ಪ್ರಕೃತಿ ಸಾಕ್ಷಿಯಾಗಿ ಚಾರುಗೆ ತಾಳಿ ಕಟ್ಟಿದ ರಾಮಚಾರಿ: ದ್ರೋಹಿಗೆ ಬಾಳು ಕೊಟ್ರಾ ಎಂದು ನೆಟ್ಟಿಗರು!

Published : Feb 23, 2023, 12:37 PM IST
ಪ್ರಕೃತಿ ಸಾಕ್ಷಿಯಾಗಿ ಚಾರುಗೆ ತಾಳಿ ಕಟ್ಟಿದ ರಾಮಚಾರಿ: ದ್ರೋಹಿಗೆ ಬಾಳು ಕೊಟ್ರಾ ಎಂದು ನೆಟ್ಟಿಗರು!

ಸಾರಾಂಶ

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರೋ 'ರಾಮಾಚಾರಿ' ಸೀರಿಯಲ್‌ನಲ್ಲಿ ರಾಮಾಚಾರಿ ಚಾರುವಿಗೆ ಪ್ರಕೃತಿ ಸಾಕ್ಷಿಯಾಗಿ ತಾಳಿ ಕಟ್ಟಿದ್ದಾನೆ. ಪೇ ಪೇ ಢುಂ ಢುಂ ಇಲ್ದೇ ಚಾರು ಚಾರಿ ಸತಿಪತಿಗಳಾಗಿದ್ದಾರೆ.

'ರಾಮಾಚಾರಿ' ಸೀರಿಯಲ್‌ನಲ್ಲಿ ಒಂದು ಕಾಲದ ಬದ್ಧ ದ್ವೇಷಿಗಳಾಗಿದ್ದ ರಾಮಾಚಾರಿ ಮತ್ತು ಚಾರುಲತಾ ಪ್ರಕೃತಿ ಸಾಕ್ಷಿಯಾಗಿ ಸತಿಪತಿಗಳಾಗಿದ್ದಾರೆ. ಜನ್ಮಪೂರ್ತಿ ಚಾರುಲತಾ ಕಣ್ಣಾಗಿ ತಾನಿರುವುದಾಗಿ ರಾಮಾಚಾರಿ ಹೇಳಿದ್ದಾನೆ. ರಾಮಾಚಾರಿ ತನ್ನ ಮನೆಗೆ ಆಹ್ವಾನಿಸುವವರೆಗೆ ತಾನು ತಂದೆ ತಾಯಿ ಜೊತೆಗೇ ಇರುತ್ತೇನೆ ಅಂತ ಚಾರು ಹೇಳಿದ್ದಾಳೆ. ಇನ್ನೊಂದೆಡೆ ರಾಮಾಚಾರಿ ಮನೆಗೆ ಆತನ ತಂದೆಯ ಆಗಮನವಾಗಿದೆ. ಈ ವೇಳೆಗೆ ಅವರಿಗೆ ರಾಮಾಚಾರಿ ಕಣ್ಣಿಗೆ ಬಿದ್ದಿಲ್ಲ. ಬದಲಿಗೆ ಅಪರ್ಣಾ ಫೋಟೋಗೆ ಹಾರ ಬಿದ್ದಿರೋದು ಕಾಣತ್ತೆ. ಅವರು ದುಃಖದಲ್ಲಿರುವಾಗಲೇ ಅವರಿಗೆ ಚಾರುಲತಾ ಕಣ್ಣು ಹೋದದ್ದು, ರಾಮಾಚಾರಿ ಆಕೆಯ ಆರೈಕೆ ಮಾಡುತ್ತಿರುವ ಸಂಗತಿಗಳೆಲ್ಲ ತಿಳಿಯುತ್ತೆ. ಇನ್ನೊಂದೆಡೆ ತಾನು ಅತ್ತೆಯ ಮಗಳನ್ನು ಮದುವೆ ಆಗೋದಾಗಿ ರಾಮಾಚಾರಿ ಈ ಹಿಂದೆ ಅವರಿಗೆ ಮಾತು ಕೊಟ್ಟಿದ್ದ. ಆದರೆ ಈಗ ಚಾರುವಿಗೆ ತಾಳಿ ಕಟ್ಟಿದ್ದಾನೆ. ಸದ್ಯಕ್ಕೀಗ ಆತನ ಸ್ಥಿತಿ ಅಡಕತ್ತರಿಯಲ್ಲಿ ಸಿಕ್ಕಿಕೊಂಡ ಹಾಗಿದೆ.

ಯಾವಾಗ ರಾಮಾಚಾರಿ ಚಾರುವನ್ನು ಪ್ರಾಣಾಪಾಯದಿಂದ ಕಾಪಾಡಿದನೋ ಆಗ ಅಲ್ಲೀವರೆಗೆ ದ್ವೇಷಿಸುತ್ತಿದ್ದ ರಾಮಾಚಾರಿಯನ್ನು ಚಾರುಲತಾ ಪ್ರೀತಿಸಲು ಶುರು ಮಾಡಿದಳು. ಆದರೆ ರಾಮಾಚಾರಿಗೆ ತನ್ನ ಪ್ರಾಜೆಕ್ಟ್‌ಗೆ ಕಲ್ಲು ಹಾಕಿದ ಚಾರು ಮೇಲೆ ಸಿಟ್ಟಿತ್ತು. ಆಕೆಯಿಂದ ಅತ್ತಿಗೆ ಚಿಕಿತ್ಸೆ ಸಿಗದೆ ಸಾಯುವಂತಾಯ್ತು ಅಂತ ತಿಳಿದು ಚಾರಿ ಮನೆಯವರಿಗೆ ಚಾರು ಮೇಲೆ ದ್ವೇಷ ಹೆಚ್ಚಾಯ್ತು. ಆದರೆ ಒಂದು ಹೊತ್ತಲ್ಲಿ ಚಾರು ರಾಮಾಚಾರಿಯನ್ನು ತಬ್ಬಿಕೊಳ್ಳಲು ಬಂದಾಗ ಆತ ಅವಳನ್ನು ನೂಕಿ ಆಕೆ ಕೆಮಿಕಲ್‌ ಮೇಲೆ ಬಿದ್ದು ಅವಳ ಕಣ್ಣುಗಳೇ ಹೋಗಿಬಿಟ್ಟಿವೆ. ಯಾವ ಚಿಕಿತ್ಸೆ ಮಾಡಿದರೂ ಬರದ ದೃಷ್ಟಿ ಇದೀಗ ರಾಮಾಚಾರಿ ಗುರುಗಳೊಬ್ಬರ ಚಿಕಿತ್ಸೆಯಿಂದ ಮರಳಿ ಬಂದಿದೆ. ಆದರೆ ತನಗೆ ದೃಷ್ಟಿ ಬಂದಿದ್ದು ಗೊತ್ತಾದರೆ ರಾಮಾಚಾರಿ ತನ್ನನ್ನು ಬಿಟ್ಟು ಹೋಗುತ್ತಾನೆ ಅನ್ನೋದು ಗೊತ್ತಾಗಿ ಚಾರು ಕುರುಡಿಯಂತೆ ನಟಿಸುತ್ತಾಳೆ. ತನ್ನನ್ನು ಆತ ಮದುವೆ ಆಗದಿದ್ದರೆ ಬೆಟ್ಟದಿಂದ ಕೆಳಗೆ ಹಾರಿ ಪ್ರಾಣ ಬಿಡುವುದಾಗಿ ಹೇಳಿದ್ದಾಳೆ.

Lakshana serial: ಕಿಚನ್ ನಲ್ಲಿ ಭೂಪತಿ ಸಿಎಸ್‌, ಹಬ್ಬದಡುಗೆ ಇವ್ರದ್ದೇ ಅಂತೆ!

ಅನ್ಯದಾರಿಯಿಲ್ಲದೇ ರಾಮಾಚಾರಿ ಚಾರುವಿಗೆ ತಾಳಿ ಕಟ್ಟಿದ್ದಾನೆ. ಪ್ರಕೃತಿಯ ಸಾಕ್ಷಿಯಾಗಿ ತಾನು ನಂಬುವ ದೇವಿಯನ್ನು ನೆನೆಸಿಕೊಂಡು ಚಾರುವಿಗೆ ಮೂರು ಗಂಟು ಹಾಕಿದ್ದಾನೆ. ಆದರೆ ಗುರುಗಳಿಗೆ ಸತ್ಯ ತಿಳಿದಿದೆ. ಆದಷ್ಟು ಬೇಗ ರಾಮಾಚಾರಿಗೆ ಸತ್ಯ ತಿಳಿಸದಿದ್ದರೆ ಈ ಸತ್ಯವೇ(Truth) ಅವರ ದಾಂಪತ್ಯಕ್ಕೆ ಮುಳ್ಳಾಗುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಆದಷ್ಟು ಬೇಗ ಸತ್ಯಸಂಗತಿ ರಾಮಾಚಾರಿಗೆ ತಿಳಿಸೋದಾಗಿ ಚಾರು ಹೇಳಿದ್ದಾಳೆ. ಜೊತೆಗೆ ದೇವಿಯ ವಿಗ್ರಹದ ಮುಂದೆ ರಾಮಾಚಾರಿಗೆ ಮಾತು ಕೊಟ್ಟಿದ್ದಾಳೆ. ತಾನು ರಾಮಾಚಾರಿ ಮದುವೆ ಆಗಿರುವ ವಿಚಾರವನ್ನು ಎಲ್ಲೂ ಬಾಯಿ ಬಿಡೋದಿಲ್ಲ ಅಂದಿದ್ದಾಳೆ. ಜೊತೆಗೆ ಯಾವಾಗ ರಾಮಾಚಾರಿ ಕರೆಯುತ್ತಾನೋ ಆಗಲೇ ಆತನ ಮನೆಗೆ ಬರುವುದಾಗಿ ತಿಳಿಸಿದ್ದಾಳೆ. ಬದುಕಿನಾದ್ಯಂತ ಆತನ ಕಷ್ಟ ಸುಖಗಳಿಗೆ ಜೊತೆಯಾಗೋದಾಗಿ ದೇವರ ಮುಂದೆ ಚಾರು ಮಾತು ಕೊಟ್ಟಿದ್ದಾಳೆ.

ಇದೀಗ ಮನೆಗೆ ರಾಮಾಚಾರಿ ತಂದೆ ನಾರಾಯಣಾಚಾರ್ಯರ ಆಗಮನವಾಗಿದೆ. ಅವರಿಗೆ ಹಿಂದೆಯೋ ರಾಮಾಚಾರಿ ಮಾತು ಕೊಟ್ಟಿದ್ದಾನೆ. ಸೋ ಇದೀಗ ಅವರು ಅತ್ತೆ ಮಗಳನ್ನು ಮದುವೆಯಾಗುವಂತೆ ರಾಮಾಚಾರಿಗೆ ಹೇಳುವ ಸಾಧ್ಯತೆ ಇದೆ. ಇನ್ನೊಂದೆಡೆ ಚಾರುವಿಗೆ ಕಣ್ಣು ಬಂದಿಲ್ಲ ಎಂದೇ ಆತ ತಿಳಿದಿದ್ದಾನೆ. ಇದೀಗ ಸತ್ಯ ಸಂಗತಿ ತಿಳಿದಾಗ ಆತನ ರಿಯಾಕ್ಷನ್ ಹೇಗಿರಬಹುದು, ತನ್ನ ಅತ್ತೆಯ ಮಗಳನ್ನು ಆತ ಹೇಗೆ ಮದುವೆ ಆಗ್ತಾನೆ ಅನ್ನೋ ಪ್ರಶ್ನೆಗಳು(Questions) ಮುಂದಿವೆ. ವೀಕ್ಷಕರು ಈ ಎಪಿಸೋಡ್(Episode) ಮೆಚ್ಚಿ ಕಮೆಂಟ್ ಮಾಡ್ತಿದ್ದಾರೆ.

ಕುರುಡಿ ಆಟ ಶುರು ಮಾಡಿದ ಚಾರು; ಅಮ್ಮ ಮಗಳ ನಾಟಕದಲ್ಲಿ ರಾಮಚಾರಿ ಬಾಳು ಬರ್ಬಾದು ಎಂದ ನೆಟ್ಟಿಗರು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?