ವಿಮಾನದಲ್ಲಿ ಸಿಗರೇಟ್‌ ಸೇದಿದ ಐಶ್ವರ್ಯ ರೈ ಅರೆಸ್ಟ್‌; ಅಸಲಿ ಕಥೆ ತಿಳಿಸಿದ ಮುಂಬೈ ಪೊಲೀಸರು

Published : Feb 23, 2023, 12:49 PM IST
ವಿಮಾನದಲ್ಲಿ ಸಿಗರೇಟ್‌ ಸೇದಿದ ಐಶ್ವರ್ಯ ರೈ ಅರೆಸ್ಟ್‌; ಅಸಲಿ ಕಥೆ ತಿಳಿಸಿದ ಮುಂಬೈ ಪೊಲೀಸರು

ಸಾರಾಂಶ

ಮುಂಬೈ ಟು ರಾಂಚಿ ವಿಮಾನದಲ್ಲಿ ಸಿಗರೇಟ್ ಸೇದಿದ ಐಶ್ವರ್ಯ ರೈ. ಡಿಟೆಕ್ಟರ್‌ ಅಲರಾಂ ಸೌಂಡ್‌ ಕೇಳಿ ಜನರು ಗಾಬರಿ... 

ವಿಮಾನದಲ್ಲಿ ಪ್ರಯಾಣ ಮಾಡುವಾಗ ಸಾಕಷ್ಟು ಕಟ್ಟು ನಿಟ್ಟುಗಳನ್ನು ಪಾಲಿಸಬೇಕಾಗುತ್ತದೆ. ಬ್ಯಾಗ್ ಚೆಕ್‌ ಇನ್‌ ಮಾಡುವಾಗ ಏನೇಲ್ಲಾ ಬ್ಯಾಗಲಿದೆ ಎಂದು ಸ್ಕ್ಯಾನ್ ಮಾಡಲಾಗುತ್ತದೆ. ಲಿಕ್ವಿಡ್‌ ಐಟಂ, ಚಾಕು ಚೂರಿ ಇದ್ದರಂತೂ ಮುಗೀತು ಕಥೆ ಯಾಕೆ ಏನು ಎತ್ತಾ ಎಂದು 100 ಪ್ರಶ್ನೆ ಕೇಳಿ ತಡೆಯುತ್ತಾರೆ. ಹೀಗಿರುವಾಗ ಐಶ್ವರ್ಯ ರೈ ಹೇಗೆ ಬೆಂಕಿ ಪಟ್ಟಣ ಅಥವಾ ಲೈಟರ್‌ ತೆಗೆದುಕೊಂಡು ಹೋದರು ಅನ್ನೋದೇ ಜನರಿಗೆ ತಲೆ ಬಿಸಿಯಾಗಿದೆ. ಅಲ್ಲದೆ ಸಿಗರೇಟ್ ಸೇದುತ್ತಿರುವ ವಿಡಿಯೋ ಮಾಡುತ್ತಿರುವುದು ನೋಡಿ ಇನ್ನಷ್ಟು ಟೆನ್ಶನ್ ಹೆಚ್ಚಾಗಿದೆ. ಲ್ಯಾಂಡಿಂಗ್ ಮಾಡುವ ವೇಳೆ ಪೊಲೀಸರು ಐಶ್ವರ್ಯನ ಅರೆಸ್ಟ್‌ ಮಾಡಿದ್ದಾರೆ.

ಹೌದು! ಫೆಬ್ರವರಿ 18ರಂದು ಮುಂಬೈಯಿಂದ ರಾಂಚಿಗೆ ಪ್ರಯಾಣ ಮಾಡುತ್ತಿದ್ದ ಐಶ್ವರ್ಯ ರೈ ಬಾತ್‌ರೂಮ್‌ನಲ್ಲಿ ಸಿಗರೇಟ್ ಸೇದಿದ್ದಾರೆ ಎನ್ನಲಾಗಿದೆ. ಬೆಂಕಿ ಹಚ್ಚುತ್ತಿದ್ದಂತೆ ಅಲ್ಲಿದ ಡಿಟೆಕ್ಟರ್‌ ಅಲರಾಂ ಜೋರಾಗಿ ಹೊಡೆದುಕೊಂಡಿದೆ. ವಿಮಾನದಲ್ಲಿದ್ದ ಇನ್ನಿತ್ತರ ಪ್ಯಾಸೆಂಜರ್‌ಗಳು, ಗಗನ ಸಖಿಯರು ಮತ್ತು ಪೈಲೆಟ್‌ ಫುಲ್ ಅಲರ್ಟ್‌ ಆಗಿದ್ದಾರೆ. ಎಲ್ಲಾ ಕಡೆ ನೋಡಿ ಕೊನೆಗೆ ಬಾತ್‌ರೂಮ್‌ ಬಾಗಿಲು ತೆಗೆದು ನೋಡಿದಾಗ ಐಶ್ವರ್ಯ ಸಿಗರೇಟ್ ಹಚ್ಚಿಕೊಂಡು ಸೇದುತ್ತಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಪೊಲೀಸರು ಐಶ್ವರ್ಯರನ್ನು ಬಂಧಿಸಿದ್ದಾರೆ. 

ಫ್ಲೈಟ್‌ ಟಿಕೆಟ್ ಬುಕ್ ಮಾಡೋ ಮುನ್ನ ತಿಳ್ಕೊಳ್ಳಿ, ವಿಮಾನದಲ್ಲಿ ಯಾವ ಸೀಟು ಹೆಚ್ಚು ಸೇಫ್‌ ?

ಕೆಲವು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ ಆಕೆಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಐಶ್ವರ್ಯ ರೈ ಅಂದ್ರೆ ಮಿಸ್ ಇಂಡಿಯಾ ಬಾಲಿವುಡ್ ನಟಿ ಮಂಗಳೂರು ಬೆಡಗಿ ಐಶ್ವರ್ಯ ಅಂದುಕೊಳ್ಳಬೇಡಿ....ಇದು ಹಿಂದಿ ಬ್ಲಾಗರ್ ಐಶ್ವರ್ಯ ರೈ ಅಂತೆ. ಆರಂಭದಲ್ಲಿ ಸುದ್ದಿ ವೈರಲ್ ಆದಾಗ ಎಲ್ಲರೂ ನಟಿ ಐಶ್ವರ್ಯ ಅಂದುಕೊಂಡರು ಅದರೆ ಬ್ಲಾಗರ್ ಐಶ್ವರ್ಯ ಎಂದು ತಿಳಿದು ನಿರಾಳರಾಗಿದ್ದಾರೆ. ತಿಂಗಳಲ್ಲಿ 10 ಸಲ ವಿಮಾನ ಬಳಸುವ ನಟಿ ಐಶ್ವರ್ಯ ಹೀಗೆ ಮಾಡಲು ಸಾಧ್ಯವೇ ಎಂದು ಅನೇಕರು ಪ್ರಶ್ನೆ ಕೂಡ ಮಾಡಿದ್ದಾರೆ. 

ಕಾಸ್ಟ್ಲೀ ದುನಿಯಾ..ಏರ್‌ಪೋರ್ಟ್‌ನಲ್ಲಿ ಮನೆ ಆಹಾರ ಸೇವಿಸಿ ಮಾದರಿಯಾದ ಅಮ್ಮ-ಮಗ!

 

ಒಂದೆರಡು ಘಟನೆಯಲ್ಲ....

ಇತ್ತೀಚಿಗೆ ವಿಮಾನಲ್ಲಿ ಈ ರೀತಿ ಕಿತಾಪತಿಗಳು ತುಂಬಾ ನಡೆಯುತ್ತಿದೆ. ಇಬ್ಬರ ನಡುವೆ ಜಗಳ, ಮತ್ತೊಬ್ಬರು ಮೂತ್ರ ಮಾಡುತ್ತಾರೆ ಇನ್ನೊಬ್ಬರು ಬೆತ್ತಲಾಗಿ ಓಡಾಡುತ್ತಾರೆ. ಮಹಿಳೆಯೊಬ್ಬಳು ವಿಮಾನದಲ್ಲಿ ಸಿಗರೇಟ್ ಸೇದುವುದನ್ನು ವಿರೋಧಿಸಿದ 'ಗಗನಸಖ'ನಿಗೆ ಕಚ್ಚಿದ್ದಲ್ಲದೇ ಆತನ ಮುಂದೆಯೇ ಬಟ್ಟೆ ಕಿತ್ತೆಸೆದು ಟಾಪ್‌ಲೆಸ್ ಆಗಿದ್ದಾಳೆ. ಸ್ಟಾವ್ರೊಪೋಲ್‌ನಿಂದ ರಷ್ಯಾದ ಮಾಸ್ಕೋಗೆ ಹೊರಟಿದ್ದ ಏರೋಫ್ಲಾಟ್ ವಿಮಾನದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.  ರಷ್ಯಾದ ಮಹಿಳೆಯೊಬ್ಬಳು ತನ್ನನ್ನು ವಿಮಾನದಲ್ಲಿ ಧೂಮಪಾನ ಮಾಡಲು ಬಿಡದ ಸಿಬ್ಬಂದಿಗೆ ಕಚ್ಚಿದ ಆಕೆ ನಂತ ಬಟ್ಟೆ ಕಿತ್ತೆಸೆದು ತಾನೇ ಬೆತ್ತಲಾಗಿದ್ದಾಳೆ. ಹೀಗೆ ವಿಮಾನದಲ್ಲಿ ಹುಚ್ಚಾಟವಾಡಿದ ಮಹಿಳೆಯನ್ನು ರಷ್ಯಾದ ಅಂಝೆಲಿಕಾ ಮಾಸ್ಕ್ವಿಟಿನಾ ಎಂದು ಗುರುತಿಸಲಾಗಿದೆ.  ಅಲ್ಲದೇ ತನ್ನ ಸಹ ಪ್ರಯಾಣಿಕರಿಗೆ ನೀವೆಲ್ಲಾ ಸಾಯುತ್ತಿರಿ ಎಂದು ಆಕೆ ಬೈದಾಡಿದ್ದಾಳೆ. ಕುಡಿದ ಅಮಲಿನಲ್ಲಿದ್ದ ಈಕೆ ಮೊದಲಿಗೆ ವಿಮಾನದ ಶೌಚಾಲಯದಲ್ಲಿ ತನ್ನನ್ನು ತಾನು ಲಾಕ್ ಮಾಡಿಕೊಂಡು ಧೂಮಪಾನ ಮಾಡಲು ಮುಂದಾಗಿದ್ದಾಳೆ. ನಂತರ ಇದಕ್ಕೆ ವಿರೋಧ ವ್ಯಕ್ತವಾದಾಗ ಬಟ್ಟೆ ಕಿತ್ತೆಸೆದಿದ್ದಾಳೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಚೈತ್ರಾ ಕುಂದಾಪುರ, ಸ್ಪಂದನಾ ಸೋಮಣ್ಣ ನಡುವೆ ತಂದಿಟ್ಟು ನಕ್ಕ ವಿಲನ್‌ Bigg Boss; ಯಾಕ್ರೀ ಹೀಗ್‌ ಮಾಡ್ತೀರಾ?
BBK 12: ಗಿಲ್ಲಿ ನಟನ ಜೊತೆ ಅಮಾನವೀಯವಾಗಿ ನಡ್ಕೊಂಡ ರಘು; ಪ್ರತ್ಯಕ್ಷಸಾಕ್ಷಿ ಅಭಿಷೇಕ್‌ ಶ್ರೀಕಾಂತ್‌ ಏನಂದ್ರು?