ಸೀರಿಯಲ್​ನ ಉದ್ದೇಶವನ್ನೇ ನಿರ್ದೇಶಕರು ಬುಡಮೇಲು ಮಾಡಿದರು ಎನ್ನುವ ಮಾತೂ ಸಾಕಷ್ಟು ಕೇಳಿ ಬರುತ್ತಿದೆ. ಆದರೆ, ಇದಾಗಲೇ ಸಂಜನಾ ಈ ಬಗ್ಗೆ ಹೇಳಿಕೊಂಡಿದ್ದರು.  ಅನಿವಾರ್ಯವಾಗಿ ನಾನು ಸೀರಿಯಲ್​ ಸೆಟ್​ನಿಂದ ಹೊರಕ್ಕೆ ಹೋಗಬೇಕಾಯಿತು. ಇದು ನನ್ನ ವೈಯಕ್ತಿಕ ಕಾರಣ ಎನ್ನುವ ಮೂಲಕ ಉದ್ದೇಶಪೂರ್ವಕವಾಗಿ ಸ್ನೇಹಾಳನ್ನು ಸಾಯಿಸುವ ಸೀನ್​ ಮಾಡಬೇಕಾಯಿತು, ಕಥೆಯನ್ನು ಬದಲಿಸಬೇಕಾಯಿತು ಎಂದೆಲ್ಲಾ ಹೇಳಿದ್ದರು.

ಇದೀಗ ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸಂಜನಾ ಅವರು, ಈ ಸೀರಿಯಲ್​ ಕುರಿತು ಮಾತನಾಡಿದ್ದಾರೆ. ಸೀರಿಯಲ್​ ಬಿಡಲು ನನಗೂ ಮನಸ್ಸು ಇರಲಿಲ್ಲ. ತುಂಬಾ ನೋವಿನಿಂದಲೇ ಹೊರಕ್ಕೆ ಬಂದಿದ್ದೇನೆ. ಮೂರು ತಿಂಗಳ ಹಿಂದೆಯೇ ನೋಟಿಸ್​ ಪಿರಿಯಡ್​ ಕೊಟ್ಟಿದ್ದೆ. ಈ ಮೂಲಕ ಸೀರಿಯಲ್​ಗಳಿಗೆ ಬೈ ಹೇಳುತ್ತಿದ್ದೇನೆ. ಆದರೆ ನಟಿಯಾಗಿ ಮುಂದುವರೆಯುತ್ತಿದ್ದೇನೆ ಎಂದಿರುವ ಸಂಜನಾ, ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಳ್ಳುವ ತವಕದಲ್ಲಿ ಇದ್ದಾರೆ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಇದಾಗಲೇ ಕೆಲವು ಪ್ರಾಜೆಕ್ಟ್​ಗಳನ್ನು ಮಾಡಿದ್ದೇನೆ. ಅದಾವುದೂ ಇನ್ನೂ ಬಿಡುಗಡೆಯಾಗಿಲ್ಲ. ನಟಿಯಾಗಿ ಇರುತ್ತೇನೆ. ನನಗೆ ಇಷ್ಟದ ಪಾತ್ರಗಳು ಬಂದರೆ ಒಪ್ಪಿಕೊಳ್ಳುತ್ತೇನೆ. ನನಗೆ ಚಾಲೆಂಜಿಂಗ್​ ಪಾತ್ರಗಳು ಎಂದರೆ ಇಷ್ಟ. ಹುಚ್ಚಿಯಂಥ ಪಾತ್ರಗಳನ್ನು ಮಾಡಬೇಕು ಎಂದುಕೊಂಡಿದ್ದೇನೆ. ನಾಯಕಿಯೇ ಆಗಬೇಕೆಂದೇನೂ ಇಲ್ಲ. ನನಗೆ ಇಷ್ಟ ಆಗುವ ಪಾತ್ರಗಳು ಆಗಬೇಕಷ್ಟೇ ಎಂದಿದ್ದಾರೆ ಸಂಜನಾ.
ಸೀರಿಯಲ್​ನಲ್ಲಿ ಜೀವ ಕಳಕೊಂಡು ಪಾತ್ರ ಮುಗಿಸಿದ ಪುಟ್ಟಕ್ಕನ ಮಗಳು ಸ್ನೇಹಾ ಸೀಕ್ರೇಟ್​ ಹೇಳೇಬಿಟ್ರು!

Tap to resize

Latest Videos

undefined

ಇದೇ ವೇಳೆ, ಬಿಗ್​ಬಾಸ್​ಗೆ ಹೋಗುವ ಬಗ್ಗೆ ಮಾತನಾಡಿರುವ ಸಂಜನಾ ಬುರ್ಲಿ, ನಾನು ಪುಟ್ಟಕ್ಕನ ಮಕ್ಕಳು ಸೀರಿಯಲ್​ ಬಿಟ್ಟಾಗ ಸೋಷಿಯಲ್​ ಮೀಡಿಯಾಗಳಲ್ಲಿ ನಾನು ಬಿಗ್​ಬಾಸ್​ಗೆ ಹೋಗಲು ಸೀರಿಯಲ್​ ಬಿಟ್ಟೆ ಎಂದೇ ಪೋಸ್ಟ್​ಗಳನ್ನು ಹಾಕುತ್ತಿದ್ದರು. ನಿರ್ದೇಶಕರು ಹೊಸ ಪಾತ್ರಕ್ಕೆ ಹುಡುಗಿಯನ್ನು ಸರ್ಚ್​ ಮಾಡುವ ಪೋಸ್ಟ್​ ಹಾಕಿದಾಗಲೇ ಎಲ್ಲರೂ ನಾನು ಬಿಗ್​ಬಾಸ್​ಗೆ ಹೋಗ್ತಾ  ಇದ್ದೇನೆ ಎಂದುಕೊಂಡಿದ್ದರು. ಅದನ್ನೆಲ್ಲಾ ನಾನು ನೋಡುತ್ತಿದ್ದೆ. ಆದರೆ ಆ ಕ್ಷಣ ರಿಯಾಕ್ಟ್​ ಮಾಡಲು ಹೋಗಲಿಲ್ಲ. ಹೇಗಿದ್ದರೂ ಬಿಗ್​ಬಾಸ್​ ಶುರುವಾದ ಮೇಲೆ ಸತ್ಯ ಗೊತ್ತಾಗತ್ತಲ್ಲಾ ಎಂದು. ಈಗ ಹೇಗೆ ಮಾತಾಡ್ತಾ ಇದ್ದಾರೆ ಎಂದ್ರೆ ವೈಲ್ಡ್​ ಕಾರ್ಡ್​ ಎಂಟ್ರಿ ಕೊಡ್ತೇನೆ ಅನ್ನುತ್ತಿದ್ದಾರೆ. ನಿಜಕ್ಕೂ ಈ ನೆಟ್ಟಿಗರ ಕ್ರಿಯೇಟಿವಿಟಿ ಮೆಚ್ಚಬೇಕು. ತಮ್ಮದೇ ಆದ ರೀತಿಯಲ್ಲಿ ಹೇಗೆಲ್ಲಾ ಕಲ್ಪನೆ ಮಾಡಿಕೊಳ್ಳುತ್ತಾರೆ ಎಂದು ನಕ್ಕಿರುವ ಸಂಜನಾ ಅವರು, ನಾನು ಬಿಗ್​ಬಾಸ್ ಅಷ್ಟೇ ಅಲ್ಲದೇ, ಯಾವುದೇ ರಿಯಾಲಿಟಿ ಷೋಗಳಿಗೂ ಹೋಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಈ ಮೂಲಕ ಅವರ ಫ್ಯಾನ್ಸ್​ಗೆ ಉತ್ತರ ಕೊಟ್ಟಿದ್ದಾರೆ. 

ಅದೇ ವೇಳೆ, ಸಾವಿನ ದೃಶ್ಯ ಮಾಡುವಾಗ ಭಯವಿತ್ತು. ನಂತರ ಉಮಾಶ್ರೀ ಮೇಡಂ ಅವರಲ್ಲಿ ಕೇಳಿದೆ. ಇವೆಲ್ಲಾ ಮಾಮೂಲು. ನಾನೂ ಮಾಡಿದ್ದೇನೆ. ಡೋಂಟ್​ ವರಿ ಎಂದರು. ಅವರಂಥ ನಟಿಯಿಂದ ಸ್ಫೂರ್ತಿ ಸಿಗುವುದು ಅಪರೂಪ. ಎಲ್ಲರನ್ನೂ ಬಿಟ್ಟು ಹೋಗುವಾಗ ಮನಸ್ಸು ತುಂಬಾ ನೋವಾಯಿತು. ಈ ಮೂರು ವರ್ಷಗಳ ಜರ್ನಿಯಲ್ಲಿ, ಇಡೀ ಸೀರಿಯಲ್​ ತಂಡ ಕುಟುಂಬದಂತೆ ಇದ್ವಿ. ಆದ್ದರಿಂದ ಮನಸ್ಸು ಭಾರವಾಯಿತು.  ಕೊನೆಯ ದಿನ ಎಲ್ಲರೂ ಸಿಕ್ಕಾಪಟ್ಟೆ ಅತ್ತರು. ನಾವು ಮೂವರು ಸಹೋದರಿಯರು ಅಂದ್ರೆ ಸಹನಾ ಮತ್ತು ಸುಮಾ ಜೊತೆ ಫೋಟೋ ತೆಗೆದುಕೊಳ್ಳುವಾಗ ಅಕ್ಷರಶಃ ಅತ್ತುಬಿಟ್ವಿ. ಹೊರಗಡೆ ಸಿಗುತ್ತೇವೆ ನಿಜ. ಅದರೆ ಸೀರಿಯಲ್​ ಸೆಟ್​​ ಮಿಸ್​ ಮಾಡ್ಕೋತಾ ಇದ್ದೇನೆ ಎಂದಿದ್ದಾರೆ ಸಂಜನಾ.

ಸ್ನೇಹಾಳ ಸಾಯಿಸೋ ಉದ್ದೇಶವೇ ಇರ್ಲಿಲ್ಲ- ನಟಿಗಾಗಿ ಬದಲಾಯ್ತಾ ಕಥೆ? ಅವಾರ್ಡ್​ನಲ್ಲಿ ಸಂಜನಾಗೆ ಮೋಸ ಎಂದ ಫ್ಯಾನ್ಸ್​!
 

click me!