ಅಮ್ಮನ ದಿನಕ್ಕೆ ಸಿಹಿ-ಸೀತಾ ಭರ್ಜರಿ ಆಫರ್​: ತಾಯಿಗೆ ಪ್ರಶ್ನೆ ಕೇಳಿ- ಟ್ಯಾಗ್​ ಮಾಡಿ- ಏನಿದು ವಿಶೇಷ?

Published : May 12, 2024, 12:56 PM IST
ಅಮ್ಮನ ದಿನಕ್ಕೆ ಸಿಹಿ-ಸೀತಾ ಭರ್ಜರಿ ಆಫರ್​:  ತಾಯಿಗೆ ಪ್ರಶ್ನೆ ಕೇಳಿ- ಟ್ಯಾಗ್​ ಮಾಡಿ- ಏನಿದು ವಿಶೇಷ?

ಸಾರಾಂಶ

ಇಂದು ವಿಶ್ವ ಅಮ್ಮಂದಿರ ದಿನ. ಈ ದಿನದ ಸಲುವಾಗಿ ಸೀತಾರಾಮ ಸೀರಿಯಲ್​ ಸೀತಾ  ಮತ್ತು ಸಿಹಿ ವೀಕ್ಷಕರಿಗೆ ರ್ಭರಿ ಆಫರ್​ ಕೊಟ್ಟಿದ್ದಾರೆ. ಏನದು?  

ಇಂದು (ಮೇ 12) ವಿಶ್ವ ಅಮ್ಮನ ದಿನ. ಅಮ್ಮನ ಪ್ರೀತಿ ಕಾಳಜಿ ತ್ಯಾಗಕ್ಕೆ ಕೃತಜ್ಞತೆ ಸಲ್ಲಿಸಲು, ಅಮ್ಮನ ಮಮತೆಯನ್ನು ಸ್ಮರಿಸುವ ಸಲುವಾಗಿ ಪ್ರತಿವರ್ಷ ಮೇ ಎರಡನೇ ಭಾನುವಾರವನ್ನು  ಅಮ್ಮನ ದಿನವನ್ನಾಗಿ ಆಚರಿಸಲಾಗುತ್ತದೆ. ಅಮ್ಮನ ಪ್ರೀತಿ ಕಾಳಜಿ ತ್ಯಾಗಕ್ಕೆ ಕೃತಜ್ಞತೆ ಸಲ್ಲಿಸಲು, ಅಮ್ಮನ ಮಮತೆಯನ್ನು ಸ್ಮರಿಸುವ ದಿನವಿದು. ತನ್ನೆಲ್ಲಾ ಕಷ್ಟಗಳನ್ನು ಬದಿಗಿಟ್ಟು, ದಿನನಿತ್ಯವೂ ಕುಟುಂಬಕ್ಕಾಗಿ ಜೀವ ತೇಯುವ ಅಮ್ಮನ ಬಗ್ಗೆ ಕಾಳಜಿ ತೋರಲು ಈ ಯಾಂತ್ರಿಕ ಜೀವನದಲ್ಲಿ ಸಮಯವೇ ಸಿಗುವುದಿಲ್ಲ. ಆದ್ದರಿಂದ ವರ್ಷಕ್ಕೊಮ್ಮೆಯಾದರೂ ಅಮ್ಮನಿಗಾಗಿ ಮೀಸಲು ಇಡಿ ಎನ್ನುವ ಕಾರಣಕ್ಕೆ ಈ ದಿನವನ್ನು ಆಚರಿಸಲಾಗುತ್ತಿದೆ. 

 ಮಕ್ಕಳು, ಕುಟುಂಬದ ಯೋಗಕ್ಷೇಮ, ಆಗುಹೋಗುಗಳನ್ನು ನೋಡಿಕೊಳ್ಳುವ ಅಮ್ಮನಿಗೆ ಮಕ್ಕಳಿಗೆ, ಕುಟುಂಬದವರಿಗೆ ಏನೇನು ಇಷ್ಟ ಎನ್ನುವುದು ತಿಳಿದಿರುತ್ತದೆ. ಆದರೆ ಅಮ್ಮನಿಗೆ ಏನು ಇಷ್ಟ ಎನ್ನುವುದನ್ನು ತಿಳಿಯುವ ಪ್ರಯತ್ನ ಬಹುಶಃ ಹಲವು ಮಕ್ಕಳು ಮಾಡಿರುವುದೇ ಇಲ್ಲ. ಅಂಥವರಿಗಾಗಿ ಈ ಒಂದು ದಿನವನ್ನು ಮೀಸಲು ಇರಿಸಿ ಎಂದು ಹೇಳುತ್ತಿದ್ದಾರೆ ಸೀತಾರಾಮ ಸೀರಿಯಲ್​ನ ಸಿಹಿ ಮತ್ತು ಸೀತಾ. ಸೀತಾರಾಮ ಸೀರಿಯಲ್​ ನೋಡುಗರಿಗೆ ಸಿಹಿ ಮತ್ತು ಸೀತಾಳ ಬಾಂಧವ್ಯ ಗೊತ್ತೇ ಇದ್ದುದು. ಸಿಹಿಗೆ ಸೀತಾಳೆ ಸರ್ವಸ್ವವಾದರೆ ಸೀತಾಳಿಗೆ ಸಿಹಿಯೇ ಎಲ್ಲವೂ. ಅಷ್ಟಕ್ಕೂ ತಾಯಿ- ಮಕ್ಕಳ ಬಾಂಧವ್ಯವೇ ಹಾಗೆ ಅಲ್ಲವೆ?

ರಾತ್ರೋರಾತ್ರಿ ಕೋಟ್ಯಧಿಪತಿಯಾದ ಖುಷಿಗೆ ಪೂರ್ಣಿ ಡ್ಯಾನ್ಸ್​ ಮಾಡಿದ್ರೆ ದೀಪಿಕಾ ಕುಣಿತೀರೋದ್ಯಾಕೆ ಕೇಳಿದ ಫ್ಯಾನ್ಸ್​

ಇದೀಗ ಸಿಹಿ ಸೀತಾಳಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾಳೆ. ಅದರಲ್ಲಿ ತನ್ನ ಮತ್ತು ಅಮ್ಮನ ಬಗ್ಗೆ ಅವಳು ಪ್ರಶ್ನಿಸಿದ್ದಾಳೆ. ಇದಕ್ಕೆ ಸೀತಾ ಉತ್ತರ ಕೊಟ್ಟಿದ್ದಾಳೆ. ಮೊದಲಿಗೆ ನನಗೆ ಯಾವ ತಿಂಡಿ ಇಷ್ಟ ಎಂದು ಸೀತಾಳಿಗೆ ಸಿಹಿ ಕೇಳಿದ್ದಾಳೆ. ಅದಕ್ಕೆ ಸೀತಾ ನಿನಗೆ ಚಪಾತಿ ರೋಲ್​ ಇಷ್ಟ ಎಂದಿದ್ದಾಳೆ. ನಿನಗೆ ಯಾವ ತಿಂಡಿ ಇಷ್ಟ ಎಂದು ಕೇಳಿದಾಗ, ನನಗೆ ಹಾಗೇನಿಲ್ಲ. ಯಾವುದಾದ್ರೂ ಓಕೆ ಎಂದಿದ್ದಾಳೆ. ಇದು ಬಹುಶಃ ಎಲ್ಲ ಅಮ್ಮಂದಿರ ಉತ್ತರವೇ. ಅದೇ ರೀತಿ ನನಗೆ ಯಾವ ಸ್ವೀಟ್​ ಇಷ್ಟ ಎಂದು ಸಿಹಿ ಸೀತಾಳಿಗೆ ಕೇಳಿದಾಗ ಬರ್ತ್​ಡೇ ಕೇಕ್​ ಎನ್ನುತ್ತಾಳೆ. ಹಾಗಾದರೆ ನಿನಗೆ ಯಾವ ಸ್ವೀಟ್​ ಇಷ್ಟ ಎಂದು ಕೇಳಿದಾಗ, ನೀನು ಸಿಹಿ ತಿನ್ನುವುದಿಲ್ಲ ಎಂದು ನಾನೂ ತಿನ್ನುವುದನ್ನು ಬಿಟ್ಟೆ ಎಂದಿದ್ದಾಳೆ.ಅಷ್ಟಕ್ಕೂ ಅಮ್ಮ ಎಂದರೇನೇ ತ್ಯಾಗದ ಇನ್ನೊಂದು ಗುಣ ಅಲ್ವಾ? 

  ಇನ್ನೊಂದು ಪ್ರಶ್ನೆ ಕೇಳಿದ ಸಿಹಿ, ನನಗೆ ಯಾವ ಟಾಯ್ಸ್​ ಇಷ್ಟ ಎಂದು ಕೇಳಿದ್ದಾಳೆ. ಆಗ ಸೀತಾ, ನೀನು ಬರಿ ಮೊಬೈಲ್​ನಲ್ಲೇ ಆಟವಾಡ್ತಿಯಲ್ಲ ಎಂದಿದ್ದಾಳೆ. ಕೊನೆಗೆ ನಿನಗೆ ಯಾವುದು ಇಷ್ಟ ಎಂದು ಕೇಳಿದಾಗ, ಈಗ ಟಾಯ್ಸ್​ ಜೊತೆ ಆಟ ಆಡೋ ವಯಸ್ಸಲ್ಲ ಎಂದಿದ್ದಾಳೆ. ಹೀಗೆ ಪ್ರಶ್ನೋತ್ತರ ನಡೆಸಿದ್ದಾರೆ ಸೀತಾ ಮತ್ತು ಸಿಹಿ. ನಂತರ ವೀಕ್ಷಕರಿಗೆ ಭರ್ಜರಿ ಆಫರ್​ ಕೊಟ್ಟಿದ್ದಾರೆ. ಅಮ್ಮನ ಇಷ್ಟಗಳ ಬಗ್ಗೆ ಪ್ರಶ್ನೆ ಕೇಳಿ ಜೀ ಕನ್ನಡಕ್ಕೆ ಟ್ಯಾಗ್​ ಮಾಡಿ ಸಂತೋಷ ಹಂಚಿಕೊಳ್ಳುವ ಅವಕಾಶವನ್ನು ಸೀತಾರಾಮ ತಂಡ ನೀಡಿದೆ. 

ಭಾಗ್ಯಳ ಕೋಣೆಗೇ ಕನ್ನ ಹಾಕಿದ ತಾಂಡವ್​! ದಂಪತಿ ಬಾಳಲ್ಲಿ ಮೂರು ದಿನಗಳ ರೋಚಕ ತಿರುವು


PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!