ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ಮಿತ್ರ, ಕನ್ನಡಿಗರ ಮನಸಿನ ಹತ್ರ 'ಪಂಚರಂಗಿ' ಶಿನು ಜಾರ್ಜ್!

By Shriram Bhat  |  First Published May 12, 2024, 1:37 PM IST

ಸಾವಿರಾರು ಕಚಗುಳಿ ಇಡೋ ಕಾಮಿಡಿ ಶೋಗಳನ್ನ ನಡೆಸಿಕೊಟ್ಟಿದ್ದಾರೆ. ಈಗಲ್ಲೂ ಅವಕಾಶ ಬಂದಾಗೆಲ್ಲ ನಡೆಸಿಕೊಟ್ಟಿದ್ದಾರೆ ಪರಸಂಗದ ಮಾರ್ಡನ್ ಗೆಂಡ್ಡೆತಿಮ್ಮ.. ವೆಡಿಂಗ್ ಪ್ಲಾನ್ಗಳನ್ನೂ ಕೂಡ ಸಖತ್ ಕ್ರಿಯೆಟಿವ್ ಆಗಿ ಪ್ಲಾನ್ ಮಾಡ್ತಾರೆ ಜಾಣೇಶ. 


ಶಿನು ಜಾರ್ಜ್ ಗೊತ್ತಾ ನಿಮ್ಗೆ ಅಂದ್ರೆ ಯಾರಿಗೂ ಗೊತ್ತಾಗಲ್ಲ ; ಅದೇ 'ಮಿತ್ರ' ಅಂತ ಕರೆದ್ರೆ ಇಡೀ ಚಂದನವನ ಮುಗಳ್ನಗುತ್ತದೆ..ಮಿತ್ರ ಇವ್ರ ಯಾವಾಗಲ್ಲೂ ಸ್ನೇಹ ಪ್ರೀತಿ ವಿಶ್ವಾಸದ ಹತ್ರ.. ಸ್ನೇಹಕ್ಕೋಸ್ಕರ_ ಸ್ನೇಹಿತರಿಗೋಸ್ಕರ ಹಾತೋರೆಯುವ ಮಸ್ತ್ ಮನಸು ಮಿತ್ರ (Mithra) ಅವರದ್ದು.. ಹಿಂಗಾಗಿಯೆ ತನ್ನ ಸ್ನೇಹ ಲೋಕದಿಂದಲೇ ಮಿತ್ರ ಅಂತ ಹೆಸರನ್ನ ಪಡೆದು ಪರಿಚಿತರಾಗಿರೋರು. ಈ ಬಹುಮುಖ ಪ್ರತಿಭೆ ನಿರ್ಮಾಪಕ ಕಮ್ ನಟ ಮಿತ್ರ ಅವರಿಗೆ ಇಂದು 46ನೇ ಹ್ಯಾಪಿ 'ಹುಟ್ಟು ಹಬ್ಬ'.

Tap to resize

Latest Videos

ಇವ್ರಿಗೆ ಗೊತ್ತಿರೋದು ಮೂರೇ, ಒಂದು ಸ್ನೇಹಿತರು , ಇನ್ನೊಂದು ಅಡುಗೆ , ಮತ್ತೊಂದು ಕಲೆ.. ಈ ಮೂರನ್ನು ತನು-ಮನವನ್ನಾಗಿಸಿಕೊಂಡು ಬಾಳುತ್ತಿರೋ ನಿಯತ್ತಿನ ಆಳು.. ಒಂದು ಕಾಲದಲ್ಲಿ ಒಂದೊತ್ತಿನ ಊಟಕ್ಕೂ ಕೂಡ ಸಮಸ್ಯೆ ಇದ್ದ ಫ್ಯಾಮಿಲಿ ಬ್ಯಾಗ್ರೌಂಡ್ ನಿಂದ ಬಂದವ್ರು ಇವ್ರು.. ಆದ್ರೆ ಇವತ್ತು ವೆರೈಟಿ ವೆರೈಟಿ ಅಡುಗೆ ಮಾಡೋ ಬೃಹತ್ ಬಾಣಸಿಗ ಮಿತ್ರ… ಹಾದಿ ಬೀದಿ ತಿಂಡಿಯಿಂದ ಹಿಡಿದು ಸೆವೆನ್ ಸ್ಟಾರ್ ಹೋಟೆಲ್ ಅಡುಗೆಯನ್ನು ಚಿಟ್ಕೆ ಹೊಡೆದಂಗೆ ಮಾಡಿಬಿಡ್ತಾರೆ.. 

ಅಪಘಾತದಲ್ಲಿ ಸಾವಿಗೀಡಾದ ಕನ್ನಡದ ಕಿರುತೆರೆ ಜನಪ್ರಿಯ ನಟಿ ಪವಿತ್ರ ಜಯರಾಂ!

ಸಾವಿರಾರು ಕಚಗುಳಿ ಇಡೋ ಕಾಮಿಡಿ ಶೋಗಳನ್ನ ನಡೆಸಿಕೊಟ್ಟಿದ್ದಾರೆ. ಈಗಲ್ಲೂ ಅವಕಾಶ ಬಂದಾಗೆಲ್ಲ ನಡೆಸಿಕೊಟ್ಟಿದ್ದಾರೆ ಪರಸಂಗದ ಮಾರ್ಡನ್ ಗೆಂಡ್ಡೆತಿಮ್ಮ.. ವೆಡಿಂಗ್ ಪ್ಲಾನ್ಗಳನ್ನೂ ಕೂಡ ಸಖತ್ ಕ್ರಿಯೆಟಿವ್ ಆಗಿ ಪ್ಲಾನ್ ಮಾಡ್ತಾರೆ ಜಾಣೇಶ. ನಟನೆಯ ಜೊತೆಗೆ ಮದುವೆ ಕಾರ್ಯಕ್ರಮಗಳನ್ನ ಸುಸೂತ್ರವಾಗಿ ಟೆಕ್ಷನ್ ಇಲ್ದಂಗೆ ಅದ್ದೂರಿಯಾಗಿ ಮಾಡಿಕೊಡ್ತಾ ಇದ್ದಾರೆ. 

ದೊಡ್ಡಮಾಮನ ಮನೇಲಿ ರಜನಿ ಸರ್‌ ಮೀಟ್ ಆಗಿದ್ದೆ, ಮುರಳಿ ಸಿಕ್ಕಾಪಟ್ಟೆ ಬೈದ; ವಿಜಯ್ ರಾಘವೇಂದ್ರ

ಅದೆಂಥದ್ದೆ ಪಾತ್ರ ಕೊಟ್ಟರು ನುಂಗಿ ನೀರು ಕೊಡಿಯೋ ಮಿತ್ರ ತನ್ನ ಅನೇಕ ಅನೇಕ ಮಿತ್ರ ಬಳಗಕ್ಕೆ ಗೊತ್ತೋ ಗೊತ್ತಿಲ್ಲದೆ ಸಹಾಯ ಮಾಡ್ತಾ ಇದ್ದಾರೆ.. 
ಇನ್ನು ಕರ್ನಾಟಕದ ಪ್ರಚಂಡ ಕುಳ್ಳ ದಿವಂಗತ ದ್ವಾರಕೀಶ್ ಅವರನ್ನ ಸ್ಫೂರ್ತಿಯನ್ನಾಗಿಸಿಕೊಂಡಿರುವ ‘ರಾಗ‘ ಅನ್ನೋ ಮನಮುಟ್ಟವ ಸಿನಿಮಾ ನಿರ್ಮಾಣ ಕಮ್ ನಟನೆ ಮಾಡಿ ಗೆದ್ದರು.. ಆದ್ರೆ ಅವತ್ತು ಬಾಹುಬಲಿ ಸಿನಿಮಾ ಎಲ್ಲಾ ಥಿಯೇಟರ್ಗಳನ್ನ ಕಬ್ಜ ಮಾಡಿಕೊಂಡಿದ್ದರಿಂದ ಮಿತ್ರ ಕೈ ಸುಟ್ಕೋ ಬೇಕಾಯ್ತು..

ನಾವು ಒಬ್ರೇ ಅಲ್ವಲ್ಲಾಇಲ್ಲಿ ಆಟ ಆಡೋರು, ಎದ್ರುಗಡೆನೂ ಇರ್ತಾರೆ; ಕೆಜಿಎಫ್ ಸ್ಟಾರ್ ಯಶ್!

ಆದ್ರೂ ಛಲಬಿಡದ ತ್ರಿವಿಕ್ರಮನಂತೆ ಚಿತ್ರರಂಗದಲ್ಲಿ ಎದ್ದು ನಿಲ್ಲಬೇಕು ಕಲಾ ಸರಸ್ವತಿ ಆರಾಧಿಸಲೇಬೇಕು ಅನ್ನೋ ಪಣದಿಂದ ಸಿನಿಮಾ ಲೋಕದ ಕಲಾರಣಕಣದಲ್ಲಿ ಸಕ್ರಿಯರಾಗಿದ್ದಾರೆ. ಮೊನ್ನೆ ಸಂತೋಷ್ ಆನಂದ್ ರಾಮ್ ನಿರ್ದೇಶನದ ಹೊಂಬಾಳೆ ಫಿಲಂಸ್ ನಿರ್ಮಾಣದ ರಾಘವೇಂದ್ರ ಸ್ಟೋರ್ ಸಿನಿಮಾ ಮೂಗನ ಪಾತ್ರ ವೀಡೀಯೋ ವೈರಲ್ ಆಗ್ತಾ ಇದ್ದಿದ್ದನ್ನ ಚಿತ್ರಪ್ರೇಮಿಗಳಾದ ನಾನು ನೀವು ನೋಡ್ತಾ ಇದ್ದೇವೆ.. 

ರಕ್ಷಿತಾ ಪ್ರೇಮ್: ನನ್ನಮ್ಮ ರೋಡ್‌ ಸೈಡ್ ಮಲಗಿದ್ರು, ಬಳೆ ಮಾರಿ ಮುಂಬೈಗೆ ಕರ್ಕೊಂಡು ಹೋಗಿದ್ರು 

2003ರಲ್ಲಿ ಶಿವಣ್ಣ ನಟನೆಯ 75ನೇ ಸಿನಿಮಾ ‘ಶ್ರೀರಾಮ್‘ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದವರು ‘ಪಾಪಾ ಪಾಂಡು‘ ಮತ್ತು ‘ಸಿಲ್ಲಿ ಲಲ್ಲಿ‘ ಧಾರಾವಾಹಿಯ ಮೂಲಕ ಕನ್ನಡಿಗರ ಮನೆ ಮನಕ್ಕೆ ಹೋದವರು. ಅದ್ರಲ್ಲೂ ಯೋಗರಾಜ್ ಭಟ್ ಸೃಷ್ಟಿಸಿದ ‘ಮನಸಾರೆ‘ ಚಿತ್ರದ ‘‘ಬಟ್ಟೆ ಬ್ಯಾಡ‘‘ ಅನ್ನೊ ಕ್ಯಾರೆಕ್ಟರ್ , ‘ಪಂಚರಂಗಿ‘ ಸಿನಿಮಾದ ಜ್ಯೋತಿಷಿ ಪಾತ್ರ ಹಿಂಗೆ ಹೇಳ್ತಾ ಹೋದ್ರೆ ದೊಡ್ಡ ಪಟ್ಟಿನೆ ಹೇಳಬಹುದು.. ಇಲ್ಲಿಯ ತನಕ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದ ಮಿತ್ರ. 

ವಿಷ್ಣುವರ್ಧನ್ ಶಾಲೆ ತಪ್ಪಿಸಿ ಈ ಕೆಲಸ ಮಾಡಿ ಪೆಟ್ಟು ತಿಂದಿದ್ರಂತೆ!

ಮಿತ್ರ ಎಷ್ಟು ಶ್ರಮಜೀವಿ, ಕ್ರಮ ಜೀವಿ ಅನ್ನೋದನ್ನ ಹೇಳ್ತಿವಿ ಕೇಳಿ..  ಅದೇ ಯಾವುದೇ ರೀತಿ ಪಾತ್ರ ಸಿಗ್ಲಿ ಲೀಲಾಜಾಲವಾಗಿ ಅಭಿನಯ ಮಾಡೋ ಈ ಕಲಾವಿದ ಈಗ ಅನೇಕ ಸಿನಿಮಾಗಳಲ್ಲಿ ಬಗೆ ಬಗೆಯ ಬ್ಯೂಟಿಫುಲ್ ಪಾತ್ರಗಳನ್ನ ಮಾಡ್ತಾ ಇದ್ದಾರೆ.. ಅದ್ರಲ್ಲಿ ಪ್ರಮುಖವಾದವುಗಳೆಂದ್ರೆ ‘ಯಲ್ಲಾಕುನ್ನಿ‘ ಮತ್ತು ‘ಕರಾವಳಿ‘ ಸಿನಿಮಾ.. ಪ್ರದೀಪ್ ನಿರ್ದೇಶನದ ಕೋಮಲ್ ಕುಮಾರ್ ಮತ್ತು ಸಹನಾಮೂರ್ತಿ ನಿರ್ಮಾಣದ ‘ಯಲ್ಲಾಕುನ್ನಿ‘ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಮಿತ್ರ ಅಭಿನಯ ಮಾಡಿದ್ದಾರೆ.. 'ಸುಗಂಧ ರಾಜ'  ಅನ್ನೋ ಕಾಮಿಡಿ ಕಮ್ ವಿಲನ್ ಕ್ಯಾರೆಕ್ಟರ್ ಅನ್ನ ಫಸ್ಟ್ ಟೈಮ್ ಪ್ಲೇ ಮಾಡಿದ್ದಾರೆ.

ಲಾಕ್‌ಡೌನ್‌ ವೇಳೆಯಲ್ಲೇ ವಕ್ಕರಿಸಿದ ಕ್ಯಾನ್ಸರ್, ಸೈಕಲ್ ತುಳಿದಿದ್ದೇಕೆ ನಟ ಸಂಜಯ್‌ ದತ್‌..?

ಇನ್ನು ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ‘ ಸಿನಿಮಾದ ಬಗ್ಗೆ ಜನ ಮುಂದೊಂದು ದಿನ ಮಾತನಾಡೇ ಮಾತನಾಡುತ್ತಾರೆ.. ಯಾಕೆಂದ್ರೆ ಹಂಗಿದೆ ಮಿತ್ರ ಅವರ ಪಾತ್ರ.. ‘ಕರಾವಳಿ‘ ಸಿನಿಮಾದಲ್ಲಿ ಒಂದು ವಿಶೇಷ ಗೆಟಪ್ನಲ್ಲಿ ಮಿತ್ರ ಕಾಣಿಸಿಕೊಂಡಿದ್ದಾರೆ.. ಎಂದೂ ಕೂಡ ಗಡ್ಡ ಮೀಸೆ ಬಿಡದ ಮಿತ್ರ ಫಸ್ಟ್ ಟೈಮ್ ವೈಟ್ ಗಡ್ಡ- ಮಿಸೆ ಬಿಟ್ಟು ಪಾತ್ರಕ್ಕೆ ಎರಡು ತಿಂಗಳು ಜಿಮ್ ನಲ್ಲಿ ಕಸರತ್ತು ಮಾಡಿ 95ಕೆ.ಜಿ ಇದ್ದವರು 70 ಕೆ.ಜಿ ತೂಕ ಇಳಿಸಿಕೊಂಡು 60ವರ್ಷ ವಯಸ್ಸಾದ  ವ್ಯಕ್ತಿಯ ಪಾತ್ರವನ್ನ ಮಾಡುತ್ತಿದ್ದಾರೆ.. ಇದೇ ಸಿನಿಮಾದಲ್ಲಿ ಮತ್ತೊಂದು ಶೇಡ್ ಗಾಗಿ ಇನ್ನೊಂದು ಹದಿನೈದು ಕೆ.ಜಿ ಡೌನ್ ಆಗಿ ಕ್ಯಾಮೆರಾಕ್ಕೆ ಕೈ ಮುಗಿಯಲಿದ್ದಾರೆ.. 

click me!