ತಂಗಿ ನೇಹಾ ಗೌಡ ಮಗಳು, ʼಪುಟ್ಟ ಗೊಂಬೆʼ ಜೊತೆ ಫೋಟೋಶೂಟ್‌ ಮಾಡಿಸಿಕೊಂಡ ಸೋನು ಗೌಡ! Photos ಇವು..!

ʼಲಕ್ಷ್ಮೀ ಬಾರಮ್ಮʼ ಧಾರಾವಾಹಿ ಖ್ಯಾತಿಯ ನೇಹಾ ಗೌಡ ಈಗ ಹೆಣ್ಣು ಮಗುವಿನ ತಾಯಿ. ನೇಹಾ ಗೌಡ ಅವರ ಮಗಳ ಜೊತೆ ಸೋನು ಗೌಡ ಅವರು ಸುಂದರವಾದ ಫೋಟೋಶೂಟ್‌ ಮಾಡಿಸಿದ್ದಾರೆ. 
 

kannada actress sonu gowda photos with neha gowda new born daughter

ʼಲಕ್ಷ್ಮೀ ಬಾರಮ್ಮʼ ಧಾರಾವಾಹಿ ಗೊಂಬೆ ಖ್ಯಾತಿಯ ನೇಹಾ ಗೌಡ ಈಗ ತಾಯ್ತನದ ಖುಷಿಯಲ್ಲಿದ್ದಾರೆ. ಅವರಿಗೆ ಮುದ್ದಾದ ಮಗಳು ಹುಟ್ಟಿದ್ದಾಳೆ. ಈಗಾಗಲೇ ಮಗಳ ಮುಖವನ್ನು ರಿವೀಲ್‌ ಮಾಡಿರುವ ಅವರು ಸದ್ಯ ನಟನೆಯಿಂದ ದೂರ ಇದ್ದಾರೆ. ಇನ್ನು ನೇಹಾ ಗೌಡ ಅವರ ಅಕ್ಕ ಸೋನು ಗೌಡ ತಂಗಿ ಮಗಳ ಜೊತೆ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ. 

ಮನೆಗೆ ಮುದ್ದಾದ ಕಂದನ ಆಗಮನ..! 
ನೇಹಾ ಗೌಡ ಮಗಳಿಗೆ ಇನ್ನೂ ನಾಮಕರಣ ಆಗಿಲ್ಲ. ಇನ್ನೂ ಕೆಲ ತಿಂಗಳುಗಳ ಬಳಿಕ ನಾಮಕರಣ ಮಾಡಲಾಗುತ್ತದೆ ಎಂದು ಕಾಣುತ್ತದೆ. ಸೀರೆಯಲ್ಲಿ ಮಿಂಚಿರುವ ಸೋನು ಗೌಡ ಅವರು ಈಗ ಪುಟ್ಟ ಗೊಂಬೆ ಜೊತೆ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ. ಈ ಪೋಸ್ಟ್‌ ನೋಡಿ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು ನವೆಂಬರ್ 14, ಮಕ್ಕಳ ದಿನಾಚರಣೆಯಂದು ಕೂಡ ಸೋನು ಗೌಡ ಅವರು ಈ ಪುಟ್ಟ ಗೊಂಬೆ ಜೊತೆಗಿನ ಫೋಟೋ ಹಂಚಿಕೊಂಡು, ಮನೆಗೆ ಮುದ್ದಾದ ಕಂದ ಬಂದಿರೋದಿಕ್ಕೆ ಆಗಿರುವ ಖುಷಿಯನ್ನು ಹಂಚಿಕೊಂಡಿದ್ದರು. 

 
 
 
 
 
 
 
 
 
 
 
 
 
 
 

Latest Videos

A post shared by Sonu Gowda | shruthiRamakrishna (@sonugowda)

 

ಗೊಂಬೆ ಮನೆಗೆ ಲಕ್ಷ್ಮಿಯ ಆಗಮನ, ಹೆಣ್ಣು ಮಗುವಿಗೆ ಜನ್ಮ ನೀಡಿದ ನೇಹಾ ಗೌಡ

ಲವ್‌ ಮ್ಯಾರೇಜ್!‌ 
ಅಂದಹಾಗೆ ಕಳೆದ ಅಕ್ಟೋಬರ್‌ 29ರಂದು ನೇಹಾ ಗೌಡ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಶಾಲಾ ದಿನಗಳಿಂದಲೂ ಪ್ರೀತಿ ಮಾಡುತ್ತಿದ್ದ ಚಂದನ್‌ ಗೌಡ ಅವರನ್ನು ನೇಹಾ ಗೌಡ ಮದುವೆ ಆಗಿದ್ದಾರೆ. ನೇಹಾ ಅವರು ಚಿತ್ರರಂಗದಲ್ಲಿ ಆಕ್ಟಿವ್‌ ಆಗಿದ್ರೆ, ಚಂದನ್‌ ಅವರು ಉದ್ಯಮ ಮಾಡುತ್ತಿದ್ದರು. ಚಂದನ್‌ ಹಾಗೂ ನೇಹಾ ಗೌಡ ಅವರು ಮನೆಯವರನ್ನು ಒಪ್ಪಿಸಿ, 2018ರಲ್ಲಿ ಮದುವೆಯಾಗಿದ್ದರು. ಇನ್ನು ನೇಹಾ, ಚಂದನ್‌ ಅವರು ʼರಾಜ ರಾಣಿʼ ಶೋನಲ್ಲಿ ಭಾಗವಹಿಸಿ, ಗೆದ್ದಿದ್ದರು. ಅದಾದ ನಂತರ ಚಂದನ್‌ ಅವರು ಡ್ಯಾನ್ಸ್‌ ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿದ್ದರು. ಆಮೇಲೆ ʼಅಂತರಪಟʼ ಧಾರಾವಾಹಿ ಹೀರೋ ಕೂಡ ಆದರು. 

BBK 11: ಮಗಳಿಗೆ ಅತ್ಯಮೂಲ್ಯವಾದ ಉಡುಗೊರೆ ಕೊಟ್ಟ ರಜತ್‌ ಕಿಶನ್!‌

ಅದ್ದೂರಿ ಸೀಮಂತ, ಬೇಬಿ ಬಂಪ್‌ ಫೋಟೋಶೂಟ್‌ 
ಚಂದನ್‌ ಹಾಗೂ ನೇಹಾ ಗೌಡ ಅವರು ವಿಶಿಷ್ಟವಾದ ಫೋಟೋಶೂಟ್‌ ಮಾಡಿಸಿ, ಮಗುವಿನ ನಿರೀಕ್ಷೆಯಲ್ಲಿರೋದಾಗಿ ತಿಳಿಸಿದ್ದರು. ಅದಾದ ನಂತರ ನೇಹಾ ಅವರು ಸಾಕಷ್ಟು ರೀತಿಯಲ್ಲಿ ಬೇಬಿ ಬಂಪ್‌ ಫೋಟೋಶೂಟ್‌ ಕೂಡ ಮಾಡಿಸಿದ್ದರು. ಇನ್ನು ಇದೇ ಸಮಯಕ್ಕೆ ಸರಿಯಾಗಿ ʼಲಕ್ಷ್ಮೀ ಬಾರಮ್ಮʼ ಧಾರಾವಾಹಿಯಲ್ಲಿ ನಟಿಸಿದ್ದ ಕವಿತಾ ಗೌಡ ಕೂಡ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು. ಇದು ಕಾಕತಾಳೀಯ ಎನ್ನಬಹುದು. ಇನ್ನು ʼಅನುಬಂಧ ಅವಾರ್ಡ್ಸ್ʼ‌ ಶೋನಲ್ಲಿ ನೇಹಾ ಗೌಡ, ಕವಿತಾ ಗೌಡಗೆ ಏಕಕಾಲಕ್ಕೆ ಸೀಮಂತ ಮಾಡಿದ್ದರು. ನೇಹಾ ಗೌಡ ಅವರು ಅದ್ದೂರಿಯಾಗಿ ಸೀಮಂತ ಮಾಡಿಕೊಂಡಿದ್ದರು. ಈ ಶುಭ ಕಾರ್ಯಕ್ರಮಕ್ಕೆ ಚಿತ್ರರಂಗದ ಗಣ್ಯರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದರು. 

ಮೆಟರ್ನಿಟಿ ಫೋಟೊ ಶೂಟಲ್ಲಿ ಶಾಕುಂತಲೆಯಾದ ನೇಹಾ ಗೌಡ, ಹುಟ್ಟೋದು ಭರತನಾ? ಮುದ್ದು ಗೊಂಬೆನಾ?

ನೇಹಾ ಗೌಡ ಅವರ ಸ್ನೇಹಿತೆ ಅನುಪಮಾ ಗೌಡ ಎಲ್ಲರೂ ಸೇರಿಕೊಂಡು ಬೇಬಿ ಶವರ್‌ ಆಯೋಜಿಸಿದ್ದರು. ಈ ವಿಡಿಯೋವನ್ನು ಅನುಪಮಾ ಗೌಡ ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಷ್ಟೇ ಅಲ್ಲದೆ ಅನುಪಮಾ ಗೌಡ ಅವರ ಮನೆಯ ಗೃಹಪ್ರವೇಶಕ್ಕೆ ನೇಹಾ ಇರಲೇಬೇಕು ಎಂದು ಮನೆ ಸಂಪೂರ್ಣವಾಗಿ ಮುಗಿಯುವ ಮುನ್ನವೇ ಅವರು ಗೃಹಪ್ರವೇಶ ಮಾಡಿದ್ದಾರೆ ಎಂದರೆ ಇವರ ಸ್ನೇಹ ಹೇಗಿರಬಹುದು ಅಂತ ಲೆಕ್ಕಾಚಾರ ಹಾಕಿ…!

ಅಂದಹಾಗೆ ನೇಹಾ ಗೌಡ ಅವರು ತಾಯ್ತನದ ಖುಷಿಯಲ್ಲಿದ್ದಾರೆ. ಇತ್ತ ಸೋನು ಗೌಡ ಅವರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಒಮ್ಮೆ ಮದುವೆಯಾಗಿ ಡಿವೋರ್ಸ್‌ ಪಡೆದಿರುವ ಸೋನು ಗೌಡ ಅವರು ಮತ್ತೊಮ್ಮೆ ಮದುವೆ ಆಗುವ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಒಟ್ಟಿನಲ್ಲಿ ಇವರಿಬ್ಬರು ಚಿತ್ರರಂಗದಲ್ಲಿ ಆಕ್ಟಿವ್‌ ಆಗಿರಲಿ, ಖುಷಿಯಾಗಿರಲಿ ಎಂದು ಹಾರೈಸೋಣ ಏನಂತೀರಾ! 
 

vuukle one pixel image
click me!
vuukle one pixel image vuukle one pixel image