ಗಗನಾಗೆ ಕೈಕೊಟ್ಟು ಯಶು ಜೊತೆ ಪ್ಯಾನ್ ಇಂಡಿಯಾ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡ್ಕೊಂಡ ಗಿಲ್ಲಿ ನಟ: ಅಂತದ್ದೇನಾಯ್ತು?

By Govindaraj S  |  First Published Nov 3, 2024, 3:18 PM IST

ಡಿಕೆಡಿ ವೇದಿಕೆಯಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಪ್ರಸಾರ ನಡೆದಿದ್ದು, ಮೊದಲಿಗೆ ಗಿಲ್ಲಿ ನಟ ಹಾಗೂ ಯಶಸ್ವಿನಿ ಊಟಿಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಮಳವಳ್ಳಿ ಪಕ್ಕ ಕರಿಯಪ್ಪನ ಕಟ್ಟೆ ಬಳಿ ಹೂ ಹಾಕಿಯೂ ಫೋಟೋ ತೆಗೆಸಿಕೊಂಡಿದ್ದಾರೆ. 


ಅನುಶ್ರೀ ಅಕ್ಕ... ನಿಮಗೊಂದು ಸಿಹಿ ಸುದ್ದಿ ಹೇಳ್ತೇನೆ. ಯಶಸ್ವಿನಿ ಜೊತೆ ನಂದು ಪ್ರೀ ವೆಡ್ಡಿಂಗ್ ಫೋಟೋಶೂಟ್ ಆಗಿದೆ. ಕೊನೆಗೂ ಯಶು ಒಪ್ಕೊಂಡ್ ಬಿಟ್ಲು ಅಂತ ಗಿಲ್ಲಿ ನಟ ಹೇಳಿದ್ದಾರೆ. ಆಗ ರಕ್ಷಿತಾ ಪ್ರೀ ವೆಡ್ಡಿಂಗ್ ಫೋಟೋಶೂಟ್ ಯಾವಾಗ ಆಯ್ತೋ ಅಂದಿದ್ದಕ್ಕೆ, ಅಕ್ಕ.. ಇದು ಕರ್ನಾಟಕದಲ್ಲಿ ಆಗಿಲ್ಲ. ಪ್ಯಾನ್ ಇಂಡಿಯಾ ಪ್ರೀ ವೆಡ್ಡಿಂಗ್ ಫೋಟೋಶೂಟ್.. ನೋಡ್ತೀರಾ... ಅಂತ ಡಿಕೆಡಿ ವೇದಿಕೆಯಲ್ಲಿ ತೋರಿಸಿದ್ದಾರೆ. ಹೌದು! ಈ ತಮಾಷೆಯು ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ವೇದಿಕೆಯಲ್ಲಿ ನಡೆದಿದೆ. 

ಡಿಕೆಡಿ ವೇದಿಕೆಯಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಪ್ರಸಾರ ನಡೆದಿದ್ದು, ಮೊದಲಿಗೆ ಗಿಲ್ಲಿ ನಟ ಹಾಗೂ ಯಶಸ್ವಿನಿ ಜೊತೆ ಊಟಿಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಮಳವಳ್ಳಿ ಪಕ್ಕ ಕರಿಯಪ್ಪನ ಕಟ್ಟೆ ಬಳಿ ಹೂ ಹಾಕಿಯೂ ಫೋಟೋ ತೆಗೆಸಿಕೊಂಡಿದ್ದಾರೆ. ಹಾಗೂ ಕೇರಳ ಸ್ಟೈಲ್ ಅಂತೇಳಿ ಅನಂತರ ಜಡ್ಜಸ್ ಮಾತಿಗೆ ಒಪ್ಪಿ ಹೈದರಾಬಾದ್ ಸ್ಟೈಲ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದೇನೆ ಅಂತ ತೆಲುಗಿನಲ್ಲೇ ಗಿಲ್ಲಿ ನಟ ಹೇಳಿದ್ದಾರೆ. ನಾರ್ತ್ ಇಂಡಿಯನ್ ಸ್ಟೈಲ್‌ನ್ ಫೋಟೋ ತೋರಿಸಿದ ಗಿಲ್ಲಿಗೆ, ರಕ್ಷಿತಾ ಅವರು ಇದು ಕೊಡಗು ಕಣೋ ಅಂದಿದ್ದಕ್ಕೆ ನಾರ್ತ್ ಇಂಡಿಯನ್ ಕೊಡಗು ಸ್ಟೈಲ್‌ ಫೋಟೋಶೂಟ್ ಕಣಕ್ಕ ಅಂತ ಗಿಲ್ಲಿ ನಟ ಹೇಳಿದಾಗ ಎಲ್ಲರೂ ನಕ್ಕಿದ್ದಾರೆ.

Tap to resize

Latest Videos

70 ಪರ್ಸೆಂಟ್ ಯಶಸ್ವಿನಿ, 30% ಗಗನಾಳನ್ನು ಲವ್ ಮಾಡ್ತೀನಿ ಎಂದ ಗಿಲ್ಲಿ ನಟ: ಆದರೆ ರಕ್ಷಿತಾ ಹೇಳಿದ್ದೇ ಬೇರೆ!

ಕ್ರಿಶ್ಚಿಯನ್ ಸ್ಟೈಲ್‌ ಫೋಟೋ ತೋರಿಸಿದ ಗಿಲ್ಲಿಗೆ, ಇದು ಗೋವಾದಲ್ಲ ತೆಗೆಸಿದ್ದು ಅಂದಿದಕ್ಕೆ ಗಿಲ್ಲಿ, ಇಲ್ಲ ಕಣಕ್ಕ... ಮರಿಯಪ್ಪನ ಪಾಳ್ಯದ ಛತ್ರದಲ್ಲಿ ಅಂತ ತೊದಲಿಸಿ ಕೊನೆಗೆ ರಕ್ಷಿತಾ ಹೇಳಿದ ಮಾತಿಗೆ ಚರ್ಚ್ ಅಂತ ಹೇಳ್ತಾನೆ. ಆಗ ಅನುಶ್ರೀ ಇದು ನಾನು ನಂಬಲ್ಲ. ಹಾಗಾಗಿ ನೀನು ಯಶು ಜೊತೆ ಇದೇ ತರಹ ಪೋಸ್ ಕೊಡು ಅಂದಾಗ ಗಿಲ್ಲಿ ಯಶು ಜೊತೆ ಫೋಟೋಗೆ ಪೋಸ್ ಕೊಡ್ತಾರೆ. ಗಿಲ್ಲಿ.. ನೀನು ಯಶುನ ಕಿಡ್ನಾಪ್ ಮಾಡ್ತೀದ್ಯಾ ಅನ್ನೋ ಫಿಲಿಂಗ್ ಇದೆ ಅಂತ ರಕ್ಷಿತಾ ಹೇಳಿದಾಗ, ರಿಹರ್ಸಲ್‌ನಲ್ಲಿ ನಾವು ಡ್ಯಾನ್ಸ್ ಮಾಡಬೇಕಾದರೆ, ಕಣ್ಣು ಮಿಟಕಿಸದಾಗೆ ಗಿಲ್ಲಿ ನಟ ನೋಡಿ ಎಕ್ಸ್‌ಪ್ರೆಷನ್ ಹೇಳಿಕೊಡ್ತಾನೆ. ಅಲ್ಲದೇ ಹಿಂಗ್ ಮಾಡಬೇಕು ಯಶು, ಹಿಂಗ್ ಮಾಡಬೇಕು ಅಂತ ಗಿಲ್ಲಿ ಹೇಳ್ತಾನೆ ಅಂತ ಯಶಸ್ವಿನಿ ರಕ್ಷಿತಾಗೆ ವಿವರಿಸುತ್ತಾರೆ. 

ಆಗ ಗಿಲ್ಲಿ... ರಕ್ಷಿತಾ ಅಕ್ಕ ನೀವು ಅಂದುಕೊಂಡಿರಬಹುದು.. ನಾನು ಇವೆಲ್ಲಾ ಯಶು ಮೇಲಿನ ಪ್ರೀತಿ ಇಂದನೇ ಹೇಳಿಕೊಟ್ಟಿದ್ದು. ಅಕ್ಕ ನಿಮ್ ಮನ್ಸಲ್ಲಿ ಇರೋ ಪ್ರಶ್ನೆ ನಂಗೆ ಗೊತ್ತು ಅಕ್ಕ. ಅವಾಗ ಗಗನ ಅಂದ, ಇವಾಗ ಯಶು ಅಂತಾನೆ. ಆಗ ರಕ್ಷಿತಾ ನಿನ್ ಮನ್ಸಲ್ಲಿ ಇರೋದು ಸರಿಯಾಗಿ ಹೇಳು ಗಿಲ್ಲಿ ಅಂದಾಗ, ಅಕ್ಕ ಫಸ್ಟ್ ಲವ್‌ಗಿಂತ ಸೆಕೆಂಡ್ ಲವ್ ಬೆಟರ್ ಯಾಕೆ ಗೊತ್ತಾ.. ಫಸ್ಟ್ ಲವ್ ಪ್ರೀತಿ ಹೇಗೆ ಮಾಡೋದು ಅಂತ ಹೇಳಿಕೊಡುತ್ತೆ ಅಂತಾರೆ. ಆಗ ರಕ್ಷಿತಾ ಮೇಡಂ ನಿನ್ ಫಸ್ಟ್ ಲವ್ ಗಗನ ಅಲ್ವೇನೋ ಅಂತಾರೆ. ಆಗ ಗಿಲ್ಲಿ ಅಕ್ಕ ಅದು ಡಿಕೆಡಿನಲ್ಲಿ ಅಂತಾನೆ. ಫಸ್ಟ್ ಲವ್ ಪ್ರೀತಿ ಹೇಗೆ ಮಾಡೋದು ಅಂತ ಹೇಳಿಕೊಡುತ್ತೆ. 

ಆದರೆ ಸೆಕೆಂಡ್ ಲವ್, ಆ ಪ್ರೀತಿನಾ ಹೇಗೆ ಉಳಿಸಿಕೊಳ್ಳಬೇಕು ಅಂತ ಕಲಿಸುತ್ತೆ. ಅದಕ್ಕೋಸ್ಕರ ನಾನು ಸೆಕೆಂಡ್ ಲವ್‌ಗೆ ಆದ್ಯತೆ ಕೊಟ್ಟಿದ್ದೀನಿ ರಕ್ಷಿತಾ ಅಕ್ಕ ಅಂತ ಹೇಳ್ತಾನೆ. ಇನ್ನು ಯಂಗಲ್ಲ ಚೆಟ ಮನಸಿಲಾಯೋ ಅಂತ ಕೇರಳ ಸ್ಟೈಲ್‌ನ ಫೋಟೋವನ್ನು ಗಿಲ್ಲಿ ನಟ ತೋರಿಸಿದ್ದಾರೆ. ಜೊತೆಗೆ ಮಲಯಾಳಂ ಸ್ಟೈಲ್‌ನಲ್ಲಿ ಯಶುಗೆ ಗಿಲ್ಲಿ ನಟ ಪ್ರಪೋಸ್ ಮಾಡಿದ್ದಾರೆ. ಆಗ ಅನುಶ್ರೀ ಅವರು ಗಿಲ್ಲಿ.. ನೀನು ಗಗನಗೆ ಯಾವ ಭಾಷೆಯಲ್ಲಿ ಪ್ರಪೋಸ್ ಮಾಡ್ತಿಯಾ ಅಂದಾಗ... ಗಗನ ವೂ ಆರ್ ಯೂ ಅಂತೇಳಿ, ಯಶುಗೆ ಕಾಲೆಳಿದ್ದಾರೆ. ಜೊತೆಗೆ ಗಗನಾಗೆ ಪ್ರೀತಿಯ ಬಗ್ಗೆ ಕಾಮಿಡಿಯಾಗಿ ಉಪದೇಶಗಳನ್ನು ಗಿಲ್ಲಿ ಕೊಟ್ಟಿದ್ದಾನೆ. 

ಡ್ರೆಸ್ ಮಾಡ್ಕೊಳ್ಳಕ್ಕೆ ಹುಡುಗಿಯರಿಗಿಂತ ತರುಣ್ ಜಾಸ್ತಿ ಟೈಮ್ ತಗೋತಾರೆ, ಅವರಿಗೆ ಜಾಸ್ತಿ ನಾಚಿಕೆ: ಸೋನಾಲ್

ನೂರರಲ್ಲಿ 70% ಯಶಸ್ವಿನಿ ಲವ್ ಮಾಡ್ತೀನಿ, 30% ಜಿಎಸ್‌ಟಿ ಅಂತಾ ಹೇಳಿ ಕೊನೆಗೆ  30% ಗಗನಾಗೆ ಕೊಡ್ತೀನಿ ಅಂತ ಗಿಲ್ಲಿ ಹೇಳಿದಾಗ, ರಕ್ಷಿತಾ.. ನೀನು 70... 30 ಪರ್ಸೆಂಟ್ ಲವ್ ಅಂತಿಯಾ. ಆದರೆ ಅವರಿಬ್ಬರು ಎರಡೆರೆಡು ಪರ್ಸೆಂಟ್ ಲವ್ ಆದ್ರೂ ಮಾಡ್ತಿಲ್ವಲ್ಲೋ ಅಂತಾರೆ. ಏನ್ ಮಾಡೋದು ಅಕ್ಕ..  ಒಬ್ಬರು ಲೈಫ್‌ನಲ್ಲಿ ಪ್ರೀತಿ ಸೀಗೋ ರಾಮ ಆಗೋನಾ ಅಂದುಕೊಂಡೆ, ಇನ್ನೊಬ್ಬರ ಲೈಫ್‌ನಲ್ಲಿ ಪ್ರೀತಿನೆ ಸಿಗದೇ ಇರೋ ತರಹ ಕೃಷ್ಣ ಆಗಿ ಉಳಿದುಕೊಂಡು ಬಿಟ್ಟೆ. ಒಟ್ಟಿನಲ್ಲಿ ಮಧ್ಯದಲ್ಲಿ ಇದ್ದೀನಿ ನಾನು ಎನ್ ಮಾಡ್ಲಿ ನೀವೆ ಹೇಳಿ ಅಕ್ಕ ಅಂತ ಗಿಲ್ಲಿ, ರಕ್ಷಿತಾ ಅವರಿಗೆ ಪ್ರಶ್ನೆ ಮಾಡಿದ್ದಾನೆ. ಇನ್ನು ಗಿಲ್ಲಿ ನಟ, ಯಶಸ್ವಿನಿ ಬಳಿ ನೀವಿಬ್ಬರು 'ಗಿಲ್ಲಿ ನಟ ಲವರ್ಸ್ ಫ್ಯಾನ್ಸ್ ಪೇಜ್' ಅಂತ ಗ್ರೂಪ್ ಮಾಡ್ಕೊಳ್ಳಿ ಅಂದಾಗ, ಅನುಶ್ರೀ ಆ ಗ್ರೂಪ್‌ನಲ್ಲಿ ಭಾವನರನ್ನು ಆಡ್ ಮಾಡ್ಕೋಳೊ ಅಂತಾರೆ. ಆ ಗ್ರೂಪ್‌ಗೆ ಭಾವನನೇ ಆಡ್ಮಿನ್ ಅಂತ ಗಿಲ್ಲಿ ಹೇಳ್ತಾನೆ.
 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!