
ಸೋಷಿಯಲ್ ಮೀಡಿಯಾ ಸ್ಟಾರ್, ಬಿಗ್ ಬಾಸ್ ಸ್ಪರ್ಧಿ ಧನುಶ್ರೀ ಮಹಾ ಶಿವರಾತ್ರಿ ದಿನದಂದು ಚಿನ್ನದ ನೆಕ್‌ಲೆಸ್ ಧರಿಸಿದ್ದಾರೆ. ಚಿನ್ನದ ಬೆಲೆ ಗಗನ ಮುಟ್ಟುತ್ತಿದೆ ಈ ನಡುವೆ ಚಿನ್ನ ಖರೀದಿ ಮಾಡಿರುವುದು ಜೀವನದ ಅಮೂಲ್ಯ ಕ್ಷಣ ಎಂದು ಯುಟ್ಯೂಬ್ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾರೆ. ಇದರಲ್ಲಿ ವಿಶೇಷತೆ ಏನಿದೆ ಎಂದು ಹಲವು ಕೊಂಕು ಮಾಡಬಹುದು ಆದರೆ ಧನುಶ್ರೀ ಅವರಿಗೆ ಇದು ಹೆಮ್ಮೆಯ ಕ್ಷಣ ಎನ್ನಬಹುದು.
ಸುಮಾರು 1 ವರ್ಷದಿಂದ ಬೆಂಗಳೂರಿನ ಚಿನ್ನದ ಅಂಗಡಿಯಲ್ಲಿ ಧನುಶ್ರೀ ಚೀಟಿ ಕಟ್ಟುತ್ತಿದ್ದರು. ಒಂದು ವರ್ಷ ಪೂರೈಸುತ್ತಿದ್ದಂತೆ ಖರೀದಿ ಮಾಡಲು ತಾಯಿಯನ್ನು ಕರೆದುಕೊಂಡು ಹೋಗಿದ್ದಾರೆ. ಮೊದಲು ಆಸೆ ಪಟ್ಟ ಓಲೆಗಳನ್ನು ನೋಡಿದ್ದಾರೆ ಆದರೆ ಗ್ರಾಂ ಲೆಕ್ಕಾಚಾರದ ಮೇಲೆ ನೆಕ್‌ಲೆಸ್ ಆಯ್ಕೆ ಮಾಡಿಕೊಂಡಿದ್ದಾರೆ. ಮೂರು ಡಿಸೈನ್ ನೆಕ್‌ಲೆಸ್‌ನಲ್ಲಿ 25 ಗ್ರಾಂ ಇರುವುದನ್ನು ಆಯ್ಕೆ ಮಾಡಿದ್ದಾರೆ. ಈಗ ಚಿನ್ನದ ಬೆಲೆ ಸುಮಾರು 8 ಸಾವಿರ ಇದೆ. ತಮ್ಮ ಸೇವಿಂಗ್ ಹಣವನ್ನು ಕೂಡ ತೆಗೆದು ಖರೀದಿಸಿದ್ದಾರೆ. 'ಚೀಟಿಯಲ್ಲಿ ಒಂದು ಲಕ್ಷ ರೂಪಾಯಿ ಇತ್ತು. ಆದರೆ ಅಷ್ಟು ಕಡಿಮೆ ಗ್ರಾಂಗೆ ಏನೂ ಸಿಗುತ್ತಿರಲಿಲ್ಲ ಹೀಗಾಗಿ ನನ್ನ ಸೇವಿಂಗ್ ಬ್ಯಾಂಕ್‌ನಿಂದ ಹಣ ತೆಗೆದುಕೊಂಡು ಖರೀದಿಸಬೇಕಿತ್ತು. ನನಗೆ ಈ ಚೆನ್ನದ ನೆಕ್‌ಲೆಸ್ ಸುಮಾರು 2 ಲಕ್ಷ 45 ಸಾವಿರ ರೂಪಾಯಿ ಬಿತ್ತು. ಆದರೆ ಏನೋ ಡಿಸ್ಕೈಂಟ್ ಹಾಕಿ ಮಾಡಿ ಈಗ ನನಗೆ 2 ಲಕ್ಷ ಸುಮಾರು ಕಟ್ಟಿದ್ದೀನಿ. ನನ್ನ ಬಳಿ ಹಣ ಇರಲಿಲ್ಲ ಆದರೂ ಇದು ಇನ್ವೆಸ್ಟ್‌ಮೆಂಟ್ ಅಂತ ಖರೀದಿ ಮಾಡಿದ್ದೀನಿ. ತುಂಬಾ ಖುಷಿಯಾಗುತ್ತಿದೆ' ಎಂದು ವಿಡಿಯೋದಲ್ಲಿ ಧನುಶ್ರೀ ಮಾತನಾಡಿದ್ದಾರೆ.
ಶ್ರೀಮಂತ ಗಂಡ ಎಂದು ಕೊಂಕು ಮಾಡುತ್ತಿದ್ದವರಿಗೆ ಖಡಕ್ ಉತ್ತರ ಕೊಟ್ಟ ಕಾವ್ಯಾ ಗೌಡ!
ಚಿನ್ನದ ನೆಕ್‌ಲೆಸ್ ಪ್ಯಾಕ್ ಮಾಡು ಕೊಡುತ್ತಿದ್ದಂತೆ ಧನುಶ್ರೀ ಕಣ್ಣೀರಿಟ್ಟಿದ್ದಾರೆ. 'ತಾಯಿ ಆಗಿ ನಾವು ನಿನಗೆ ಇದನ್ನು ಕೊಡಿಸಬೇಕು ಆದರೆ ನೀನು ಕಷ್ಟ ಪಟ್ಟು ದುಡಿದು ತೆಗೆದುಕೊಂಡಿರುವೆ' ಎಂದು ತಾಯಿ ಖುಷಿ ಪಡುತ್ತಾರೆ. ತಾಯಿ ಅಳುವುದನ್ನು ನೋಡಿ ಧನುಶ್ರೀ ಮತ್ತೆ ಕಣ್ಣೀರಿಟು ಇಟ್ಟಿದ್ದಾರೆ. ಅಮ್ಮ ಮಗಳು ಚಿನ್ನದ ಅಂಗಡಿಯಿಂದ ಹೊರ ಬಂದ ನಂತರವೂ ರಸ್ತೆ ಬದಿಯಲ್ಲಿ ನಿಂತುಕೊಂಡು ಕಣ್ಣಿರಿಟ್ಟಿದ್ದಾರೆ. ಧನುಶ್ರೀ ವಿಡಿಯೋಗಳನ್ನು ಶೂಟ್ ಮಾಡಲು ಜೊತೆ ಇದ್ದ ಭರತ್ ಎಂಬ ಹುಡುಗ ಈ ಕ್ಷಣದ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ. ಧನುಶ್ರೀ ಕಣ್ಣೀರಿಟ್ಟಿರುವುದನ್ನು ನೋಡಿ ಫಾಲೋವರ್ಸ್ ಕೂಡ ಕಣ್ಣೀರಿಟ್ಟಿದ್ದಾರೆ. ಮಿಡಲ್ ಕ್ಲಾಸ್ ಮಕ್ಕಳ ಮನೆಯಲ್ಲಿ ಈ ಸಣ್ಣು ಪುಟ್ಟ ಖರೀದಿ ಕೂಡ ದೊಡ್ಡ ಯಶಸ್ಸು ಎಂದು ಸಖತ್ ಪಾಸಿಟಿವ್ ಕಾಮೆಂಟ್‌ಗಳು ಹರಿದು ಬಂದಿದೆ.
ಸ್ಟಾರ್ ನಟಿಯ ಗಂಡ ಅಗಲಿ 5 ವರ್ಷ ಆಗಿಲ್ಲ ಆಗಲೇ ಸಿರಿವಂತ ಅಂಕಲ್‌ಗಳಿಂದ ಬಂದು ಮದುವೆ ಪ್ರಪೋಸಲ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.