ಸೋಷಿಯಲ್ ಮೀಡಿಯಾದಲ್ಲಿ ನಿವೇದಿತಾ ಗೌಡ ಪೋಸ್ಟ್‌ಗೆ ಅಶ್ಲೀಲ ಕಾಮೆಂಟ್ ಮಾಡೋರು ಹೆಚ್ಚಾಗ್ತಿದ್ದಾರೆ. ಸದ್ಯದಲ್ಲೇ ಇಂಥವರು ತಕ್ಕ ಪಾಠ ಕಲಿಯೋದು ಗ್ಯಾರಂಟಿ.
ಒಂದು ಕಾಲದಲ್ಲಿ ಚಂದನವನದ ಮುದ್ದಾದ ಜೋಡಿ ಅಂತ ಹೆಸರು ಮಾಡಿದ್ದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇತ್ತೀಚೆಗೆ ತಮ್ಮ ದಾಂಪತ್ಯ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟು ವಿಚ್ಛೇದನ ತೆಗೆದುಕೊಂಡಿದ್ದಾರೆ. ಈ ಸುದ್ದಿ ಅವರ ಅಭಿಮಾನಿಗಳಿಗೆ ಒಂದು ಕ್ಷಣ ಶಾಕ್ ನೀಡಿದ್ದಂತು ಖಂಡಿತ. ಇಬ್ಬರು ತಮ್ಮ ತಮ್ಮ ವೈಯಕ್ತಿಯ ಜೀವನದಲ್ಲಿ ಮುಂದುವರೆಯುವ ಇಚ್ಛೆ ಇಲ್ಲದ ಕಾರಣ ಪರಸ್ಪರ ಒಪ್ಪಿಗೆಯಿಂದಲೆ ವಿಚ್ಛೇದನ ತೆಗೆದುಕೊಂಡಿದ್ದರು. ಈ ಬಗ್ಗೆ ಬಂದ ಕಾಮೆಂಟ್‌ಗಳಿಗೆ ಜೋಡಿಯಾಗಿಯೇ ಉತ್ತರ ಕೊಟ್ಟು ಬಾಯಿ ಮುಚ್ಚಿಸಿದರು. ವಿಚ್ಛೇದನದ ಬಳಿಕವೂ ನಟಿ ನಿವೇದಿತಾ ಗೌಡ ಮೊದಲಿನಂತೇ ಇನ್‌ಸ್ಟಾಗ್ರಾಮ್ ರೀಲ್ಸ್ ಶೇರ್ ಮಾಡಿದ್ದಾರೆ. ಆದರೆ ಈ ರೀಲ್ಸ್‌ಗಳಿಗೆ ಬಂದಿರುವ ಕಾಮೆಂಟ್‌ಗಳನ್ನು ನೋಡಿದೆ ತಲೆ ತಿರುಗುವುದು ಗ್ಯಾರಂಟಿ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಈ ರೀತಿ ಬೇರೆ ಹೆಸರಲ್ಲಿ ಕೆಟ್ಟ ಕೊಳಕು ಕಾಮೆಂಟ್ ಮಾಡೋರಿಗೆ ಸದ್ಯದಲ್ಲೇ ದೊಡ್ಡದೊಂದು ಶಾಕ್ ಕಾದಿದೆ. ಅದಕ್ಕಿಂತ ಸೋಷಿಯಲ್ ಮೀಡಿಯಾದಲ್ಲಿ ಗೌರವಯುತವಾಗಿ ತಮ್ಮ ಅಭಿಪ್ರಾಯ ದಾಖಲಿಸುವುದು ಸೇಫ್. ಇಲ್ಲವಾದರೆ ಏನಾಗುತ್ತೆ ಅನ್ನೋದನ್ನು ಕೇಳಿದ್ರೆ ನಿಜಕ್ಕೂ ಶಾಕ್ ಮಾತ್ರವಲ್ಲ, ಶೇಕ್ ಕೂಡ ಆಗ್ತೀರ!
ನಿವೇದಿತ ಗೌಡ ಎಂಬ ನೋಡಲು ಬಾಬಿ ಗರ್ಲ್‌ನಂತೆ ಕಾಣುವ ಹುಡುಗಿ. ಅದಕ್ಕೆ ಸರಿಯಾಗಿ ಅವಳ ಆಕ್ಸೆಂಟ್ ಸಹ ಡಿಫರೆಂಟ್ ಆಗಿ ಸ್ಟೈಲಿಶ್ ಆಗಿ ಇದೆ. ಈ ಹುಡುಗಿ ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಾಗ ಸುದೀಪ್ ಕೂಡ ಕಕ್ಕಾಬಿಕ್ಕಿಯಾಗಿದ್ದರು. ಆದರೆ ಇವಳ ಮುಗ್ಧತೆ, ಒಳ್ಳೆತನ ಕಂಡು, ಇಂಥ ಚಿಕ್ಕ, ಮಗ್ಧ ಮನಸ್ಸಿನ ಹುಡುಗಿ ಬಿಗ್‌ಬಾಸ್‌ನಂಥಾ ಮನೆಯಲ್ಲಿ ಹೇಗಿರುತ್ತಾಳೋ ಏನೋ ಎಂದು ಆತಂಕವನ್ನೂ ವ್ಯಕ್ತ ಪಡಿಸಿದ್ದರು.
ಲಕ್ಷ್ಮೀ ನಿವಾಸ: ದುಡ್ಡು ಕೊಡಲು ಬಂದ ಚೆಲುವಿಗೆ ಹೀಗೆ ಹೇಳೋದಾ ವೀಣಕ್ಕ?
ಬಿಗ್‌ಬಾಸ್ ಮನೆಯಲ್ಲಿ ನಿವಿ ಆಕ್ಸೆಂಟ್‌ಗೆ ಡ್ರೆಸ್ಸಿಂಗ್ ಸ್ಟೈಲ್‌ಗೆ ಆರಂಭದಿಂದಲೂ ಕಾಮೆಂಟ್ ಬರುತ್ತಿತ್ತು. ಆದರೆ ಅದೆಲ್ಲವನ್ನೂ ಮೀರಿ ಈಕೆ ಅನೇಕ ಟಾಸ್ಕ್‌ಗಳಲ್ಲಿ ತಾನೆಷ್ಟು ಒಳ್ಳೆಯವಳು, ತನ್ನ ಮನಸ್ಸು ಎಷ್ಟು ಚೆನ್ನಾಗಿದೆ, ಸ್ವಚ್ಛವಾಗಿದೆ ಎಂಬುದನ್ನು ತೋರಿಸಿಕೊಟ್ಟಳು. ಆಗ ಎಲ್ಲರೂ ಈಕೆಯ ಬಗ್ಗೆ ಮೆಚ್ಚುಗೆ ಸೂಚಿಸಲು ಆರಂಭಿಸಿದರು. ಈಕೆಗೆ ಓಟಿಂಗ್ ಕೂಡ ಹೆಚ್ಚಾಗ್ತ ಬಂತು.
ಇನ್ನು ಬಿಗ್‌ಬಾಸ್ ಆದಮೇಲೆ ಮತ್ತೊಂದು ಶಾಕ್ ಕೊಟ್ಟಳು. ಬಿಗ್‌ಬಾಸ್‌ನಲ್ಲಿ ಗಾಯಕ ಚಂದನ್ ಶೆಟ್ಟಿ ಮೇಲೆ ಮೂಡಿದ ಕ್ರಶ್, ಮುಂದೆ ಆತ ಪ್ರೊಪೋಸ್ ಮಾಡಿದಾಗ ಒಪ್ಪಿಕೊಳ್ಳುವ ಹಾಗೆ ಮಾಡಿತು. ಶೀಘ್ರದಲ್ಲೇ ಈ ಜೋಡಿ ಹಸೆಮಣೆಯನ್ನೂ ಏರಿತು. ಮದುವೆಯ ಬಗ್ಗೆ ಕಲ್ಪನೆಯೂ ಇಲ್ಲದ ವಯಸ್ಸಲ್ಲಿ ನಿವೇದಿತಾ ತನಗಿಂತ ಹತ್ತು ವರ್ಷ ದೊಡ್ಡವರಾದ ಚಂದನ್ ಕೈ ಹಿಡಿದರು. ಹೀಗೆ ವಯಸ್ಸಿನ ಗ್ಯಾಪ್ ಒಂದು ಹಂತಕ್ಕಿಂತ ಹೆಚ್ಚಾದರೆ ಸಾಕಷ್ಟು ಭಿನ್ನಾಭಿಪ್ರಾಯಗಳು ಬಂದೇ ಬರುತ್ತವೆ. ಒಂದು ಜನರೇಶನ್ನೇ ಬದಲಾಗಿರುವಾಗ ಇಬ್ಬರ ನಡುವೆ ಹೊಂದಾಣಿಕೆ ಅನ್ನೋದು ಅಷ್ಟು ಸುಲಭ ಅಲ್ಲ. ಇವರ ವಿಷಯದಲ್ಲೂ ಹೀಗೇ ಆಯ್ತು. ಜೆನ್ ಝೀ ಹುಡುಗಿ ನಿವಿ, ಮಿಲೇನಿಯಲ್ ಹುಡುಗ ಚಂದನ್ ನಡುವೆ ಭಿನ್ನಾಪ್ರಾಯ ಹೆಚ್ಚಾಗಿ ಡಿವೋರ್ಸ್ ಪಡೆದರು. ಇದಕ್ಕೆ ಬೇರೆ ಕಾರಣಗಳೂ ಇರಬಹುದು. ಅದು ಅವರ ಪರ್ಸನಲ್.
ಡಾ. ಬ್ರೋ ಜೊತೆ ಕೆಲಸ ಮಾಡೋ ಅವಕಾಶ...ಗೋ ಪ್ರವಾಸದಲ್ಲಿ ಖಾಲಿ ಇದೆ ಈ ಎಲ್ಲ ಜಾಬ್
ಆದರೆ ಈಗ ನಮ್ಮ ಮುಂದಿರುವ ಪ್ರಶ್ನೆ ಈಕೆಯ ಪೋಸ್ಟ್ ಬಾಯಿಗೆ ಬಂದ ಹಾಗೆ ಕಾಮೆಂಟ್ ಮಾಡುವ ನೀಚ, ಕೊಳಕು ಮನಸ್ಸಿನ ವ್ಯಕ್ತಿಗಳಿಗೆ ಶೀಘ್ರ ತಕ್ಕ ಪಾಠ ಕಾದಿದೆ ಅನ್ನೋದು. ಹೀಗೆ ಫೇಕ್ ಅಕೌಂಟ್ ಕ್ರಿಯೇಟ್ ಮಾಡುವವರ ವಿರುದ್ಧ ಅತಿ ಶೀಘ್ರವಾಗಿ ಕ್ರಮವನ್ನೇ ಕೈಗೊಳ್ಳಲಾಗುತ್ತದೆ. ಇಂಥವರ ಜನ್ಮ ಜಾಲಾಡಲು ಸೈಬರ್ ಕ್ರೈಮ್ ಟೀಮ್ ಸಕಲ ಸಿದ್ಧತೆಗಳನ್ನೂ ಮಾಡುತ್ತಿದೆ ಎನ್ನಲಾಗಿದೆ. ಸೋ ಹೀಗೆ ಕಾಮೆಂಟ್ ಮಾಡೋದು ಕೊಂಚ ಹುಷಾರಾಗಿರೋದು ಒಳ್ಳೆಯದು.