ಬಳಕುವ ಬಳ್ಳಿಯಂತಿರೋ ನಿವೇದಿತಾ ಆ ಭಾಗಕ್ಕೆ ಕತ್ತರಿ ಹಾಕಿಸಿಕೊಂಡ್ರಾ? ಫ್ಯಾನ್ಸ್‌ಗೆ ಇದೆಂಥ ಡೌಟು?

By Suchethana D  |  First Published Sep 5, 2024, 1:02 PM IST

ಬಿಗ್‌ಬಾಸ್‌ ಖ್ಯಾತಿಯ ನಿವೇದಿತಾ ಗೌಡ ರೀಲ್ಸ್‌ ಮಾಡಿದ್ದರೆ, ಈ ಬಾರಿ ಅಭಿಮಾನಿಗಳಿಗೆ ವಿಭಿನ್ನ ರೀತಿಯ ಡೌಟ್‌ ಶುರುವಾಗಿದೆ. ಅಷ್ಟಕ್ಕೂ ಅವರು ಹೇಳ್ತಿರೋದು ಏನು ನೋಡಿ.
 


 ಬಿಗ್​ಬಾಸ್​ನಿಂದಲೇ ಖ್ಯಾತಿ ಪಡೆದು, ಇದೀಗ ಡಿವೋರ್ಸ್ ಬಳಿಕ ಮತ್ತಷ್ಟು ಹೆಸರು ಮಾಡುತ್ತಿರುವವರೆಂದರೆ ನಿವೇದಿತಾ ಗೌಡ. ಗಾಯಕ, ರ್ಯಾಪರ್​ ಚಂದನ್​  ಶೆಟ್ಟಿ ಜೊತೆ  ನಿವೇದಿತಾ ಗೌಡ ಡಿವೋರ್ಸ್​ ಆದ್ಮೇಲೆ ಹೊಸ ಹೊಸ ರೂಪದಲ್ಲಿ ರೀಲ್ಸ್​ ಮಾಡುತ್ತಿದ್ದಾರೆ. ಹಿಂದಿಗಿಂತಲೂ ಅತಿ ಎನ್ನುವಷ್ಟು ದೇಹ ಪ್ರದರ್ಶನ ಮಾಡುತ್ತಿರುವಿರಿ ಎಂದು ನೆಟ್ಟಿಗರು ಈಗ ತರಾಟೆಗೆ ತೆಗೆದುಕೊಳ್ಳುವುದು ಹೆಚ್ಚುತ್ತಲೇ ಇದೆ. ಈ ಹಿಂದೆ ಕೂಡ ದಿನವೂ ಬೇರೆ ಬೇರೆ ಥರನಾಗಿ ಪೋಸ್​ ಕೊಡುತ್ತಲೇ ಬಾರ್ಬಿಡಾಲ್​, ಗೊಂಬೆ ಎಂದೆಲ್ಲಾ ಹೊಗಳಿಸಿಕೊಳ್ಳುತ್ತಿದ್ದರು ನಿವೇದಿತಾ. ಡಿವೋರ್ಸ್​ ಬಳಿಕವೂ ದಿನಕ್ಕೊಂದರಂತೆ ರೀಲ್ಸ್​ ಮಾಡುತ್ತಿದ್ದರೂ ಕಮೆಂಟಿಗರು ಕಮೆಂಟ್​ ಮಾಡುವ ವಿಧಾನ ಬೇರೆಯಾಗಿದೆಯಷ್ಟೇ. ಮೊದಲೆಲ್ಲಾ ಹುಡುಗಾಟ ಬಿಡು, ಮಕ್ಕಳು ಮಾಡಿಕೋ ಎನ್ನುವವರೇ ಹೆಚ್ಚಾಗಿದ್ದರು. ಆದರೆ ಇದೀಗ ಪ್ರತಿ ಬಾರಿಯೂ ಚಂದನ್​ ಶೆಟ್ಟಿ ಹೆಸರು ಎಳೆದು ತಂದು ನಿವೇದಿತಾ ಅವರನ್ನು ಟ್ರೋಲ್​ ಮಾಡಲಾಗುತ್ತಿದೆ.  

ಇದೀಗ ನಿವೇದಿತಾ, ಇಂಗ್ಲಿಷ್‌ ಹಾಡೊಂದಕ್ಕೆ ರೀಲ್ಸ್‌ ಮಾಡಿದ್ದಾರೆ. ಇದರಲ್ಲಿ ಈಕೆ ಮುದ್ದಾಗೇನೋ ಕಾಣಿಸುತ್ತಿದ್ದಾರೆ. ಆದರೆ ಬಳಕುವ ಬಳ್ಳಿಯಂತೆ ಇರುವ ನಿವೇದಿತಾ, ಆ ಭಾಗಕ್ಕೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡಿದ್ದಾರಾ ಎನ್ನುವ ಅನುಮಾನ ಅಭಿಮಾನಿಗಳಿಗೆ ಬಂದಂತಿದೆ! ಈ ಕುರಿತು ಕಮೆಂಟ್ಸ್‌ಗಳಲ್ಲಿ ಪ್ರಶ್ನೆ ಕೇಳಲಾಗುತ್ತಿದೆ. ಸಾಮಾನ್ಯವಾಗಿ, ಇತ್ತೀಚಿನ ದಿನಗಳಲ್ಲಿ ಎದೆಗೆ ಕತ್ತರಿ ಹಾಕಿಕೊಳ್ಳುತ್ತಿದ್ದಾರೆ ನಟಿ ಮಣಿಗಳು. ಮುಖದ ಯಾವುದೋ ಒಂದು ಅಂಗವನ್ನು ಪ್ಲಾಸ್ಟಿಕ್‌ ಸರ್ಜರಿ ಮೂಲಕ ಅಂದಗೊಳಿಸಿಕೊಳ್ಳುವುದು ಶ್ರೀದೇವಿ ಕಾಲದಿಂದಲೂ ನಡೆದೇ ಇದೆ. ಬಾಲಿವುಡ್‌ ಆಳಿದ್ದ ಶ್ರೀದೇವಿ ತಮ್ಮ ಮೂಗಿನ ಸರ್ಜರಿ ಬಳಿಕವಷ್ಟೇ ಅಷ್ಟು ಸೌಂದರ್ಯವತಿಯಾಗಿ ಕಾಣಿಸಿಕೊಂಡು, ಬಾಲಿವುಡ್‌ನಲ್ಲಿ ಸ್ಥಾನ ಗಳಿಸಿದ್ದರು.

Tap to resize

Latest Videos

ಕಚ್ಚಿ ಕಚ್ಚಿ ತಿನ್ನೋದೆಂದ್ರೆ ಇಷ್ಟ ಅಂತ ನಿವೇದಿತಾ ರಾಗಿಮುದ್ದೆ ಹೀಗೆ ತಿನ್ನೋದಾ? 'ಸೀತೆ'ಯೂ ಸಾಥ್‌!

ಅದಾದ ಬಳಿಕ ಇಂದಿನವರೆಗೂ ಸೌಂದರ್ಯವರ್ಧನೆಗೆ ದೇಹದ ಹಲವಾರು ಭಾಗಗಳಿಗೆ ಸರ್ಜರಿಮಾಡಿಸಿಕೊಂಡಿರುವ ನಟಿಯರ ದೊಡ್ಡ ದಂಡೇ ಇದೆ. ಕೆಲವು ನಟಿಯರು ಎದೆ ಭಾಗ ದೊಡ್ಡದಾಗಿ ಕಾಣಿಸಿಕೊಳ್ಳಲು ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡಿದ್ದಾರೆ. ಶೆರ್ಲಿನ್‌ ಚೋಪ್ರಾ, ರಾಖಿ ಸಾವಂತ್‌ ಸೇರಿದಂತೆ ಕೆಲವು ನಟಿಯರು ಇಡೀ ದೇಹವನ್ನು ಬಳಕುವ ಬಳ್ಳಿಯಂತೆ ಮಾಡಿಕೊಂಡಿದ್ದರೂ ದೇಹದ ಭಾಗವನ್ನು ದೊಡ್ಡದಾಗಿ ಕಾಣಿಸಿಕೊಳ್ಳುವಂತೆ ಮಾಡಿದ್ದಾರೆ. ಇದೀಗ ಅದನ್ನೇ ನಟಿ ನಿವೇದಿತಾಗೂ ಪ್ರಶ್ನಿಸುತ್ತಿದ್ದಾರೆ ಕೆಲ ಕಮೆಂಟಿಗರು.

ಅಷ್ಟಕ್ಕೂ ನಿವೇದಿತಾ ಅವರಿಗೆ ಈಗ 26 ವರ್ಷ ವಯಸ್ಸು. ಇದಾಗಲೇ ಮದುವೆಯಾಗಿ ಚಂದನ್‌ ಶೆಟ್ಟಿ ಜೊತೆ ಡಿವೋರ್ಸ್ ಕೂಡ ಪಡೆದುಕೊಂಡಾಗಿದೆ. ನಿವೇದಿತಾ ಈಗಲೂ ನೋಡಲು ಮಾತ್ರವಲ್ಲದೇ ಅವರ ನಡವಳಿಕೆಯೂ ಇನ್ನೂ ಚಿಕ್ಕ ಮಕ್ಕಳಂತೆಯೇ ಇದೆ. ಇನ್ನು ಜೀರೋ ಸೈಜ್‌ ಎನ್ನುವಂಥ ಶರೀರ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ದೇಹ ಪ್ರದರ್ಶನ ಹೆಚ್ಚಾಗುತ್ತಿದ್ದು, ಅದನ್ನು ನೋಡಿದವರ ಕಣ್ಣು ಕುಕ್ಕಿದೆ. ಪ್ಲಾಸ್ಟಿಕ್‌ ಸರ್ಜರಿ ಯಾವಾಗ ಮಾಡಿಸಿಕೊಂಡದ್ದು ಎಂದುಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ, ಸ್ವಲ್ಪ ಫೇಮಸ್‌ ಆದ ಸೆಲೆಬ್ರಿಟಿಗಳು ಏನು ಮಾಡಿದರೂ ತಪ್ಪು ಎನ್ನುವ ಸ್ಥಿತಿ ಉಂಟಾಗಿದೆ. ಇದಕ್ಕಾಗಿ ಅವರು ಟ್ರೋಲ್‌ಗೆ ಒಳಗಾಗುತ್ತಲೇ ಇರಬೇಕಿದೆ.  
'ಗೌರಿ' ನೋಡಲು ಬಂದ ನಿವೇದಿತಾ: ಅಂಗಡಿ ಮುಚ್ಕೊಳಮ್ಮಾ ಅಂತೆಲ್ಲಾ ಹೇಳೋದಾ ನೆಟ್ಟಿಗರು?

click me!