ಕಾಟನ್ ಕ್ಯಾಂಡಿ ಹಾಡಿಗೆ ಸಖತ್ ಸ್ಟೈಲಿಶ್ ಆಗಿ ಹೆಜ್ಜೆ ಹಾಕಿದ ರೀಲ್ಸ್ ರಾಣಿ ರೇಷ್ಮಾ. ಜನ ಏನಂತಿದ್ದಾರೆ ಗೊತ್ತಾ?
ಸೋಷಿಯಲ್ ಮೀಡಿಯಾದಲ್ಲಿ ಹಲೋ ಫ್ರೆಂಡ್ಸ್, ಬಾಯ್ ಫ್ರೆಂಡ್ಸ್ ಎನ್ನುತ್ತಾ ಸದಾ ಚಿತ್ರ ವಿಚಿತ್ರ ರೀಲ್ಸ್ ಮಾಡುತ್ತಾ, ರೀಲ್ಸ್ ರೇಷ್ಮಾ, ರೇಷ್ಮಾ ಆಂಟಿ (Reels Reshma) ಅಂತಾನೆ ಜನಪ್ರಿಯತೆ ಪಡೆದ ಸೋಶಿಯಲ್ ಮೀಡಿಯಾದಲ್ಲಿ ಎಂಟರ್ ಟೇನರ್, ಜೊತೆಗೆ ಕನ್ನಡ ರಿಯಾಲಿಟಿ ಶೋನಲ್ಲಿ (reality show) ಮಿಂಚಿದ ರೇಷ್ಮಾ ಇದೀಗ ಹೊಸದಾದ ವಿಡೀಯೋ ಮೂಲಕ ಸಖತ್ ಸೌಂಡ್ ಮಾಡ್ತಿದ್ದಾರೆ. ಇವರು ವಿಡೀಯೋ ನೋಡಿ ಜನ ಅಚ್ಚರಿಯಿಂದ ಕಣ್ಣು ಕಣ್ಣು ಬಿಡ್ತಿಡ್ಡಾರೆ.
ರೇಶ್ಮಾ ಆಂಟಿ ರೀಲ್ಸ್ ನೋಡುತ್ತಾ ಮಷಿನ್‌ನಿಂದ ಕೈ ಕಟ್ ಮಾಡಿಕೊಂಡ ಕಾರ್ಮಿಕ; 4 ಲಕ್ಷ ಡಿಮ್ಯಾಂಡ್ ಇಟ್ಟ ತರ್ಲೆಗಳು!
ಆರಂಭದಲ್ಲೆಲ್ಲಾ, ಸುಮ್ಮನೆ ಬಾಯಿ ಬಂತಂತೆ ಮನಸ್ಸು ಬಿಚ್ಚಿ ಮಾತನಾಡುವ ಮೂಲಕ ವಿಡಿಯೋ ಮಾಡಿ, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದ ರೇಷ್ಮಾ ಇತ್ತೀಚಿನ ದಿನಗಳಲ್ಲಿ ಒಂದಷ್ಟು ಕ್ರಿಯೇಟಿವ್ ವಿಡೀಯೋ ಮೂಲಕ ಸದ್ದು ಮಾಡ್ತಿದ್ದಾರೆ. ಅಡುಗೆ ವಿಡೀಯೋ, ಡ್ಯಾನ್ಸ್ ವಿಡಿಯೋ (Dance Video)ಮಾಡುತ್ತಾ ರಂಜಿಸುತ್ತಿದ್ದಾರೆ. ಈ ಹಿಂದೆ ಕನ್ನಡದ ಮತ್ತೊಬ್ಬ ಕಂಟೆಂಟ್ ಕ್ರಿಯೇಟರ್ ಆಗಿದ್ದ ನವೀನ್ ಕುಮಾರ್ ಜೊತೆ ಬಿಳಿ ಸೀರೆಯುಟ್ಟು ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ ಹಾಡಿಗೆ ಹೆಜ್ಜೆ ಹಾಕಿದ್ದರು. ಈ ವಿಡೀಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು, ಜೊತೆಗೆ ಟ್ರೋಲ್ ಕೂಡ ಆಗಿತ್ತು. ಯಾರ್ ಯಾರ್ ಜೊತೆನೋ ವಿಡೀಯೋ ಮಾಡ್ತಾರೆ, ನಾಚಿಗೆ ಆಗೋದಿಲ್ವ ಎನ್ನುವ ಮಾತುಗಳು ಸಹ ಕೇಳಿ ಬಂದಿತ್ತು. ಆದರೆ ಬಳಿಕ ರೇಷ್ಮಾ ಎಲ್ಲಾ ಟ್ರೋಲರ್ಸ್ ಗೆ ಖಡಕ್ ಉತ್ತರ ನೀಡಿ, ನನ್ನ ಗಂಡ ಯಾಸಿನ್ ರಾಜ ಮಾತ್ರ, ನಾನು ಡ್ಯಾನ್ಸ್ ಮಾಡ್ತಿನಿ ಅಂದ್ರೆ ಅದು ಕಂಟೆಂಟ್ ಗಾಗಿ, ಅವರು ನನ್ನ ಅಣ್ಣ, ತಮ್ಮ ಸಹ ಆಗಿರಬಹುದು ಎಂದಿದ್ದರು. ಇದೀಗ ಮತ್ತೆ ಡಿಕೆ ನವೀನ್ ಕುಮಾರ್ (DJ Naveen Kumar) ಜೊತೆ ಮತ್ತೊಂದು ವಿಡೀಯೋ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದ್ದಾರೆ.
ಛೀ ಛೀ...ಯುವಕನ ಜೊತೆಗಿರುವ ವಿಡಿಯೋ ವೈರಲ್: ಡಿವೋರ್ಸ್ ಗಾಸಿಪ್‌ಗೆ ಬ್ರೇಕ್ ಹಾಕಿದ ರೇಶ್ಮಾ ಆಂಟಿ!
ರೇಷ್ಮಾ ಇದೀಗ ಕಾಟನ್ ಕ್ಯಾಂಡಿ (Cotton Candy) ಹಾಡಿಗೆ ನವೀನ್ ಕುಮಾರ್ ಜೊತೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ ಈ ರೀಲ್ಸ್ ಭರ್ಜರಿ ವೈರಲ್ (viral) ಆಗುತ್ತಿದೆ. ಗಾಯಕ ಹಾಗು ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಇತ್ತೀಚೆಗೆ ಬಿಡುಗಡೆ ಮಾಡಿದ ‘ಕಾಟನ್ ಕ್ಯಾಂಡಿ’ ಹಾಡು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಇದೀಗ ಅದೇ ಹಾಡಿಗೆ ರೇಷ್ಮಾ ಹಾಗೂ ನವೀನ್ ಹೆಜ್ಜೆ ಹಾಕಿದ್ದಾರೆ. ಗಾಯಕ ಚಂದನ್ ಶೆಟ್ಟಿ ಜೋಡಿಯಾಗಿ ಸುಷ್ಮಿತಾ ಗೋಪಿನಾಥ್ ನಟಿಸಿರುವ ಈ ಹಾಡು ಹೊಸ ವರ್ಷಕ್ಕೆ ಟ್ರೆಂಡ್ ಸೃಷ್ಟಿಸಿತ್ತು.
ಸಿದ್ದರಾಮಯ್ಯ ಸರ್ ನನ್ನ ಒಳಗೆ ಕರ್ಕೊಳ್ಳಿ; ವಿಧಾನಸೌಧ ಮುಂದೆ ಕಿರುಚಿ ಕೂಗಾಡಿದ ರೇಶ್ಮಾ ಆಂಟಿ ವಿಡಿಯೋ ವೈರಲ್
ಈ ಹಾಡಿಗಾಗಿ ರೇಷ್ಮಾ ಕಪ್ಪು ಬಣ್ಣದ ಗೌನ್ ಧರಿಸಿದ್ದು, ಹೀಲ್ಸ್ ಧರಿಸಿ, ಹೇರ್ ಸ್ಟೈಲ್ ಮಾಡಿಸಿ, ಸಖತ್ ಬೋಲ್ಡ್ ಮತ್ತು ಬ್ಯೂಟಿಫುಲ್ ಆಗಿ ಕಾಣಿಸ್ತಿದ್ದಾರೆ. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಈ ವಿಡಿಯೋವನ್ನು ಕೆಲವರು ಮೆಚ್ಚಿಕೊಂಡರೆ, ಮತ್ತೆ ಕೆಲವರು ಟ್ರೋಲ್ ಮಾಡ್ತಿದ್ದಾರೆ. ರೇಷ್ಮಾ ಆಂಟಿ (Reshma Aunty)ಬರ್ತಾ ಬರ್ತ ನಿವೇದಿತಾ ಗೌಡ ಆಗ್ತಿದ್ದಾರೆ ಎಂದಿದ್ದಾರೆ. ಅಷ್ಟೇ ಅಲ್ಲ ಅಣ್ಣ ತಂಗಿ ಹೀಗೆಲ್ಲಾ ಡ್ಯಾನ್ಸ್ ಮಾಡ್ತಾರ ಅಂತಾನೂ ಕೇಳಿದ್ದಾರೆ. ಟ್ರೋಲೊ ಟ್ರೆಂಡೋ ಒಟ್ಟಲ್ಲಿ ರೇಷ್ಮಾ ಆಂಟಿಯಂತೂ ಫುಲ್ಲು ಫೇಮಸ್.