ವರ್ಷದಿಂದ ಕಾಯ್ತಿದ್ದ ಗುಟ್ಟು ರಟ್ಟಾಗೋಯ್ತು: ಸಿಹಿ- ಸೀತಾಳ ಸಂಬಂಧ ಕೊನೆಗೂ ಬಯಲಾಯ್ತು?

By Suchethana D  |  First Published Sep 5, 2024, 1:27 PM IST

ಸಿಹಿ ಮತ್ತು ಸೀತಾಳಿಗೆ ಇರುವ ಸಂಬಂಧ ಏನು ಎನ್ನುವ ಬಗ್ಗೆ ತಲೆ ಕೆಡಿಸಿಕೊಂಡಿದ್ದ ಸೀತಾರಾಮ ಅಭಿಮಾನಿಗಳಿಗೆ ಕೊನೆಗೂ ಸತ್ಯ ಗೊತ್ತಾಗಿದೆ. ಏನಿದು?
 


ಸೀತಾರಾಮ ಸೀರಿಯಲ್​ ಇದೀಗ ಇಂಟರೆಸ್ಟಿಂಗ್​ ಹಂತಕ್ಕೆ ಬಂದು ತಲುಪಿದೆ. ಕಳೆದ ಕೆಲವು ತಿಂಗಳುಗಳಿಂದ ಸಿಹಿ ಮತ್ತು ಸೀತಾಳ ಜನ್ಮ ರಹಸ್ಯದ ಬಗ್ಗೆ ಮೇಲಿಂದ ಮೇಲೆ ಟ್ವಿಸ್ಟ್‌ ಸಿಗುತ್ತಲೇ ಇತ್ತು. ಸೀತಾ ಮತ್ತು ಸಿಹಿ ಅಮ್ಮ-ಮಗಳು ಅಲ್ಲವೇ ಅಲ್ಲ, ಆಕೆ ಅನಾಥೆ ಎಂದು ಕೆಲವರು, ಸಿಹಿಯ ಅಕ್ಕನ ಮಗಳು ಇರಬೇಕು ಎಂದು ಮತ್ತಿಷ್ಟು ಮಂದಿ, ಸೀತಾಳಿಗೆ ಅಕ್ರಮ ಸಂಬಂಧದಿಂದ ಹುಟ್ಟಿದ್ದು ಎಂದು ಮತ್ತೊಂದಿಷ್ಟು ಮಂದಿ.. ಹೀಗೆ ಈ ಸೀರಿಯಲ್‌ ಪ್ರೊಮೋ ಹಾಕಿದಾಗಲೆಲ್ಲವೂ ಥಹರೇವಾರಿ ಕಮೆಂಟ್ಸ್‌ ಸುರಿಮಳೆಯಾಗುತ್ತಿತ್ತು. ಇದರ ನಡುವೆಯೇ ಡಾ.ಅನಂತಲಕ್ಷ್ಮಿ ಎಂಬ ನಿಗೂಢ ವೈದ್ಯೆಯ ಹೆಸರು ಮೇಲಿನಿಂದ ಮೇಲೆ ಕೇಳಿ ಬಂದಿತ್ತು. ಸಿಹಿ ಯಾರು? ಅವಳಿಗೂ ಸೀತಾಳಿಗೂ ಏನು ಸಂಬಂಧ? ಸಿಹಿಯ ಅಪ್ಪ ಯಾರು ಎಂಬೆಲ್ಲಾ ಪ್ರಶ್ನೆಗೆ ಉತ್ತರ ಕೊಡಲು ಸಾಧ್ಯ ಈ ಅನಂತಲಕ್ಷ್ಮಿ ಮಾತ್ರ. 

ಅತ್ತ ಈ ವೈದ್ಯೆಯ ಹೆಸರು ಕೇಳುತ್ತಿದ್ದಂತೆಯೇ, ಸೀತಾಳೂ ಶಾಕ್​ ಆಗಿದ್ದಳು. ಇದೀಗ ಭಾರ್ಗವಿಯ ಕುತಂತ್ರದಿಂದ ಖುದ್ದು ಆಕೆಯೇ ಮನೆಗೆ ಬಂದಿದ್ದಾಳೆ. ಸೀತಾ ಮತ್ತು ಅನಂತ ಲಕ್ಷ್ಮಿಯ ಮುಖಾಮುಖಿಯಾಗಿದೆ. ಭಾರ್ಗವಿ ಸೀತಾ ತನ್ನ ಸೊಸೆ ಎಂದು ಪರಿಚಯ ಮಾಡಿಸಿಕೊಟ್ಟಿದ್ದಾಳೆ. ಸಿಹಿಯ ಸತ್ಯವನ್ನು ಹೇಳದಂತೆ ಸೀತಾ ಆಕೆಯ ಬಳಿ ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತಿದ್ದಾಳೆ. ಅದೇ ಇನ್ನೊಂದೆಡೆ, ಮೇಘಶ್ಯಾಮ್‌ಗೆ ತನ್ನ ಮಗು ಬದುಕಿರುವ ಸತ್ಯ ಗೊತ್ತಾಗಿದೆ. 

Tap to resize

Latest Videos

ಬಳಕುವ ಬಳ್ಳಿಯಂತಿರೋ ನಿವೇದಿತಾ ಆ ಭಾಗಕ್ಕೆ ಕತ್ತರಿ ಹಾಕಿಸಿಕೊಂಡ್ರಾ? ಫ್ಯಾನ್ಸ್‌ಗೆ ಇದೆಂಥ ಡೌಟು?

ಇಷ್ಟೆಲ್ಲಾ ಆದ ಮೇಲೆ ಸಿಹಿ  ಡಾ.ಮೇಘಶ್ಯಾಮನ ಮಗಳು ಎನ್ನುವುದು ತಿಳಿದಿದೆ. ಆದರೆ ಸೀತಾ ಮತ್ತು ಮೇಘಶ್ಯಾಮ್‌ ಲವರ್ಸ್ ಅಂತೂ ಅಲ್ಲ ಎನ್ನುವುದೂ ಗೊತ್ತಾಗಿದೆ. ಸಿಹಿ ಸೀತಾಳ ಗರ್ಭದಲ್ಲಿಯೇ ಧರಿಸಿದ್ದು ಎನ್ನುವುದನ್ನೂ ಪ್ರೊಮೋದಲ್ಲಿ ತೋರಿಸಲಾಗಿದೆ. ಇವೆಲ್ಲಾ ಕನ್‌ಫ್ಯೂಸ್‌ ಮಧ್ಯೆ ಸಿಹಿ ಮತ್ತು ಸೀತಾಳಿಗೆ ಸಂಬಂಧ ಏನು ಎನ್ನುವ ಬಗ್ಗೆ ಇನ್ನಷ್ಟು ಗೊಂದಲ ಸೃಷ್ಟಿಯಾಗಿತ್ತು.  ರುದ್ರಪ್ರತಾಪ್​ ಸೀತಾಳ ಆಸ್ಪತ್ರೆಯ ಡಿಟೇಲ್ಸ್​ ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ. ಇದು ಸೀತಾ ಹೆಣ್ಣುಮಗುವಿಗೆ ಜನ್ಮ ಕೊಟ್ಟ ಆಸ್ಪತ್ರೆ, ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದಳು. ಆದರೆ ಅಪ್ಪನ ಡಿಟೇಲ್ಸ್​ ಇಲ್ಲ ಎಂದಿದ್ದಾನೆ. ಅಲ್ಲಿಗೆ ಸೀತಾಳಿಗೆ ಸಿಹಿ ಹುಟ್ಟಿದ್ದು ಗೊತ್ತಾಗಿದೆ. 

 ಇದೀಗ ಬಿಡುಗಡೆಯಾಗಿರುವ ಪ್ರೊಮೋದಲ್ಲಿ, ಸೀತಾ ಮತ್ತು ಸೀತಾಲಕ್ಷ್ಮಿಯ ಮಾತುಕತೆ ತೋರಿಸಲಾಗಿದೆ. ಮಗುವಿನ ಅಪ್ಪ-ಅಮ್ಮ ಎಲ್ಲಿ ಎಂದು ಸೀತಾ ಸೀತಾಲಕ್ಷ್ಮಿಯವರನ್ನು ಕೇಳಿದ್ದಾಳೆ. ಅವರು ಎಷ್ಟು ಟ್ರೈ ಮಾಡಿದರೂ ಸಿಗುತ್ತಿಲ್ಲ ಎಂದಿದ್ದಾಳೆ ಡಾಕ್ಟರ್‌. ಈಗ ಏನು ಮಾಡಬೇಕು ಎನ್ನುವುದು ತಿಳಿಯುತ್ತಿಲ್ಲ ಎಂದು ಸೀತಾ ಹೇಳಿದ್ದಾಳೆ. ಮನೆಯಲ್ಲಿ ಯಾರಿಗಾದ್ರೂ ಹೇಳಿದ್ದೀರಾ ಎಂದು ವೈದ್ಯೆ ಪ್ರಶ್ನಿಸಿದಾಗ ಜೋರಾಗಿ ಅತ್ತ ಸೀತಾ, ಮದುವೆಯಾಗದೇ ಗರ್ಭಿಣಿಯಾಗಿದ್ದರಿಂದ ಎಲ್ಲರ ವಿರೋಧ ಕಟ್ಟಿಕೊಂಡಿರುವುದಾಗಿ ಹೇಳಿದ್ದಾಳೆ.

ಇವೆಲ್ಲವನ್ನೂ ನೋಡಿದರೆ, ಎರಡು ಮಾತೇ ಇಲ್ಲ. ಸಿಹಿ ಸೀತಾಳ ಗರ್ಭದಲ್ಲಿಯೇ ಹುಟ್ಟಿದ್ದಾಳೆ. ಆಕೆಯ ತಂದೆ ಕೂಡ ಡಾ.ಮೇಘಶ್ಯಾಮ್‌. ಆದರೆ ಸಿಹಿ ಹುಟ್ಟಿದ್ದು ಮಾತ್ರ ಸೀತಾ ಮತ್ತು ಮೇಘಶ್ಯಾಮ್‌ ನಡುವಿನ ಲೈಂಗಿಕ ಸಂಪರ್ಕದಿಂದ ಅಲ್ಲ, ಬದಲಿಗೆ ಸೀತಾ ಸರೋಗಸಿ ಅಂದರೆ ಬಾಡಿಗೆ ತಾಯ್ತನದ ಮೂಲಕ ಸಿಹಿಯನ್ನು ಹೆತ್ತಿದ್ದಾಳೆ ಎನ್ನುವುದು ಇಲ್ಲಿಯವರೆಗಿನ ಘಟನೆಗಳನ್ನು ನೋಡಿದರೆ ತಿಳಿದುಬರುತ್ತಿದ್ದು, ಈ ಬಗ್ಗೆಯೇ ಕಮೆಂಟ್‌ಗಳ ಸುರಿಮಳೆಯಾಗುತ್ತಿದೆ. ಅಲ್ಲಿಗೆ ಹಲವು ತಿಂಗಳುಗಳಿಂದ ಕಾಯುತ್ತಿದ್ದ ಪ್ರಶ್ನೆಗೆ ಉತ್ತರ ದೊರೆತಿರುವುದಾಗಿ ಅಭಿಮಾನಿಗಳು ಹೇಳುತ್ತಿದ್ದಾರೆ.  ಹಾಗಿದ್ದರೆ ಮುಂದೇನು? ಮೇಘಶ್ಯಾಮ್‌ ತನ್ನ ಮಗಳನ್ನು ಕರೆದುಕೊಂಡು ಹೋದರೆ, ಸೀತಾ ಸಹಿಸಿಯಾಳೆ? ಅವಳ ಸ್ಥಿತಿ ಏನು? ಸೀತಮ್ಮನನ್ನು ಬಿಟ್ಟು ಸಿಹಿ ಬದುಕುತ್ತಾಳಾ ಎನ್ನುವುದು ಈಗಿರುವ ಕುತೂಹಲ. 

ಕಮೆಂಟೂ ಕೊಟ್ಟು ದುಡ್ಡುನೂ ಕೊಡ್ತಾರೆ! ಜಾಲತಾಣದಿಂದ ತಿಂಗಳಿಗೆ 40 ಲಕ್ಷ ಗಳಿಸ್ತಾಳೆ 23 ವರ್ಷದ ಈಕೆ!

click me!