ಕೈಯಲ್ಲಿರೋದು ತೊಂಡೆಕಾಯಿ ಎಂದು ನಟಿಗೆ ಹಿಂಟ್​ ಕೊಡಲು ಇದರ ಹೋಲಿಕೆ ಮಾಡೋದಾ? ನಕ್ಕು ಸುಸ್ತಾದ ವೀಕ್ಷಕರು!

By Suchethana D  |  First Published Nov 3, 2024, 1:04 PM IST

ಕೈಯಲ್ಲಿರೋದು ತೊಂಡೆಕಾಯಿ ಎಂದು ಪತ್ನಿಗೆ ಹಿಂಟ್​ ಕೊಡಲು ನಟಿ ಲಕ್ಷ್ಮಿ ಅವರ ಪತಿ ಹೋಲಿಕೆ ಮಾಡಿದ್ದು ಯಾವುದಕ್ಕೆ?  ನಕ್ಕು ನಕ್ಕು ಸುಸ್ತಾದ ವೀಕ್ಷಕರು! 
 


ಜೀ ಕುಟುಂಬ ಅವಾರ್ಡ್​ ಕಾರ್ಯಕ್ರಮದಲ್ಲಿ ಕಿರುತೆರೆ ನಟ-ನಟಿಯರು ಹಾಗೂ ಅವರ ಕುಟುಂಬದವರಿಗೆ ಕೆಲವೊಂದು ಆಟಗಳನ್ನು ವಾಹಿನಿ ಆಯೋಜಿಸಿತ್ತು. ಅದರಲ್ಲಿ ಒಂದು ಈಗ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ವೈರಲ್​ ಆಗುತ್ತಿದೆ. ಇದು ನಟಿ ಲಕ್ಷ್ಮಿ ಅವರಿಗೆ ಪತಿ ಕೊಟ್ಟ ಹಿಂಟ್​ ಕುರಿತಾಗಿ ಇದೆ. ದಂಪತಿಯಲ್ಲಿ ಒಬ್ಬರ ಕಣ್ಣನ್ನು ಮುಚ್ಚಿ ಇನ್ನೊಬ್ಬರಿಗೆ ಒಂದು ವಸ್ತು ಕೊಡಲಾಗುತ್ತದೆ. ಆ ವಸ್ತು ಯಾವುದು ಎಂದು ಅವರು ಕಣ್ಣು ಮುಚ್ಚಿಕೊಂಡವರಿಗೆ ಹಿಂಟ್​ ಕೊಡಬೇಕು. ಅದಕ್ಕೆ ಒಂದಿಷ್ಟು ಕಾಲಾವಕಾಶವನ್ನು ನೀಡಲಾಗುತ್ತದೆ. ಅದೇ ರೀತಿ ನಟಿ ಲಕ್ಷ್ಮಿ ಅವರ ಕಣ್ಣಿಗೆ ಬಟ್ಟೆ ಕಟ್ಟಲಾಗಿತ್ತು. ಅವರ ಪತಿಗೆ ತೊಂಡೆ ಕಾಯಿ ಸಿಕ್ಕಿತ್ತು. ತಮ್ಮ ಕೈಯಲ್ಲಿ ಇರುವುದು ತೊಂಡೆಕಾಯಿ ಎಂದು ಹೇಳಲು ಅವರು ಹಲವಾರು ರೀತಿಯ ಹಿಂಟ್​ಗಳನ್ನು ಕೊಟ್ಟರೂ ಪತ್ನಿಗೆ ಅದು ಅರ್ಥವಾಗಲಿಲ್ಲ.

ಮೊದಲಿಗೆ ನಮ್ಮ ಮನೆಯಲ್ಲಿ ಪಲ್ಯ ಮಾಡುತ್ತೇವೆ ಎಂದರು. ಎಲ್ಲಾ ತರಕಾರಿಗಳಿಂದಲೂ ಪಲ್ಯ ಮಾಡುತ್ತಾರೆ. ಪಾಪ ಅವರಿಗೆ ಹೇಗೆ ಗೊತ್ತಾಗಬೇಕು? ಆಮೇಲೆ ಅವರು ಚಿಕ್ಕದಿರುತ್ತೆ ಎಂದರೂ ಲಕ್ಷ್ಮಿ ಅವರಿಗೆ ಅರ್ಥವಾಗಲಿಲ್ಲ. ಭೂಮಿ ಮೇಲೆ ಬೆಳೆಯತ್ತಾ, ಭೂಮಿ ಕೆಳಗೆ ಬೆಳೆಯುತ್ತಾ ಎಂದು ಲಕ್ಷ್ಮಿ ಕೇಳಿದರು. ಆಗ ಅವರ ಪತಿ ಅದಕ್ಕೆಲ್ಲಾ ಉತ್ತರ ಕೊಟ್ಟರೂ ಲಕ್ಷ್ಮಿಯವರಿಗೆ ಇದು ಅರ್ಥವಾಗಲಿಲ್ಲ. ಯಾವ ತರಕಾರಿ ಎನ್ನುವ ಗೊಂದಲ ಶುರುವಾಯಿತು. ಆಮೇಲೆ ಅವರ ಪತಿ ತೊಂಡೆಕಾಯಿಯನ್ನು ಒಂದು ವಸ್ತುವಿಗೆ ಹೋಲಿಕೆ ಮಾಡಿದಾಗ, ಲಕ್ಷ್ಮಿ ಅವರಿಗೆ ಥಟ್​ ಎಂದು ಉತ್ತರ ಗೊತ್ತಾಯಿತು. ಉತ್ತರವನ್ನೇನೋ ಸರಿಯಾಗಿಯೇ ಹೇಳಲು ಹೊರಟರು, ಆದರೆ ಅವರಿಗೆ ಆಮೇಲೆ ಪತಿ ಕೊಟ್ಟ ಹೋಲಿಕೆ ಕೇಳಿ ಉತ್ತರ ಕೂಡ ಪೂರ್ಣ ಮಾಡಲಾಗದೇ ಬಿದ್ದೂ ಬಿದ್ದೂ ನಕ್ಕರು. ಮಾತ್ರವಲ್ಲದೇ ಅಲ್ಲಿದ್ದವರೂ ನಕ್ಕು ಸುಸ್ತಾದರು.

Tap to resize

Latest Videos

ರಿಯಾಲಿಟಿ ಷೋನೋ ಅಥ್ವಾ ಸೆ*.. ಷೋ ನೋ? ಅವಾರ್ಡ್​ ಫಂಕ್ಷನ್​ನಲ್ಲಿ ಅಶ್ಲೀಲ ಸಂಭಾಷಣೆ- ಹಿಗ್ಗಾಮುಗ್ಗಾ ತರಾಟೆಗೆ

ಅಷ್ಟಕ್ಕೂ ಅವರ ಪತಿ ಕೊಟ್ಟ ಹಿಂಟ್​ ಏನೆಂದರೆ, ಇದು ಹೇಗಿರತ್ತೆ ಅಂದ್ರೆ ಚಿಕ್ಕಮಕ್ಕಳ.... ಅಂದಷ್ಟೇ ಹೇಳಿದ್ರು. ಅಷ್ಟೊತ್ತಿಗಾಗಲೇ ಲಕ್ಷ್ಮಿ ಅವರಿಗೆ ಅದು ತೊಂಡೆಕಾಯಿ ಎಂದು ತಿಳಿದುಹೋಯ್ತು. ಇದರ ವಿಡಿಯೋ ಅನ್ನು ಎಸ್​ಕೆ ಕ್ರಿಯೇಷನ್​ ಎನ್ನುವ ಇನ್​ಸ್ಟಾಗ್ರಾಮ್​ ಶೇರ್​ ಮಾಡಿಕೊಂಡಿದ್ದು, ಇದಕ್ಕೆ ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ. ಕೆಲವರು ಇದಕ್ಕೆ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ. ಹೀಗೆ ಇಂಥ ಹೋಲಿಕೆಯನ್ನು ಫ್ಯಾಮಿಲಿ ಷೋನಲ್ಲಿ ಮಾಡುವುದು ಸರಿಯಲ್ಲ ಎಂದಿದ್ದಾರೆ. ಆದರೆ ಇಲ್ಲಿ ಅವರು ಯಾವುದೇ ರೀತಿಯ ಕೆಟ್ಟ, ಅಶ್ಲೀಲ ಎನ್ನುವ ಶಬ್ದ ಪ್ರಯೋಗ ಮಾಡಿಲ್ಲ ಎಂದು ಕೆಲವು ಕಮೆಂಟಿಗರು ಸಮಜಾಯಿಷಿ ಕೊಟ್ಟಿದ್ದಾರೆ.

undefined

ಇತ್ತೀಚೆಗೆ, ಕಲರ್ಸ್​ ಕನ್ನಡದ  ಅನುಬಂಧ ಅವಾರ್ಡ್​ ಫಂಕ್ಷನ್​ನಲ್ಲಿ ವೇದಿಕೆ ಮೇಲೆ ಅಶ್ಲೀಲವಾಗಿ ಡಬಲ್​ ಮೀನಿಂಗ್​ ಮಾತನಾಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಇದಕ್ಕೆ ಸೋಷಿಯಲ್​  ಮೀಡಿಯಾದಲ್ಲಿ ಭಾರಿ ಟೀಕೆ ವ್ಯಕ್ತವಾಗಿದ್ದವು.  ಆ್ಯಂಕರ್​, ನಿಮಗೆ ಈ ರೀತಿಯ ರೊಮ್ಯಾಂಟಿಕ್​ ಸೀನ್​ನಲ್ಲಿ ಏನು ಇಷ್ಟವಾಗುತ್ತದೆ ಎಂದು ಕೇಳಿದಾಗ, ನಟ ನನಗೆ ನಿಧಾನಕ್ಕೆ ಮಾಡುವುದು ಇದೆಯಲ್ಲ, ಅದು ತುಂಬಾ ಇಷ್ಟವಾಗುತ್ತದೆ ಎಂದು ಹೇಳಿದ್ದರು. ಕೊನೆಗೆ ನಾನೇನೂ ಹೊಸತಾಗಿ ಮಾಡುತ್ತಿಲ್ಲ. ನೀವು ಮಾಡೋದನ್ನೇ ಮಾಡುತ್ತಿದ್ದೇನೆ ಎಂದಾಗ ಅಲ್ಲಿದ್ದವರೆಲ್ಲಾ ಕೆಟ್ಟ ರೀತಿಯಲ್ಲಿ ಎಂಜಾಯ್​ ಮಾಡಿಕೊಂಡು ನಕ್ಕಿದ್ದರು. ರಿಯಾಲಿಟಿ ಷೋ ಹೆಸರಿನಲ್ಲಿ, ಇಂಥ ಅಸಂಬದ್ಧ, ಅಶ್ಲೀಲತೆ ಮೆರೆಯುತ್ತಿರುವುದಕ್ಕೆ ಛೀಮಾರಿ ಹಾಕುತ್ತಿದ್ದಾರೆ.  

ಅನುಶ್ರೀನೇ ನನ್ನ ಸ್ವರ್ಗ ಎಂದ ಜಗದೀಶ್: ವೇದಿಕೆ ಮೇಲೆ ಇಬ್ಬರ ರೊಮಾನ್ಸ್​ ನೋಡಿ ನಾಚಿಕೊಂಡ ಶಿವಣ್ಣ!

click me!