ನಂಬಿಕೆ ದ್ರೋಹ ಎಂದು ಅಳುತ್ತಿದ್ದ ಮುನಾವರ್‌ಗೆ ಬುದ್ಧಿ ಹೇಳಿದ ನಟಿ ಕಂಗನಾ. ಆಟ ಆಡಲು ಬಂದಿರುವುದನ್ನು ಮರೆಯಬೇಡ ಎಂದ ನಟಿ...
ಓಟಿಟಿಯಲ್ಲಿ ಪ್ರಸಾರವಾಗುತ್ತಿರುವ ಲಾಕಪ್ (Lock Upp) ರಿಯಾಲಿಟಿ ಶೋ ಶೀಘ್ರದಲ್ಲಿ ಫಿನಾಲೆ ದಿನಗಳನ್ನು ಆರಂಭಿಸಲಿದೆ ಹೀಗಾಗಿ ಸ್ಪರ್ಧಿಗಳ ನಡುವೆ ಕೊಂಚ ಕಿಡಿ ಹಚ್ಚಲು ಕಷ್ಟಕರವಾದ ಟಾಸ್ಕ್ ಶುರು ಮಾಡಿದ್ದಾರೆ. ಗುಂಪಿನಲ್ಲಿ ಆಟವಾಡುತ್ತಿದ್ದರೂ ಮೌನವಾಗಿ ವೈಯಕ್ತಿಕವಾಗಿ ಆಡುತ್ತಿದ್ದಾರೆ. ವಾರಕ್ಕೊಮ್ಮೆ ಜಡ್ಜ್‌ಮೆಂಟ್ ದಿನ ನಡೆಯಲಿದ್ದು, ಸ್ಪರ್ಧಿಗಳು ತಪ್ಪು ಸರಿಗಳ ಬಗ್ಗೆ ಕಂಗನಾ ಚರ್ಚೆ ಮಾಡುತ್ತಾರೆ.
ಡೈರೆಕ್ಟ್ ಟು ಫಿನಾಲೆ ಎಂದು ನಡೆದ ಟಾಸ್ಕ್‌ನಲ್ಲಿ ಅಂಜಲಿ ಅರೋರಾ (Anjali Arora) ಮತ್ತು ಶೈಶಾ (Saisha) ನನಗೆ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಟಾಸ್ಕ್ ನಡುವೆಯೇ ಮುನಾವರ್ (Munnawar) ಅಳುವುದಕ್ಕೆ ಶುರು ಮಾಡಿದ್ದರು. ನನಗೆ ಮಾತು ಕೊಟ್ಟು ಈಗ ಇಬ್ಬರು ಒಂಟಿಯಾಗಿ ಆಟ ಶುರು ಮಾಡಿದ್ದಾರೆ ಎಂದು ಭಾವುಕರಾಗಿದ್ದರು. 'ಮುನಾವರ್ ನೀನು ಇಲ್ಲಿ ವಿನ್ನರ್ ಆಗೋಕೆ ಬಂದಿರುವುದು ನಿನ್ನ ಗಮನ ಅದರ ಮೇಲೆ ಇರಬೇಕು ಇಲ್ಲಿ ಅಂಜಲಿ ಮತ್ತು ಶೈಶಾ ನಿನಗೆ ಸ್ಟೆಪಿಂಗ್ ಸ್ಟೋನ್ (Stepping stone) ಅಲ್ಲ. ಕೊನೆಯಲ್ಲಿ ಟ್ರೋಫಿ ಮುಖ್ಯವಾಗುತ್ತದೆ ಅವರು ಇಲ್ಲಿ ಆಟ ಆಡಲು ಬಂದಿರುವುದು. ನೀನು ಇಲ್ಲ ರಾಜ ಪುತ್ರನ ರೀತಿ ಇರಬೇಡ. ಯಾವುದು ಸರಿ ಯಾವುದು ತಪ್ಪು ಎಂದು ಯೋಚನೆ ಮಾಡಿ ಮಾತನಾಡು' ಎಂದು ಕಂಗನಾ (Kangana Ranaut) ಹೇಳುತ್ತಾರೆ.
ಕಂಗನಾ ಮಾತು ನಿಲ್ಲಿಸುತ್ತಿದ್ದಂತೆ ಇಲ್ಲ ಅವರು ಎನೇ ಮಾಡಬೇಕು ಅಂತಿದ್ದರೂ ನನಗೆ ಹೇಳಬೇಕು ಅದನ್ನು ನಿರ್ಧಾರ ಮಾಡಿ ನಾವು ಮುಂದೆ ನಡೆಯಬೇಕು ಇವರಿಬ್ಬರು ನನಗೆ backstab ಮಾಡಿದ್ದಾರೆ, ನಂಬಿಕೆ ಮುರಿದಿದ್ದಾರೆ ಎಂದು ಮುನಾವರ್ ಹೇಳಿದ್ದಾನೆ. 'ಮಹಿಳೆಯರು ತಮ್ಮನ್ನು ಮೀರಿಸುವುದನ್ನು ನೋಡಿದಾಗ ಪುರುಷರು ಮನನೊಂದುಕೊಳ್ಳುತ್ತಾರೆ. ಆದರೆ ಅವರು ಏನಾದರೂ ಮೀರಿಸಿ ಮಾಡಿದಾಗ ಅದೇ ಮಹಿಳೆಯರು ಚಪ್ಪಾಳೆ ತಟ್ಟಬೇಕು ಎನ್ನುತ್ತಾರೆ.ನೀನು ನನ್ನಿಂದ ಏನು ನಿರೀಕ್ಷಿಸಿದ್ದೆ. ಒಳವಸ್ತ್ರ ತೊಳೆಯುತ್ತಿಲಿ(ಅಂಜಲಿಯನ್ನೂ ನೋಡುತ್ತಾ) ಹಾಗೂ ಬೆನ್ನು ಒತ್ತಿಕೊಂಡಿರಲಿ(ಸಾಯೆಷಾ ಕಡೆ ನೋಡಿ) ಎಂದೇ? ಹಾಗೂ ನೀನು ಗೆಲ್ಲಬೇಕೆಂದುಕೊಂಡೇ?' ಎಂದು ಕಂಗನಾ ಮಾತನಾಡಿದ್ದಾರೆ.
3500 ರೂ ಕಟ್ಟಲಾಗದೇ ಆಸಿಡ್ ಕುಡಿದು ಆತ್ಮಹತ್ಯೆ ಮಾಡಿಕೊಂಡ ಕಮೀಡಿಯನ್ ಮುನಾವರ್ ತಾಯಿ!ಟಾಸ್ಕ್ ಮಾಡುವಾಗ ಮುನಾವರ್ 'ನೀವು ಈಗ ಮಾಡುತ್ತಿರುವ ಕೆಲಸಗಳು ನನಗೆ ಬೇರೆ ವಿಚಾರಗಳನ್ನು ನೆನಪು ಮಾಡುತ್ತಿದೆ. ನಾನು ಜೀವನದಲ್ಲಿ ಜನರನ್ನು ತುಂಬಾ ನಂಬುತ್ತೇನೆ ಹೀಗಾಗಿ ಈ ರೀತಿ ಆಗುತ್ತಿರುವುದು. ನೀವು ಒಬ್ಬರೇ ಗೇಮ್ ಆಡಬೇಕಾ? ಬನ್ನಿ ಈಗ ರಿಯಲ್ ಗೇಮ್ ತೋರಿಸುತ್ತೀನಿ' ಎಂದು ಅಂಜಲಿ ಮತ್ತು ಶೈಶಾಗೆ ಹೇಳುತ್ತಾನೆ.
'ಮುನಾವರ್ ಅಂಜಲಿಗೆ ಈ ರೀತಿ ಹೇಳಬಾರದಿತ್ತು ಆಕೆ ಅವನನ್ನು ಸಹೋದರನಂತೆ ಕಾಣುತ್ತಿದ್ದಳು ಪ್ರತಿಸಲವೂ ಇಬ್ಬರು ಸಂಬಂಧ ಬಿಟ್ಟು ಗೇಮ್ ದೃಷ್ಟಿಯಲ್ಲಿ ಮಾತ್ರ ಮಾತನಾಡುತ್ತಾರೆ. ನನ್ನ ಜೀವನದಲ್ಲಿ ನನಗೆ ಮೋಸ ಮಾಡಿದ ವ್ಯಕ್ತಿಯೇ ಇವರಿಬ್ಬರಿಗಿಂತ ಬೆಸ್ಟ್' ಎಂದು ಪೂನಂ ಪಾಂಡೆ (Poonam Pandey) ಜಗಳ ನೋಡಿ ಹೇಳುತ್ತಾರೆ. ತಕ್ಷಣವೇ ಶೈಶಾ 'ನೋಡು ನೀನು ಏನೇ ಹೇಳು ನಿನ್ನ ಜೀವನದಲ್ಲಿ ಆಗಿರುವುದನ್ನು ಬದಲಾಯಿಸುವುದಕ್ಕೆ ಆಗೋಲ್ಲ ಆಮೇಲೆ ಮುನಾವರ್ ಮತ್ತು ಅಂಜಲಿ ನಿನ್ನ ಎಕ್ಸ್‌ಗಿಂತ ಒಳ್ಳೆಯವರು' ಎಂದು ಪೂನಂ ಹೇಳುತ್ತಾರೆ.