ದುಡ್ಡು ಕೊಡ್ತಾರೆ ಎಂತ ಪ್ರಮೋಷನ್ ಮಾಡೋಕೆ ಆಗಲ್ಲ, ಇದುವರೆಗೂ ಕೆಟ್ಟ ಪದ ಬಳಸಿಲ್ಲ: ಧನರಾಜ್

Published : Mar 08, 2025, 09:52 AM ISTUpdated : Mar 08, 2025, 10:12 AM IST
ದುಡ್ಡು ಕೊಡ್ತಾರೆ ಎಂತ ಪ್ರಮೋಷನ್ ಮಾಡೋಕೆ ಆಗಲ್ಲ, ಇದುವರೆಗೂ ಕೆಟ್ಟ ಪದ ಬಳಸಿಲ್ಲ: ಧನರಾಜ್

ಸಾರಾಂಶ

ಸೋಷಿಯಲ್ ಮೀಡಿಯಾ ಸ್ಟಾರ್ ಧನರಾಜ್ ಆಚಾರ್, ಅವಕಾಶಗಳಿಗಾಗಿ ಕಾಯುವ ಬದಲು ತಾವೇ ಸೃಷ್ಟಿಸಿಕೊಂಡು ಬೆಳೆಯಬೇಕೆಂದಿದ್ದಾರೆ. ಸಾಮಾಜಿಕ ಜಾಲತಾಣಗಳು ತಮ್ಮ ಆತ್ಮವಿಶ್ವಾಸ ಹೆಚ್ಚಿಸಿವೆ. ಕುಟುಂಬದಿಂದ ಹಾಸ್ಯ ಪ್ರಜ್ಞೆ ಬಂದಿದ್ದು, ಕೆಟ್ಟ ಪದಗಳಿಲ್ಲದ, ಸಾಮಾಜಿಕ ಸಂದೇಶವುಳ್ಳ ವಿಡಿಯೋಗಳನ್ನು ಮಾಡುವುದಾಗಿ ತಿಳಿಸಿದ್ದಾರೆ. ಹಣದ ಆಮಿಷವಿದ್ದರೂ, ಜನರಿಗೆ ತೊಂದರೆಯಾಗುವಂತಹ ಕೆಲಸಗಳನ್ನು ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಸೋಷಿಯಲ್ ಮೀಡಿಯಾ ಸ್ಟಾರ್, ಗಿಚ್ಚಿ ಗಿಲಿಗಿಲಿ ಸ್ಪರ್ಧಿ ಹಾಗೂ ಬಿಗ್ ಬಾಸ್ ದೋಸ್ತ ಧನರಾಜ್‌ ಆಚಾರ್‌ ಅವಕಾಶಗಳನ್ನು ಗಿಟ್ಟಿಕೊಂಡು ಬೆಳೆದ ಪ್ರತಿಭೆ. ಸಾಕಷ್ಟು ಆಡಿಷನ್‌ಗಳನ್ನು ನೀಡಿ ವಿಫಲರಾದವರು ಅವಕಾಶಗಳನ್ನು ಗಿಟ್ಟಿಸಿಕೊಳ್ಳುವುದು ಹೇಗೆ? ನಮ್ಮನ್ನು ನಾವೇ ಹೇಗೆ ಪ್ರಮೋಷನ್ ಮಾಡಬೇಕು ಎಂದು ಹಂಚಿಕೊಂಡಿದ್ದಾರೆ.

'ಸೋಷಿಯಲ್ ಮೀಡಿಯಾ ಬರುವುದಕ್ಕೂ ಮುನ್ನ ಅಡಿಷನ್‌ಗಳನ್ನು ಕೊಡಬೇಕಿತ್ತು. ನಾನು ಕೂಡ ಸಾಕಷ್ಟು ಆಡಿಷನ್‌ಗಳನ್ನು ಕೊಟ್ಟಿದ್ದೀನಿ. ರಿಯಾಲಿಟಿ ಶೋಗಳಿಗೆ ಆಡಿಷನ್ ಕೊಟ್ಟಿದ್ದೀನಿ ಆದರೆ ಎಲ್ಲೂ ಸೆಲೆಕ್ಟ್‌ ಆಗುತ್ತಿರಲಿಲ್ಲ. ಸೋಷಿಯಲ್ ಮೀಡಿಯಾ ಹೇಗೆ ಬಂತು ಅಂದ್ರೆ...ನಾನೇ ಕ್ರಿಯೇಟ್ ಮಾಡಿದೆ ಜನರು ಕೈ ಹಿಡಿದರು, ಪಾಸಿಟಿವ್ ಆಗಿ ಸಪೋರ್ಟ್ ಕೊಟ್ಟರು. ಕಾನ್ಫಿಡೆನ್ಸ್‌ ಅಂತ ಕೊಟ್ಟಿದ್ದು ಸೋಷಿಯಲ್ ಮೀಡಿಯಾ ಮತ್ತು ಅದರ ಫಾಲೋವರ್ಸ್. ಸೋಷಿಯಲ್ ಮೀಡಿಯಾ ಬರುವುದಕ್ಕೂ ಮುನ್ನ ನಾವು ಮತ್ತೊಬ್ಬರ ಸಹಾಯ ಕೇಳಿ ಪಡೆದು ಮೇಲೆ ಬರಬೇಕಿತ್ತು. ಇಲ್ಲಿ ನಾವೇ ಕ್ರಿಯೇಟ್ ಮಾಡಿಕೊಂಡು ಬೆಳೆಯಬೇಕು. ನನಗೆ ನಾನೇ ನಾಯಕ ನಿಮ್ಮನ್ನು ನಗಿಸುವುದು ನನ್ನ ಕಾಯಕ. ಮತ್ತೊಬ್ಬರನ್ನು ಅವಕಾಶ ಕೇಳಿಕೊಂಡು ಹೋಗುವ ಬದಲು ನಮಗೆ ನಾವೇ ಸೃಷ್ಟಿ ಮಾಡಿಕೊಳ್ಳಬೇಕು' ಎಂದು ಖಾಸಗಿ ಸಂದರ್ಶನದಲ್ಲಿ ಧನರಾಜ್ ಮಾತನಾಡಿದ್ದಾರೆ.  

ಈ ವಿಚಾರದಲ್ಲಿ ನಾನು ಸಿಕ್ಕಾಪಟ್ಟೆ ಲಕ್ಕಿ, ಕಮಿಟ್ಮೆಂಟ್ ಇಲ್ಲ ಅಂದ್ರೆ ಬದುಕಲು ಸಾಧ್ಯವಿಲ್ಲ: ಬಿಗ್ ಬಾಸ್ ಶಿಶಿರ್

'ನನಗೆ ಕಾಮಿಡಿ ಸೆನ್ಸಸ್‌ ಬಂದಿರೋದು ಫ್ಯಾಮಿಲಿಯಿಂದ. ಹೆಚ್ಚಾಗಿ ನಾಟಕಗಳನ್ನು ನೋಡುತ್ತಿದ್ದೆ ಅಲ್ಲಿಂದ ಕಾಮಿಡಿ ಐಡಿಯಾ ಬರುತಿತ್ತು.  ನಾನು ಮಾಡುವ ವಿಡಿಯೋಗಳಲ್ಲಿ ಯಾವುದೇ ಕೆಟ್ಟ ಪದಗಳನ್ನು ಬಳಸುವುದಿಲ್ಲ, ಫ್ಯಾಮಿಲಿಗಳು ನೋಡಬೇಕು, ಸೋಷಿಯಲ್ ಮೆಸೇಜ್‌ಗಳು ಇರಬೇಕು ಅಂತ ಮಾಡುತ್ತೀವಿ. ಯಾವುದೇ ಪ್ರಾಡೆಕ್ಟ್‌ ಪ್ರಮೋಷನ್‌ ಬರಲಿ ಅಥವಾ ಗ್ಯಾಂಬಲಿಂಗ್ ಬಂದರೂ ಸಾಕಷ್ಟು ಬಾರಿ ಯೋಚನೆ ಮಾಡಿ ವಿಡಿಯೋ ಮಾಡುತ್ತೀನಿ. ಜನರನ್ನು ನನ್ನನ್ನು ಮೇಲೆ ಕರೆದುಕೊಂಡು ಬಂದಿದ್ದು ಅವರಿಗೆ ನಾನು ಥ್ಯಾಂಕ್‌ಫುಲ್ ಆಗಿ ಇರಬೇಕು. ಹೀಗಾಗಿ ಎಷ್ಟೇ ದುಡ್ಡು ಕೊಟ್ಟರೂ ಸಹ ಯೋಚನೆ ಮಾಡಿ ಕೆಲಸ ಮಾಡುತ್ತೀನಿ' ಎಂದು ಧನರಾಜ್‌ ಹೇಳಿದ್ದಾರೆ. 

ಅಪ್ಪ ಕೊಟ್ಟ 100 ರೂ. ಖರ್ಚು ಮಾಡಿದ್ದಕ್ಕೆ ಪ್ರಶ್ನೆ ಮಾಡಿದ್ರು ಅಂತ ತಿಂಗಳಿಗೆ 12 ಸಾವಿರ ದುಡಿಯಲು ಶುರು ಮಾಡ್ದೆ: ಮೋಕ್ಷಿತಾ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Gowri Shankara: ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಖಡಕ್ ಡಿಸಿ ಆಗಿ ಎಂಟ್ರಿ ಕೊಟ್ಟ ಅಶ್ವಿನಿ
‘ರಾಜಕುಮಾರಿ’ ಧಾರಾವಾಹಿ ನಟಿ ಗಗನ ಭಾರಿ ನಟನೆಯ ಕುರಿತು ವೀಕ್ಷಕರ ಅಸಮಾಧಾನ