
ಸಿಮರ್ ಕಾ ಮತ್ತು ಕಹಾಂ ಹಮ್ ಕಹಾಂ ತುಮ್ ಹಿಂದಿ ಧಾರಾವಾಹಿಗಳಲ್ಲಿ ಅಭಿನಯಿಸಿರುವ ನಟಿ ದೀಪಿಕಾ ಕಾಕರ್ ಬಿಗ್ ಬಾಸ್ ಸೀಸನ್ 12ರಲ್ಲಿ ಸ್ಪರ್ಧಿಸಿ ವಿನ್ನರ್ ಟ್ರೋಫಿ ಹಿಡಿದು ಹೊರ ಬಂದರು. 2011ರಲ್ಲಿ ರೌನಕ್ ಸ್ಯಾಮ್ಸನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ದೀಪಿಕಾ 2015ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. 2018ರಲ್ಲಿ ಭೂಪಾಲ್‌ನಲ್ಲಿ ಸಹ ಕಲಾವಿದ ಶೋಹೇಬ್‌ನ ಮದುವೆ ಮಾಡಿಕೊಂಡು ಇಸ್ಲಾಂಗೆ ಮತಾಂತರ ಮಾಡಿಕೊಂಡರು. ಈಗ ದೀಪಿಕಾ ಪ್ರಗ್ನೆನ್ಸಿ ಫೇಸ್‌ನ ಎಂಜಾಯ್ ಮಾಡುತ್ತಿದ್ದಾರೆ.
ಹಿಂದಿ ಕಿರುತೆರೆ ನಟಿ ದೀಪಿಕಾ ಕಾಕರ್ ಸೆಕೆಂಡ್ ಟ್ರೈಮಿಸ್ಟರ್ ಎಂಜಾಯ್ ಮಾಡುತ್ತಿದ್ದಾರೆ. ಲೈಫ್ ಸ್ಟೈಲ್ ಮತ್ತು ದಿನಚರಿ ಬಗ್ಗೆ ವಿಡಿಯೋ ವ್ಲಾಗ್ ಮೂಲಕ ಅಭಿಮಾನಿಗಳಿಗೆ ಅಪ್ಡೇಟ್ ಮಾಡುತ್ತಿದ್ದಾರೆ. ಗರ್ಭಿಣಿಯರು ಏನು ತಿನ್ನುಬೇಕು ಯಾವುದನ್ನು ತಿನ್ನಬಾರದು ಎಂದು ಸಲಹೆಗಳನ್ನು ಹಂಚಿಕೊಂಡಿದ್ದಾರೆ. ದೀಪಿಕಾ ಕಾಕರ್ ಏನೆಲ್ಲಾ ಫಾಲೋ ಮಾಡುತ್ತಿದ್ದಾರೆಂದು ಇಲ್ಲಿದೆ ನೋಡಿ...
ಕೋಳಿ ಕಾಲು ಕೆಟ್ಟ ಧ್ವನಿ, ನೋಡೋಕೆ ಹುಡುಗ: ಅಸಹ್ಯವಾಗಿ ನಟಿ ಅನನ್ಯಾ ಪಾಂಡೆ ಕಾಲೆಳೆದ ಟ್ರೋಲಿಗರು
'ಫಸ್ಟ್ ಟ್ರೈಮಿಸ್ಟರ್‌ಗಿಂತ ಎರಡನೇ ಟ್ರೈಮಿಸ್ಟರ್‌ನಲ್ಲಿ ನಾನು ನೆಮ್ಮದಿಯಾಗಿರುವೆ. ಕೆಲವೊಮ್ಮೆ ನನ್ನ ಎನರ್ಜಿ ತುಂಬಾ ಕಡಿಮೆ ಆಗುತ್ತದೆ ಕೆಲವೊಂದು ಸಲ ತುಂಬಾ ಹಿಂಸೆ ಆಗುತ್ತದೆ. ಆರಂಭದಲ್ಲಿಈ ಟ್ರೈಮಿಸ್ಟ್ ಚೆನ್ನಾಗಿದೆ ಎಂದುಕೊಂಡೆ ಆದರೆ ಆ ರೀತಿ ಅಲ್ಲ ಎಂದು ನಿಧಾನವಾಗಿ ತಿಳಿಯಲು ಶುರುವಾಯ್ತು' ಎಂದು ವ್ಲಾಗ್‌ನಲ್ಲಿ ಹೇಳಿರುವ ದೀಪಿಕಾ ಕಾಕರ್ ಈ ಸಮಯದಲ್ಲಿ ಬಳಸುವ ಮೇಕಪ್ ಪ್ರಾಡೆಕ್ಟ್‌ಗಳ ಬಗ್ಗೆ ಎಚ್ಚಿರಿಕೆ ವಹಿಸಬೇಕು ಎಂದಿದ್ದಾರೆ.
ಎರಡನೇ ಟ್ರೈಮಿಸ್ಟರ್ ಆರಂಭವಾಗುತ್ತಿದ್ದಂತೆ ದೀಪಿಕಾ ಕಾಕರ್ ಆಹಾರ ಪದತಿ ಬದಲಾಯಿಸಿಕೊಂಡಿದ್ದಾರೆ. 'ಗರ್ಭಿಣಿ ಆದಾ ಆರಂಭದಲ್ಲಿ ತುಂಬಾನೇ ತಿನ್ನುತ್ತಿದ್ದೆ ಆದರೆ ಈಗ ಅಷ್ಟೆಲ್ಲಾ ಆಗುತ್ತಿಲ್ಲ. ಆದಷ್ಟು ಪೌಷ್ಠಿಕಾಂಶ ಇರುವ ಆಹಾರ ಸೇವಿಸುವ ಪ್ರಯತ್ನ ಮಾಡುತ್ತಿರುವೆ. ದಿನವೂ ತಪ್ಪದೆ ನಾನು ಎರಡು ಕರ್ಜೂರ ಸೇವಿಸಬೇಕು ಎಂದು ನನ್ನ ವೈದ್ಯರು ಹೇಳಿದ್ದರು' ಎಂದು ಮಾತನಾಡಿದ್ದಾರೆ. ದೀಪಿಕಾ ಕಾಕರ್ ದಿನವೂ ತಪ್ಪದೆ ಕೆಂಪಕ್ಕಿ, ಮೊಸರು ಅನ್ನ, ಆಲೂ ಬಿಂಡಿ ಮತ್ತೂ ಮೂಂಗ್ ದಾಲ್ ಸೇವಿಸುವೆ. ಕೆಲವೊಮ್ಮೆ ದೇಹಸ ತೂಕ ಹೆಚ್ಚಾಗುತ್ತದೆ ಆಗಾಗ ಚಿಕನ್ ಸ್ಯಾಂಡ್‌ವಿಚ್ ತಿನ್ನಬೇಕು ಅನಿಸುತ್ತದೆ. ಏನಾದರೂ ಕುಡಿಯಬೇಕು ಅನಿಸಿದರೆ ರೋಸ್ ಮಿಲ್ಕ್ ಆಯ್ಕೆ ಮಾಡಿಕೊಳ್ಳುವೆ. ಗರ್ಭಿಣಿ ಆಗುವ ಮುನ್ನದಿಂದ ನನಗೆ ಅಸಿಡಿಟಿ ಹೆಚ್ಚಿದೆ ಎರಡನೇ ಟ್ರೈಮಿಸ್ಟರ್‌ನಲ್ಲಿ ತುಂಬಾ ಹೆಚ್ಚಾಗಿತ್ತು. ಕೆಲವೊಮ್ಮೆ ಹಿಂಸೆ ಆಗಿ ಉಸಿರುಗಟ್ಟಿಸುತ್ತದೆ' ಎಂದು ದೀಪಿಕಾ ಹೇಳಿದ್ದಾರೆ.
ಹಿಂದು ಮುಸ್ಲಿಂ ಮದ್ವೆ ಆಗ್ಬಾರ್ದಾ? ತಲಾಖ್ ಹೇಳ್ತೀನಿ ಎಂದು ಪತಿ ಆದಿಲ್ ಬೆದರಿಕೆ ಹಾಕುತ್ತಿದ್ದಾರೆ: ರಾಖಿ ಸಾವಂತ್
ದೀಪಿಕಾ ವಿಡಿಯೋದಲ್ಲಿ ಪತಿ ಶೋಯೆಬ್ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ. ಪ್ರತಿ ಸಲ ಸ್ಕ್ಯಾನ್‌ಗೆ ಹೋಗುವಾಗ ಕೆಲಸದಿಂದ ರಜೆ ತೆಗೆದುಕೊಳ್ಳುತ್ತಾರಂತೆ. 'ಸ್ಕ್ಯಾನ್ ಸಮಯದಲ್ಲಿ ಮಗುವನ್ನು ನೋಡಿದಾಗ ತುಂಬಾ ಸ್ಪೆಷಲ್ ಮತ್ತು ಎಮೋಷನಲ್ ಫೀಲ್ ಆಗುತ್ತದೆ. ಇದೊಂದು ಮಿರಾಕಲ್. ನಮ್ಮೊಳಗೆ ಒಂದು ಜೀವ ಇದ್ದು ಅದು ಬೆಳೆಯುವುದನ್ನು ನೋಡಲು ತುಂಬಾ ಖುಷಿಯಾಗುತ್ತದೆ. ಪ್ರೆಗ್ನೆಂಟ್ ಎಂದು ತಿಳಿದ ಕ್ಷಣದಿಂದ ಶೋಯೆಬ್ ಮತ್ತು ನನ್ನ ಸಂಬಂಧ ಗಟ್ಟಿಯಾಗಿದೆ' ಎಂದಿದ್ದಾರೆ ದೀಪಿಕಾ.
ಎರಡನೇ ಟ್ರೈಮಿಸ್ಟರ್ ಸಮಯದಲ್ಲಿ ಗರ್ಭಿಣಿಯರು ಹೆಚ್ಚಿಗೆ ಹಾಲು ಸೇವಿಸಬೇಕು ಎಂದು ವೈದರು ಹೇಳುತ್ತಾರಂತೆ. ಮೊಸರು ಮತ್ತು ಪ್ರೋಟಿನ್ ಸರಿಯಾದ ಸಮಯಕ್ಕೆ ತೆಗೆದುಕೊಳ್ಳಬೇಕು. ಇರನ್ ಅಂಶವನ್ನು ಮಾತ್ರೆ ಮೂಲಕ ಸೇವಿಸಲು ವೈದ್ಯರು ಹೇಳುತ್ತಾರೆ. ಪ್ರತಿಯೊಬ್ಬರ ಪ್ರೆಗ್ನೆನ್ಸಿ ಪ್ರತಿಯೊಬ್ಬರ ಬಾಡಿ ತುಂಬಾನೇ ಡಿಫರೆಂಟ್ ಆಗಿರುತ್ತದೆ. ದೀಪಿಕಾ ಬೇಬಿ ಬಂಪ್ ಲುಕ್‌ನ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ದೀಪಿಕಾಗೆ ಇಷ್ಟ ಆಗುವ ಆಹಾರ, ಡ್ರೆಸ್ ಮತ್ತು ಪುಲ್ ಪ್ಯಾಂಪರ್ ಮಾಡುತ್ತಿದ್ದಾರೆ ಶೋಹೇಬ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.