
ಯಾರೋ ಕಟ್ಟಬೇಕಿದ್ದ ತಾಳಿಯನ್ನು ಇನ್ನಾರದ್ದೋ ಕೈಯಲ್ಲಿ ಕಟ್ಟಿಸಿಕೊಂಡಿದ್ದಾಳೆ ಗುಂಡಮ್ಮ. ಅಣ್ಣ ಶಿವಣ್ಣನ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿರುವ ಗುಂಡುಗೆ ಅಣ್ಣಯ್ಯನೇ ಎಲ್ಲಾ. ಅವನು ಹೇಳಿದ್ದಂತೆಯೇ ಕೇಳುವವಳು ಈಕೆ. ಮದುವೆಯ ದಿನ ವರದಕ್ಷಿಣೆಯ ಹಣ ಕಳುವಾದ ಕಾರಣ, ಮದುವೆ ಅಲ್ಲಿಗೇ ನಿಂತು ಹೋಗುವ ಸಮಯದಲ್ಲಿ, ಜಿಮ್ ಸೀನ ಅವಳಿಗೆ ತಾಳಿ ಕಟ್ಟುವ ಅನಿವಾರ್ಯತೆ ಎದುರಾಗುತ್ತದೆ. ಆದರೆ ಸೀನ ಇದಾಗಲೇ ಒಬ್ಬಳನ್ನು ಪ್ರೀತಿ ಮಾಡ್ತಿರುತ್ತಾನೆ. ಆದರೆ, ಈ ಸನ್ನಿವೇಶದಲ್ಲಿ ಹಣ ಕಳುವಿಗೆ ಅವನೇ ಕಾರಣ ಎನ್ನುವ ಆರೋಪ ಬಂದ ಕಾರಣದಿಂದ ಅನಿವಾರ್ಯವಾಗಿ ಮದುವೆಯಾಗಬೇಕಾಗುತ್ತದೆ. ಮದುವೆಯ ದಿನ ಗಂಡ-ಹೆಂಡತಿ ಜಗಳವಾಡಿದಾಗ, ಗುಂಡಮ್ಮನ್ನು ಮಂಚದ ಮೇಲೆ ತಳ್ಳುತ್ತಾನೆ ಸೀನ. ಮಂಚ ಮುರಿದೇ ಹೋಗುತ್ತದೆ! ಆದರೆ ಆ ಸೌಂಡ್ ಕೇಳಿ ಉಳಿದವರು ಬೇರೆಯದ್ದೇ ತಿಳಿದುಕೊಳ್ಳುತ್ತಾರೆ!
ಇದು ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಅಣ್ಣಯ್ಯ ಸೀರಿಯಲ್ ಕಥೆ. ಇಲ್ಲಿ ಗುಂಡಮ್ಮ ಅಂದ್ರೆ ರಶ್ಮಿಯ ಪಾತ್ರ ಮಾಡುತ್ತಿರುವ ನಟಿಯ ಹೆಸರು ಅಪೇಕ್ಷಾ ಶ್ರೀನಾಥ್. ಇವರು ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕೆಲವೊಂದು ವಿಷಯಗಳನ್ನು ರಿವೀಲ್ ಮಾಡಿದ್ದಾರೆ. ನನಗೆ ಸೀರೆ ಉಡುವುದು ಎಂದರೆ ಅಲರ್ಜಿ. ಈಗಲೂ ನನಗೆ ಸೀರೆ ಉಡಲು ಬರುವುದಿಲ್ಲ. ಆದರೆ ಸೀನನ ಜೊತೆ ಮದುವೆಯಾದ ಮೇಲೆ ದಿನವೂ ಸೀರೆಯೇ ಉಡಬೇಕಿದೆ. ಅದನ್ನು ಮ್ಯಾನೇಜ್ ಮಾಡಬೇಕಿದೆ ಎಂದಿದ್ದಾರೆ.
ಜೀವನದಲ್ಲಿ ಮೊದಲ ಬಾರಿ ಬುಲೆಟ್ ರಕ್ಷಕ್ ರೊಮಾನ್ಸ್: ವೇದಿಕೆ ಮೇಲೆ ನಾಚಿ ನೀರಾದ 'ಕನ್ನಡತಿ' ರಮೋಲಾ!
ಇದೇ ವೇಳೆ, ಮದುವೆ ಸೀನ್ ಸಂದರ್ಭದಲ್ಲಿ ಅಣ್ಣಯ್ಯನ ಕಣ್ಣೀರು ನೋಡಿ, ನಿಜಕ್ಕೂ ಅಲ್ಲೊಂದು ಭಾವುಕ ಸನ್ನಿವೇಶ ಸೃಷ್ಟಿಯಾಗಿತ್ತು. ಶೂಟಿಂಗ್ ಸೆಟ್ನಲ್ಲಿ ಎಮೋಷನ್ ಕ್ರಿಯೇಟ್ ಆಗಿತ್ತು. ಈ ಸೀನ್ ಮಾಡುವಾಗ ಕೆಲವು ಸಲ ಕಟ್ ಕಟ್ ಎಂದು ರೀಶೂಟ್ ಮಾಡಿದ್ದರೂ, ಎಮೋಷನ್ ಮಾತ್ರ ತುಂಬಾ ಆಗಿತ್ತು ಎಂದಿದ್ದಾರೆ. ಸೀರಿಯಲ್ನಲ್ಲಿ ಮದ್ವೆಯಾಗಿದೆ. ಇನ್ನು ರಿಯಲ್ ಲೈಫ್ನಲ್ಲಿ ಮದುವೆಯಾಗುವ ಹುಡುಗ ಹೇಗಿರಬೇಕು ಎನ್ನುವ ಪ್ರಶ್ನೆಗೆ ಉತ್ತರಿಸಿದ ನಟಿ, ಹೇಗಿರಬೇಕು ಎಂದು ಇಂದಿಗೂ ಯೋಚನೆ ಮಾಡಿಲ್ಲ. ನನಗೆ ಪೇಷನ್ಸ್ ಇಲ್ಲ, ಆದ್ದರಿಂದ ಅವನಿಗೆ ತುಂಬಾ ಪೇಷನ್ಸ್ ಇರಬೇಕು. ಬೇರೆಯವ ಭಾವನೆಗಳಿಗೆ ಸ್ಪಂದಿಸುವ ವ್ಯಕ್ತಿತ್ವ ಇರಬೇಕು. ಇಗೋ ಪಕ್ಕಕ್ಕೆ ಇಟ್ಟು ತನ್ನ ತಪ್ಪು ಒಪ್ಪಿಕೊಳ್ಳಬೇಕು. ಇದರಿಂದ ನಮ್ಮ ಸಂಸಾರಕ್ಕೂ, ಸಮಾಜಕ್ಕೂ ಒಳ್ಳೆಯದು ಎಂದಿದ್ದಾರೆ.
ಇನ್ನು ನಟಿ ಅಪೇಕ್ಷಾ ಕುರಿತು ಹೇಳುವುದಾದರೆ, ರಂಗಭೂಮಿ ಹಿನ್ನೆಲೆಯಿಂದ ಬಂದ ಇವರು, ಯಕ್ಷಗಾನ ಕಲಾವಿದೆಯೂ ಹೌದು. ಇದೀಗ ಗುಂಡಮ್ಮನ ಪಾತ್ರದಲ್ಲಿ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಶಿವಣ್ಣನ ಮೂರನೇ ತಂಗಿಯಾಗಿ ಇವರು ಮಿಂಚುತ್ತಿದ್ದಾರೆ.
ಅಪ್ಪನ ಜೊತೆ ನಟಿ ಅದಿತಿ ಪ್ರಭುದೇವ ಎಳನೀರು ಚಾಲೆಂಜ್! ಒಂದು ಸಾವಿರ ರೂ. ಗೆದ್ದೋರು ಯಾರು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.