Ramachari heroin Mouna Guddemane: ರಾಮಾಚಾರಿ ಸೀರಿಯಲ್‌ನಲ್ಲಿ ಧಿಮಾಕಿನ ಹೆಣ್ಣು ಚಾರು ಕೊಬ್ಬಿಳಿಸೋ ಪ್ರೋಗ್ರಾಂ ನಡೀತಿದೆ. ಇದ್ರಲ್ಲಿ ಸೊಕ್ಕಿನ ಚಾರು ಪಾತ್ರ ಮಾಡ್ತಿರೋ ಮೌನ ಗುಡ್ಡೆ ಮನೆ ಹಿನ್ನೆಲೆ ಏನು? ರಿಯಲ್‌ನಲ್ಲೂ ಇವರು ಧಿಮಾಕಿನ ಹುಡುಗೀನ?
ಕಲರ್ಸ್ ಕನ್ನಡದಲ್ಲಿ ರಾಮಾಚಾರಿ ಸೀರಿಯಲ್ (Ramachari) ಪ್ರಸಾರ ಶುರುಮಾಡಿ 62 ಎಪಿಸೋಡ್ ಗಳು ಪ್ರಸಾರವಾಗಿವೆ. ದಿನದಿಂದ ದಿನಕ್ಕೆ ಈ ಸೀರಿಯಲ್ ಜನಪ್ರಿಯತೆ ಹೆಚ್ಚುತ್ತಲೇ ಇದೆ. ಈಗ ಪ್ರಸಾರವಾಗುತ್ತಿರೋ ಎಪಿಸೋಡ್‌ಗಳು 90 ರ ದಶಕದ ಸಿನಿಮಾ ಸೀನ್‌ನಂತೆ ಕಂಡರೂ ಜನ ಎನ್‌ಜಾಯ್ ಮಾಡುತ್ತಿದ್ದಾರೆ.
ರಾಮಾಚಾರಿ (Ramachari) ಎಂಬ ಸಂಪ್ರದಾಯಸ್ಥ ಮನಸ್ಥಿತಿಯ ಪುರೋಹಿತರ ಮಗನ ಕನಸುಗಳು, ಆ ಕನಸುಗಳ ಈಡೇರಿಕೆಯಲ್ಲಿ ಈತನಿಗೆ ಎದುರಾಗೋ ಕಷ್ಟಗಳ ಕತೆ ರಾಮಾಚಾರಿ ಸೀರಿಯಲ್. ಇದರಲ್ಲಿ ಒಂದು ಕಡೆ ರಾಮಾಚಾರಿ ಸ್ಟೋರಿ ನಡೀತಿದ್ರೆ ಇನ್ನೊಂದು ಫ್ಲೋದಲ್ಲಿ ಚಾರು (Charu) ಕತೆ ಇದೆ. ರಾಮಾಚಾರಿಯ ಕೆಲಸ ಮಾಡೋ ಕಂಪೆನಿಯ ಒಡೆಯನ ಮಗಳು ಚಾರು. ಮಹಾನ್ ಧಿಮಾಕಿನ ಈ ಹುಡುಗಿ ಸದ್ಯ ಅಪ್ಪನ ಕಂಪನಿಯಲ್ಲಿ ಸಿಇಓ. ರಾಮಾಚಾರಿಯನ್ನು ಕಂಡರಾಗದ ಹುಡುಗಿ ಈಕೆ. ಆಂತರ್ಯದಲ್ಲಿ ಒಳ್ಳೆತನವಿದ್ದರೂ ಹೊರಗಿಂದ ಸೊಕ್ಕಿನ ಹುಡುಗಿಯಾಗಿಯೇ ಕಾಣಿಸಿಕೊಳ್ಳುತ್ತಿದ್ದಾಳೆ. ತಂದೆಗೆ ಎರಡು ಮದುವೆಯಾಗಿದೆ. ಮೊದಲ ಹೆಂಡತಿ, ದುಡ್ಡಿನ ಮದ ಇರುವ ಮಾನ್ಯತಾಳ (Manyatha) ಮಗಳೇ ಈ ಚಾರು. ಒಂದಿಷ್ಟು ಒಳ್ಳೆಯ ಕೆಲಸ ಮಾಡಿದ್ದರೂ ದೌಲತ್ತಿನ ಅಮ್ಮನ ಪ್ರಭಾವದಿಂದ ಇವಳೂ ಅಹಂಕಾರದಿಂದ ವರ್ತಿಸುತ್ತಿದ್ದಾಳೆ. ರಾಮಾಚಾರಿಯನ್ನು ಮಣಿಸಲು ಏನು ಮಾಡಲೂ ಹೇಸದವಳು ಈ ಚಾರು. ಇವಳ ಕೆಟ್ಟ ವರ್ತನೆಗೆ ಬೇಸತ್ತು ಈಕೆಯ ತಂದೆ, ದೊಡ್ಡ ಉದ್ಯಮಿ ಜೈ ಶಂಕರ್ (Jai shankar) ಇವಳನ್ನು ಸಂಸ್ಕಾರ ಕಲಿಯಲು ರಾಮಾಚಾರಿ ಮನೆಗೆ ತಂದು ಬಿಟ್ಟಿದ್ದಾರೆ.
ಮನೆ ಎದುರು ಸೆಗಣಿ ಸಾರಿಸೋದರಿಂದ ಹಿಡಿದು ಪಾತ್ರೆ ತೊಳೆಯುವ, ಬಟ್ಟೆ ತೊಳೆಯುವವರೆಗೂ ಇವಳು ಕೆಲಸ ಮಾಡಬೇಕಿದೆ. ಈ ಕೆಲಸಗಳನ್ನೆಲ್ಲ ಮಾಡದೇ ಹೋದರೆ ಈಕೆ ಈಗ ಅನುಭವಿಸುತ್ತಿರುವ ಸಿಇಓ ಹುದ್ದೆಯನ್ನು ಮಲತಂಗಿಗೆ ನೀಡೋದಾಗಿ ತಂದೆ ಹೇಳಿದ್ದಾರೆ.
KGF 2: ಅರುಣ್ ಸಾಗರ್ ಮಗಳು ಅದಿತಿ Monster Rap Song, ರಾಕಿಂಗ್ ಗರ್ಲ್ ಅಂದ್ರು ಫ್ಯಾನ್ಸ್!
ಇಷ್ಟೆಲ್ಲ ರಗಳೆ ರಾದ್ಧಾಂತ ಮಾಡುವ, ನೋಟದಲ್ಲೇ ಸೊಕ್ಕು ತುಂಬಿ ತುಳುಕುವ ಚಾರು ಪಾತ್ರ ಮಾಡಿದ ನಟಿ ಮೌನ ಗುಡ್ಡೆಮನೆ(Mouna Guddemane). ಇನ್ನೂ ಇಪ್ಪತ್ತೆರಡರ ಹರೆಯ ಈ ಹುಡುಗಿ ಟೀನೇಜ್‌ನಲ್ಲೇ ತುಳುನಾಡ ಸುಂದರಿ ಅನ್ನೋ ಪೇಟೆಂಟ್ ಪಡೆದಾಕೆ. ಅಂದರೆ ಮಿಸ್ ಟೀನ್ ಮಂಗಳೂರು (Miss teen Mangalore) ಅನ್ನೋ ಬ್ಯೂಟಿ ಕಾಂಟೆಸ್ಟ್‌ನಲ್ಲಿ ಸ್ಪರ್ಧಿಸಿ ರನ್ನರ್ ಅಪ್ ಆಗಿ ಹೊರಹೊಮ್ಮಿದ ಪೊರ್ಲ ಸುಂದರಿ. ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜ್‌ನಲ್ಲಿ (St. Aloysius) ಪಿಯುಸಿ, ಡಿಗ್ರಿ ಮಾಡಿರೋ ಮೌನ ಅವರ ಮೊದಲ ಸೀರಿಯಲ್ ‘ರಾಮಾಚಾರಿ’. ಈ ಹಿಂದೆ ಮಾಡೆಲಿಂಗ್‌ನಲ್ಲಿ ಮಿಂಚಿದ್ದರೂ ಮನೆ ಮನೆಯ ಜನ ಗುರುತಿಸೋ ಹಾಗೆ, ಗುರಾಯಿಸೋ ಹಾಗೆ ಮಾಡಿದ್ದು ’ರಾಮಾಚಾರಿ’ ಸೀರಿಯಲ್. ಬಿಗ್‌ಬಾಸ್‌ನ ಸ್ಪರ್ಧಿ ವಿಶ್ವನಾಥ್ (Vishvanath) ಅವರ ವೀಡಿಯೋ ಹಾಡಿನಲ್ಲೂ ಈ ಸುಂದರಿ ಕಾಣಿಸಿಕೊಂಡಿದ್ದಾರೆ. ಅವರ ಜೊತೆಗೆ ಸ್ಟೆಪ್ ಹಾಕಿದ್ದಾರೆ. ತುಳುನಾಡಿನ ಈ ಹೆಣ್ಣುಗಳು ಸಾಕಷ್ಟು ತುಳು ಆಲ್ಬಂಗಳಲ್ಲೂ (Tulu album) ಕಾಣಿಸಿಕೊಂಡಿದ್ದಾರೆ. 'ಅಸೆದ ಕಡಲ್', 'ಮನಸಾ' ಮೊದಲಾದ ತುಳು ಆಲ್ಬಂಗಳು ಈಕೆ ಸೀರಿಯಲ್ಲಲ್ಲಿ ಕಾಣಿಸಿಕೊಳ್ಳೋಕೂ ಮೊದಲೇ ರಿಲೀಸ್ ಆಗಿವೆ. ಕನ್ನಡದಲ್ಲಿ ಈ ನಟಿಸಿದ ಇನ್ನೊಂದು ಆಲ್ಬಂ 'ಅನಿರೀಕ್ಷಿತ'. ಹಾಗೇ 'ರಾಧಾಕೃಷ್ಣ' ಅನ್ನೋ ಈಕೆಯ ಆಲ್ಬಂ ಹಿಂದಿ ಕನ್ನಡ ತುಳು ಭಾಷೆಗಳಲ್ಲಿ ಬಂದಿವೆ. ಆದರೆ ಇವೆಲ್ಲ ಮೌನ ಟ್ಯಾಲೆಂಟ್ ಏನು ಅನ್ನೋದನ್ನು ಅಷ್ಟಾಗಿ ಪ್ರೂವ್ ಮಾಡದಿದ್ದರೂ ಪ್ರತಿಭೆ ಹೊರಬರಲು ಒಂದು ವೇದಿಕೆಯಾಯ್ತು ಅಂತ ಹೇಳಬಹುದು.
KGF 2: ಯಶ್ ಗಿಂತ 9 ವರ್ಷ ಚಿಕ್ಕವರು ಅಮ್ಮನ ಪಾತ್ರ ಮಾಡಿದ ಅರ್ಚನಾ ಜೋಯಿಸ್! ಹೀರೋಯಿನ್‌ಗಿಂತಲೂ ಚಿಕ್ಕವಳೀಕೆ!
ಮೌನ ರೀಲ್ಸ್ (Reels) ಮಾಡೋದ್ರಲ್ಲೂ ಎಕ್ಸ್‌ಪರ್ಟ್. ಈಕೆಯ ಇನ್‌ಸ್ಟಾಗ್ರಾಮ್ ಅಕೌಂಟ್ ನೋಡಿದರೆ ಈ ಹುಡುಗಿ ರೀಲ್ಸ್‌ನಲ್ಲೂ ಎಷ್ಟು ಮುದ್ದಾಗಿ ಕಾಣ್ತಾರೆ ಅಂತ ಗೊತ್ತಾಗುತ್ತೆ.
ಸದ್ಯ ಬಜಾರಿ ಹುಡುಗಿ ಪಾತ್ರ ಮಾಡ್ತಿರೋ ಇವರೇ ಹೆಸರೇ ಮಾಡುತ್ತಿರುವ ಪಾತ್ರಕ್ಕೆ ವಿರುದ್ಧವಾಗಿದೆ. ಈಕೆಯೂ ಹೆಚ್ಚು ಗತ್ತು ಗೈರತ್ತುಗಳಿಲ್ಲದ ಸೀರಿಯಲ್ ಸೆಟ್‌ನಿಂದ ಹೊರಬಂದರೆ ಎಲ್ಲರ ಜೊತೆಗೆ ಮಿಂಗಲ್ ಆಗೋ ಹುಡುಗಿ. ಆದರೆ ಸೀರಿಯಲ್‌ನಲ್ಲಿ ಈಕೆಗೆ ನಟನೆ ಮೇಲೆ ಯಾವ ಮಟ್ಟಿಗೆ ಕಾನ್ಸಂಟ್ರೇಷನ್ ಅಂದರೆ ಆ ಪಾತ್ರದೊಳಗೇ ಮುಳುಗಿಹೋಗ್ತಾರೆ. ರಾಮಾಚಾರಿಯ ಚಾರು ಅಂದರೆ ಜನ ಉರಿದು ಬೀಳ್ತಾರೆ ಅಂದರೆ ಅದಕ್ಕೆ ಕಾರಣವೇ ಈ ಇನ್‌ವಾಲ್ವ್ ಮೆಂಟ್.
ಕನ್ನಡತಿ ರಂಜನಿ ಹಣೆ ತುಂಬಾ ರಕ್ತ, ಮೇಕಿಂಗ್ ವಿಡಿಯೋ ವೈರಲ್!